Closing bell: ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ 651, ನಿಫ್ಟಿ 191 ಪಾಯಿಂಟ್ಸ್ ಏರಿಕೆ; ಯುಪಿಎಲ್ ಶೇ 4ರಷ್ಟು ಗಳಿಕೆ
ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಜನವರಿ 10ನೇ ತಾರೀಕಿನ ಸೋಮವಾರದಂದು ಭರ್ಜರಿ ಏರಿಕೆ ಕಂಡಿವೆ. ಇಂದಿನ ವಹಿವಾಟಿನಲ್ಲಿ ಏರಿಕೆ ಹಾಗೂ ಇಳಿಕೆ ಕಂಡ ಪ್ರಮುಖ ಷೇರುಗಳ ವಿವರ ಇಲ್ಲಿದೆ.
ಹೊಸ ವರ್ಷದ 2022ರ ಎರಡನೇ ವಾರದ ಆರಂಭದಲ್ಲಿ ಷೇರು ಮಾರುಕಟ್ಟೆಗೆ ಬಲ ಸಿಕ್ಕಿದೆ. ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು ಜನವರಿ 10ನೇ ತಾರೀಕಿನ ಸೋಮವಾರದಂದು ಮತ್ತೆ 60 ಸಾವಿರ ಪಾಯಿಂಟ್ಸ್ಗಿಂತ ಮೇಲೆ ವಹಿವಾಟು ನಡೆಸಿದೆ. ಇನ್ನು ನಿಫ್ಟಿ50 ಸೂಚ್ಯಂಕವು 18 ಸಾವಿರ ಪಾಯಿಂಟ್ಸ್ ಮೇಲ್ಪಟ್ಟು ವ್ಯವಹಾರ ಮುಗಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಮಿಶ್ರ ಫಲಿತಾಂಶದ ಹೊರತಾಗಿಯೂ ಈ ಏರಿಕೆ ಕಂಡಿದೆ. ನಿಫ್ಟಿ ಮಿಡ್ಕ್ಯಾಪ್ 100 ಮತ್ತು ಸ್ಮಾಲ್ಕ್ಯಾಪ್ 100 ಸೂಚ್ಯಂಕವು ಕ್ರಮವಾಗಿ ಶೇ 0.8ರಷ್ಟು ಹಾಗೂ ಶೇ 1.3ರಷ್ಟು ಏರಿಕೆ ಆಗಿದೆ. ದಿನದ ಕೊನೆಗೆ ನಿಫ್ಟಿ50 ಸೂಚ್ಯಂಕವು 190.60 ಪಾಯಿಂಟ್ಸ್ ಅಥವಾ ಶೇ 1.07ರಷ್ಟು ಏರಿಕೆಯಾಗಿ 18,003.30 ಪಾಯಿಂಟ್ಸ್ನಲ್ಲಿ ವ್ಯವಹಾರ ಮುಗಿಸಿದ್ದರೆ, ಬಿಎಸ್ಇ ಸೆನ್ಸೆಕ್ಸ್ 650.98 ಪಾಯಿಂಟ್ಸ್ ಅಥವಾ ಶೇ 1.09ರಷ್ಟು ಮೇಲೇರಿ 60,395.63 ಪಾಯಿಂಟ್ಸ್ನೊಂದಿಗೆ ವಹಿವಾಟು ಚುಕ್ತಾ ಮಾಡಿದೆ.
2021ರ ಡಿಸೆಂಬರ್ ಕೊನೆಗೆ ಮತ್ತೊಂದು ಪ್ರಬಲ ಗಳಿಕೆ ತ್ರೈಮಾಸಿಕ ಋತುವನ್ನು ಕಾಣುವ ನಿರೀಕ್ಷೆಯಲ್ಲಿ ಮಾರುಕಟ್ಟೆ ಇದೆ. ಈ ವಾರದಲ್ಲಿ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಮತ್ತು ಎಚ್ಡಿಎಫ್ಸಿ ಬ್ಯಾಂಕ್ನೊಂದಿಗೆ ಗಳಿಕೆ ಶುರು ಆಗಲಿದೆ. ಕೆಲವು ವಲಯಗಳಲ್ಲಿ ವಿಶ್ಲೇಷಕರು ಎರಡಂಕಿಯ ಬೆಳವಣಿಗೆ ನಿರೀಕ್ಷೆ ಮಾಡುತ್ತಿದ್ದಾರೆ. ಇನ್ನು ಸತತವಾಗಿ ಇಳಿಕೆ ಕಾಣುತ್ತಾ ಬರುತ್ತಿದ್ದ ಬ್ಯಾಂಕಿಂಗ್ ವಲಯದಲ್ಲಿ ಡಿಸೆಂಬರ್ 21ರಿಂದ ಏರಿಕೆ ಕಂಡುಬರುತ್ತಿದೆ. ಡಿಸೆಂಬರ್ 31ರಿಂದ ಈಚೆಗೆ ನಿಫ್ಟಿ ಬ್ಯಾಂಕ್ ಶೇ 9ರಷ್ಟು ಏರಿಕೆ ದಾಖಲಿಸಿದೆ. ಇದರ ಜತೆಗೆ ರಿಯಾಲ್ಟಿ ಸ್ಟಾಕ್ಗಳು ಸಾಥ್ ನೀಡಿವೆ. ನಿಫ್ಟಿ ರಿಯಾಲ್ಟಿ ಸೂಚ್ಯಂಕ ಕಳೆದ ಮೂರು ವಾರದಲ್ಲಿ ಶೇ 10ರಷ್ಟು ಹೆಚ್ಚಳವಾಗಿದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಯುಪಿಎಲ್ ಶೇ 4.14 ಟೈಟಾನ್ ಕಂಪೆನಿ ಶೇ 3.30 ಹೀರೋ ಮೋಟೋಕಾರ್ಪ್ ಶೇ 3.16 ಮಾರುತಿ ಸುಜುಕಿ ಶೇ 2.78 ಟಾಟಾ ಮೋಟಾರ್ಸ್ ಶೇ 2.67
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ವಿಪ್ರೋ ಶೇ -2.53 ಡಿವೀಸ್ ಲ್ಯಾಬ್ಸ್ ಶೇ -1.13 ನೆಸ್ಟ್ಲೆ ಶೇ -0.98 ಏಷ್ಯನ್ ಪೇಂಟ್ಸ್ ಶೇ -0.64 ಪವರ್ ಗ್ರಿಡ್ ಕಾರ್ಪೊರೇಷನ್ ಶೇ -0.58
ಇದನ್ನೂ ಓದಿ: ಬಿಎಸ್ಇ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ ಸಾರ್ವಕಾಲಿಕ ದಾಖಲೆ ಮಟ್ಟ 274.73 ಲಕ್ಷ ಕೋಟಿ ರೂಪಾಯಿಗೆ