AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಟಾ ಮೋಟಾರ್ಸ್ ವಿಭಜನೆ; ಕಮರ್ಷಿಯಲ್ ವಾಹನಗಳ ವ್ಯವಹಾರವೇ ಪ್ರತ್ಯೇಕ; ಷೇರುದಾರರಿಗೆ ಎರಡರಲ್ಲೂ ಪಾಲು

Tata Motors Demerger: ಟಾಟಾ ಮೋಟಾರ್ಸ್ ಲಿ ಸಂಸ್ಥೆಯ ಕಮರ್ಷಿಯಲ್ ವಾಹನ ಮತ್ತು ಪ್ಯಾಸೆಂಜರ್ ವಾಹನಗಳ ಬಿಸಿನೆಸ್ ಪ್ರತ್ಯೇಕಗೊಳ್ಳಲಿದೆ. ಡೀಮರ್ಜರ್ ಪ್ರಸ್ತಾಪಕ್ಕೆ ಟಾಟಾ ಮೋಟಾರ್ಸ್ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದೆ. ಎನ್​ಸಿಎಲ್​ಟಿ ಡೀಮರ್ಜರ್ ಸ್ಕೀಮ್ ಮೂಲಕ ನಡೆಯುವ ವಿಭಜನೆಗೆ ಟಿಎಂಎಲ್​ನ ಮಂಡಳಿ, ಷೇರುದಾರರು, ಸಾಲನೀಡುಗರು ಮತ್ತು ನಿಯಂತ್ರಕ ಸಂಸ್ಥೆಗಳ ಅನುಮೋದನೆ ಸಿಗುವುದು ಬಾಕಿ ಇದೆ.

ಟಾಟಾ ಮೋಟಾರ್ಸ್ ವಿಭಜನೆ; ಕಮರ್ಷಿಯಲ್ ವಾಹನಗಳ ವ್ಯವಹಾರವೇ ಪ್ರತ್ಯೇಕ; ಷೇರುದಾರರಿಗೆ ಎರಡರಲ್ಲೂ ಪಾಲು
ಟಾಟಾ ಮೋಟಾರ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 05, 2024 | 10:42 AM

Share

ನವದೆಹಲಿ, ಮಾರ್ಚ್ 5: ಟಾಟಾ ಮೋಟಾರ್ಸ್ ಸಂಸ್ಥೆ (TML- Tata Motors Ltd) ತನ್ನ ಒಟ್ಟೂ ವ್ಯವಹಾರಗಳನ್ನು ಎರಡಾಗಿ ವಿಭಜನೆ (demerger) ಮಾಡುತ್ತಿದೆ. ಕಮರ್ಷಿಯಲ್ ವಾಹನದ ಬಿಸಿನೆಸ್ ಮತ್ತು ಪ್ಯಾಸೆಂಜರ್ ವಾಹನದ ಬಿಸಿನೆಸ್ ಎರಡೂ ಪ್ರತ್ಯೇಕಗೊಳ್ಳಲಿವೆ. ಈ ವ್ಯವಹಾರ ವಿಭಜನೆಗೆ ಟಾಟಾ ಮೋಟಾರ್ಸ್ ಲಿ ಸಂಸ್ಥೆಯ ನಿರ್ದೇಶಕರ ಮಂಡಳಿ (TML Board of Directors) ಅನುಮೋದನೆ ನೀಡಿದೆ. ಪ್ರತ್ಯೇಕಗೊಳ್ಳುವ ಎರಡೂ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಇರಲಿವೆ. ಆದರೆ, ಟಾಟಾ ಮೋಟಾರ್ಸ್​ನ ಷೇರುದಾರರಿಗೆ ಎರಡರಲ್ಲೂ ಪಾಲು ಇರಲಿದೆ. ಡೀಮರ್ಜ್ ಆದ ಬಳಿಕ ಬರುವ ಈ ಎರಡು ಹೊಸ ಕಂಪನಿಗಳ ಪೈಕಿ ಕಮರ್ಷಿಯಲ್ ವಾಹನ ಬಿಸಿನೆಸ್​ನ ಸಂಸ್ಥೆ ಕಿರಿದಾಗಿರುತ್ತದೆ. ಇದು ನಿಫ್ಟಿ, ಸೆನ್ಸೆಕ್ಸ್ ಸೇರಿದಂತೆ ಎಲ್ಲಾ ಷೇರು ಸೂಚ್ಯಂಕಗಳ ಪಟ್ಟಿಯಿಂದ ಹೊರಬೀಳುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಪ್ಯಾಸೆಂಜರ್ ವಾಹನದ ಬಿಸಿನೆಸ್​ನ ಸಂಸ್ಥೆಯ ಷೇರು ಬಹುತೇಕ ಎಲ್ಲಾ ಸೂಚ್ಯಂಕಗಳಲ್ಲಿ ಲಿಸ್ಟ್ ಆಗಿರುತ್ತದೆ.

ಈ ಮುಂಚೆಯೇ ಪ್ರತ್ಯೇಕವಾಗಿ ವ್ಯವಹಾರ

ಟಾಟಾ ಮೋಟಾರ್ಸ್​ನಲ್ಲಿ ಪ್ಯಾಸೆಂಜರ್ ವಾಹನ ಮತ್ತು ಕಮರ್ಷಿಯಲ್ ವಾಹನದ ಬಿಸಿನೆಸ್ 2021ರಿಂದಲೂ ಪ್ರತ್ಯೇಕವಾಗಿಯೇ ಕಾರ್ಯಾಚರಿಸಲಾಗುತ್ತಿದೆ. 2022ರಲ್ಲಿ ಎರಡನ್ನೂ ಅಂಗಸಂಸ್ಥೆಗಳೆಂದು ವರ್ಗೀಕರಿಸಲಾಗಿತ್ತು. ಎರಡಕ್ಕೂ ಬೇರೆ ಬೇರೆ ಸಿಇಒಗಳಿದ್ದಾರೆ. ಹೀಗಾಗಿ, ಈಗ ಅಧಿಕೃತವಾಗಿ ಇದನ್ನು ಪ್ರತ್ಯೇಕಗೊಳಿಸಲಾಗುತ್ತಿದೆ ಅಷ್ಟೇ. ಈ ರೀತಿ ವ್ಯವಹಾರ ವಿಭಜನೆ ಮಾಡುವುದರಿಂದ ಎರಡೂ ವ್ಯವಹಾರಗಳ ವೃದ್ಧಿಗೆ ಅನುಕೂಲವಾಗುತ್ತದೆ ಎಂಬುದು ಲೆಕ್ಕಾಚಾರ.

ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಬ್ಯಾಂಕಿಂಗ್ ಲೈಸೆನ್ಸ್ ರದ್ದಾಗುವ ಸಾಧ್ಯತೆ; ಆಡಳಿತಗಾರರ ನೇಮಕಕ್ಕೆ ಆರ್​ಬಿಐ ಯೋಜನೆ

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಡೀಮರ್ಜರ್ ಸ್ಕೀಮ್ ಮೂಲಕ ಟಾಟಾ ಮೋಟಾರ್ಸ್ ವಿಭಜನೆ ನಡೆಯಲಿದೆ. ಮುಂಬರುವ ತಿಂಗಳಲ್ಲಿ ಈ ಎನ್​ಸಿಎಲ್​ಟಿ ಸ್ಕೀಮ್​ಗೆ ಟಾಟಾ ಮೋಟಾರ್ಸ್​ನ ಮಂಡಳಿ, ಷೇರುದಾರರು, ಸಾಲನೀಡುಗರು (creditors) ಮತ್ತು ನಿಯಂತ್ರಕರು (regulators) ಇವರೆಲ್ಲರೂ ಒಪ್ಪಿಗೆ ನೀಡಬೇಕು. ಒಂದು ಅಂದಾಜು ಪ್ರಕಾರ ಈ ಪ್ರಕ್ರಿಯೆ ಪೂರ್ಣಗೊಳ್ಳಲು 12ರಿಂದ 15 ತಿಂಗಳು ಬೇಕಾಗುತ್ತದೆ.

ಷೇರುದಾರರಿಗೆ ಎಷ್ಟು ಷೇರು ಸಿಗುತ್ತದೆ?

ಇನ್ನು, ಟಾಟಾ ಮೋಟಾರ್ಸ್ ಎರಡು ಕಂಪನಿಗಳಾಗಿ ವಿಭಜನೆಯಾದರೆ, ಅದರ ಷೇರು ಕೂಡ ವಿಭಜನೆ ಆಗುತ್ತದೆ. ಈಗ ಟಾಟಾ ಮೋಟಾರ್ಸ್​ನ ಷೇರು ಹೊಂದಿರುವವರಿಗೆ ಎರಡೂ ಕಂಪನಿಗಳ ಷೇರುಪಾಲು ಸಿಗುತ್ತದೆ. ಅವರ ಒಟ್ಟೂ ಷೇರುಮೌಲ್ಯದಲ್ಲಿ ವ್ಯತ್ಯಯ ಆಗುವುದಿಲ್ಲ. ಸದ್ಯ ಟಾಟಾ ಮೋಟಾರ್ಸ್ ಷೇರು ಕಳೆದ ಒಂದ ವರ್ಷದಿಂದ ಸಖತ್ ಬೇಡಿಕೆ ಪಡೆದಿದೆ. ಶೇ. 125ರಷ್ಟು ಬೆಲೆ ಹೆಚ್ಚಳ ಕಂಡಿದೆ. ಜನವರಿಯಿಂದ ಶೇ 25ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಜಿ20 ದೇಶಗಳ ಪೈಕಿ ಭಾರತವೇ ಅತಿ ಫಾಸ್ಟ್ ಎಂದ ಮೂಡೀಸ್; ಈ ವರ್ಷ ಶೇ. 6.8ರಷ್ಟು ಜಿಡಿಪಿ ಬೆಳೆವಣಿಗೆ ಅಂದಾಜು

ಈಗ ವ್ಯವಹಾರ ವಿಭಜನೆ ನಿರ್ಧಾರ ಪ್ರಕಟವಾಗುತ್ತಿದ್ದಂತೆಯೇ ಇಂದು ಮಂಗಳವಾರ ಟಾಟಾ ಮೋಟಾರ್ಸ್ ಷೇರು ಇನ್ನೂ ಭರ್ಜರಿ ಬೇಡಿಕೆ ಕುದುರಿಸಿದೆ. ಮಾರ್ಚ್ 4ರಂದು 988.90 ರೂ ಇದ್ದ ಅದರ ಷೇರುಬೆಲೆ ಇಂದು ಬೆಳಗಿನ ವಹಿವಾಟಿನಲ್ಲಿ ಬೆಳಗ್ಗೆ 10 ಗಂಟೆಯಲ್ಲಿ 1,061 ರೂವರೆಗೂ ಹೋಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ