ಈ ವರ್ಷ ಸೆನ್ಸೆಕ್ಸ್ ಎಷ್ಟು ಅಂಕ ಹೆಚ್ಚುತ್ತೆ? ಮಾರ್ಗನ್ ಸ್ಟಾನ್ಲೀ ಪ್ರಕಾರ 82,000ಕ್ಕೆ ಏರಿಕೆ

|

Updated on: Apr 15, 2025 | 6:44 PM

Morgan Stanley target for Sensex: ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಮಾರ್ಗನ್ ಸ್ಟಾನ್ಲೀ ಭಾರತದ ಷೇರು ಮಾರುಕಟ್ಟೆ ಬಗ್ಗೆ ಈ ವರ್ಷದ ತನ್ನ ನಿರೀಕ್ಷೆಯನ್ನು ಕಡಿಮೆ ಮಾಡಿದೆ. 2025ರ ಡಿಸೆಂಬರ್​​​ನಲ್ಲಿ ಸೆನ್ಸೆಕ್ಸ್ 93,000 ಅಂಕಗಳಿಗೆ ಏರಬುದು ಎಂದು ಮಾರ್ಚ್ ತಿಂಗಳಲ್ಲಿ ಅಂದಾಜು ಮಾಡಿತ್ತು. ಆದರೆ, ಈಗ ಅದನ್ನು 82,000 ಅಂಕಗಳಿಗೆ ಇಳಿಸಿದೆ. ಒಂದು ವೇಳೆ ಬುಲ್ ರನ್ ಆದರೂ 91,000 ಅಂಕ ದಾಟುವುದಿಲ್ಲ ಎಂದಿದೆ ಮಾರ್ಗನ್ ಸ್ಟಾನ್ಲೀ.

ಈ ವರ್ಷ ಸೆನ್ಸೆಕ್ಸ್ ಎಷ್ಟು ಅಂಕ ಹೆಚ್ಚುತ್ತೆ? ಮಾರ್ಗನ್ ಸ್ಟಾನ್ಲೀ ಪ್ರಕಾರ 82,000ಕ್ಕೆ ಏರಿಕೆ
ಷೇರು ಮಾರುಕಟ್ಟೆ
Follow us on

ನವದೆಹಲಿ, ಏಪ್ರಿಲ್ 15: ಭಾರತದ ಷೇರು ಮಾರುಕಟ್ಟೆ ಸತತ ಎರಡು ದಿನ ಪಾಸಿಟಿವ್ ಆಗಿದೆ. ಸೆನ್ಸೆಕ್ಸ್ ಶುಕ್ರವಾರ ಮತ್ತು ಮಂಗಳವಾರ ಎರಡು ದಿನ 3,000ಕ್ಕೂ ಅಧಿಕ ಅಂಕಗಳನ್ನು ಹೆಚ್ಚಿಸಿಕೊಂಡಿದೆ. ಕೆಲವು ಫಿನ್​​ಫ್ಲುಯನ್ಸರ್​​ಗಳು ಇನ್ಮುಂದೆ ಷೇರುಪೇಟೆ ನಡೆದದ್ದೇ ಹಾದಿ. ರಬ್ಬರ್ ಬ್ಯಾಂಡ್​​ನಂತೆ ಮಾರುಕಟ್ಟೆ ಪುಟಿಯತ್ತದೆ ಎನ್ನುತ್ತಿದ್ದಾರೆ. ಆದರೆ, ಟ್ಯಾರಿಫ್ ಭೂತ ಸದ್ಯಕ್ಕೆ ಕಡಿಮೆ ಆಗುವ ಸಾಧ್ಯತೆ ಇಲ್ಲದಿರುವುದರಿಂದ ಷೇರು ಮಾರುಕಟ್ಟೆ ಓಟ ಸರಾಗವಾಗಿ ಆಗುತ್ತದೆಂದು ನಿರೀಕ್ಷಿಸಲು ಅಸಾಧ್ಯ. ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಮಾರ್ಗನ್ ಸ್ಟಾನ್ಲೀ (Morgan Stanley) ತನ್ನ ಸೆನ್ಸೆಕ್ಸ್ ಏರಿಕೆಯ ನಿರೀಕ್ಷೆಯನ್ನು ತಗ್ಗಿಸಿದೆ.

ಷೇರು ಮಾರುಕಟ್ಟೆ ಬುಲ್ ರನ್​​ನಲ್ಲಿರುವಾಗ ಮಾರ್ಗನ್ ಸ್ಟಾನ್ಲೀ 2025ಕ್ಕೆ ಸೆನ್ಸೆಕ್ಸ್​​ಗೆ 93,000 ಅಂಕಗಳ ಗುರಿ ಹಾಕಿತ್ತು. ಈಗ ತನ್ನ ನಿರೀಕ್ಷೆಯನ್ನು 82,000 ಅಂಕಗಳಿಗೆ ಇಳಿಸಿದೆ. ಅಂದರೆ, ಈ ಬ್ರೋಕರೇಜ್ ಸಂಸ್ಥೆ ಪ್ರಕಾರ, ಇನ್ನೆಂಟು ತಿಂಗಳಲ್ಲಿ ಸೆನ್ಸೆಕ್ಸ್ ಶೇ. 9ರಷ್ಟು ಮಾತ್ರ ಹೆಚ್ಚಬಹುದು.

ಬಾಂಬೆ ಸ್ಟಾಕ್ ಎಕ್ಸ್​​ಚೇಂಜ್​​ನ ಪ್ರಧಾನ ಸೂಚ್ಯಂಕವಾದ ಸೆನ್ಸೆಕ್ಸ್ ಇವತ್ತು ಮಂಗಳವಾರ ಶೇ. 2.10ರಷ್ಟು ಹೆಚ್ಚಳಗೊಂಡು 76,734.80 ಅಂಕಗಳಲ್ಲಿ ವಹಿವಾಟು ಮುಗಿಸಿದೆ. ಎರಡು ದಿನದಲ್ಲಿ ಒಟ್ಟು ಶೇ. 4ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೆನ್ಸೆಕ್ಸ್ ಏರಿಕೆ ಆಗಿದೆ.

ಇದನ್ನೂ ಓದಿ
ಮಾರ್ಚ್​​​ನಲ್ಲಿ ರೀಟೇಲ್ ಹಣದುಬ್ಬರ ಶೇ. 3.34ಕ್ಕೆ ಇಳಿಕೆ
ಅಮೆರಿಕ ಸಾವಾಸ ಮಾಡಿ ಕೆಟ್ಟವರೇ ಹೆಚ್ಚು: ಸ್ಯಾಕ್ಸ್
ಬೆಳಕಿಗೆ ಬಾರದ ಶ್ರೀಮಂತರ ಶೇ. 96 ಸಂಪತ್ತು: ಶಾಕಿಂಗ್ ವರದಿ
ಷೇರುಪೇಟೆಯ ಇವತ್ತಿನ ಉತ್ಸಾಹಕ್ಕೆ ಏನು ಕಾರಣ?

ಇದನ್ನೂ ಓದಿ: ಭಾರತದ ಷೇರು ಮಾರುಕಟ್ಟೆಗೆ ಇವತ್ತು ಶುಭ ಮಂಗಳವಾರ; ಭರ್ಜರಿ ಗೂಳಿ ಆಟಕ್ಕೆ ಕಾರಣವೇನು?

ಯಾವ ಸೆಕ್ಟರ್​ಗಳಿಗೆ ಹಿನ್ನಡೆ, ಮುನ್ನಡೆ?

ಮಾರ್ಗನ್ ಸ್ಟಾನ್ಲೀ ಸಂಸ್ಥೆ ಈ ವರ್ಷ ಲಾರ್ಜ್ ಕ್ಯಾಪ್ ಷೇರುಗಳ ಮೇಲೆ ಹೆಚ್ಚು ನಿರೀಕ್ಷೆ ಇಟ್ಟಿದೆ. ಸ್ಮಾಲ್ ಕ್ಯಾಪ್ ಮತ್ತು ಮಿಡ್​ ಕ್ಯಾಪ್​​ಗೆ ಆದ್ಯತೆ ಕಡಿಮೆ ಮಾಡಿದೆ.

ಹಾಗೆಯೇ, ಸೆಕ್ಟರ್​​ವಾರು ಲೆಕ್ಕ ತೆಗೆದುಕೊಂಡರೆ, ಹಣಕಾಸು, ಗ್ರಾಹಕ ವಸ್ತು, ಔದ್ಯಮಿಕ ಸೆಕ್ಟರ್​​ನ ಷೇರುಗಳ ಮೇಲೆ ಅದು ಪಾಸಿಟಿವ್ ಆಗಿದೆ. ಇಂಧನ, ಯುಟಿಲಿಟಿ, ಹೆಲ್ತ್​​ಕೇರ್ ಸೆಕ್ಟರ್ ಬಗ್ಗೆ ನಕಾರಾತ್ಮಕವಾಗಿದೆ.

ಭಾರತಕ್ಕೆ ಹಿನ್ನಡೆ ಏನು?

ಜಾಗತಿಕ ಮಾರುಕಟ್ಟೆಗಳು ಕಳೆಗುಂದುತ್ತಿರುವುದು ಭಾರತದ ಷೇರುಪೇಟೆಯ ಓಟಕ್ಕೆ ಬ್ರೇಕ್ ಹಾಕಬಹುದು. ಒಂದು ವೇಳೆ, ಜಾಗತಿಕ ಮಾರುಕಟ್ಟೆಯಲ್ಲಿ ಗೂಳಿ ಓಟ ನಡೆದರೆ, ಅದು ಭಾರತದಂತಹ ಕಡಿಮೆ ಬೀಟಾ ಮಾರುಕಟ್ಟೆಗಳಲ್ಲಿ ಮಂದಗತಿಯ ಓಟಕ್ಕೆ ಎಡೆ ಮಾಡಿಕೊಡಬಹುದು ಎಂಬುದು ಮಾರ್ಗನ್ ಸ್ಟಾನ್ಲೀ ಸಂಸ್ಥೆಯ ವಿಶ್ಲೇಷಣೆ.

ಇದನ್ನೂ ಓದಿ: ಕೆಲವೇ ವರ್ಷಗಳಲ್ಲಿ ಅಮೆರಿಕದ ಆರ್ಥಿಕತೆಯನ್ನು ಭಾರತ ಹಿಂದಿಕ್ಕಲಿದೆ: ಜೆಫ್ರೀ ಸ್ಯಾಕ್ಸ್ ಶಾಕಿಂಗ್ ಹೇಳಿಕೆ

ಮಾರುಕಟ್ಟೆಯಲ್ಲಿ ಬುಲ್ ರನ್ ಆದರೆ 91,000 ಅಂಕ

ಭಾರತದ ಷೇರು ಮಾರುಕಟ್ಟೆ ಮುಂದಿನ ದಿನಗಳಲ್ಲಿ ಗೂಳಿ ಓಟ ನಡೆದಲ್ಲಿ ಸೆನ್ಸೆಕ್ಸ್ ಈ ವರ್ಷಾಂತ್ಯದಲ್ಲಿ 91,000 ಅಂಕಗಳಿಗೆ ಏರಬಹುದು ಎಂದು ಮಾರ್ಗನ್ ಸ್ಟಾನ್ಲೀ ಸಂಸ್ಥೆ ಅಭಿಪ್ರಾಯಪಟ್ಟಿದೆ. ಈ ಹಿಂದೆ (ಮಾರ್ಚ್) ಅದು ಮಾಡಿದ ಅಂದಾಜು ಪ್ರಕಾರ, ಬುಲ್ ರನ್​​ನಲ್ಲಿ ಸೆನ್ಸೆಕ್ಸ್ 1,05,000 ಅಂಕಗಳಿಗೆ ಏರಬಹುದು. ಈಗ ತನ್ನ ಈ ನಿರೀಕ್ಷೆಯನ್ನೂ ಅದು ಕಡಿಮೆ ಮಾಡಿದೆ.

ಭಾರತದ ಮಾರುಕಟ್ಟೆಯಲ್ಲಿ ಗೂಳಿಯ ಓಟ ಶುರುವಾಗಲು ಸರ್ಕಾರದ ಪ್ರಯತ್ನ ಅಗತ್ಯ ಇದೆ. ಸರ್ಕಾರವು ತೀವ್ರ ರೀತಿಯಲ್ಲಿ ಸುಧಾರಣಾ ಕ್ರಮ ಕೈಗೊಳ್ಳಬೇಕು. ಜಿಎಸ್​​ಟಿ ದರಗಳನ್ನು ಕಡಿಮೆ ಮಾಡಬೇಕು. ಕೃಷಿ ಕಾನೂನು ಸುಧಾರಣೆ ಮಾಡಬೇಕು. ಕಾರ್ಪೊರೇಟ್ ಗಳಿಕೆಯು ವಾರ್ಷಿಕ ಶೇ. 18ರಷ್ಟು ಹೆಚ್ಚಬೇಕು. ಈ ಅಂಶಗಳಿದ್ದರೆ ಷೇರು ಮಾರುಕಟ್ಟೆಯು ಬುಲ್ ರನ್ ಕಾಣಬಹುದು ಎನ್ನುತ್ತದೆ ಮಾರ್ಗನ್ ಸ್ಟಾನ್ಲೀ ಸಂಸ್ಥೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Tue, 15 April 25