AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rasna Founder: ರಸ್ನಾ ಸಂಸ್ಥಾಪಕ ಅರೀಜ್ ಫಿರೋಜ್​ಶಾ ಖಂಬಾಟ್ ನಿಧನ

Rasna Founder Areez Pirojshaw Khambatta: ಅರೀಜ್ ಅವರು ತಂಪು ಪಾನೀಯದ ಎಸೆನ್ಸ್ ರಸ್ನಾವನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕವೇ ಪ್ರಸಿದ್ಧರಾಗಿದ್ದರು. ಪ್ರಸ್ತುತ ದೇಶದ 18 ಲಕ್ಷ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ರಸ್ನಾ ಮಾರಾಟವಾಗುತ್ತಿದೆ.

Rasna Founder: ರಸ್ನಾ ಸಂಸ್ಥಾಪಕ ಅರೀಜ್ ಫಿರೋಜ್​ಶಾ ಖಂಬಾಟ್ ನಿಧನ
ರಸ್ನಾ ಬ್ರ್ಯಾಂಡ್ ಮತ್ತು ಅರೀಜ್ ಫಿರೋಜ್​ಶಾ ಖಂಬಾಟ್
TV9 Web
| Edited By: |

Updated on:Nov 21, 2022 | 4:26 PM

Share

ನವದೆಹಲಿ: ದೇಶದ ಖ್ಯಾತ ತಂಪು ಪಾನೀಯ (Soft Drink) ಬ್ರ್ಯಾಂಡ್ ರಸ್ನಾವನ್ನು (Rasna) ಜನರಿಗೆ ಪರಿಚಯಿಸಿದ್ದ ರಸ್ನಾ ಸಮೂಹದ (Rasna Group) ಸಂಸ್ಥಾಪಕ ಅರೀಜ್ ಫಿರೋಜ್​ಶಾ ಖಂಬಾಟ್ ಸೋಮವಾರ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ‘ಅರೀಜ್ ಖಂಬಾಟ್ ಬೆನಿವೊಲೆಂಟ್​ ಟ್ರಸ್ಟ್’ನ ಅಧ್ಯಕ್ಷರೂ ಆಗಿದ್ದರು. ‘ಪಾರ್ಸಿ ಇರಾನಿ ಝಾರ್ಥೋಸ್ಟಿಸ್‌’ನ ವಿಶ್ವ ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

‘ಅರೀಜ್ ಫಿರೋಜ್​ಶಾ ಅವರು ಭಾರತೀಯ ಕೈಗಾರಿಕೆ, ಉದ್ಯಮ, ಸಾಮಾಜಿಕ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಸಮಾಜ ಸೇವೆಯ ಮೂಲಕವೂ ಪ್ರಸಿದ್ಧರಾಗಿದ್ದರು’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ವಿಶ್ವದ ಪ್ರಮುಖ ಬ್ರ್ಯಾಂಡ್ ರಸ್ನಾ

ಅರೀಜ್ ಅವರು ತಂಪು ಪಾನೀಯದ ಎಸೆನ್ಸ್ ರಸ್ನಾವನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕವೇ ಪ್ರಸಿದ್ಧರಾಗಿದ್ದರು. ಪ್ರಸ್ತುತ ದೇಶದ 18 ಲಕ್ಷ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ರಸ್ನಾ ಮಾರಾಟವಾಗುತ್ತಿದೆ. ಪ್ರಸ್ತುತ ‘ರಸ್ನಾ’ ವಿಶ್ವದ ಅತಿದೊಡ್ಡ ತಂಪು ಪಾನೀಯ ಎಸೆನ್ಸ್ ತಯಾರಿಕಾ ಕಂಪನಿಯಾಗಿದೆ. ಸುಮಾರು 60 ದೇಶಗಳಲ್ಲಿ ರಸ್ನಾ ಮಾರಾಟವಾಗುತ್ತಿದೆ. ಪಾನೀಯ ತಯಾರಿಕೆ ಮತ್ತು ಮಾರಾಟ ಕ್ಷೇತ್ರದ ಬಹುರಾಷ್ಟ್ರೀಯ ಕಂಪನಿಗಳ ಪೈಕಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

ಇತರ ತಂಪು ಪಾನೀಯಗಳ ದರ ಗಗನಕ್ಕೇರಿದ್ದ ಸಂದರ್ಭದಲ್ಲಿ, 1970ರಲ್ಲಿ ಕೈಗೆಟಕುವ ದರದಲ್ಲಿ ರಸ್ನಾ ತಂಪು ಪಾನೀಯವನ್ನು ಮಾರುಕಟ್ಟೆಗೆ ಪರಿಚಯಿಸಿದ್ದರು ಅರೀಜ್ ಫಿರೋಜ್​ಶಾ ಖಂಬಾಟ್. 5 ರೂ. ಮೊತ್ತದ ಒಂದು ಪ್ಯಾಕ್​ ರಸ್ನಾದಿಂದ ಸುಮಾರು 32 ಗ್ಲಾಸ್ ತಂಪು ಪಾನೀಯ ತಯಾರಿಸಬಹುದಾಗಿತ್ತು. ನಂತರ ‘ಐ ಲವ್ ಯೂ ರಸ್ನಾ’ ಎಂಬ ಧ್ಯೇಯದೊಂದಿಗೆ 80ರ ದಶಕದಲ್ಲಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಅಭಿಯಾನ ಆರಂಭಿಸಿದ್ದ ರಸ್ನಾ ಇಂದಿಗೂ ಮಾರುಕಟ್ಟೆಯಲ್ಲಿ ಜನಪ್ರಿಯತೆ ಉಳಿಸಿಕೊಂಡಿದೆ ಎಂದು ಕಂಪನಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:14 pm, Mon, 21 November 22

Follow Us
TV9 Web
TV9 Web

TV9 Kannada

Read More
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ
ದಸರಾ, ದೀಪಾವಳಿ: ರಾಜ್ಯಾದ್ಯಂತ ಸಿಹಿ ತಿಂಡಿ ಅಂಗಡಿಗಳ ಮೇಲೆ FSSAI ದಾಳಿ
ದಸರಾ, ದೀಪಾವಳಿ: ರಾಜ್ಯಾದ್ಯಂತ ಸಿಹಿ ತಿಂಡಿ ಅಂಗಡಿಗಳ ಮೇಲೆ FSSAI ದಾಳಿ