AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಷರತ್ತಿಗೆ ಒಪ್ಪಿದರೆ ಭಾರತದಲ್ಲಿ ಟೆಸ್ಲಾ ಮಾಡಲಿದೆ ಹೂಡಿಕೆ; ಏನದು ಮಸ್ಕ್ ಬೇಡಿಕೆ?

Tesla Car plant proposal in India: ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ಭಾರತದಲ್ಲಿ ಹೂಡಿಕೆ ಮಾಡಲು ಕೆಲ ಷರತ್ತುಗಳನ್ನು ಹಾಕಿದೆ. ಸರ್ಕಾರ ಮೊದಲೆರಡು ವರ್ಷ ತನ್ನ ಕಾರುಗಳಿಗೆ ಆಮದು ಸುಂಕ ರಿಯಾಯಿತಿ ಕೊಡಬೇಕು ಎಂಬುದು ಟೆಸ್ಲಾ ಷರತ್ತು. ಟೆಸ್ಲಾದ ಈ ಬೇಡಿಕೆಯನ್ನು ಕೇಂದ್ರದ ವಿವಿಧ ಸಚಿವಾಲಯಗಳು ಪರಾಮರ್ಶಿಸುತ್ತಿದ್ದು, ಅಂತಿಮ ನಿರ್ಧಾರ ಸದ್ಯದಲ್ಲೇ ಬರಲಿದೆ.

ಈ ಷರತ್ತಿಗೆ ಒಪ್ಪಿದರೆ ಭಾರತದಲ್ಲಿ ಟೆಸ್ಲಾ ಮಾಡಲಿದೆ ಹೂಡಿಕೆ; ಏನದು ಮಸ್ಕ್ ಬೇಡಿಕೆ?
ಟೆಸ್ಲಾ ಕಾರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 24, 2023 | 11:12 AM

ನವದೆಹಲಿ, ನವೆಂಬರ್ 24: ಭಾರತದಲ್ಲಿ ಟೆಸ್ಲಾ ಕಾರು ಉತ್ಪಾದನಾ ಘಟಕ (Tesla car unit) ಸ್ಥಾಪನೆ ವಿಚಾರವಾಗಿ ಸರ್ಕಾರ ಹಾಗೂ ಕಂಪನಿ ಮಧ್ಯೆ ಹಗ್ಗ ಜಗ್ಗಾಟ ಮುಂದುವರಿದಿದೆ. ಭಾರತದಲ್ಲಿ ಫ್ಯಾಕ್ಟರಿ ಸ್ಥಾಪಿಸಬೇಕೆಂದರೆ ಸರ್ಕಾರ ಕಾರು ಆಮದು ಶುಲ್ಕದಲ್ಲಿ ರಿಯಾಯಿತಿ ನೀಡಬೇಕು ಎಂದು ಟೆಸ್ಲಾ ಸಂಸ್ಥೆ ಒತ್ತಾಯಿಸುತ್ತಿದೆ. ಫ್ಯಾಕ್ಟರಿ ಸ್ಥಾಪಿಸಿ ಮೊದಲ ಎರಡು ವರ್ಷದಲ್ಲಿ ಆಮದು ಸುಂಕವನ್ನು ಶೇ. 15ಕ್ಕೆ ಇಳಿಸಬೇಕು ಎಂಬುದು ಅದರ ಷರತ್ತು. ಇದಕ್ಕೆ ಸರ್ಕಾರ ಒಪ್ಪಿದಲ್ಲಿ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ ಹಣ ಹೂಡಿಕೆ ಮಾಡುವುದಾಗಿ ಅದು ಹೇಳಿದೆ.

ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಸಂಸ್ಥೆ ವಿಶ್ವದ ಪ್ರಮುಖ ಎಲೆಕ್ಟ್ರಿಕ್ ಕಾರ್ ಕಂಪನಿಯಾಗಿದೆ. ಭಾರತದಲ್ಲಿ ಯಾವುದೇ ಕಾರನ್ನು ಆಮದು ಮಾಡಿಕೊಂಡರೆ ಶೇ. 100ರವರೆಗೆ ಸುಂಕ ವಿಧಿಸಲಾಗುತ್ತದೆ. ಹೀಗಾಗಿ, ಭಾರತದಲ್ಲಿ ಟೆಸ್ಲಾ ಕಾರು ಮಾರಾಟವಾಗತ್ತಿಲ್ಲ. ಭಾರತದಲ್ಲಿ ಟೆಸ್ಲಾ ಕಾರನ್ನು ತಯಾರಿಸಿ ಮಾರುವುದಾದರೆ ಅಭ್ಯಂತರ ಇಲ್ಲ ಎಂಬುದು ಸರ್ಕಾರದ ವಾದ. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಹಗ್ಗ ಜಗ್ಗಾಟ ನಡೆದಿದೆ.

ಇದನ್ನೂ ಓದಿ: ಲಂಡನ್​ನ ಬಾರ್​ಕ್ಲೇಸ್ ಕಂಪನಿಯಲ್ಲಿ 2,000 ಉದ್ಯೋಗಿಗಳ ಲೇ ಆಫ್ ಸಾಧ್ಯತೆ; 10 ಸಾವಿರ ಕೋಟಿ ರೂ ವೆಚ್ಚ ಕಡಿತಕ್ಕೆ ಯೋಜನೆ

ಸರ್ಕಾರ ಮೊದಲೆರಡು ವರ್ಷದಲ್ಲಿ 12,000 ವಾಹನಗಳಿಗೆ ರಿಯಾಯಿತಿ ದರದಲ್ಲಿ ಆಮದು ಸುಂಕ ವಿಧಿಸಿದಲ್ಲಿ 500 ಮಿಲಿಯನ್ ಡಾಲರ್​ವರೆಗೂ (4,150 ಕೋಟಿ ರೂ) ಹೂಡಿಕೆ ಮಾಡುವುದಾಗಿ ಟೆಸ್ಲಾ ಹೇಳಿದೆ. ಇನ್ನು, 30,000 ವಾಹನಗಳಿಗೆ ಆಮದು ಸುಂಕ ಕಡಿಮೆ ಮಾಡಿದರೆ 2 ಬಿಲಿಯನ್ ಡಾಲರ್​ವರೆಗೂ (ಸುಮಾರು 16,000 ಕೋಟಿ ರೂ) ಹೂಡಿಕೆ ಮಾಡುವುದಾಗಿ ಟೆಸ್ಲಾ ಷರತ್ತು ಹಾಕಿದೆ.

ಕೇಂದ್ರದ ಡಿಪಿಐಐಟಿ ಇಲಾಖೆ, ಬೃಹತ್ ಕೈಗಾರಿಕೆಗಳ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಹಣಕಾಸು ಸಚಿವಾಲಯಗಳು ಹಾಗೂ ಪ್ರಧಾನಿ ಕಚೇರಿ (ಪಿಎಂಒ) ಈಗ ಟೆಸ್ಲಾ ಷರುತ್ತುಗಳನ್ನು ಪರಾಮರ್ಶಿಸುತ್ತಿವೆ. ಎಲೆಕ್ಟ್ರಿಕ್ ಕಾರುಗಳಿಗೆ ಆದ್ಯತೆ ಕೊಡುವ ನೀತಿ ಹೊಂದಿರುವ ಸರ್ಕಾರ ಈಗ ಟೆಸ್ಲಾಗೆ ಹೆಚ್ಚಿನ ರಿಯಾಯಿತಿ ಕೊಟ್ಟರೆ ಬೇರೆ ಕಂಪನಿಗಳೂ ಅದೇ ಬೇಡಿಕೆ ಇಡಲು ಮುಂದಾಗಬಹುದು. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಯೋಚಿಸುತ್ತಿದೆ.

ಇದನ್ನೂ ಓದಿ: ಖಾನ್ ಮಾರ್ಕೆಟ್ ಭಾರತದ ಅತ್ಯಂತ ದುಬಾರಿ ರೀಟೇಲ್ ಮಾರುಕಟ್ಟೆ; ಬೇರೆ ಕಡೆ ಹೇಗೆ?

ಭಾರತದಲ್ಲಿ ಕಳೆದ ವರ್ಷ 50,000 ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿದ್ದವು. ಈ ಹಣಕಾಸು ವರ್ಷದಲ್ಲಿ ಇವುಗಳ ಸಂಖ್ಯೆ 1 ಲಕ್ಷ ಗಡಿ ದಾಟುವ ಸಾಧ್ಯತೆ ಇದೆ. ಮುಂದಿನ ವರ್ಷದಲ್ಲಿ ಈ ಪ್ರಮಾಣ ಇನ್ನೂ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆ ಇದೆ.

ಅಮೆರಿಕದ ಟೆಸ್ಲಾ ಕಂಪನಿ ಭಾರತದಲ್ಲಿ ಉದ್ದೇಶಿತ ಕಾರು ಘಟಕ ಸ್ಥಾಪಿಸಿದಲ್ಲಿ ಅದರ ಮೂರು ಮಾಡೆಲ್​ಗಳನ್ನು ಇಲ್ಲಿಯೇ ತರಯಾರಿಸಬಹುದು. ಟೆಸ್ಲಾ ತನ್ನ ಮಾಡೆಲ್ 3, ಮಾಡೆಲ್ ವೈ ಮತ್ತು ಹೊಸ ಹ್ಯಾಚ್​ಬ್ಯಾಕ್ ಕಾರನ್ನು ಭಾರತದಲ್ಲಿ ತಯಾರಿಸಲು ಉದ್ದೇಶಿಸಿದೆ. ಇದರಲ್ಲಿ ಹ್ಯಾಚ್​ಬ್ಯಾಕ್ ಕಾರು 25,000 ಡಾಲರ್ ಬೆಲೆಯದ್ದಾಗಿದೆ. ಅಂದರೆ 15-20 ಲಕ್ಷ ರೂಪಾಯಿ ಆಸುಪಾಸಿನ ಬೆಲೆಯಲ್ಲಿ ಇದು ಲಭ್ಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ