ನವೆಂಬರ್​ನಲ್ಲಿ ಭಾರತದಿಂದ 20,000 ಕೋಟಿ ರೂ ಮೌಲ್ಯದ ಸ್ಮಾರ್ಟ್​ಫೋನ್ ರಫ್ತು

Smartphone exports in 2024 November: 2024ರ ನವೆಂಬರ್ ತಿಂಗಳಲ್ಲಿ ಭಾರತದಿಂದ ರಫ್ತಾಗಿರುವ ಸ್ಮಾರ್ಟ್​ಫೋನ್​ಗಳ ಮೌಲ್ಯ 20,000 ಕೋಟಿ ರೂಗಿಂತಲೂ ಹೆಚ್ಚು. 2023ರ ನವೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷ ಶೇ 92ರಷ್ಟು ಹೆಚ್ಚು ಸ್ಮಾರ್ಟ್​ಫೋನ್​ಗಳ ರಫ್ತಾಗಿದೆ. ಆ್ಯಪಲ್​ನಿಂದಲೇ 14,000 ಕೋಟಿ ರೂ ಮೌಲ್ಯದ ಫೋನ್​ಗಳನ್ನು ರಫ್ತು ಮಾಡಲಾಗಿದೆ. ಸ್ಯಾಮ್ಸುಂಗ್​ನಿಂದಲೂ ಸಾಕಷ್ಟು ಸ್ಮಾರ್ಟ್​ಫೋನ್ ರಫ್ತಾಗಿದೆ.

ನವೆಂಬರ್​ನಲ್ಲಿ ಭಾರತದಿಂದ 20,000 ಕೋಟಿ ರೂ ಮೌಲ್ಯದ ಸ್ಮಾರ್ಟ್​ಫೋನ್ ರಫ್ತು
ಆ್ಯಪಲ್ ಐಫೋನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 17, 2024 | 12:11 PM

ನವದೆಹಲಿ, ಡಿಸೆಂಬರ್ 17: ಭಾರತದಿಂದ ಸ್ಮಾರ್ಟ್​ಫೋನ್​ಗಳ ರಫ್ತು ನಿರಂತರವಾಗಿ ಏರುತ್ತಿದೆ. ನವೆಂಬರ್ ತಿಂಗಳಲ್ಲಿ ಶೇ. 92ರಷ್ಟು ರಫ್ತು ಹೆಚ್ಚಳವಾಗಿದೆ. ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ನವೆಂಬರ್​ನಲ್ಲಿ 20,000 ಕೋಟಿ ರೂ ಮೌಲ್ಯದ ಮೊಬೈಲ್ ಫೋನ್​ಗಳು ರಫ್ತಾಗಿವೆ. ಕಳೆದ ವರ್ಷದ ಇದೇ ನವೆಂಬರ್ ತಿಂಗಳಲ್ಲಿ 10,634 ಕೋಟಿ ರೂ ಮೌಲ್ಯದ ಸ್ಮಾರ್ಟ್​​ಫೋನ್​ಗಳು ರಫ್ತಾಗಿದ್ದವು. ಅದಕ್ಕೆ ಹೋಲಿಸಿದರೆ ಈ ಬಾರಿ ಬಹುತೇಕ ಎರಡು ಪಟ್ಟು ರಫ್ತು ಏರಿದೆ. ಉದ್ಯಮ ಸಂಘಟನೆಗಳು ಮತ್ತು ಕಂಪನಿಗಳ ಹೇಳಿಕೆ ಇತ್ಯಾದಿ ವತಿಯಿಂದ ಕಲೆಹಾಕಲಾದ ಮಾಹಿತಿ ಆಧರಿಸಿ ಈ ಅಂಕಿ ಅಂಶವನ್ನು ನೀಡಲಾಗಿದೆ.

ಆ್ಯಪಲ್ ಐಫೋನ್​ಗಳ ರಫ್ತೇ ಹೆಚ್ಚು…

ನವೆಂಬರ್​ನಲ್ಲಿ ಸ್ಮಾರ್ಟ್​ಫೋನ್ ರಫ್ತು ಅತೀವವಾಗಿ ಹೆಚ್ಚುವುದರಲ್ಲಿ ಆ್ಯಪಲ್​ನ ಪಾತ್ರ ದೊಡ್ಡದು. ಬರೋಬ್ಬರಿ 14,000 ಕೋಟಿ ರೂ ಮೌಲ್ಯದ ಆ್ಯಪ್ ಐಫೋನ್​ಗಳನ್ನು ನವೆಂಬರ್​ನಲ್ಲಿ ರಫ್ತು ಮಾಡಲಾಗಿರುವುದು ಗೊತ್ತಾಗಿದೆ. ಇದು ಭಾರತದಿಂದ ಈವರೆಗೂ ಯಾವುದೇ ತಿಂಗಳಲ್ಲಿ ಆದ ಗರಿಷ್ಠ ರಫ್ತಾಗಿದೆ. ಹಿಂದಿನ ತಿಂಗಳಲ್ಲಿ (ಅಕ್ಟೋಬರ್) 12,000 ಕೋಟಿ ರೂ ಮೌಲ್ಯದ ಐಫೋನ್​ಗಳನ್ನು ರಫ್ತು ಮಾಡಲಾಗಿದ್ದು ದಾಖಲೆಯಾಗಿತ್ತು. ನವೆಂಬರ್​ನಲ್ಲಿ ಆ ದಾಖಲೆ ಮುರಿಯಲಾಗಿದೆ.

ಆ್ಯಪಲ್ ಪರವಾಗಿ ಭಾರತದಲ್ಲಿ ಫಾಕ್ಸ್​ಕಾನ್, ಪೆಗಾಟ್ರಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಗಳು ಐಫೋನ್​ಗಳನ್ನು ಅಸೆಂಬ್ಲಿಂಗ್ ಮಾಡುತ್ತವೆ. ಅದರಲ್ಲೂ ಫಾಕ್ಸ್​ಕಾನ್​ನ ತಮಿಳುನಾಡು ಘಟಕದಲ್ಲಿ ಅತಿಹೆಚ್ಚು ಉತ್ಪಾದನೆ ಆಗುತ್ತದೆ.

ಇದನ್ನೂ ಓದಿ: ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಯಶಸ್ಸು; ಒಂದು ದಶಕದ ಸಾಧನೆ ಒಂದೇ ವರ್ಷದಲ್ಲಿ…

ಐಫೋನ್ ನಂತರ ಅತಿಹೆಚ್ಚು ಸ್ಮಾರ್ಟ್​ಫೋನ್ ರಫ್ತಾಗಿರುವುದು ಸ್ಯಾಮ್ಸಂಗ್ ವತಿಯಿಂದ. ನವೆಂಬರ್​ನಲ್ಲಿ ಆದ ಹೆಚ್ಚಿನ ಸ್ಮಾರ್ಟ್​ಫೋನ್ ರಫ್ತಿನಲ್ಲಿ ಆ್ಯಪಲ್ ನಂತರ ಸ್ಯಾಮ್ಸುಂಗ್ ಪಾಲು ಹೆಚ್ಚು.

ಭಾರತದಲ್ಲಿ ಸ್ಮಾರ್ಟ್​ಫೋನ್ ತಯಾರಿಕೆ ಮತ್ತು ರಫ್ತು ಹೆಚ್ಚಲು ಕಾರಣವಾಗಿರುವುದು ಪಿಎಲ್​ಐ ಸ್ಕೀಮ್. ಉತ್ಪಾದನೆಯ ಪ್ರಮಾಣ ಆಧಾರಿತವಾಗಿ ಸರ್ಕಾರದಿಂದ ಧನಸಹಾಯ ನೀಡಲಾಗುವ ಈ ಪಿಎಲ್​ಐ ಸ್ಕೀಮ್ ಸ್ಮಾರ್ಟ್​ಫೋನ್ ಕ್ಷೇತ್ರಕ್ಕೆ ವರದಾನವಾದಂತಿದೆ. ಆ್ಯಪಲ್ ಮತ್ತು ಸ್ಯಾಮ್ಸುಂಗ್ ಸಂಸ್ಥೆಗಳು ಈ ಸ್ಕೀಮ್ ಅನ್ನು ಚೆನ್ನಾಗಿ ಬಳಸಿಕೊಳ್ಳುತ್ತಿವೆ. ಅಸೆಂಬ್ಲಿಂಗ್ ಮಾತ್ರವಲ್ಲದೇ ಸ್ಮಾರ್ಟ್​ಫೋನ್ ಬಿಡಿಭಾಗಗಳ ಉತ್ಪಾದಿಸುವ ಕಂಪನಿಗಳೂ ಕೂಡ ಭಾರತದಲ್ಲಿ ನೆಲೆ ಸ್ಥಾಪಿಸುವ ದಾರಿಯಲ್ಲಿವೆ. ಇವೆಲ್ಲವೂ ಕೂಡ ಮುಂದಿನ ದಿನಗಳಲ್ಲಿ ಭಾರತದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಇನ್ನಷ್ಟು ಬಲ ತುಂಬುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ