ಏಪ್ರಿಲ್ನಿಂದಲೇ ಟೆಸ್ಲಾ ಕಾರು ಭಾರತದಲ್ಲಿ ಮಾರಾಟ; ಬೆಲೆ ಕೇವಲ 21 ಲಕ್ಷ ರೂ?
Tesla cars for Rs 21 lakh?: ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಗಳಲ್ಲಿ ಒಂದೆನಿಸಿದ ಟೆಸ್ಲಾ ಸಂಸ್ಥೆಯ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ಮಾರಾಟವಾಗಲಿವೆ. ಟೆಸ್ಲಾ ಕಾರುಗಳ ಮೇಲಿನ ಆಮದು ಸುಂಕವನ್ನು ಕಡಿಮೆಗೊಳಿಸಿರುವ ಹಿನ್ನೆಲೆಯಲ್ಲಿ ಸಂಸ್ಥೆ ಅಗ್ರೆಸಿವ್ ಆಗಿ ಸೇಲ್ಸ್ ಶುರು ಮಾಡಲಿದೆ. ಜರ್ಮನಿಯ ಘಟಕದಲ್ಲಿ ತಯಾರಿಸಲಾಗುತ್ತಿರುವ ಕಾರುಗಳನ್ನು ಭಾರತಕ್ಕೆ ತಂದು 25,000 ಡಾಲರ್ ಅಥವಾ 21 ಸಾವಿರ ರೂ ಬೆಲೆಗೆ ಮಾರುವ ಯೋಜನೆ ಇದೆ ಎಂಬುದು ಸದ್ಯಕ್ಕೆ ಗೊತ್ತಾಗಿರುವ ಮಾಹಿತಿ.

ನವದೆಹಲಿ, ಫೆಬ್ರುವರಿ 19: ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಸಂಸ್ಥೆಯ ಎಲೆಕ್ಟ್ರಿಕ್ ಕಾರುಗಳು ಸದ್ಯದಲ್ಲೇ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿವೆ. ಸಿಎನ್ಬಿಸಿ ಟಿವಿ18 ವರದಿ ಪ್ರಕಾರ ಏಪ್ರಿಲ್ ತಿಂಗಳಿಂದಲೇ 25,000 ಯುಎಸ್ ಡಾಲರ್ಗಳಷ್ಟು ಕಡಿಮೆ ಬೆಲೆಗೆ ಟೆಸ್ಲಾ ಕಾರುಗಳನ್ನು ಭಾರತದಲ್ಲಿ ಮಾರಬಹುದು ಎನ್ನಲಾಗಿದೆ. 25,000 ಡಾಲರ್ ಎಂದರೆ ಸುಮಾರು 21-22 ಲಕ್ಷ ರುಪಾಯಿ ಆಗುತ್ತದೆ. ಜರ್ಮನಿಯ ಬರ್ಲಿನ್ ನಗರದಲ್ಲಿರುವ ಟೆಸ್ಲಾ ಘಟಕದಲ್ಲಿ ತಯಾರಿಸಲಾಗುತ್ತಿರುವ ಕಾರುಗಳನ್ನು ಭಾರತಕ್ಕೆ ಆಮದು ಮಾಡಬಹುದ ಎಂದು ಹೇಳಲಾಗುತ್ತಿದೆ.
ಇಷ್ಟು ಕಡಿಮೆ ಮೊತ್ತಕ್ಕೆ ಟೆಸ್ಲಾ ಕಾರು ಭಾರತದಲ್ಲಿ ಲಭ್ಯವಾಗುತ್ತದೆ ಎಂಬುದು ಸಾಕಷ್ಟು ಮಂದಿಗೆ ಅಚ್ಚರಿ ತಂದಿರುವ ಸಂಗತಿ. ಟೆಸ್ಲಾದ ಯಾವ ಮಾಡಲ್ ಕಾರನ್ನು ಭಾರತಕ್ಕೆ ತರಲಾಗುತ್ತದೆ ಎಂಬುದು ಗೊತ್ತಿಲ್ಲ. ವರದಿ ಪ್ರಕಾರ ಮುಂಬೈ ಮತ್ತು ದೆಹಲಿ ನಗರಗಳನ್ನು ಟೆಸ್ಲಾ ತನ್ನ ಆರಂಭಿಕ ಗುರಿಯಾಗಿ ಇಟ್ಟುಕೊಂಡಿದೆ. ಇವೆರಡು ನಗರಗಳಲ್ಲಿ ಅದು ಸೇಲ್ಸ್ ಮತ್ತು ಸರ್ವಿಸ್ ಸೆಂಟರ್ಗಳನ್ನು ತೆರೆಯಲಿದೆ. ರಾಯ್ಟರ್ಸ್ ವರದಿ ಪ್ರಕಾರ ಇವೆರಡು ನಗರಗಳಲ್ಲಿ ಎರಡು ಶೋರೂಮ್ಗಳಿಗೆ ಸ್ಥಳ ಗೊತ್ತುಮಾಡಿದೆಯಂತೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಹೋಗಿದ್ದಾಗ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡುವ ಮುನ್ನ ಇಲಾನ್ ಮಸ್ಕ್ ಜೊತೆ ಭೇಟಿಯಾಗಿತ್ತು. ಈ ವೇಳೆ ಟೆಸ್ಲಾ ಕಾರಿನ ವಿಚಾರವೂ ಪ್ರಸ್ತಾಪವಾಗಿರುವ ಸಾಧ್ಯತೆ ಇದೆ. ಆ ಭೇಟಿ ಬಳಿಕ ಟೆಸ್ಲಾ ಸಂಸ್ಥೆ ಭಾರತದಲ್ಲಿ 13 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಜಾಹೀರಾತು ಪೋಸ್ಟ್ ಮಾಡಿತ್ತು.
ಇದನ್ನೂ ಓದಿ: ಕಮಿಷನ್ ಮಾರ್ಗ ಬಿಟ್ಟ ಊಬರ್ ಆಟೊ; ರಿಕ್ಷಾಚಾಲಕರಿಗೆ ಅನುಕೂಲ; ನಮ್ಮ ಯಾತ್ರಿ ಸ್ಪರ್ಧೆ ಎದುರಿಸಲು ಊಬರ್ ಹೆಜ್ಜೆ
ಟೆಸ್ಲಾ ಕಾರುಗಳಿಗೆ ಆಮದು ತೆರಿಗೆ ಕಡಿಮೆ ಮಾಡಬೇಕು ಎಂಬುದು ಇಲಾನ್ ಮಸ್ಕ್ ಸಾಕಷ್ಟು ದಿನಗಳಿಂದ ಮಾಡುತ್ತಾ ಬಂದಿರುವ ಒತ್ತಾಯ. ಇದಕ್ಕೆ ಭಾರತ ಸರ್ಕಾರವೂ ಒಪ್ಪಿದೆ. ಶೇ. 70ರಿಂದ 100ರಷ್ಟಿದ್ದ ತೆರಿಗೆಯನ್ನು ಟೆಸ್ಲಾ ಕಾರಿಗೆ ಶೇ. 15ಕ್ಕೆ ಇಳಿಸಲು ಸರ್ಕಾರ ಒಪ್ಪಿದೆ. ಹೀಗಾಗಿ, ಟೆಸ್ಲಾ ಕಾರುಗಳು ಭಾರತಕ್ಕೆ ಆಗಮನವಾಗುವುದು ನಿಶ್ಚಿತ ಎನಿಸಿದೆ.
ಒಂದೆರಡು ವರ್ಷದಲ್ಲಿ ಟೆಸ್ಲಾ ಸಂಸ್ಥೆ ಭಾರತದಲ್ಲಿ ಕಾರು ತಯಾರಿಸಲು ಘಟಕ ಸ್ಥಾಪಿಸುವ ಸಾಧ್ಯತೆಯೂ ಇದೆ. ಅದಾದ ಬಳಿಕ ಟೆಸ್ಲಾ ಕಾರುಗಳು ಕಡಿಮೆ ಬೆಲೆಗೆ ಭಾರತದಲ್ಲಿ ಲಭ್ಯವಾಗಬಹುದು. ಸದ್ಯ ಭಾರತಕ್ಕೆ ತರಲಾಗುತ್ತಿರುವ ಟೆಸ್ಲಾ ಕಾರು ಮಾಡಲ್ ಯಾವುದು? ಅದರ ಸ್ಪೆಸಿಫಿಕೇಶನ್ ಏನೆಂಬುದರ ವಿವರ ಗೊತ್ತಿಲ್ಲ. ಮಾಡಲ್ ಎಸ್, ಮಾಡಲ್ ಎಕ್ಸ್, ಮಾಡಲ್ 3, ಮಾಡಲ್ ವೈ ಕಾರುಗಳನ್ನು ಟೆಸ್ಲಾ ಮಾರುಕಟ್ಟೆಗೆ ಬಿಟ್ಟಿದೆ. ಟೆಸ್ಲಾ ಸೆಮಿ, ಸೈಬರ್ ಟ್ರಕ್ ಇತ್ಯಾದಿ ಎಲೆಕ್ಟ್ರಿಕ್ ಟ್ರಕ್ಗಳಿವೆ. ಈ ಪೈಕಿ ಟೆಸ್ಲಾ ಮಾಡಲ್ ಎಸ್ ಅನ್ನು ಭಾರತದಲ್ಲಿ ಮಾಡಬಹುದಾ ಗೊತ್ತಿಲ್ಲ.
ಇದನ್ನೂ ಓದಿ: Car Modification: ನಿಮ್ಮ ಕಾರನ್ನು ಮಾಡಿಫಿಕೇಷನ್ ಮಾಡುವ ಮುನ್ನ ಈ ಸ್ಟೋರಿ ಓದಿ: ಇಲ್ಲದಿದ್ರೆ ದಂಡ ಖಚಿತ
ಟೆಸ್ಲಾದ ಅತ್ಯಂತ ಕಡಿಮೆ ಬೆಲೆಯ ಕಾರು ಮಾಡಲ್ ಎಸ್. ಇದು 45,000 ಡಾಲರ್ನಿಂದ ಶುರುವಾಗುತ್ತದೆ. ಅಂದರೆ ಕನಿಷ್ಠ 35-40 ಲಕ್ಷ ರೂ ಆಗುತ್ತದೆ. ಆದರೆ, ಭಾರತದಲ್ಲಿ 21 ಲಕ್ಷ ರೂಗೆ ಯಾವ ಕಾರನ್ನು ಟೆಸ್ಲಾ ಆಫರ್ ಮಾಡುತ್ತದೆ ಎಂಬುದು ಕುತೂಹಲ ಮೂಡಿಸಿರುವ ಸಂಗತಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ