AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್​ನಲ್ಲಿ ಸುಂಕ ಇಳಿಸಿದ್ದೇವೆ, ಗ್ರಾಹಕರಿಗೂ ಬೆಲೆ ಇಳಿಸಿ: ಔಷಧ ಕಂಪನಿಗಳಿಗೆ ಸರ್ಕಾರ ಸೂಚನೆ

Custom duty exemption on medicines: ಆಮದು ಸುಂಕ ವಿನಾಯಿತಿ ಪಡೆದ ಔಷಧಗಳ ಬೆಲೆಗಳನ್ನು ಅದಕ್ಕೆ ಅನುಗುಣವಾಗಿ ಇಳಿಕೆ ಮಾಡುವಂತೆ ಸರ್ಕಾರವು ಔಷಧ ತಯಾರಕ ಸಂಸ್ಥೆಗಳಿಗೆ ತಿಳಿಸಿದೆ. ಈ ಬಾರಿಯ ಬಜೆಟ್​ನಲ್ಲಿ ಕೆಲ ಪ್ರಮುಖ ಔಷಧಗಳಿಗೆ ಸರ್ಕಾರ ಆಮದು ಸುಂಕದಿಂದ ವಿನಾಯಿತಿ ನೀಡಿತ್ತು. ಇಂಥ ಔಷಧಗಳಿಗೆ ಬೆಲೆ ಇಳಿಕೆ ಮಾಡಬೇಕು ಎಂಬುದು ಎನ್​ಪಿಪಿಎ ಹೊರಡಿಸಿದ ನಿರ್ದೇಶನ.

ಬಜೆಟ್​ನಲ್ಲಿ ಸುಂಕ ಇಳಿಸಿದ್ದೇವೆ, ಗ್ರಾಹಕರಿಗೂ ಬೆಲೆ ಇಳಿಸಿ: ಔಷಧ ಕಂಪನಿಗಳಿಗೆ ಸರ್ಕಾರ ಸೂಚನೆ
ಔಷಧ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 19, 2025 | 3:46 PM

Share

ನವದೆಹಲಿ, ಫೆಬ್ರುವರಿ 19: ಬಜೆಟ್​ನಲ್ಲಿ ಔಷಧ ವಸ್ತುಗಳ ಮೇಲಿನ ಆಮದು ಸುಂಕವನ್ನು ಇಳಿಸಲಾಗಿದೆ. ತಾವೂ ಕೂಡ ಔಷಧಗಳ ಎಂಆರ್​ಪಿ ದರಗಳಲ್ಲಿ ಇಳಿಕೆ ಮಾಡಬೇಕು ಎಂದು ಔಷಧ ತಯಾರಕ ಮತ್ತು ಮಾರಾಟ ಸಂಸ್ಥೆಗಳಿಗೆ ಸರ್ಕಾರ ಸೂಚಿಸಿದೆ. ಈಗಾಗಲೇ ಮಾರುಕಟ್ಟೆಗೆ ಬಂದಿರುವ ಔಷಧಗಳ ದರಗಳಲ್ಲಿ ವ್ಯತ್ಯಾಸ ಮಾಡಲಾಗದು. ಆದರೆ, ಆಮದು ಸುಂಕ ಕಡಿಮೆಗೊಂಡಿರುವ ಅಥವಾ ಸುಂಕರಹಿತವಾಗಿ ಬಂದಿರುವ ಔಷಧಗಳ ದರಗಳನ್ನು ಇಳಿಸಬೇಕೆಂದು ರಾಷ್ಟ್ರೀಯ ಔಷಧ ಬೆಲೆನಿಗದಿ ಪ್ರಾಧಿಕಾರ (ಎನ್​ಪಿಪಿಎ) ತಿಳಿಸಿದೆ. ಫೆಬ್ರುವರಿ 17ರಂದು ಈ ಫರ್ಮಾನು ಹೊರಡಿಸಲಾಗಿದ್ದು, ಫಾರ್ಮಾ ಕಂಪನಿಗಳು ಔಷಧ ಬೆಲೆಗಳ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಸೂಚಿಸಲಾಗಿದೆ.

ಈ ಔಷಧ ಕಂಪನಿಗಳು ಪರಿಷ್ಕೃತ ಬೆಲೆ ಪಟ್ಟಿಯಲ್ಲಿ ಯಾವ್ಯಾವ ಔಷಧಗಳ ಬೆಲೆಗಳಲ್ಲಿ ಬದಲಾವಣೆಯಾಗಿದೆ ಎಂಬುದನ್ನು ಗುರುತಿಸಿ, ಆ ಪಟ್ಟಿಯನ್ನು ಡೀಲರ್​ಗಳು, ರಾಜ್ಯ ಔಷಧ ಪ್ರಾಧಿಕಾರಗಳು, ಸರ್ಕಾರಿ ಪ್ರಾಧಿಕಾರಗಳಿಗೆ ಕಳುಹಿಸಬೇಕು ಎಂದು ಎನ್​ಪಿಪಿಎ ತಿಳಿಸಿದೆ.

36 ಔಷಧಗಳಿಗೆ ತೆರಿಗೆ ವಿನಾಯಿತಿ…

ಕೆಲ ತೀವ್ರ ತರಹದ ಆಸ್ತಮಾ ಕಾಯಿಲೆಗಳಿಗೆ ಬಳಸುವ ಮಿಪೋಲಿಜುಮ್ಯಾಬ್, ಲ್ಯೂಕೆಮಿಯಾ ಚಿಕಿತ್ಸೆಗೆ ನೀಡುವ ಅಸಿಮಿನಿಬ್ ಇತ್ಯಾದಿ ಅತ್ಯಗತ್ಯದ ಮತ್ತು ಜೀವ ರಕ್ಷಿಸುವ 36 ಔಷಧಗಳಿಗೆ 2025ರ ಬಜೆಟ್​ನಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.

ಇದನ್ನೂ ಓದಿ: ಭಾರತೀಯರ ಆದಾಯದ ಹೆಚ್ಚಿನ ಭಾಗ ಸಾಲಕ್ಕೆ ಚುಕ್ತಾ; ಬೇರೆ ಯಾವ್ಯಾವುದಕ್ಕೆಷ್ಟು ಖರ್ಚು? ಇಲ್ಲಿದೆ ಪಿಡಬ್ಲ್ಯುಸಿ ವರದಿ

ಆರೋಗ್ಯ ಕ್ಷೇತ್ರದತ್ತ ಹೆಚ್ಚಿದ ಸರ್ಕಾರದ ಗಮನ

ಕಳೆದ ಹತ್ತು ವರ್ಷಗಳಿಂದ ದೇಶದ ಆರೋಗ್ಯಪಾಲನೆ ಕ್ಷೇತ್ರಕ್ಕೆ ಬಜೆಟ್​ನಲ್ಲಿ ಅನುದಾನ ಶೇ 191ರಷ್ಟು ಏರಿದೆ. ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆ, ಪಿಎಂ ಆಯುಷ್ಮಾನ್ ಭಾರತ್ ಹೆಲ್ತ್ ಇನ್​ಫ್ರಾಸ್ಟ್ರಕ್ಚರ್ ಮಿಷನ್ ಇತ್ಯಾದಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ.

ಇದೇ ಬಜೆಟ್​ನಲ್ಲಿ ದೇಶದ ಹೆಲ್ತ್​ಕೇರ್ ಸಿಸ್ಟಂನ ಅಭಿವೃದ್ಧಿಗೊಳಿಸಲು ಮತ್ತು ಬಲಪಡಿಸಲು ಸರ್ಕಾರ 2025-26ರ ವರ್ಷಕ್ಕೆ ಒಂದು ಲಕ್ಷ ಕೋಟಿ ರೂ ಸಮೀಪದಷ್ಟು ಹಣ ನಿಯೋಜಿಸಿದೆ. ಜೊತೆಗೆ ಫಾರ್ಮಾ ಕ್ಷೇತ್ರದಲ್ಲಿ ಪಿಎಲ್​ಐ ಸ್ಕೀಮ್​ಗಾಗಿ 2,445 ಕೋಟಿ ರೂ ನೀಡಲಾಗಿದೆ.

ಇದನ್ನೂ ಓದಿ: ಕಮಿಷನ್ ಮಾರ್ಗ ಬಿಟ್ಟ ಊಬರ್ ಆಟೊ; ರಿಕ್ಷಾಚಾಲಕರಿಗೆ ಅನುಕೂಲ; ನಮ್ಮ ಯಾತ್ರಿ ಸ್ಪರ್ಧೆ ಎದುರಿಸಲು ಊಬರ್ ಹೆಜ್ಜೆ

ದೇಶದ ವಿವಿಧೆಡೆ 200 ಡೇಕೇರ್ ಕ್ಯಾನ್ಸರ್ ಸೆಂಟರ್​ಗಳನ್ನು ಸ್ಥಾಪಿಸುವ ಯೋಜನೆ ಘೋಷಿಸಲಾಗಿದೆ. ಮುಂದಿನ ಮೂರು ವರ್ಷದಲ್ಲಿ ದೇಶದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಡೇಕೇರ್ ಕ್ಯಾನ್ಸರ್ ಸೆಂಟರ್​ಗಳನ್ನು ಸ್ಥಾಪಿಸುವ ಗುರಿ ಇಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ