ಸಹಿ ಹಾಕೋದಿರಲಿ, ನಿರ್ದೇಶಕ ಆಗಿರೋದೇ ಗೊತ್ತಿಲ್ಲ ಈ ಅಮಾಯಕ ಅಟೆಂಡರ್ಗೆ; ಹೀಗೊಂದು ಗೋಲ್ಮಾಲ್ ಘಟನೆ
Story of Taslim Arif Khan: ರೋಚಕ ಸಿನಿಮಾ ಸ್ಟೋರಿ ನಿಜ ಜೀವನದಲ್ಲೂ ನಡೆದಿದೆ. ಪೀವೊನ್ ಆಗಿ ಕೆಲಸಕ್ಕೆ ಸೇರಿದ ವ್ಯಕ್ತಿಯನ್ನು ಆತನಿಗೆ ಗೊತ್ತಿಲ್ಲದೇ ಕಂಪನಿ ನಿರ್ದೇಶಕರನ್ನಾಗಿ ಹೆಸರಿಸಿ, ಸಹಿ ದುರುಪಯೋಗಿಸಿಕೊಂಡ ಘಟನೆ ನಡೆದಿದೆ. ಹೂಡಿಕೆದಾರರಿಂದ ಅಕ್ರಮವಾಗಿ ಹಣ ಸಂಗ್ರಹಿಸಲಾಗಿತ್ತು. ಆ ಅಟೆಂಡರ್ ಹೇಗೆ ಈ ಜಾಲದಿಂದ ಬಚಾವಾದರು ನೋಡಿ...

ನವದೆಹಲಿ, ಏಪ್ರಿಲ್ 11: ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಆತನಿಗೆ ಗೊತ್ತಿಲ್ಲದಂತೆ ಕಂಪನಿಯ ನಿರ್ದೇಶಕರನ್ನಾಗಿ ಮಾಡಿ, ಅವರ ಹಸ್ತಾಕ್ಷರವನ್ನೂ ಫೋರ್ಜರಿ ಮಾಡಿ, ಅದನ್ನು ಫಂಡಿಂಗ್ ಪಡೆಯಲು ಉಪಯೋಗಿಸಿದ ಕಥೆ ಇದು. ನೀವು ಕೆಲ ಸಿನಿಮಾಗಳಲ್ಲಿ ಈ ರೀತಿಯ ರೋಚಕ ಬ್ಯುಸಿನೆಸ್ ಸ್ಟೋರಿಗಳನ್ನು (Thrilling stories) ನೋಡಿರಬಹುದು. ಈಗ ನಿಜ ಜೀವನದಲ್ಲೂ ನಡೆದಿದೆ. ಈ ರೀತಿ ಗೊತ್ತಿಲ್ಲದೇ ಕಂಪನಿಯ ನಿರ್ದೇಶಕರಾಗಿ ಮಾಡದ ತಪ್ಪಿಗೆ ದೂರು ಕೇಳುವ ಪರಿಸ್ಥಿತಿ ಬಂದ ವ್ಯಕ್ತಿಯ ಹೆಸರು ಪಶ್ಚಿಮ ಬಂಗಾಳದ ತಸ್ಲಿಮ್ ಅರಿಫ್ ಖಾನ್.
ಗ್ರೀನ್ಬ್ಯಾಂಗ್ ಆಗ್ರೋ ಲಿಮಿಟೆಡ್ ಸಂಸ್ಥೆಯಲ್ಲಿ ತಸ್ಲಿಮ್ ಅರಿಫ್ ಖಾನ್ ಆಫೀಸ್ ಅಟೆಂಡರ್ ಆಗಿ ಕೆಲಸಕ್ಕೆ ಸೇರಿದ್ದರು. ಅದೂ ದಿನಗೂಲಿ ನೌಕರನಾಗಿ. ಅಲ್ಲಿ ಕೆಲಸ ಮಾಡಿದ್ದೂ ಕೂಡ ಅಲ್ಪ ಅವಧಿ ಮಾತ್ರವೇ. ಇವರು ಕೆಲಸಕ್ಕೆ ಸೇರಿದ ಬಳಿಕ ಅವರಿಗೆ ಗೊತ್ತಿಲ್ಲದೆ ಅವರ ಹೆಸರನ್ನು ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಸೇರಿಸಲಾಯಿತು. ಇವರ ಹಸ್ತಾಕ್ಷರವನ್ನು ಬಳಸಿ ಡಿಜಿಟಲ್ ಸಿಗ್ನೇಚರ್ ಮಾಡಲಾಯಿತು. ಈ ಸಹಿಯನ್ನು ಬಳಸಿ 2011ರಿಂದ 2014ರವರೆಗೆ ಮೂರು ಹಣಕಾಸು ವರ್ಷದಲ್ಲಿ ನಾನ್ ಕನ್ವರ್ಟಬಲ್ ಡಿಬಂಚರ್ಗಳ (ಎನ್ಸಿಡಿ) ಮೂಲಕ ಹೂಡಿಕೆದಾರರಿಂದ ಹಣ ಪಡೆಯಲಾಗಿತ್ತು.
ಇದನ್ನೂ ಓದಿ: 1 ಪರ್ಸೆಂಟ್ ತಂತ್ರ: ಇದು ಹಣಕಾಸು ಭದ್ರತೆಗೆ ನಿತಿನ್ ಕಾಮತ್ ಸೂತ್ರ
ಇದ್ಯಾವುದು ಕೂಡ ತಸ್ಲಿಮ್ಗೆ ಗೊತ್ತೇ ಇರಲಿಲ್ಲ. ಇದು ಆಗುವಾಗ ಅವರು ಕಂಪನಿಯ ಕೆಲಸದಲ್ಲೂ ಇರಲಿಲ್ಲ. ತಸ್ಲಿಮ್ರೂ ಸೇರಿ ವಿವಿಧ ಕಂಪನಿ ನಿರ್ದೇಶಕರ ಸಹಿ ಬಳಸಿ ಎನ್ಸಿಡಿಗಳನ್ನು ವಿತರಿಸಿ, ಹೂಡಿಕೆದಾರರಿಂದ ಲಕ್ಷಾಂತರ ಹಣ ಪಡೆಯಲಾಗಿತ್ತು.
ಸೆಬಿಗೆ ಸಿಕ್ಕಿಬಿದ್ದ ಗೋಲ್ಮಾಲ್
ಎನ್ಸಿಡಿಗಳನ್ನು 200ಕ್ಕೂ ಹೆಚ್ಚು ಮಂದಿಗೆ ವಿತರಿಸಿದ್ದರೆ, ಆಗ ಅದು ಪಬ್ಲಿಕ್ ಆಫರ್ ಪರಿಧಿಗೆ ಬರುತ್ತದೆ. ಷೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟಿಂಗ್ ಮಾಡಲು ಅನುಮತಿ ಪಡೆಯುವುದು ಸೇರಿದಂತೆ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಗ್ರೀನ್ಬ್ಯಾಂಕ್ ಆಗ್ರೋ ಲಿ ಸಂಸ್ಥೆ ಇಂಥ ಯಾವ ನಿಯಮವನ್ನೂ ಅನುಸರಿಸದೇ ಇದ್ದದ್ದು ಸೆಬಿ ಗಮನಕ್ಕೆ ಬರುತ್ತದೆ.
ತನಿಖೆ ನಡೆಸುವ ಸೆಬಿ 2018ರಲ್ಲಿ ಗ್ರೀನ್ಬ್ಯಾಂಗ್ ಆಗ್ರೋ ಸಂಸ್ಥೆಗೆ ಹೂಡಿಕೆದಾರರ ಹಣ ಮರಳಿಸುವಂತೆ ಆದೇಶಿಸುತ್ತದೆ. ಸಂಸ್ಥೆಯ ನಿರ್ದೇಶಕರು ಮತ್ತು ಮಾಲೀಕರಿಗೆ ನೋಟೀಸ್ ಹೋಗುತ್ತದೆ. ಹೂಡಿಕೆದಾರರಿಗೆ 36.97 ಲಕ್ಷ ರೂ ಮರಳಿಸಬೇಕೆಂದು ಆದೇಶಿಸಿರಲಾಗುತ್ತದೆ.
ಇದನ್ನೂ ಓದಿ: ಮಕ್ಕಳಿಗೆ ನೂರಕ್ಕೆ ಒಂದು ರುಪಾಯಿಯೂ ಕೊಡದ ಬಿಲ್ ಗೇಟ್ಸ್; ಮಕ್ಕಳು ಏನಂತಾರೆ ನೋಡಿ…
ಕಂಪನಿಯ 13 ನಿರ್ದೇಶಕರ ಸಾಲಿನಲ್ಲಿ ತಸ್ಲಿಮ್ ಆರಿಫ್ ಖಾನ್ ಹೆಸರೂ ಇತ್ತು. ಅಸಲು ಹಣದ ಜೊತೆಗೆ ವರ್ಷಕ್ಕೆ ಶೇ. 15ರ ವಾರ್ಷಿಕ ಬಡ್ಡಿಯನ್ನೂ ಸೇರಿಸಿ ಕೊಡಬೇಕೆಂಬುದು ಸೆಬಿ ಆದೇಶ.
ಪಶ್ಚಿಮ ಬಂಗಾಳದ ತಸ್ಲಿಮ್ ಖಾನ್ ದೀರ್ಘ ಕಾಲ ಕಾನೂನು ಹೋರಾಟದ ಬಳಿಕ ತಾನು ಅಮಾಯಕ ಎಂಬುದನ್ನು ಕೋರ್ಟ್ನಲ್ಲಿ ಪ್ರೂವ್ ಮಾಡಿ ಬಚಾವಾಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ