ಕೆಲಸ ಬಿಡುವ ಸಂದರ್ಭದಲ್ಲಿ ಸ್ಯಾಲರಿ ಅಕೌಂಟ್ ಹಾಗೇ ಬಿಡಬೇಡಿ, ಅಪಾಯ ಕಟ್ಟಿಟ್ಟ ಬುತ್ತಿ! ನಿಮಗೇ ನಷ್ಟ!

ಸ್ಯಾಲರಿ ಅಕೌಂಟ್ ಅನ್ನು ಹಾಗೇ ಬಿಟ್ಟರೆ, ಮೊಂದೊಂದು ದಿನ ಅದನ್ನು ಸಕ್ರಿಯಗೊಳಿಸಬೇಕಾದರೆ ದಂಡ ಕಟ್ಟಬೇಕಾಗುತ್ತದೆ. ಸತತ 12 ತಿಂಗಳು ವಹಿವಾಟು ನಡೆಸದಿದ್ದರೆ ಆ ಅಕೌಂಟ್ ಅನ್ನು ನಿಷ್ಕ್ರೀಯ ಖಾತೆ ಎಂದು ಪರಿಗಣಿಸಲಾಗುತ್ತದೆ.

ಕೆಲಸ ಬಿಡುವ ಸಂದರ್ಭದಲ್ಲಿ ಸ್ಯಾಲರಿ ಅಕೌಂಟ್ ಹಾಗೇ ಬಿಡಬೇಡಿ, ಅಪಾಯ ಕಟ್ಟಿಟ್ಟ ಬುತ್ತಿ! ನಿಮಗೇ ನಷ್ಟ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: May 16, 2022 | 2:30 PM

ಒಂದು ಕಂಪನಿಯಿಂದ ಇನ್ನೊಂದು ಕಂಪನಿ(Company)ಗೆ ಕೆಲಸಕ್ಕೆ ಸೇರುವ ಸಂದರ್ಭದಲ್ಲಿ ಅನೇಕರು ಮಾಡುವ ದೊಡ್ಡ ತಪ್ಪು ಎಂದರೆ ಸ್ಯಾಲರಿ ಅಕೌಂಟ್(Salary Account) ಅಸಡ್ಡೆ ಮಾಡುವುದು. ಹೌದು, ಜಾಬ್(Job) ಚೇಂಜ್ ಮಾಡುವ ಭರದಲ್ಲಿ ಒಂದಷ್ಟು ಮಂದಿ ಸ್ಯಾಲರಿ ಅಕೌಂಟ್ ಅನ್ನು ಹಾಗೇ ಇಟ್ಟುಬಿಡುತ್ತಾರೆ. ಹೀಗೆ ಅಸಡ್ಡೆ ತೋರಿದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಮಾತ್ರವಲ್ಲದೆ ನಷ್ಟವೂ ಸಂಭವಿಸುತ್ತದೆ. ಅದು ಏನು ಎಂದು ನಾವು ನಿಮಗೆ ಈ ಸುದ್ದಿಯಲ್ಲಿ ತಿಳಿಸುತ್ತೇವೆ. ಸಂಪೂರ್ಣವಾಗಿ ಓದಿ.

ಒಬ್ಬ ವ್ಯಕ್ತಿ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಒಂದಷ್ಟು ಸಮಯದಲ್ಲಿ ಬೇರೊಂದು ಕಂಪನಿಗೆ ಕೆಲಸಕ್ಕೆ ಸೇರುತ್ತಾನೆ. ಈ ವೇಳೆ ಆತ ಹಳೆ ಕಂಪನಿಯ ಸ್ಯಾಲರಿ ಅಕೌಂಟ್ ಅನ್ನು ಹಾಗೆ ಬಿಟ್ಟುಬಿಡುತ್ತಾನೆ. ಈ ಹಿಂದೆಯೇ ಹೊಂದಿದ್ದ ಬ್ಯಾಂಕ್ ಖಾತೆಗೇ ಆತನ ಹೊಸ ಕಂಪನಿಯು ವೇತನ ಕ್ರೆಡಿಟ್ ಮಾಡಬೇಕಾದರೆ, ಆತ ದಂಡ ಕಟ್ಟಬೇಕಾಗುತ್ತದೆ. ಇದರ ಅರ್ಥ, ಈಗಾಗಲೇ ಒಂದು ಖಾತೆಯನ್ನು ಹೊಂದಿದ್ದರೆ ಅದೇ ಬ್ಯಾಂಕ್​ನಲ್ಲಿ ಮತ್ತೊಂದು ಖಾತೆ ತೆರೆಯುವುದು ಕಷ್ಟಸಾಧ್ಯ. ದಂಡ ಕಟ್ಟಿಯೇ ಹಳೆಯ ಖಾತೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ.

ಅರೆ, ಯಾಕೆ ದಂಡ ಕಟ್ಟಬೇಕು ಎಂದು ಯೋಚಿಸುತ್ತಿದ್ದೀರಾ? ಅದಕ್ಕೂ ಉತ್ತರ ಹೇಳುತ್ತೇವೆ. ಸಾಮಾನ್ಯವಾಗಿ ಸ್ಯಾಲರಿ ಅಕೌಂಟ್ ಜೀರೋ ಬ್ಯಾಲೆನ್ಸ್ ಮೂಲಕ ತೆರೆಯಲಾಗುತ್ತದೆ. ಒಂದೊಮ್ಮೆ ಆ ಅಕೌಂಟ್​ಗೆ ಮೂರು ತಿಂಗಳವರೆಗೆ ವೇತನ ಕ್ರೆಡಿಟ್ ಆಗದಿದ್ದರೆ ಅದು ಉಳಿತಾಯ ಖಾತೆ ವರ್ಗಕ್ಕೆ ಬರುತ್ತದೆ. ನಿಯಮಗಳ ಪ್ರಕಾರ, ಉಳಿತಾಯ ಖಾತೆಯಲ್ಲಿ ಮಿನಿಮಮ್ ಮಂತ್ಲಿ ಬ್ಯಾಲೆನ್ಸ್ (500-10,000) ಮೆಂಟೇನ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಬ್ಯಾಂಕ್ ನಿಯಮಗಳ ಪ್ರಕಾರ ಖಾತೆಯಿಂದ ಹಣ ಡಿಡಕ್ಟ್ ಮಾಡಬೇಕಾಗುತ್ತದೆ.

ಸ್ಯಾಲರಿ ಅಕೌಂಟ್ ಬಾಕಿ ಇದ್ದರೆ ಏನು ಮಾಡೋದು?

ಹೊಸ ಕಂಪನಿ ಸೇರಿಕೊಂಡಾಗ ಅಲ್ಲಿಯೂ ಹಳೆಯ ಕಂಪನಿಯಲ್ಲಿ ಇದ್ದ ಬ್ಯಾಂಕ್ ಖಾತೆಯೇ ಮುಂದುವರಿಯುವಂತೆ ಇದ್ದರೆ ಸಮಸ್ಯೆ ಇಲ್ಲ. ಇಲ್ಲವಾದರೆ, ತಕ್ಷಣ ಹಳೆಯ ಬ್ಯಾಂಕ್ ಖಾತೆ ಕ್ಲೋಸ್ ಮಾಡಿ. ಇಲ್ಲವಾದರೆ ಫೋನ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಶುಲ್ಕ ಎಂದೆಲ್ಲಾ ಹೇಳಿಕೊಂಡು ಹಣ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಬಳಕೆಯಲ್ಲಿ ಇಲ್ಲದ ಖಾತೆಯನ್ನು ಕ್ಲೋಸ್ ಮಾಡುವುದೇ ಉತ್ತಮ. ಸತತ 12 ತಿಂಗಳು ಯಾವುದೇ ವಹಿವಾಟು ನಡೆಸದಿದ್ದರೆ ಆ ಅಕೌಂಟ್ ಅನ್ನು ನಿಷ್ಕ್ರೀಯ ಖಾತೆ ಎಂದು ಪರಿಗಣಿಸಲಾಗುತ್ತದೆ. ಮುಂದಿನ 12 ತಿಂಗಳು ಯಾವುದೇ ವಹಿವಾಟು ನಡೆಯದಿದ್ದರೆ ಅದು ಡೋರ್​ಮ್ಯಾಂಟ್ ಖಾತೆಯ ವರ್ಗಕ್ಕೆ ಬರುತ್ತದೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್