ಷೇರುಪೇಟೆ ಧೂಳಿನಲ್ಲಿ ನಿಮಗೆ ಬೇಕಾದ ರತ್ನಗಳನ್ನು ಹುಡುಕಿ ಪಡೆಯಿರಿ: ಮಾರ್ಕ್ ಮೋಬಿಯಸ್

Mark Mobius advice to Indian investors: ಭಾರತದ ಷೇರು ಮಾರುಕಟ್ಟೆ ಕನಿಷ್ಠ ಮಟ್ಟ ಮುಟ್ಟಿರಬಹುದು ಎಂಬುದು ವಿಶ್ವಖ್ಯಾತ ಇನ್ವೆಸ್ಟರ್ ಮಾರ್ಕ್ ಮೋಬಿಯಸ್ ಅವರ ಅನಿಸಿಕೆ. ಈ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಉತ್ತಮ ಷೇರುಗಳನ್ನು ಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಆದರೆ, ಹೊಸ ಸರ್ಕಾರದ ಅರ್ಥ ನೀತಿಗಳು ಏನಿವೆ ಎಂಬುದನ್ನು ತಿಳಿದು ಮುಂದುವರಿಯುವುದು ಸೂಕ್ತ ಎಂಬುದೂ ಅವರ ಎಚ್ಚರಿಕೆಯ ಮಾತುಗಳಾಗಿವೆ.

ಷೇರುಪೇಟೆ ಧೂಳಿನಲ್ಲಿ ನಿಮಗೆ ಬೇಕಾದ ರತ್ನಗಳನ್ನು ಹುಡುಕಿ ಪಡೆಯಿರಿ: ಮಾರ್ಕ್ ಮೋಬಿಯಸ್
ಮಾರ್ಕ್ ಮೋಬಿಯಸ್
Follow us
|

Updated on: Jun 05, 2024 | 6:14 PM

ನವದೆಹಲಿ, ಜೂನ್ 5: ಭಾರತದ ಷೇರು ಮಾರುಕಟ್ಟೆ (stock market) ಇತ್ತೀಚೆಗೆ ಬಹಳಷ್ಟು ಅಲುಗಾಡಿದೆ. ನಷ್ಟ ಮಾಡಿಕೊಂಡವರು ಲೆಕ್ಕವಿಲ್ಲದಷ್ಟಿದ್ದಾರೆ. ಲಾಭ ಮಾಡಿಕೊಂಡವರೂ ಇದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ದಿನವಾದ ನಿನ್ನೆ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳು ಶೇ 6ರಷ್ಟು ಕುಸಿತ ಕಂಡಿದ್ದವು. ಇವತ್ತು ಒಂದಷ್ಟು ಚೇತರಿಕೆ ಕಂಡಿವೆ. ಇದೇ ವೇಳೆ ಖ್ಯಾತ ಹೂಡಿಕೆದಾರ ಮಾರ್ಕ್ ಮೋಬಿಯಸ್ (Mark Mobius) ಅವರು ಒಳ್ಳೆಯ ಷೇರುಗಳನ್ನು ಹುಡುಕಿ ಪಡೆಯಲು ಇದು ಒಳ್ಳೆಯ ಕಾಲ ಎಂದು ಸಲಹೆ ನೀಡಿದ್ದಾರೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯೊಂದಿಗೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಮಾರುಕಟ್ಟೆ ಕನಿಷ್ಠ ಮಟ್ಟಕ್ಕೆ ಇಳಿದಿರಬಹುದು. ಈಗ ಹೂಡಿಕೆ ಮಾಡಲು ಒಳ್ಳೆಯ ಸಮಯ ಎಂದಿದ್ದಾರೆ.

ಭಾರತದ ಬಗ್ಗೆ ಸದಾ ಸಕಾರಾತ್ಮಕವಾಗಿ ಮಾತನಾಡುವ ಮಾರ್ಕ್ ಮೋಬಿಯಸ್ ಅವರ ಪ್ರಕಾರ, ‘ದೀರ್ಘ ಕಾಲದ ದೃಷ್ಟಿಯಿಂದ ಭಾರತ ಈಗಲೂ ಅದ್ಭುತ ಸ್ಥಳವೇ ಆಗಿದೆ. ಈಗ ಮಾರುಕಟ್ಟೆ ತಳಮಟ್ಟಕ್ಕೆ ಇಳಿದಿರುವ ಸಾಧ್ಯತೆ ಇದ್ದು, ಹೂಡಿಕೆದಾರರಿಗೆ ಉತ್ತಮ ಸಮಯ ಬಂದಂತಿದೆ. ಆದರೆ, ಹೊಸ ಸರ್ಕಾರದ ನೀತಿಗಳು ಯಾವ ರೀತಿಯದ್ದಿರಲಿವೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಒಂದೇ ದಿನ ಅತಿಹೆಚ್ಚು ಷೇರು ವಹಿವಾಟು; ಭಾರತದ ಎನ್​ಎಸ್​ಇ ಹೊಸ ವಿಶ್ವದಾಖಲೆ

ಕಟ್ಟಡ ನಿರ್ಮಾಣ ಮತ್ತು ಅದರ ಸಂಬಂಧಿತ ವಸ್ತುಗಳನ್ನು ತಯಾರಿಸುವ ಸಂಸ್ಥೆಗಳ ಷೇರುಗಳು ಚೇತರಿಕೆ ಕಾಣಬಹುದು. ಯಾಕೆಂದರೆ, ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಭಾರತಕ್ಕೆ ಇನ್​ಫ್ರಾಸ್ಟ್ರಕ್ಚರ್ ಅವಶ್ಯಕತೆ ಇರುತ್ತದೆ. ಹೀಗಾಗಿ, ಆ ಸೆಕ್ಟರ್​ನ ಷೇರುಗಳು ದೀರ್ಘಾವಧಿಯಲ್ಲಿ ಉತ್ತಮ ಆಯ್ಕೆಗಳಾಗಿರಬಹುದು ಎಂಬುದು ಮಾರ್ಕ್ ಮೋಬಿಯಸ್ ಅವರ ಅನಿಸಿಕೆ.

ಐಟಿ ಮತ್ತು ಟೆಕ್ನಾಲಜಿ ಸಂಸ್ಥೆಗಳ ಷೇರಿಗೆ ಉತ್ತಮ ಭವಿಷ್ಯ ಇದೆ. ಏನೇ ರಾಜಕೀಯ ಅಸ್ಥಿರತೆ ಬಂದರೂ ಈ ಐಟಿ ಕಂಪನಿಗಳು ಉತ್ತಮ ಬೆಳವಣಿಗೆ ಹೊಂದಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಈ ನಮ್ಮ ಬೇಡಿಕೆ ಈಡೇರಿಸಿ: ಹೊಸ ಸರ್ಕಾರಕಕ್ಕೆ ರಿಯಲ್ ಎಸ್ಟೇಟ್ ಉದ್ಯಮದ ಕೋರಿಕೆ

ಇನ್ನು, ಎಫ್​ಐಐಗಳು ನಕಾರಾತ್ಮಕವಾಗಿವೆ ಎನ್ನುವ ಸುದ್ದಿಯನ್ನು ತಳ್ಳಿಹಾಕಿದ ಮೋಬಿಯಸ್, ಎಫ್​ಐಐಗಳಿಗೆ ಭಾರತವೇ ಭವಿಷ್ಯ ಎಂಬುದು ಅರಿವಾಗಿದೆ. ಚೀನಾದಲ್ಲಿರುವ ಸಮಸ್ಯೆಗಳನ್ನು ಇವರು ನೋಡಿದ್ದಾರೆ. ಅಲ್ಲಿ ಕೈಸುಟ್ಟುಕೊಂಡಿದ್ದಾರೆ. ಮತ್ತೆ ಅಲ್ಲಿಗೆ ವಾಪಸ್ ಹೋಗಲು ಇವರು ಬಯಸುವುದಿಲ್ಲ,’ ಎಂದು ಮಾರ್ಕ್ ಮೋಬಿಯಸ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ