AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rate Today Bangalore: ಚಿನ್ನದ ಬೆಲೆ 2 ದಿನದಲ್ಲಿ 3,200 ರೂ ಏರಿಕೆ

Bullion Market 2026 January 20th: ಚಿನ್ನ, ಬೆಳ್ಳಿ ಬೆಲೆಗಳು ನಿನ್ನೆ ಸೋಮವಾರದಂತೆ ಇವತ್ತು ಮಂಗಳವಾರವೂ ಭರ್ಜರಿಯಾಗಿ ಹೆಚ್ಚಿವೆ. ಆಭರಣ ಚಿನ್ನದ ಬೆಲೆ 13,355 ರೂ ಇದ್ದದ್ದು 13,500 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 14,728 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 305 ರೂನಿಂದ 315 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 333 ರೂ ಆಗಿದೆ.

Gold Rate Today Bangalore: ಚಿನ್ನದ ಬೆಲೆ 2 ದಿನದಲ್ಲಿ 3,200 ರೂ ಏರಿಕೆ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 20, 2026 | 11:31 AM

Share

ಬೆಂಗಳೂರು, ಜನವರಿ 20: ಚಿನ್ನದ ಬೆಲೆ ಏರಿಕೆ ಮುಂದುವರಿದಿದೆ. ನಿನ್ನೆ ಗ್ರಾಮ್​ಗೆ 175 ರೂ ಏರಿದ್ದ ಇದರ ಬೆಲೆ (gold rates) ಇಂದು ಮಂಗಳವಾರ 145 ರೂ ಹೆಚ್ಚಳ ಕಂಡಿದೆ. ಎರಡು ದಿನದಲ್ಲಿ 300ಕ್ಕೂ ಹೆಚ್ಚು ರೂಗಳಷ್ಟು ಬೆಲೆ ಏರಿಕೆ ಆಗಿದೆ. ವಿದೇಶಗಳಲ್ಲಿ ಇವತ್ತು ಹೆಚ್ಚಿನ ಕಡೆ ಚಿನ್ನದ ಬೆಲೆ ಏರಿದೆ. ಇದೇ ವೇಳೆ, ಬೆಳ್ಳಿ ಬೆಲೆಯ ನಾಗಾಲೋಟವೂ ಮುಂದುವರಿದಿದೆ. ನಿನ್ನೆ 10 ರೂ ಹೆಚ್ಚಿದ್ದ ಇದರ ಬೆಲೆ ಇವತ್ತು ಅಷ್ಟೇ ಪ್ರಮಾಣದಲ್ಲಿ ಹೆಚ್ಚಿ ಹೊಸ ದಾಖಲೆಯನ್ನೇ ಮಾಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,35,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,47,280 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 31,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,35,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 31,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 33,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 20ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,728 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,500 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,927 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 315 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,728 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,500 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 315 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,500 ರೂ
  • ಚೆನ್ನೈ: 13,610 ರೂ
  • ಮುಂಬೈ: 13,500 ರೂ
  • ದೆಹಲಿ: 13,515 ರೂ
  • ಕೋಲ್ಕತಾ: 13,500 ರೂ
  • ಕೇರಳ: 13,500 ರೂ
  • ಅಹ್ಮದಾಬಾದ್: 13,505 ರೂ
  • ಜೈಪುರ್: 13,515 ರೂ
  • ಲಕ್ನೋ: 13,515 ರೂ
  • ಭುವನೇಶ್ವರ್: 13,500 ರೂ

ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆ ಶೇ. 7.3; ಐಎಂಎಫ್ ಮತ್ತು ಮೂಡೀಸ್ ಏಜೆನ್ಸಿ ಅಂದಾಜು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 590 ರಿಂಗಿಟ್ (13,253 ರುಪಾಯಿ)
  • ದುಬೈ: 520.75 ಡಿರಾಮ್ (12,906 ರುಪಾಯಿ)
  • ಅಮೆರಿಕ: 145.50 ಡಾಲರ್ (13,245 ರುಪಾಯಿ)
  • ಸಿಂಗಾಪುರ: 186.90 ಸಿಂಗಾಪುರ್ ಡಾಲರ್ (13,241 ರುಪಾಯಿ)
  • ಕತಾರ್: 518 ಕತಾರಿ ರಿಯಾಲ್ (12,937 ರೂ)
  • ಸೌದಿ ಅರೇಬಿಯಾ: 529 ಸೌದಿ ರಿಯಾಲ್ (12,841 ರುಪಾಯಿ)
  • ಓಮನ್: 55.30 ಒಮಾನಿ ರಿಯಾಲ್ (13,083 ರುಪಾಯಿ)
  • ಕುವೇತ್: 42.51 ಕುವೇತಿ ದಿನಾರ್ (12,658 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 315 ರೂ
  • ಚೆನ್ನೈ: 330 ರೂ
  • ಮುಂಬೈ: 315 ರೂ
  • ದೆಹಲಿ: 315 ರೂ
  • ಕೋಲ್ಕತಾ: 315 ರೂ
  • ಕೇರಳ: 330 ರೂ
  • ಅಹ್ಮದಾಬಾದ್: 315 ರೂ
  • ಜೈಪುರ್: 315 ರೂ
  • ಲಕ್ನೋ: 315 ರೂ
  • ಭುವನೇಶ್ವರ್: 330 ರೂ
  • ಪುಣೆ: 315

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ