Diesel Price: ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ; ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುವ ಕೈಗಾರಿಕೆ ವಲಯದವರು ರೀಟೇಲ್ ಔಟ್ಲೆಟ್ನತ್ತ
ಕೈಗಾರಿಕೆ ಉದ್ದೇಶಗಳಿಗಾಗಿ ಭಾರೀ ಪ್ರಮಾಣದಲ್ಲಿ ಡೀಸೆಲ್ ಖರೀದಿಸುವವರು ಈಗ ರೀಟೇಲ್ ಔಟ್ಲೆಟ್ಗಳಲ್ಲೇ ಖರೀದಿ ಶುರು ಮಾಡಿದ್ದಾರೆ. ಯಾಕಾಗಿ ಈ ಬೆಳವಣಿಗೆ ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ದೊಡ್ಡ ಪ್ರಮಾಣದ ಡೀಸೆಲ್ ಖರೀದಿ ಮಾಡುವಂಥವರು ಈಗ ರೀಟೇಲ್ ಸ್ಟೇಷನ್ಗಳಿಂದಲೇ ಖರೀದಿ ಮಾಡುವುದಕ್ಕೆ ಆರಂಭಿಸಿದ್ದಾರೆ. ಸಾಮಾನ್ಯವಾಗಿ ಈ ರೀತಿ ದೊಡ್ಡ ಪ್ರಮಾಣದ ಡೀಸೆಲ್ ಖರೀದಿ ಮಾಡುವಂಥವರಿಗೆ ಅದಾಗಲೇ ಒಪ್ಪಂದ ಆಗಿರುತ್ತದೆ. ಅಂಥ ಖರೀದಿ ಒಪ್ಪಂದಕ್ಕಿಂತ ರೀಟೇಲ್ ಪೆಟ್ರೋಲ್ ಪಂಪ್ಗಳಲ್ಲಿ ಲೀಟರ್ಗೆ ರೂ. 25 (0.33 ಯುಎಸ್ಡಿ) ಕಡಿಮೆ ಇರುವುದರಿಂದ ಹೀಗೆ ಮಾಡಲಾಗುತ್ತಿದೆ, ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries) ಮತ್ತು ಬ್ರಿಟಿಷ್ ಪೆಟ್ರೋಲಿಯಂನಿಂದ ತಿಳಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ರೀಟೇಲ್ ಮಾರಾಟಗಾರರು ಭಾರತದಲ್ಲಿ ಪಾರಮ್ಯ ಹೊಂದಿದ್ದು, ನವೆಂಬರ್ 4ನೇ ತಾರೀಕಿನಿಂದ ಬೆಲೆ ಏರಿಕೆ ಆಗಿರಲಿಲ್ಲ. ಜಾಗತಿಕವಾಗಿ ತೈಲ ಹಾಗೂ ಇಂಧನ ಬೆಲೆಗಳ ಏರಿಕೆ ಹೊರತಾಗಿಯೂ ಚಿಲ್ಲರೆ ಮಾರಾಟ ದರ ಏರಿಕೆ ಆಗಿರಲಿಲ್ಲ. ಆದರೆ ಕೈಗಾರಿಕೆಗಳಿಗೆ ನೇರ ಮಾರಾಟ ಅಥವಾ ಈಗಾಗಲೇ ಒಪ್ಪಂದ ಮಾಡಿಕೊಂಡ ಭಾರೀ ಪ್ರಮಾಣದ ಡೀಸೆಲ್ ಖರೀದಿ ಮಾಡುವವರಿಗೆ ಬೆಲೆ ಏರಿಕೆ ಮುಂದುವರಿಸಲಾಗಿತ್ತು.
“ರೀಟೇಲ್ ಹಾಗೂ ಕೈಗಾರಿಕೆ ಉದ್ದೇಶಕ್ಕೆ ಖರೀದಿಸುವ ಡೀಸೆಲ್ ಮಧ್ಯೆ ಲೀಟರ್ಗೆ 25 ರೂಪಾಯಿ ವ್ಯತ್ಯಾಸ ಇದೆ. ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಖರೀದಿಸುವ ಕೈಗಾರಿಕೆ ವಲಯದವರು ರೀಟೇಲ್ ಔಟ್ಲೆಟ್ಗಳಿಗೆ ತೆರಳುತ್ತಿದ್ದಾರೆ,” ಎಂದು ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ (RBML) ವಕ್ತಾರರು ಹೇಳಿದ್ದಾರೆ. ವಿಶ್ವದಲ್ಲೇ ಅತಿ ದೊಡ್ಡ ರಿಫೈನಿಂಗ್ ಸಮುಚ್ಚಯ ಜಾಮ್ನಗರ್ದಲ್ಲಿ ಹೊಂದಿದ್ದು, ಸ್ವಲ್ಪ ಪ್ರಮಾಣದಲ್ಲಿ ಇಂಧನವನ್ನು ಸರ್ಕಾರಿ ಸ್ವಾಮ್ಯದ ರಿಫೈನರ್ಗಳಿಗೆ ಪೂರೈಸಲಾಗುತ್ತದೆ. ಇದರ ಜತೆಗೆ ಆರ್ಬಿಎಂಎಲ್ನ ಇಂಧನ ಸ್ಟೇಷನ್ನಿಂದ ನೇರವಾಗಿ ರೀಟೇಲ್ ಮಾರುಕಟ್ಟೆ ಮಾರಾಟ ಮಾಡಲಾಗುತ್ತದೆ.
ಬಿಜಿನೆಸ್ ಟು ಬಿಜಿನೆಸ್ (B2B) ಮತ್ತು ಬಿಜಿನೆಸ್ ಟು ಕಸ್ಟಮರ್ಸ್ (B2C) ಎರಡರಲ್ಲೂ ಡೀಲರ್ಗಳಿಂದ ಭಾರೀ ಪ್ರಮಾಣದ ಇಂಧನ ತೆಗೆಯಲಾಗುತ್ತಿದೆ. ಬಹಳ ಸಮಯದಿಂದ ಬೆಲೆ ಏರಿಕೆ ಮಾಡದಿರುವುದರಿಂದ ಭಾರೀ ಪ್ರಮಾಣದಲ್ಲಿ ದರ ಹೆಚ್ಚಳ ಆಗಬಹುದು ಎಂಬ ನಿರೀಕ್ಷೆಯಲ್ಲಿ ಖರೀದಿ ಜಾಸ್ತಿ ಮಾಡಿದ್ದು, ಸಂಗ್ರಹ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತದ ಒಟ್ಟಾರೆ ರೀಫೈನ್ಡ್ ಇಂಧನ ಬಳಕೆಯಲ್ಲಿ ಗ್ಯಾಸ್ಆಯಿಲ್ ಮಾರಾಟ ಐದನೇ ಎರಡು ಭಾಗದಷ್ಟಿದೆ. ಅದು ಮಾರ್ಚ್ ಮೊದಲಾರ್ಧದಲ್ಲಿ ಕೊರೊನಾ ಪೂರ್ವ ಹಂತಕ್ಕೆ ಏರಿಕೆ ಆಗಿದೆ. ಒಂದು ತಿಂಗಳ ಹಿಂದಿನ ಅವಧಿಗೆ ಹೋಲಿಸಿದರೆ ಶೇ 32.8ರಷ್ಟು ಹೆಚ್ಚಳ ಆಗಿದೆ.
ಡೀಸೆಲ್ ಮಾರಾಟದಲ್ಲಿನ ಹೆಚ್ಚಳವು ದೇಶದ ಸಾಗಾಣಿಕೆ ಮತ್ತು ಪೂರೈಕೆ ಮೂಲಸೌಕರ್ಯದ ಮೇಲೆ ಒತ್ತಡ ಹಾಕಿದೆ ಎಂದು ವಕ್ತಾರರು ತಿಳಿಸಿದ್ದಾರೆ. ರಫ್ತು ಒಪ್ಪಂದ ಹಾಗೂ ರೀಟೇಲ್ ಗ್ರಾಹಕರ ಬೇಡಿಕೆಯನ್ನು ಪೂರೈಸುವುದಕ್ಕೆ ರಿಲಯನ್ಸ್ ಬದ್ಧವಾಗಿದೆ ಎಂದು ಅವರು ಸೇರಿಸಿದ್ದಾರೆ.
ಇದನ್ನೂ ಓದಿ: Satellite Broadband: ಸ್ಯಾಟಲೈಟ್ ಬ್ರಾಡ್ಬ್ಯಾಂಡ್ ಕ್ಷೇತ್ರಕ್ಕೆ ಕಾಲಿಡಲಿದೆ ರಿಲಯನ್ಸ್ ಜಿಯೋ ಪ್ಲಾಟ್ಫಾರ್ಮ್ಸ್




