ಸೆಬಿ ನಿಯಮಕ್ಕೆ ತತ್ತರಿಸಿದ ಆಪ್ಷನ್ಸ್ ಟ್ರೇಡಿಂಗ್; ಡಿಸೆಂಬರ್​ನಲ್ಲಿ ಟ್ರೇಡಿಂಗ್ ಪ್ರಮಾಣ ಗಣನೀಯ ಇಳಿಕೆ

Stock market options trading: ಡಿಸೆಂಬರ್​ನಲ್ಲಿ ಆಪ್ಷನ್ಸ್ ಟ್ರೇಡಿಂಗ್ ಪ್ರಮಾಣ ಬಹಳ ಕಡಿಮೆ ಆಗಿದೆ. ವರದಿ ಪ್ರಕಾರ ಬ್ಯಾಂಕ್ ನಿಫ್ಟಿ ಇಂಡೆಕ್ಸ್​ನಲ್ಲಿ 20 ಕೋಟಿ ಸಂಖ್ಯೆಯಲ್ಲಿ ನಡೆಯುತ್ತಿದ್ದ ಟ್ರೇಡಿಂಗ್ ಈಗ 2 ಕೋಟಿಗೆ ಇಳಿಕೆ ಆಗಿದೆ. ಸೆಬಿ ರೂಪಿಸಿರುವ ಕಠಿಣ ನಿಯಮಗಳು ಇದಕ್ಕೆ ಕಾರಣವಾಗಿವೆ.

ಸೆಬಿ ನಿಯಮಕ್ಕೆ ತತ್ತರಿಸಿದ ಆಪ್ಷನ್ಸ್ ಟ್ರೇಡಿಂಗ್; ಡಿಸೆಂಬರ್​ನಲ್ಲಿ ಟ್ರೇಡಿಂಗ್ ಪ್ರಮಾಣ ಗಣನೀಯ ಇಳಿಕೆ
ಟ್ರೇಡಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 17, 2024 | 2:47 PM

ನವದೆಹಲಿ, ಡಿಸೆಂಬರ್ 17: ಷೇರು ಮಾರುಕಟ್ಟೆಯ ಡಿರೈವೇಟಿವ್ಸ್ ಸೆಗ್ಮೆಂಟ್​ನ ಭಾಗವಾದ ಆಪ್ಷನ್ಸ್ ಟ್ರೇಡಿಂಗ್ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಇಳಿಕೆ ಆಗುತ್ತಿದೆ. ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್​ನಿಂದ ಬಹಳಷ್ಟು ಹೂಡಿಕೆದಾರರು ಅತೀವ ನಷ್ಟ ಕಾಣುತ್ತಿದ್ದಾರೆ ಎನ್ನಲಾಗುತ್ತಿದ್ದು, ಆ ಕಾರಣಕ್ಕೆ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ ಇತ್ತೀಚೆಗೆ ವಿವಿಧ ರೀತಿಯ ನಿರ್ಬಂಧಗಳಿರುವ ನಿಯಮಗಳನ್ನು ಹೇರಿತ್ತು. ಇದರಿಂದಾಗಿ ಆಪ್ಷನ್ಸ್ ಟ್ರೇಡಿಂಗ್ ಪ್ರಮಾಣ ಬಹಳಷ್ಟು ಕಡಿಮೆ ಆಗಿದೆ.

ವರದಿಗಳ ಪ್ರಕಾರ ಬ್ಯಾಂಕ್ ನಿಫ್ಟಿಯಲ್ಲಿ ಸಾಮಾನ್ಯವಾಗಿ ದಿನವೊಂದಕ್ಕೆ ಸರಾಸರಿಯಾಗಿ 200 ಮಿಲಿಯನ್ ಟ್ರೇಡಿಂಗ್ ನಡೆಯುತ್ತಿತ್ತು. ಅಂದರೆ 20 ಕೋಟಿ ಟ್ರೇಡಿಂಗ್ ಆಗುತ್ತಿತ್ತು. ಈಗ ಡಿಸೆಂಬರ್ ತಿಂಗಳಲ್ಲಿ ಸರಾಸರಿಯಾಗಿ ದಿನವೊಂದಕ್ಕೆ 2 ಕೋಟಿಯಷ್ಟು ಮಾತ್ರವೇ ಟ್ರೇಡಿಂಗ್ ಆಗುತ್ತಿದೆ. ಅಂದರೆ, ಬ್ಯಾಂಕ್ ನಿಫ್ಟಿಯಲ್ಲಿ ಶೇ. 90ರಷ್ಟು ಆಪ್ಷನ್ಸ್ ಟ್ರೇಡಿಂಗ್ ಕಡಿಮೆ ಆಗಿದೆ.

ಇದನ್ನೂ ಓದಿ: ಭಾರತದ ಮರುಬಳಕೆ ಉದ್ಯಮದ ಮಾರುಕಟ್ಟೆ ಮೌಲ್ಯ 2 ಟ್ರಿಲಿಯನ್ ಡಾಲರ್ ಆಗಬಲ್ಲುದು: ಅಮಿತಾಭ್ ಕಾಂತ್

ಇಂಡೆಕ್ಸ್ ಡಿರೈವೇಟಿವ್ಸ್​ನ ಕಾಂಟ್ರಾಕ್ಟ್ ಗಾತ್ರವನ್ನು ಹೆಚ್ಚಿಸಿದ್ದು ಸೇರಿ ಕೆಲ ಕಠಿಣ ನಿಯಮಗಳನ್ನು ಸೆಬಿ ಜಾರಿಗೆ ತಂದಿದ್ದು, ಬಹಳಷ್ಟು ಹೂಡಿಕೆದಾರರನ್ನು ದೂರ ನೂಕುವಲ್ಲಿ ಯಶಸ್ವಿಯಾಗಿದೆ. ಈ ಬೆಳವಣಿಗೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ಗಿಂತ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ಗೆ ಹೆಚ್ಚಿನ ಘಾಸಿಯಾಗಿದೆ.

ಟ್ರೇಡಿಂಗ್​ನಲ್ಲಿ ವಾರದ ಎಕ್ಸ್​ಪೈರೀಗಳು ಕಡಿಮೆ ಆಗಿರುವುದು ಡಿಸೆಂಬರ್ ಮೊದಲ ವಾರದಲ್ಲಿ ಟ್ರೇಡಿಂಗ್ ಮೌಲ್ಯದ ಮೇಲೆ ಪರಿಣಾಮ ಬೀರಿರಬಹುದು. ಡಿಸೆಂಬರ್ ಮೊದಲ ವಾರದಲ್ಲಿ ಎನ್​ಎಸ್​ಇನಲ್ಲಿ ಇಂಡೆಕ್ಸ್ ಆಪ್ಷನ್ಸ್​ನ ಸಂಭಾವ್ಯ (notional) ಎಡಿಟಿವಿ (ನಿತ್ಯದ ಸರಾಸರಿ ಟ್ರೇಡಿಂಗ್ ಮೌಲ್ಯ) 207 ಲಕ್ಷ ಕೋಟಿ ರೂಗೆ ಇಳಿದಿದೆ. ಕಳೆದ ತಿಂಗಳ (ನವೆಂಬರ್) ಮೊದಲ ವಾರದಲ್ಲಿ ಇದು 357 ಲಕ್ಷ ಕೋಟಿ ರೂ ಇತ್ತು.

ಇದನ್ನೂ ಓದಿ: ನವೆಂಬರ್​ನಲ್ಲಿ ಭಾರತದಿಂದ 20,000 ಕೋಟಿ ರೂ ಮೌಲ್ಯದ ಸ್ಮಾರ್ಟ್​ಫೋನ್ ರಫ್ತು

ಇನ್ನು, ಬಿಎಸ್​ಇನಲ್ಲಿ ಈ ಸಂಭಾವ್ಯ ಎಡಿಟಿವಿ ನವೆಂಬರ್ ಮೊದಲ ವಾರದಲ್ಲಿ 104 ಲಕ್ಷ ಕೋಟಿ ರೂ ಇದ್ದದ್ದು ಡಿಸೆಂಬರ್ ಮೊದಲ ವಾರದಲ್ಲಿ 80 ಲಕ್ಷ ಕೋಟಿ ರೂಗೆ ಇಳಿದಿದೆ. ಎಕ್ಸ್​ಪಿರಿ ದಿನಗಳಲ್ಲಿ ಟ್ರೇಡ್ ಆಗುವ ಕಾಂಟ್ರಾಕ್ಟ್​ಗಳ ಸಂಖ್ಯೆ ಕಡಿಮೆ ಆಗಿರುವುದು ಇದಕ್ಕೆ ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ