Trai Silver Jubilee: ಟ್ರಾಯ್ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮೇ 17ಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಷಣ, ಅಂಚೆ ಚೀಟಿ ಬಿಡುಗಡೆ
ಟ್ರಾಯ್ ರಜತ ಮಹೋತ್ಸವ ಸಂಭ್ರಮವನ್ನು ಮೇ 17ನೇ ತಾರೀಕಿನ ಮಂಗಳವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಧಾಟನೆ ಮಾಡಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇ 17ರ ಮಂಗಳವಾರದಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (Trai) ರಜತ ಮಹೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಲಿದ್ದಾರೆ. ಈ ಸಂದರ್ಭದ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ. ಟ್ರಾಯ್ ಅನ್ನು 1997ರಲ್ಲಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಆಕ್ಟ್, 1997ರ ಮೂಲಕ ಸ್ಥಾಪಿಸಲಾಯಿತು. ಕಾರ್ಯಕ್ರಮದ ಸಮಯದಲ್ಲಿ ಐಐಟಿ ಮದ್ರಾಸ್ ನೇತೃತ್ವದ ಒಟ್ಟು ಎಂಟು ಸಂಸ್ಥೆಗಳು ಬಹು-ಸಂಸ್ಥೆಗಳ ಸಹಯೋಗದ ಯೋಜನೆಯಾಗಿ ಅಭಿವೃದ್ಧಿಪಡಿಸಿದ 5G ಟೆಸ್ಟ್ ಬೆಡ್ ಅನ್ನು ಸಹ ಪ್ರಧಾನಿ ಮೋದಿ ಪ್ರಾರಂಭಿಸಲಿದ್ದಾರೆ. ಈ ಯೋಜನೆಯಲ್ಲಿ ಭಾಗವಹಿಸಿದ ಇತರ ಸಂಸ್ಥೆಗಳೆಂದರೆ IIT ದೆಹಲಿ, IIT ಹೈದರಾಬಾದ್, IIT ಬಾಂಬೆ, IIT ಕಾನ್ಪುರ್, IISc ಬೆಂಗಳೂರು, ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಅಂಡ್ ರಿಸರ್ಚ್ (ಸಮೀರ್) ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ವೈರ್‌ಲೆಸ್ ಟೆಕ್ನಾಲಜಿ (CEWiT).
220 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ. 5G ಮತ್ತು ಮುಂದಿನ-ಪೀಳಿಗೆಯ ತಂತ್ರಜ್ಞಾನಗಳಲ್ಲಿ ತಮ್ಮ ಉತ್ಪನ್ನಗಳು, ಮೂಲ ಮಾದರಿಗಳು, ಸಲ್ಯೂಷನ್ಗಳು ಮತ್ತು ಅಲ್ಗಾರಿದಮ್‌ಗಳನ್ನು ವ್ಯಾಲಿಡೇಟ್ ಮಾಡುವುದಕ್ಕೆ ಸಹಾಯ ಮಾಡುವ ಭಾರತೀಯ ಉದ್ಯಮ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಟೆಸ್ಟ್ ಬೆಡ್ ಒಂದು ಬೆಂಬಲಿತ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಹೇಳಿದೆ.
ಈ ಮಧ್ಯೆ ನೇಪಾಳದ ಲುಂಬಿನಿಯಲ್ಲಿರುವ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಮತ್ತು ಧ್ಯಾನ ಮಂದಿರದಲ್ಲಿ ಸೋಮವಾರ ನಡೆದ 2566ನೇ ಬುದ್ಧ ಜಯಂತಿ ಆಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಅವರು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಮತ್ತು ಅವರ ಸಂಗಾತಿ ಅರ್ಜು ರಾಣಾ ದೇವುಬಾ ಅವರೊಂದಿಗೆ ಇದ್ದರು. ಸನ್ಯಾಸಿಗಳು, ಬೌದ್ಧ ವಿದ್ವಾಂಸರು ಮತ್ತು ಅಂತರರಾಷ್ಟ್ರೀಯ ಭಾಗವಹಿಸುವವರನ್ನು ಒಳಗೊಂಡ ಸುಮಾರು 2500 ಮಂದಿ ಹಾಜರಿದ್ದವರನ್ನು ಉದ್ದೇಶಿಸಿ ಇಬ್ಬರೂ ಪ್ರಧಾನ ಮಂತ್ರಿಗಳು ಮಾತನಾಡಿದರು.
ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 4ಜಿ ಡೌನ್‌ಲೋಡ್ ವೇಗದಲ್ಲಿ ಮತ್ತೆ ಜಿಯೋ ಸಂಸ್ಥೆಯದ್ದೇ ಮೇಲುಗೈ, ಟ್ರಾಯ್ ಸರಾಸರಿ ವೇಗದ ಲೆಕ್ಕಾಚಾರ ಹೇಗೆ?