
ಆಧಾರ್ ಕಾರ್ಡ್ (Aadhaar) ಭಾರತದಲ್ಲಿ ಈಗ ಬಹಳ ಮುಖ್ಯ ದಾಖಲೆಯಾಗಿದೆ. ಸಾಕಷ್ಟು ಸೇವೆಗಳಿಗೆ ಆಧಾರ್ ಪ್ರಮುಖ ದಾಖಲೆಯಾಗಿ ಪರಿಗಣಿತವಾಗುತ್ತದೆ. ಇದು ವ್ಯಕ್ತಿಯ ಗುರುತಿನ ದಾಖಲೆ. ಇದರಲ್ಲಿ ವ್ಯಕ್ತಿಯ ಫಿಂಗರ್ ಪ್ರಿಂಟ್, ಕಣ್ಣಿನ ಸ್ಕ್ಯಾನ್, ಭಾವಚಿತ್ರ, ಹೆಸರು, ಜನ್ಮದಿನಾಂಕ, ವಿಳಾಸ ಇತ್ಯಾದಿ ವಿವರ ಇರುತ್ತದೆ. ಬಯೋಮೆಟ್ರಿಕ್ ಮಾಹಿತಿಯಾದ ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್ನ ಡಾಟಾ ಬಹಳ ಮುಖ್ಯವಾದುದು. ಇವು ಆಧಾರ್ ದೃಢೀಕರಣಕ್ಕೆ ಬಹಳ ಮುಖ್ಯ.
ಹಾಗೆಯೇ, ಮೊಬೈಲ್ ನಂಬರ್ ಮೂಲಕ ಆಧಾರ್ ಅಥೆಂಟಿಕೇಶನ್ ಮಾಡಲಾಗುತ್ತದೆ. ಆಧಾರ್ಗೆ ಮೊಬೈಲ್ ನಂಬರ್ ಲಿಂಕ್ ಮಾಡಿದರೆ ಇದು ಸಾಧ್ಯ. ಈಗ ಹೆಚ್ಚಿನ ಆಧಾರ್ ದೃಢೀಕರಣಗಳು ಮೊಬೈಲ್ ನಂಬರ್ಗೆ ಬರುವ ಒಟಿಪಿ ಮೂಲಕವೇ ಆಗಿ ಹೋಗುತ್ತವೆ.
ಇದನ್ನೂ ಓದಿ: ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಡೆಡ್ಲೈನ್ ಮುಗೀತು? ಮತ್ತೆ ಲಿಂಕ್ ಮಾಡಬಹುದಾ? ಮುಂದೇನಾಗಬಹುದು?
ಒಂದು ಕುಟುಂಬದಲ್ಲಿ ಎಲ್ಲಾ ಸದಸ್ಯರಿಗೂ ಆಧಾರ್ ಕಾರ್ಡ್ ಮಾಡಿಸಲಾಗಿರುತ್ತದೆ. ಎಲ್ಲದಕ್ಕೂ ಪ್ರತ್ಯೇಕ ಮೊಬೈಲ್ ನಂಬರ್ ಅನ್ನು ಜೋಡಿಸಿರುವ ಸಾಧ್ಯತೆ ಕಡಿಮೆ. ಒಂದೆರಡು ನಂಬರ್ಗಳನ್ನು ಬೇರೆ ಬೇರೆ ಆಧಾರ್ಗೆ ಕೊಟ್ಟಿರಬಹುದು. ಕೆಲವೊಮ್ಮೆ ಯಾವ ಆಧಾರ್ ಕಾರ್ಡ್ಗೆ ಯಾವ ನಂಬರ್ ಕೊಟ್ಟಿದ್ದೇವೆ ಎಂದು ಮರೆತುಹೋಗಬಹುದು. ಯಾರ ಆಧಾರ್ಗೆ ಯಾವ ಮೊಬೈಲ್ ನಂಬರ್ ಲಿಂಕ್ ಮಾಡಲಾಗಿದೆ ಎಂದು ಗೊಂದಲವಿದ್ದಲ್ಲಿ, ಅಥವಾ ಆಧಾರ್ಗೆ ಲಿಂಕ್ ಆದ ಮೊಬೈಲ್ ನಂಬರ್ ಅನ್ನು ವೆರಿಫೈ ಮಾಡಬೇಕಿದ್ದಲ್ಲಿ ಈ ಕೆಳಗಿನ ವಿಧಾನ ಅನುಸರಿಸಬಹುದು.
ಇದನ್ನೂ ಓದಿ: ಗೆಜೆಟ್ ಮೂಲಕ ಹೆಸರು ಬದಲಾಯಿಸುವುದು ಹೇಗೆ?; ಇಲ್ಲಿದೆ 3 ಹಂತಗಳ ನಾಮ ಬದಲಾವಣೆ ಪ್ರಕ್ರಿಯೆ
ಇದೇ ರೀತಿ ಇಮೇಲ್ ಅನ್ನೂ ಕೂಡ ವೆರಿಪೈ ಮಾಡಬಹುದು. ಮೊಬೈಲ್ ನಂಬರ್ ಮತ್ತು ಇಮೇಲ್ ಅನ್ನು ಅಪ್ಟುಡೇಟ್ ಇಟ್ಟಿರುವುದು ಆಧಾರ್ ಸುರಕ್ಷತೆ ದೃಷ್ಟಿಯಿಂದ ಉತ್ತಮ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ