
ಚೆನ್ನೈ, ಜೂನ್ 3: ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಕ್ರಾಂತಿ ಮಾಡಿರುವ ಭಾರತದ ಪ್ರಮುಖ ಸಾಸ್ (SaaS) ಯೂನಿಕಾರ್ನ್ ಸಂಸ್ಥೆ ‘ಜೊಹೊ’ನ (Zoho) ಸಹ-ಸಂಸ್ಥಾಪಕ ಮತ್ತು ಮುಖ್ಯ ವಿಜ್ಞಾನಿ ಹಾಗು ಮಾಜಿ ಸಿಇಒ ಶ್ರೀಧರ್ ವೆಂಬು, ಈಗ ಉತ್ಪಾದನಾ (Manufacturing) ಕ್ಷೇತ್ರದಲ್ಲೂ ಭಾರತದ ಹೆಜ್ಜೆಯನ್ನು ಗಟ್ಟಿಗೊಳಿಸಲು ಮುಂದಾಗಿದ್ದಾರೆ. ಇವರ ಕರುವಿ ಎನ್ನುವ ಪವರ್ ಟೂಲ್ಸ್ ಉತ್ಪಾದನಾ ಸಂಸ್ಥೆ ಸದ್ದು ಮಾಡತೊಡಗಿದೆ. ಚೀನೀ ಕಂಪನಿಗಳ ಪ್ರಾಬಲ್ಯ ಇರುವ ಪವರ್ ಟೂಲ್ಸ್ ಕ್ಷೇತ್ರದಲ್ಲಿ ಕರುವಿ (Karuvi) ಗಟ್ಟಿ ಹೆಜ್ಜೆ ಊರಲು ಅಣಿಯಾಗಿದೆ. ಈ ಬಗ್ಗೆ ಶ್ರೀಧರ್ ವೆಂಬು ಅವರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಮೆಕಾಟ್ರಾನಿಕ್ಸ್ ಸ್ಟಾರ್ಟಪ್ ಆದ ಕರುವಿಯ ಮೊದಲ ಉತ್ಪನ್ನ ತಯಾರಾಗಿ ಪ್ರಾಯೋಗಿಕವಾಗಿ ಗ್ರಾಹಕರಿಗೆ ತಲುಪಿಸಲಾಗಿರುವ ವಿಚಾರವನ್ನು ವೆಂಬು ಹಂಚಿಕೊಂಡಿದ್ದಾರೆ. ಚೀನಾ ಉತ್ಪನ್ನಗಳನ್ನು ಎದುರಿಸಬೇಕಾದರೆ ಕೇವಲ ಬೆಲೆ ಮಾತ್ರವಲ್ಲ, ಜಾಗತಿಕ ಗುಣಮಟ್ಟವನ್ನು ಸರಿಗಟ್ಟುವುದು (Matching Global Quality) ಅತ್ಯಂತ ಪ್ರಮುಖ ಸವಾಲಾಗಿತ್ತು ಎಂದು ಅವರು ವಿವರಿಸಿದ್ದಾರೆ.
ತಮಿಳು ಭಾಷೆಯಲ್ಲಿ ‘ಕರುವಿ’ ಎಂದರೆ ಉಪಕರಣ ಅಥವಾ ಸಾಧನ (Instrument/Tool) ಎಂದರ್ಥ. ಸುಮಾರು ಎರಡು ವರ್ಷಗಳ ಹಿಂದೆ ತಮಿಳುನಾಡಿನ ಗ್ರಾಮೀಣ ಪ್ರದೇಶವಾದ ತೆನ್ಕಾಸಿಯಲ್ಲಿ ಒಂದು ಸಣ್ಣ ಇಂಜಿನಿಯರಿಂಗ್ ತಂಡದೊಂದಿಗೆ ಈ ಸಾಹಸವನ್ನು ಪ್ರಾರಂಭಿಸಲಾಯಿತು. ಶ್ರೀಧರ್ ವೆಂಬು ಮತ್ತು ಟೋನಿ ಥಾಮಾಸ್ ಇದರ ಸಹ-ಸಂಸ್ಥಾಪಕರು.
‘ಕರುವಿ’ ಬ್ರ್ಯಾಂಡ್ ಅಡಿಯಲ್ಲಿ ಕೈಗಾರಿಕಾ ಮತ್ತು ಗ್ರಾಹಕ ಬಳಕೆಯ ರೋಟರಿ ಡ್ರಿಲ್ಸ್, ಹ್ಯಾಮರ್ ಡ್ರಿಲ್ಸ್, ಆಂಗಲ್ ಗ್ರೈಂಡರ್ಸ್, ಡೆಮೋಲಿಷನ್ ಹ್ಯಾಮರ್ಸ್ ಮತ್ತು ಗರಗಸಗಳಂತಹ (Saws) ಪ್ರಮುಖ ಪವರ್ ಟೂಲ್‌ಗಳನ್ನು ವಾಣಿಜ್ಯ ಉತ್ಪಾದನೆಗೆ ಸಿದ್ಧಪಡಿಸಲಾಗಿದೆ.
ಈ ಉಪಕರಣಗಳನ್ನು ಕೇವಲ ಸಾಮಾನ್ಯ ಯಂತ್ರಗಳಾಗಿ ಮಾಡದೆ, ಮೋಟಾರ್ ತಂತ್ರಜ್ಞಾನ (Motor Technology), ಮೆಟೀರಿಯಲ್ ಸೈನ್ಸ್ (ವಸ್ತು ವಿಜ್ಞಾನ) ಮತ್ತು ಎಲೆಕ್ಟ್ರಾನಿಕ್ಸ್ ವಲಯದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಅತ್ಯಂತ ನಿಖರವಾಗಿ (Precise) ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ: ಚೀನಾ ಔಟ್, ಭಾರತ ಇನ್: ಜಾಗತಿಕ ಮಾರುಕಟ್ಟೆಯಲ್ಲಿ ಜಪಾನ್ ಹೂಡಿಕೆದಾರರ ಭರ್ಜರಿ ದಿಕ್ಕು ಬದಲಾವಣೆ
ಭಾರತೀಯ ಪವರ್ ಟೂಲ್ಸ್ ಮಾರುಕಟ್ಟೆಯಲ್ಲಿ ಸದ್ಯ ಚೀನಾ ಉತ್ಪನ್ನಗಳದ್ದೇ ಮೇಲುಗೈಯಾಗಿದೆ. ಇದನ್ನು ಮೆಟ್ಟಿನಿಲ್ಲಲು ಶ್ರೀಧರ್ ವೆಂಬು ಮೂರು ಪ್ರಮುಖ ಸೂತ್ರಗಳನ್ನು ಮುಂದಿಟ್ಟಿದ್ದಾರೆ:
ಇದನ್ನೂ ಓದಿ: ಭಾರತದ ಸೇವಾ ಕ್ಷೇತ್ರದಲ್ಲಿ ಹೊಸ ಹುರುಪು; ಮೇ ತಿಂಗಳ ಸರ್ವಿಸ್ ಸೆಕ್ಟರ್ ಪಿಎಂಐ 6 ತಿಂಗಳ ಗರಿಷ್ಠ ಮಟ್ಟಕ್ಕೆ
ಟ್ವಿಟರ್ (X) ನಲ್ಲಿ ಈ ಕುರಿತು ಬರೆದುಕೊಂಡಿದ್ದ ಶ್ರೀಧರ್ ವೆಂಬು, “ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಿಡಲ್ ಈಸ್ಟ್‌ನ ಪ್ರಮುಖ ಎಲೆಕ್ಟ್ರಾನಿಕ್ಸ್ ವಿತರಕರಾದ ಅಬ್ದುಲ್ ಗಫೂರ್ ಅವರು ನನ್ನನ್ನು ಭೇಟಿಯಾಗಿ, ಹ್ಯಾಂಡ್ ಟೂಲ್‌ಗಳ ಬಾಕ್ಸ್ ತೋರಿಸಿ ಇವುಗಳನ್ನು ಜೊಹೊ ತಯಾರಿಸಬೇಕು, ನಾನು ಜಾಗತಿಕವಾಗಿ ವಿತರಣೆ ಮಾಡುತ್ತೇನೆ ಎಂದಿದ್ದರು. ಆಗ ನಮಗೆ ಇದರ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ಇದು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುತ್ತದೆ ಎಂದು ಅವರು ಹೇಳಿದಾಗ ನಾನು ಈ ಸವಾಲನ್ನು ಸ್ವೀಕರಿಸಿದೆ,” ಎಂದು ಕರುವಿ ಹುಟ್ಟಿನ ಹಿಂದಿನ ಸ್ವಾರಸ್ಯಕರ ಕಥೆಯನ್ನು ಹಂಚಿಕೊಂಡಿದ್ದಾರೆ.
ಭಾರತವು ಸಾಫ್ಟ್‌ವೇರ್‌ನಲ್ಲಿ ಸಾಧಿಸಿರುವ ಯಶಸ್ಸನ್ನು ಈಗ ಹಾರ್ಡ್‌ವೇರ್ ಮತ್ತು ಮೆಕ್ಯಾನಿಕಲ್ ಉತ್ಪಾದನಾ ವಲಯದಲ್ಲೂ ಸಾಧಿಸಬಹುದು ಎಂಬುದಕ್ಕೆ ಶ್ರೀಧರ್ ವೆಂಬು ಅವರ ಈ ‘ಕರುವಿ’ ಪ್ರಮುಖ ಉದಾಹರಣೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ