Closing Bell: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 571 ಪಾಯಿಂಟ್ಸ್, ನಿಫ್ಟಿ 169 ಪಾಯಿಂಟ್ಸ್ ಕುಸಿತ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ 571 ಪಾಯಿಂಟ್ಸ್ ಕುಸಿತ ಕಂಡರೆ, ನಿಫ್ಟಿ 169 ಪಾಯಿಂಟ್ಸ್ ಇಳಿಕೆ ಆಗಿದೆ. ನಿಫ್ಟಿಯಲ್ಲಿ ಪ್ರಮುಖವಾಗಿ ಏರಿಕೆ, ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.
ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮಾರ್ಚ್ 21ನೇ ತಾರೀಕಿನ ಸೋಮವಾರದಂದು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 571.44 ಪಾಯಿಂಟ್ಸ್ ಅಥವಾ ಶೇ 0.99ರಷ್ಟು ಇಳಿಕೆಯಾಗಿ, 57,292.49 ಪಾಯಿಂಟ್ಸ್ನಲ್ಲಿ ದಿನಾಂತ್ಯ ಕಂಡಿದೆ. ಇನ್ನು ನಿಫ್ಟಿ 50 ಸೂಚ್ಯಂಕವು 169.40 ಪಾಯಿಂಟ್ಸ್ ಅಥವಾ ಶೇ 0.98ರಷ್ಟು ಇಳಿಕೆ ಕಂಡಿದೆ. ನಿಫ್ಟಿ ಬ್ಯಾಂಕ್ ಸೂಚ್ಯಂಕವು 410.05 ಪಾಯಿಂಟ್ಸ್ ಅಥವಾ ಶೇ 1.13ರಷ್ಟು ಕುಸಿದು, 36,018.50ರಲ್ಲಿ ಮುಕ್ತಾಯ ಕಂಡಿದೆ. ಇಂದಿನ ಇಳಿಕೆಗೆ ಟಿಸಿಎಸ್ ಮತ್ತು ಬ್ಯಾಂಕ್ ಸ್ಟಾಕ್ಗಳು ಪ್ರಮುಖ ಕಾರಣ ಆದವು. ನಿಫ್ಟಿ 50 ಸೂಚ್ಯಂಕ ಕುಸಿತದಲ್ಲಿ ಪೇಟಿಎಂ ಶೇ 5ರಷ್ಟು ಕೆಳಕ್ಕೆ ಇಳಿದರೆ, ಆಯಿಲ್ ಇಂಡಿಯಾ ಶೇ 7ರಷ್ಟು ಮೇಲೇರಿತು. ಇಂದಿನ ವಹಿವಾಟಿನಲ್ಲಿ 1561 ಕಂಪೆನಿಯ ಷೇರುಗಳು ಏರಿಕೆಯನ್ನು ದಾಖಲಿಸಿದರೆ, 1965 ಕಂಪೆನಿಯ ಷೇರುಗಳು ಕುಸಿತ ಕಂಡವು. 144 ಕಂಪೆನಿಯ ಷೇರುಗಳ ದರದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ಇನ್ನು ನಿಫ್ಟಿ ಲೋಹ ಸೂಚ್ಯಂಕವು ಶೇ 1.50ರಷ್ಟು ಮೇಲೇರಿತು. ನಿಫ್ಟಿ ಎಫ್ಎಂಸಿಜಿ ಸೂಚ್ಯಂಕವು ಶೇ 1.72ರಷ್ಟು ಕುಸಿತ ಕಂಡಿತು. ಡಾಲರ್ ವಿರುದ್ಧ ರೂಪಾಯಿ ಮೌಲ್ಯವು 31 ಪೈಸೆಯಷ್ಟು ನೆಲ ಕಚ್ಚಿ, 76.15ರಲ್ಲಿ (ಪ್ರಾವಿಷನಲ್) ಕೊನೆಗೊಂಡಿತು. ಸೋಮವಾರದ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಏರಿಕೆ, ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಕೋಲ್ ಇಂಡಿಯಾ ಶೇ 3.26
ಹಿಂಡಾಲ್ಕೊ ಶೇ 2.28
ಯುಪಿಎಲ್ ಶೇ 1.88
ಒಎನ್ಜಿಸಿ ಶೇ 1.32
ಎಚ್ಡಿಎಫ್ಸಿ ಬ್ಯಾಂಕ್ ಶೇ 0.44
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಬ್ರಿಟಾನಿಯಾ ಶೇ -3.53
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ -3.17
ಪವರ್ ಗ್ರಿಡ್ ಕಾರ್ಪೊರೇಷನ್ ಶೇ -3.14
ಗ್ರಾಸಿಮ್ ಶೇ -3.11
ಶ್ರೀ ಸಿಮೆಂಟ್ಸ್ ಶೇ -2.91
ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ