AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bharti Airtel: ತಿಂಗಳ ಕನಿಷ್ಠ ರಿಚಾರ್ಜ್ ದರ 155 ರೂ.ಗೆ ಹೆಚ್ಚಿಸಿದ ಏರ್​ಟೆಲ್; ದೇಶಾದ್ಯಂತ ಜಾರಿ ಸಾಧ್ಯತೆ

ಭಾರ್ತಿ ಏರ್​ಟೆಲ್ ಪ್ರಾಯೋಗಿಕವಾಗಿ ಈ ಪ್ಲಾನ್ ಅನ್ನು ಹರಿಯಾಣ ಮತ್ತು ಒಡಿಶಾಗಳಲ್ಲಿ ಜಾರಿಗೊಳಿಸಿದ್ದು, ಮುಂದಿನ ಕೆಲ ದಿನಗಳಲ್ಲಿ ದೇಶದಾದ್ಯಂತ ವಿಸ್ತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Bharti Airtel: ತಿಂಗಳ ಕನಿಷ್ಠ ರಿಚಾರ್ಜ್ ದರ 155 ರೂ.ಗೆ ಹೆಚ್ಚಿಸಿದ ಏರ್​ಟೆಲ್; ದೇಶಾದ್ಯಂತ ಜಾರಿ ಸಾಧ್ಯತೆ
ಭಾರ್ತಿ ಏರ್​ಟೆಲ್
TV9 Web
| Updated By: Ganapathi Sharma|

Updated on: Nov 21, 2022 | 5:33 PM

Share

ನವದೆಹಲಿ: ಹರಿಯಾಣ ಮತ್ತು ಒಡಿಶಾ ವಲಯಗಳಲ್ಲಿ 28 ದಿನಗಳ ಅವಧಿಯ ಕನಿಷ್ಠ ರಿಚಾರ್ಜ್ (Minimum Recharge) ದರವನ್ನು ಭಾರ್ತಿ ಏರ್​ಟೆಲ್ (Bharti Airtel) ಶೇಕಡಾ 57ರಷ್ಟು ಹೆಚ್ಚಿಸಿದ್ದು, 155 ರೂ. ನಿಗದಿಪಡಿಸಿದೆ. ಕಂಪನಿಯ ವೆಬ್​ಸೈಟ್​ನಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಕಂಪನಿಯು ಪ್ರಾಯೋಗಿಕವಾಗಿ ಈ ಪ್ಲಾನ್ ಅನ್ನು ಹರಿಯಾಣ ಮತ್ತು ಒಡಿಶಾಗಳಲ್ಲಿ ಜಾರಿಗೊಳಿಸಿದ್ದು, ಮುಂದಿನ ಕೆಲ ದಿನಗಳಲ್ಲಿ ದೇಶದಾದ್ಯಂತ ವಿಸ್ತರಿಸುವ ಸಾಧ್ಯತೆ ಇದೆ ಎಂದು ಬೆಳವಣಿಗೆಗಳ ಬಗ್ಗೆ ನಿಕಟ ಮಾಹಿತಿಯುಳ್ಳ ಮೂಲಗಳು ತಿಳಿಸಿವೆ.

99 ರೂ. ಮೊತ್ತದ ಕನಿಷ್ಠ ರಿಚಾರ್ಜ್ ದರವನ್ನು ಏರ್​ಟೆಲ್ ಸ್ಥಗಿತಗೊಳಿಸಿದೆ. ಈ ಯೋಜನೆಯಡಿ 200 ಎಂಬಿ ಡೇಟಾ, ಸೆಕೆಂಡ್​ಗೆ 2.5 ರೂ. ನಂತೆ ಕರೆ ಸೌಲಭ್ಯ ದೊರೆಯುತ್ತಿತ್ತು. ಇದರ ಬದಲು ಈಗ ಹರಿಯಾಣ ಹಾಗೂ ಒಡಿಶಾದಲ್ಲಿ 155 ರೂ.ಗೆ 28 ದಿನಗಳ ವ್ಯಾಲಿಡಿಟಿ, 1 ಜಿಬಿ ಡೇಟಾ, ಅನಿಯಮಿತ ಕರೆ ಹಾಗೂ 300 ಎಸ್ಎಂಎಸ್ ಸೌಲಭ್ಯ ಇರುವ ಪ್ಲಾನ್ ಅನ್ನು ಪರಿಚಯಿಸಿದೆ.

155 ರೂ.ಗಿಂತ ಕಡಿಮೆ ಮೊತ್ತದ ಎಲ್ಲ ಪ್ಲಾನ್​ಗಳ ರದ್ದು ಸಾಧ್ಯತೆ

ಇದನ್ನೂ ಓದಿ
Image
ಯುಪಿಐ ಮೂಲಕ ಎಟಿಎಂನಿಂದ ಹಣ ವಿತ್​ಡ್ರಾ ಮಾಡುವುದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ
Image
ಇ-ಕಾಮರ್ಸ್ ವೆಬ್​​ಸೈಟ್​ಗಳಲ್ಲಿ ನಕಲಿ ರಿವ್ಯೂಗೆ ಬೀಳಲಿದೆ ಕಡಿವಾಣ; ಶೀಘ್ರದಲ್ಲೇ ಬರಲಿದೆ ನಿಯಮ
Image
It Jobs; ಐಟಿ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿದ್ದೀರಾ? ಶೀಘ್ರದಲ್ಲೇ ನಿಮಗಿದೆ ಸಿಹಿ ಸುದ್ದಿ
Image
ಡಿಜಿಟಲ್ ಪಾವತಿಗೆ ಶುಲ್ಕ: ರಿಸರ್ವ್ ಬ್ಯಾಂಕ್ ಜೊತೆಗೆ ಮಾತುಕತೆ ಆರಂಭಿಸಿದ ಪೇಮೆಂಟ್ಸ್ ಕಾರ್ಪೊರೇಷನ್

155 ರೂ.ಗಿಂತ ಕಡಿಮೆ ಮೊತ್ತದ ಎಲ್ಲ ಪ್ಲಾನ್​ಗಳನ್ನು ಏರ್​ಟೆಲ್ ಶೀಘ್ರದಲ್ಲೇ ರದ್ದುಪಡಿಸು ಸಾಧ್ಯತೆ ಇದೆ. ತಿಂಗಳ ಪ್ಲಾನ್​ನೊಂದಿಗೆ ಎಸ್​ಎಂಎಸ್​ ಬೇಕಿದ್ದರೂ ಗ್ರಾಹಕರು 155 ರೂ. ರಿಚಾರ್ಜ್ ಮಾಡಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. ಈ ಕುರಿತು ಪ್ರತಿಕ್ರಿಯೆ ಕೋರಿ ‘ಪಿಟಿಐ’ ಸುದ್ದಿಸಂಸ್ಥೆಯು ಭಾರ್ತಿ ಏರ್​ಟೆಲ್​ಗೆ ಇ-ಮೇಲ್ ಸಂದೇಶ ಕಳುಹಿಸಿದ್ದು, ಇನ್ನಷ್ಟೇ ಉತ್ತರ ದೊರೆಯಬೇಕಿದೆ.

ಪರೀಕ್ಷಾರ್ಥವಾಗಿ ಏರ್​ಟೆಲ್ ಹರಿಯಾಣ ಮತ್ತು ಒಡಿಶಾದಲ್ಲಿ ಹೊಸ ಪ್ಲಾನ್ ಪರಿಚಯಿಸಿದೆ. ಈ ರಾಜ್ಯಗಳಲ್ಲಿ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವ ತಂತ್ರಗಾರಿಕೆ ಕಂಪನಿಯದ್ದು ಎಂಬುದಾಗಿ ಹೂಡಿಕೆ ಸಲಹಾ ಸಂಸ್ಥೆ ಐಸಿಐಸಿಐ ಸೆಕ್ಯುರಿಟೀಸ್ ಹೇಳಿದೆ.

99 ರೂ. ಪ್ಲಾನ್​ನಲ್ಲಿ 99 ರೂ. ಟಾಕ್​ಟೈಮ್, 200 ಎಂಬಿ ಡೇಟಾ 28 ದಿನಗಳ ಅವಧಿಗೆ ಲಭ್ಯವಿದ್ದವು. ಇದೀಗ 155 ರೂ. ಪ್ಲಾನ್​ನಲ್ಲಿ 1 ಜಿಬಿ ಡೇಟಾ ಜತೆಗೆ 300 ಎಸ್​​ಎಂಎಸ್ ಸಿಗಲಿವೆ. ಇದರೊಂದಿಗೆ ಕನಿಷ್ಠ ರಿಚಾರ್ಜ್ ದರದಲ್ಲಿ ಶೇಕಡಾ 57ರಷ್ಟು ಹೆಚ್ಚಳ ಮಾಡಿದಂತಾಗಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್​ನ ವಿಶ್ಲೇಷಕ ಸಂಜೇಶ್ ಜೈನ್ ಹಾಗೂ ಆಕಾಶ್ ಕುಮಾರ್ ಹೇಳಿದ್ದಾರೆ.

ಇದೇ ಮೊದಲಲ್ಲ

ಈ ಹಿಂದೆ ಕೂಡ ಏರ್​ಟೆಲ್ ಇಂಥದ್ದೇ ಮಾದರಿ ಅನುಸರಿಸಿತ್ತು. ಕನಿಷ್ಠ ರಿಚಾರ್ಜ್ ದರವನ್ನು ಆಯ್ದ ವಲಯಗಳಲ್ಲಿ 79 ರೂ.ನಿಂದ 99 ರೂ.ಗೆ ಹೆಚ್ಚಿಸಿತ್ತು. ಬಳಿಕ ದೇಶದಾದ್ಯಂತ ಅನುಷ್ಠಾನಗೊಳಿಸಿತ್ತು. ಸದ್ಯದ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಟಾರಿಫ್ ಹೆಚ್ಚಳಕ್ಕೆ ಮುಂದಾದ ಮೊದಲ ಕಂಪನಿ ಏರ್​ಟೆಲ್. ಇದಕ್ಕೆ ಉಳಿದ ಕಂಪನಿಗಳ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಕಾದುನೋಡಬೇಕಿದೆ. ನಿರೀಕ್ಷಿತ ಬೆಂಬಲ ಸಿಗದೇ ಹೋದಲ್ಲಿ ಏರ್​ಟೆಲ್ ಮತ್ತೆ ಕನಿಷ್ಠ ರಿಚಾರ್ಜ್ ದರವಾದ 99 ರೂ. ಪ್ಲಾನ್​ ಅನ್ನು ಮರುಸ್ಥಾಪಿಸುವ ಸಾಧ್ಯತೆ ಇದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ