ಜಿಯೋ ಗೇಮ್​ನಲ್ಲಿ ಜಿಯೊಗೆ ಆಟ ತೋರಿಸಲು ಸಜ್ಜಾಗಿದೆಯಾ ಸ್ಪೇಸ್​ಎಕ್ಸ್? ಕಡಿಮೆ ಬೆಲೆಗೆ ಸ್ಟಾರ್​ಲಿಂಕ್ ಸೇವೆಯ ಸುಳಿವು ಕೊಟ್ಟ ಇಲಾನ್ ಮಸ್ಕ್

ಭಾರತದಲ್ಲಿ ರಿಲಯನ್ಸ್ ಜಿಯೋ ಜೊತೆ ಪೈಪೋಟಿ ನಡೆಸಲು ಇಲಾನ್ ಮಸ್ಕ್ ಬೆಲೆ ಸಮರಕ್ಕೆ ಅಣಿಯಾಗಿದ್ದಾರೆ. ಭಾರತದಲ್ಲಿ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಯನ್ನು ಅತ್ಯಂತ ಕಡಿಮೆ ಹಾಗೂ ಕೈಗೆಟುಕುವ ಬೆಲೆಗೆ ಒದಗಿಸುವುದಾಗಿ ಸ್ಪೇಸ್‌ಎಕ್ಸ್ ಮುಖ್ಯಸ್ಥ ತಿಳಿಸಿದ್ದಾರೆ. ಜಿಯೋ ಪ್ಲಾಟ್‌ಫಾರ್ಮ್ಸ್ ದಾಖಲೆಯ ಐಪಿಒ ಬಿಡುಗಡೆಯ ಸನಿಹಕ್ಕೆ ಬಂದಿರುವ ಈ ಹೇಳಿಕೆಯ ವಿವರ ಇಲ್ಲಿದೆ.

ಜಿಯೋ ಗೇಮ್​ನಲ್ಲಿ ಜಿಯೊಗೆ ಆಟ ತೋರಿಸಲು ಸಜ್ಜಾಗಿದೆಯಾ ಸ್ಪೇಸ್​ಎಕ್ಸ್? ಕಡಿಮೆ ಬೆಲೆಗೆ ಸ್ಟಾರ್​ಲಿಂಕ್ ಸೇವೆಯ ಸುಳಿವು ಕೊಟ್ಟ ಇಲಾನ್ ಮಸ್ಕ್
ಇಲಾನ್ ಮಸ್ಕ್
Image Credit source: Getty Images

Updated on: Oct 11, 2026 | 4:20 PM

ನವದೆಹಲಿ, ಅಕ್ಟೋಬರ್ 11: ರಿಲಾಯನ್ಸ್ ಜಿಯೊ ಮತ್ತು ಮುಕೇಶ್ ಅಂಬಾನಿ ವಿರುದ್ಧ ಇಲಾನ್ ಮಸ್ಕ್ ದಾಳಿ ಮುಂದುವರಿಸಿದ್ದಾರೆ. ಸ್ಟಾರ್​ಲಿಂಕ್ ಸೇವೆ ಭಾರತದಲ್ಲಿ ಆರಂಭವಾಗಲು ಮುಕೇಶ್ ಅಂಬಾನಿ ತಡೆಯೊಡ್ಡುತ್ತಿದ್ದಾರೆಂದು ಆರೋಪ ಪುನರುಚ್ಚರಿಸಿರುವ ಇಲಾನ್ ಮಸ್ಕ್, ಭಾರತದಲ್ಲಿ ಜಿಯೋ ಸ್ಪರ್ಧೆ ಎದುರಿಸಲು ಸಜ್ಜಾಗಿರುವುದಾಗಿ ಹೇಳಿದ್ದಾರೆ. ಸ್ಟಾರ್​ಲಿಂಕ್ ಸೆಟಿಲೈಟ್ ಇಂಟರ್ನೆಟ್ ಸೇವೆಯನ್ನು ಕೈಗೆಟುಕುವ ದರದಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವ ಸುಳಿವನ್ನು ಇಲಾನ್ ಮಸ್ಕ್ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ‘X’ ನಲ್ಲಿ ಪ್ರತಿಕ್ರಿಯಿಸಿರುವ ಮಸ್ಕ್, “ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆ ತುಂಬಾ ದುಬಾರಿಯಾದರೆ ಯಾರೂ ಅದನ್ನು ಖರೀದಿಸುವುದಿಲ್ಲ. ಹೀಗಾಗಿ ಸ್ಪೇಸ್‌ಎಕ್ಸ್ (SpaceX) ಭಾರತೀಯ ಮಾರುಕಟ್ಟೆಗೆ ತಕ್ಕಂತೆ ಬೆಲೆಯನ್ನು ಕೈಗೆಟುಕುವಂತೆ ಮಾಡುವುದು ಅನಿವಾರ್ಯವಾಗಿದೆ” ಎಂದು ತಿಳಿಸಿದ್ದಾರೆ. ಭಾರತದಲ್ಲಿ ಪ್ರತಿ ಗಿಗಾಬೈಟ್‌ಗೆ ಮೊಬೈಲ್ ಡೇಟಾ ವೆಚ್ಚವು ಜಾಗತಿಕವಾಗಿ ಅತ್ಯಂತ ಕಡಿಮೆ (ಸುಮಾರು 8 ಸೆಕೆಂಡ್/ಸೆಂಟ್ಸ್) ಇರುವುದರಿಂದ, ಸ್ಪರ್ಧಾತ್ಮಕ ದರ ನಿಗದಿಪಡಿಸುವುದು ಅನಿವಾರ್ಯ ಎಂಬುದು ಸ್ಪಷ್ಟವಾಗಿದೆ.

‘ಅಂಬಾನಿಯ ಏಕಸ್ವಾಮ್ಯತೆಯಲ್ಲಿ ನೀಡಲಾಗುತ್ತಿರುವ ಕಡಿಮೆ ಬೆಲೆಯಲ್ಲಿ ಸ್ಟಾರ್​ಲಿಂಕ್​ಗೆ ಸ್ಪರ್ಧಿಸಲು ಆಗುವುದಿಲ್ಲ ಅಂತ ಹೇಳ್ತಾರೆ. ಅದೇ ಉಸುರಿನಲ್ಲಿ, ಸ್ಟಾರ್​ಲಿಂಕ್ ತೀರಾ ಬಲಿಷ್ಠ ಸ್ಪರ್ಧಿ ಎಂದು ಹೇಳ್ತಾರೆ. ಇದು ಇಬ್ಬಂದಿ ಧೋರಣೆ’ ಎಂದು ಇಲಾನ್ ಮಸ್ಕ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಅಂಬಾನಿ ಬಾಸಾ? ಇಲಾನ್ ಪ್ರಶ್ನೆಗೆ, ಮತ್ತೊಬ್ಬರಿದ್ದಾರೆ ನೋಡಿ ಎಂದ ರಾಹುಲ್; ಕಾಂಗ್ರೆಸ್ ದಿಕ್ಕೆಟ್ಟಿದೆ ಎಂದ ಸಚಿವ ಸಿಂದಿಯಾ

ಇದೇ ವೇಳೆ, ಇಲಾನ್ ಮಸ್ಕ್ ಅವರು ಭಾರತದಲ್ಲಿ ಸ್ಟಾರ್​ಲಿಂಕ್ ಪ್ರವೇಶದಿಂದ ಮುಕೇಶ್ ಅಂಬಾನಿ ಅವರಿಗೆ ಲಾಭ ಕಡಿಮೆ ಆಗುತ್ತದೆಯೇ ಹೊರತು ಜಿಯೊ ನಾಶ ಆಗುವುದಿಲ್ಲ ಎಂದೂ ಹೇಳಿದ್ದಾರೆ.

‘ಸ್ಪರ್ಧೆಯಿಂದ ಭಾರತದ ಸರಾಸರಿ ನಾಗರಿಕರಿಗೆ ಹೆಚ್ಚಿನ ಆಯ್ಕೆಗಳ ಪ್ರಯೋಜನ ಸಿಗುತ್ತದೆ. ಅಂಬಾನಿಯ ಲಾಭ ಕಡಿಮೆ ಆಗುತ್ತದಾದರೂ ಅವರೇನು ಬ್ಯುಸಿನೆಸ್​ನಿಂದ ಹೊರಗುಳಿಯುವುದಿಲ್ಲ’ ಎಂದು ಇಲಾನ್ ಮಸ್ಕ್ ತಮ್ಮ ಪೋಸ್ಟ್​ನಲ್ಲಿ ವಿವರಿಸಿದ್ದಾರೆ.

ಜಿಯೋ ಗೇಮ್​ಪ್ಲಾನ್​ನಲ್ಲಿ ರಿಲಯನ್ಸ್ ಜಿಯೋ ಜೊತೆ ಸ್ಟಾರ್​ಲಿಂಕ್ ಸ್ಪರ್ಧೆ

ಭಾರತದಲ್ಲಿ ಅತಿ ಕಡಿಮೆ ವೆಚ್ಚದ ಡೇಟಾ ನೀಡುವ ಮೂಲಕವೇ ಜಿಯೋ ತನ್ನ ಸಾಮ್ರಾಜ್ಯವನ್ನುಕಟ್ಟಿಕೊಂಡಿದೆ. ಅದೇ ರೀತಿ ಕೀನ್ಯಾದಂತಹ ಮಾರುಕಟ್ಟೆಗಳಲ್ಲಿ ಸ್ಥಳೀಯ ಟೆಲಿಕಾಂ ಸಂಸ್ಥೆಗಳಿಗೆ ಪೈಪೋಟಿ ನೀಡಲು ಮಸ್ಕ್ ಇದೇ ತಂತ್ರ ಅನುಸರಿಸಿರುವುದುಂಟು. ಇದೀಗ ಭಾರತದಲ್ಲೂ ಜಿಯೋದ ಕಡಿಮೆ ವೆಚ್ಚದ ಮಾದರಿಯನ್ನು ಎದುರಿಸಲು ಸ್ಟಾರ್‌ಲಿಂಕ್ ಸಜ್ಜಾಗುತ್ತಿದೆ.

ಇದನ್ನೂ ಓದಿ: 6G India: ಭಾರತದಲ್ಲಿ 6G ಸೇವೆ ಯಾವಾಗ ಆರಂಭ? ಶೀಘ್ರದಲ್ಲೇ ಜಿಯೋದಿಂದ ಬಿಡುಗಡೆ

ಜಿಯೋದ ಬೃಹತ್ ಐಪಿಒ ಮತ್ತು ಸ್ಯಾಟಲೈಟ್ ರೇಸ್

ಜಿಯೋ ಪ್ಲಾಟ್‌ಫಾರ್ಮ್ಸ್ ಟೆಲಿಕಾಂ ವಿಭಾಗವನ್ನು ಹೊಂದಿದ್ದು, ಸುಮಾರು 106 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ ಭಾರತದ ಸಾರ್ವಕಾಲಿಕ ಅತಿ ದೊಡ್ಡ ಐಪಿಒಗೆ ಸಿದ್ಧತೆ ನಡೆಸುತ್ತಿದೆ. ಜಿಯೋದ ಸ್ವಂತ ಉಪಗ್ರಹ ಉದ್ಯಮ ಕೂಡ ಭಾರತದಲ್ಲಿ ಅಂತಿಮ ಭದ್ರತಾ ಅನುಮೋದನೆಗಾಗಿ ಕಾಯುತ್ತಿದೆ. ಮುಂಬರುವ ದಿನಗಳಲ್ಲಿ ಭಾರತದ ಸ್ಯಾಟಲೈಟ್ ಬ್ರಾಂಡ್‌ಬ್ಯಾಂಡ್ ಮಾರುಕಟ್ಟೆಯಲ್ಲಿ ಮಸ್ಕ್ ಮತ್ತು ಅಂಬಾನಿ ನಡುವೆ ಭಾರಿ ಹಣಾಹಣಿ ಏರ್ಪಡುವ ಎಲ್ಲಾ ಮುನ್ಸೂಚನೆಗಳು ಸಿಕ್ಕಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us