AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಬ್​​ಗೆ ಟಿಪ್ಸ್: ಊಬರ್​​​ಗೆ ಸಿಸಿಪಿಎ ನೋಟೀಸ್; ಸೋಷಿಯಲ್ ಮೀಡಿಯಾದಲ್ಲಿ ಸಚಿವ ಜೋಷಿ ವಾರ್ನಿಂಗ್

CCPA issues notice to Uber for advance tipping: ಕ್ಯಾಬ್ ಬುಕ್ ಮಾಡುವಾಗ ಡ್ರೈವರ್​​ಗೆ ಟಿಪ್ಸ್ ಕೊಡಬೇಕೆಂದು ಗ್ರಾಹಕರನ್ನು ಪುಸಲಾಯಿಸುವ ಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಪ್ರಶ್ನಿಸಿದ್ದಾರೆ. ಊಬರ್ ಕಂಪನಿಯು ಈ ರೀತಿ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಸಿಸಿಪಿಎಯಿಂದ ಊಬರ್​​ಗೆ ನೋಟೀಸ್ ಜಾರಿಯಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ಧಾರೆ.

ಕ್ಯಾಬ್​​ಗೆ ಟಿಪ್ಸ್: ಊಬರ್​​​ಗೆ ಸಿಸಿಪಿಎ ನೋಟೀಸ್; ಸೋಷಿಯಲ್ ಮೀಡಿಯಾದಲ್ಲಿ ಸಚಿವ ಜೋಷಿ ವಾರ್ನಿಂಗ್
ಕ್ಯಾಬ್ ಬುಕಿಂಗ್ ವೇಳೆ ಬರುವ ಮೆಸೇಜ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 21, 2025 | 6:59 PM

Share

ನವದೆಹಲಿ, ಮೇ 21: ತ್ವರಿತ ಸೇವೆ ಒದಗಿಸಲು ಗ್ರಾಹಕರಿಂದ ಮುಂಗಡವಾಗಿ ಟಿಪ್ಸ್‌ ಪಡೆಯಲು ಪ್ರಯತ್ನಿಸುತ್ತಿರುವ ಕ್ಯಾಬ್ ಅಗ್ರಿಗೇಟರ್​​ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಸಚಿವ ಪ್ರಲ್ಹಾದ ಜೋಶಿ (Pralhad Joshi) ಎಚ್ಚರಿಸಿದ್ದಾರೆ. ಟ್ಯಾಕ್ಸಿ ಸೇವೆಗೆ ಗ್ರಾಹಕರಿಂದ ಬುಕ್‌ ಮಾಡುವಾಗಲೇ ಟಿಪ್ಸ್‌ ರೂಪದಲ್ಲಿ ಹೆಚ್ಚುವರಿ ಹಣ (Advance tip) ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಈ ಸಂಬಂಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA)ಕ್ಕೆ ಸೂಚನೆ ನೀಡಿದ್ದೆ. ಈ ಪ್ರಾಧಿಕಾರವು ಪ್ರಮುಖ ಕ್ಯಾಬ್‌ ಸರ್ವೀಸ್‌ Uber ಗೆ ನೋಟಿಸ್‌ ಜಾರಿ ಮಾಡಿದೆ ಎಂದು ಜೋಶಿ ತಿಳಿಸಿದ್ದಾರೆ.

ಟ್ಯಾಕ್ಸಿ ಸೇವೆ ಒದಗಿಸಲು Uber ನಂತಹ ಸೇವಾ ಸಂಸ್ಥೆಗಳು ಗ್ರಾಹಕರಿಂದ ಮುಂಚಿತವಾಗಿಯೇ ಒತ್ತಾಯದಿಂದ ಟಿಪ್ಸ್‌ ಪಡೆಯುತ್ತಿರುವುದು ಕಳವಳಕಾರಿ ಬೆಳವಣಿಗೆ. ಟಿಪ್ಸ್‌ ಎನ್ನುವುದು ಗ್ರಾಹಕರು ಉತ್ತಮ ಸೇವೆಗೆ ಮೆಚ್ಚಿ ಕೊಡುವಂಥದ್ದು. ಇದನ್ನು ಯಾರೂ ಒತ್ತಾಯದಿಂದ ಪಡೆಯಬಾರದು ಎಂದು ಸಚಿವ ಪ್ರಲ್ಹಾದ ಜೋಶಿ ಅವರು ಎಕ್ಸ್​​ ಪೋಸ್ಟ್​​​ನಲ್ಲಿ ಸೂಚಿಸಿದ್ದಾರೆ.

ಇದನ್ನೂ ಓದಿ
Image
ಹೊಸ ಮಾದರಿಯ ಫೋನ್ ತರಲಿದೆ ಓಪನ್​ಎಐ
Image
ಟ್ರಂಪ್​ರಿಂದ ರೆಮಿಟೆನ್ಸ್ ಬರೆ; ಭಾರತಕ್ಕೆ ಹೊರೆ
Image
ಈ ಕಂಪನಿಯಲ್ಲಿ ಉಚಿತ ಶೌಚಾಲಯ, ಉಚಿತ ಲಿಫ್ಟ್, ನೈಟ್ ಸ್ನಾಕ್ಸ್
Image
ಖರ್ಚು ಮಾಡಿದ ದುಡ್ಡನ್ನೆಲ್ಲಾ ವಾಪಸ್ಸು ಕೊಡು ಎಂದ ಮಾಜಿ ಪ್ರಿಯಕರ

ಇದನ್ನೂ ಓದಿ: ಆಪರೇಷನ್ ಸಿಂದೂರದ ಬಳಿಕ ಭಾರತದ ಡಿಫೆನ್ಸ್ ಶಕ್ತಿ ಮೇಲೆ ಜಗತ್ತಿನ ಕಣ್ಣು; ಯುದ್ಧವಿಮಾನ ತಯಾರಿಕೆಯಲ್ಲೂ ಪಳಗುತ್ತಿದೆ ಭಾರತ

ಕ್ಯಾಬ್‌ನವರು ಗ್ರಾಹಕರಿಗೆ ಸೇವೆ ಕಲ್ಪಿಸುವ ಮೊದಲೇ ಟಿಪ್ಸ್‌ ಪಡೆಯುವುದು ದಬ್ಬಾಳಿಕೆಯಾಗುತ್ತದೆ. ಗ್ರಾಹಕರ ಶೋಷಣೆಯಾಗುತ್ತದೆ. ಹಾಗಾಗಿ ಈ ಮುಂಗಡ ಟಿಪ್ಸ್‌ ಬಗ್ಗೆ CCPAಗೆ ಸೂಚನೆ ನೀಡಿದ್ದೆ. CCPA ತಪಾಸಣೆ ವೇಳೆ Uber ಸೇವೆಗೆ ಮುಂಗಡ ಟಿಪ್ಸ್‌ ಪಡೆಯುತ್ತಿರುವುದು ಸಾಬೀತಾದ್ದರಿಂದ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಲಾಗಿದೆ ಎಂದು ತಿಳಿಸಿದ್ದಾರೆ.

ಸಚಿವರು ತಮ್ಮ ಎಕ್ಸ್ ಪೋಸ್ಟ್​​​ನಲ್ಲಿ ಸ್ಕ್ರೀನ್​​ಶಾಟ್​ವೊಂದನ್ನೂ ಲಗತ್ತಿಸಿದ್ದಾರೆ. ಗ್ರಾಹಕರು ಕ್ಯಾಬ್ ಬುಕಿಂಗ್ ಮಾಡುವಾಗ ಪ್ರತ್ಯಕ್ಷವಾಗುವ ಟಿಪ್ಸ್​ನ ಚಿತ್ರ ಅದರಲ್ಲಿದೆ.

‘ಬೇಗ ಪಿಕಪ್ ಬೇಕೆಂದರೆ ಟಿಪ್ ಸೇರಿಸಿ. ನೀವು ಟಿಪ್ ಸೇರಿಸಿದರೆ ಈ ರೈಡ್​​ಗೆ ಡ್ರೈವರ್ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಟಿಪ್​​ನ ಪೂರ್ಣ ಹಣವು ಡ್ರೈವರ್​​ಗೆ ಸಂದಾಯವಾಗುತ್ತದೆ. ನೀವು ಈಗ ಟಿಪ್ ಸೇರಿಸಿದರೆ ಅದನ್ನು ನಂತರ ಬದಲಿಸಲು ಆಗುವುದಿಲ್ಲ’ ಎಂದು ಆ ಟಿಪ್ ಮೆಸೇಜ್​​ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ಕೋಟಿ ಸಂಬಳ ಪಡೆಯುತ್ತಿದ್ದ ಎಂಜಿನಿಯರ್ ಈಗ ಫುಡ್ ಡೆಲಿವರಿ ಬಾಯ್; ಇದು ಭಾರತದ ಕಥೆಯಲ್ಲ, ಅಮೆರಿಕದ್ದು

ಊಬರ್ ಮಾತ್ರವಲ್ಲ ಇತರ ಕ್ಯಾಬ್ ಅಗ್ರಿಗೇಟರ್​​ಗಳೂ ಕೂಡ ಈ ಫೀಚರ್ ಅನ್ನು ಹೊಂದಿವೆ. ಸಾಮಾನ್ಯವಾಗಿ ಪೀಕ್ ಅವರ್​​ನ್ಲಲಿ, ಕ್ಯಾಬ್​​ಗಳ ಸಂಖ್ಯೆ ಕಡಿಮೆ ಇದ್ದಾಗ, ಅಥವಾ ಯಾವ ಡ್ರೈವರ್ ಕೂಡ ರೈಡ್ ಸ್ವೀಕರಿಸಿದೇ ಇದ್ದಾಗ ಇಂಥ ಟಿಪ್ ಆಫರ್ ಬರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್