AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಯುಪಿಐಗೆ ಸಾಲದ ವ್ಯವಸ್ಥೆ: ಆರ್​ಬಿಐ ಸುತ್ತೋಲೆ

UPI Pre-sanctioned Credit Line: ಯುಪಿಐ ಬಳಕೆದಾರರಿಗೆ ಸಿಹಿ ಸುದ್ದಿ ಇದೆ. ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಯುಪಿಐಗೆ ಕ್ರೆಡಿಟ್ ಲೈನ್ ಸೌಲಭ್ಯ ಒದಗಿಸುವ ಪ್ರಸ್ತಾಪವನ್ನು ಆರ್​ಬಿಐ ಮಾಡಿದ್ದು, ಮುಂದಿನ ದಿನಗಳಲ್ಲಿ ಇದು ಜಾರಿಗೆ ಬರಬಹುದು. ಖಾತೆಯಲ್ಲಿ ಹಣ ಇಲ್ಲದಿದ್ದರೂ ಅಥವಾ ಖಾತೆಯಲ್ಲಿರುವ ಹಣ ಬಳಸದೆಯೇ ಯುಪಿಐ ಮೂಲಕ ಹಣದ ಪಾವತಿ ಮಾಡಲು ಇದರಿಂದ ಸಾಧ್ಯವಾಗುತ್ತದೆ. ಒಬ್ಬ ಯುಪಿಐ ಬಳಕೆದಾರರಿಗೆ ಎಷ್ಟು ಮೊತ್ತದ ಕ್ರೆಡಿಟ್ ಲೈನ್ ಸಿಗುತ್ತದೆ ಎಂಬುದನ್ನು ಅವರ ಬ್ಯಾಂಕ್​ನವರು ನಿರ್ಧರಿಸಬಹುದು.

ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಯುಪಿಐಗೆ ಸಾಲದ ವ್ಯವಸ್ಥೆ: ಆರ್​ಬಿಐ ಸುತ್ತೋಲೆ
ಯುಪಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 05, 2023 | 2:44 PM

ಯುಪಿಐ ಈಗ ಅತ್ಯಂತ ಜನಪ್ರಿಯವಾಗಿರುವ ಪಾವತಿ ಪ್ಲಾಟ್​ಫಾರ್ಮ್ ಆಗಿ ಬೆಳೆದಿದೆ. ಬಹುತೇಕ ಭಾರತೀಯರು ಯುಪಿಐ (UPI) ಮೂಲಕ ಹಣದ ಪಾವತಿ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಯುಪಿಐ ಕೂಡ ಹೊಸ ಹೊಸ ಫೀಚರ್ ಅಳವಡಿಸಿಕೊಂಡು ಹೆಚ್ಚೆಚ್ಚು ಜನಸ್ನೇಹಿ ಮತ್ತು ಬಳಕೆಸ್ನೇಹಿಯಾಗುತ್ತಿದೆ. ಇದೇ ವೇಳೆ, ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಯುಪಿಐನಲ್ಲೂ ಕ್ರೆಡಿಟ್ ಲೈನ್ (Pre-sanctioned credit line) ಸೌಲಭ್ಯ ಒದಗಿಸುವ ಒಂದು ಫೀಚರ್ ಅನ್ನು ತರಲು ಆರ್​ಬಿಐ ಹೊರಟಿದೆ. ಈಗಿರುವ ವ್ಯವಸ್ಥೆಯಲ್ಲಿ ಯುಪಿಐನಲ್ಲಿ ಹಣ ಪಾವತಿ ಮಾಡಬೇಕಾದರೆ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಬೇಕು. ಆರ್​ಬಿಐನ ಹೊಸ ಪ್ರಸ್ತಾಪದ ಪ್ರಕಾರ, ಯುಪಿಐ ಖಾತೆಗೆ ಬ್ಯಾಂಕ್​ನಿಂದ ನಿರ್ದಿಷ್ಟ ಪ್ರಮಾಣದ ಕ್ರೆಡಿಟ್ ಲೈನ್ ಸಿಗುತ್ತದೆ. ಅಂದರೆ, ಯುಪಿಐ ವ್ಯಾಲಟ್​ಗೆ ಪೂರ್ವದಲ್ಲೇ ನಿಗದಿತ ಪ್ರಮಾಣದ ಸಾಲದ ಹಣ ಹಾಕಲಾಗಿರುತ್ತದೆ. ಆರ್​ಬಿಐ ಈ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿದೆ.

ಯುಪಿಐಗೆ ಸದ್ಯ ನಿಮ್ಮ ಸೇವಿಂಗ್ಸ್ ಖಾತೆ, ಓವರ್​ಡ್ರಾಫ್ಟ್ ಅಕೌಂಟ್, ಪ್ರೀಪೇಡ್ ವ್ಯಾಲಟ್ ಮತ್ತು ಕ್ರೆಡಿಟ್ ಕಾರ್ಡ್​ಗಳನ್ನು ಲಿಂಕ್ ಮಾಡಬಹುದು. ಈಗ ಕ್ರೆಡಿಟ್ ಲೈನ್ ಸೌಲಭ್ಯವೂ ದೊರೆಯುತ್ತದೆ. ಈ ಕ್ರೆಡಿಟ್ ಲೈನ್​ನಲ್ಲಿ ಎಷ್ಟು ಹಣದ ಮಿತಿ ಇರುತ್ತದೆ, ಎಷ್ಟು ಅವಧಿಯೊಳಗೆ ಅದನ್ನು ತೀರಿಸಬೇಕು, ಅವಧಿ ಮೀರಿದರೆ ಬಡ್ಡಿ ಎಷ್ಟು ಇತ್ಯಾದಿ ಅಂಶಗಳನ್ನ ಬ್ಯಾಂಕ್​ಗಳು ನಿರ್ಧರಿಸಬೇಕಾಗುತ್ತದೆ.

ಇದನ್ನೂ ಓದಿ: ಸಾವರಿನ್ ಗೋಲ್ಡ್ ಬಾಂಡ್; ಅವಧಿಗೆ ಮುನ್ನ ಹೂಡಿಕೆ ಹಿಂಪಡೆಯಲು ಆರ್​ಬಿಐನಿಂದ ವೇಳಾಪಟ್ಟಿ ಬಿಡುಗಡೆ

ಭಾರತೀಯ ರಿಸರ್ವ್ ಬ್ಯಾಂಕ್ ಇದೆ ಏಪ್ರಿಲ್ ತಿಂಗಳಲ್ಲಿ ಈ ಫೀಚರ್ ಅನ್ನು ಪ್ರಸ್ತಾಪಿಸಿತ್ತು. ಯುಪಿಐನಲ್ಲಿ ಡೆಪಾಸಿಟ್ ಅಕೌಂಟ್ ಜೊತೆಗೆ ಪ್ರೀ ಸ್ಯಾಂಕ್ಷನ್ಡ್ ಕ್ರೆಡಿಟ್ ಲೈನ್ ಅನ್ನು ಬ್ಯಾಂಕುಗಳು ಒದಗಿಸಬೇಕೆಂದು ಆರ್​ಬಿಐ ಹೇಳಿತ್ತು.

ಸದ್ಯ, ಯುಪಿಐ ಖಾತೆಗೆ ನಮ್ಮ ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡುವ ಅವಕಾಶ ಇದೆ. ಎಲ್ಲಾ ಕ್ರೆಡಿಟ್ ಕಾರ್ಡ್​ಗಳನ್ನು ಲಿಂಕ್ ಮಾಡಲು ಬರುವುದಿಲ್ಲ. ರುಪೇ ಕ್ರೆಡಿಟ್ ಕಾರ್ಡ್ ಅನ್ನು ಮಾತ್ರ ಸದ್ಯಕ್ಕೆ ಯುಪಿಐಗೆ ಲಿಂಕ್ ಮಾಡಬಹುದು. ಈಗ ಎಲ್ಲಾ ಯುಪಿಐ ಬಳಕೆದಾರರಿಗೂ ಅವರ ಬ್ಯಾಂಕುಗಳಿಂದ ಕ್ರೆಡಿಟ್ ಲೈನ್ ಸಿಕ್ಕರೆ ಬಹಳಷ್ಟು ಪ್ರಯೋಜನ ಎನಿಸುತ್ತದೆ.

ಇದನ್ನೂ ಓದಿ: ಸೆ. 30ರೊಳಗೆ ಈ ಕೆಲಸ ಮಾಡದಿದ್ದರೆ ಪಿಪಿಎಫ್, ಸೇವಿಂಗ್ಸ್ ಸ್ಕೀಮ್ ಇತ್ಯಾದಿ ನಿಮ್ಮ ಹೂಡಿಕೆ ಸ್ಥಗಿತಗೊಳ್ಳಲಿದೆ

ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಯುಪಿಐ ಬಳಸಿ 1,000 ಕೋಟಿ ವಹಿವಾಟುಗಳಲ್ಲಿ 996.5 ಕೋಟಿ ರೂ ಮೊತ್ತದಷ್ಟು ಹಣದ ವರ್ಗಾವಣೆಗಳಾಗಿವೆ. ಇದರೊಂದಿಗೆ ಡಿಜಿಟಲ್ ಟ್ರಾನ್ಸಾಕ್ಷನ್​ನಲ್ಲಿ ಭಾರತ ಮೇರು ಸ್ಥಾನದಲ್ಲಿದೆ. ಈಗ ಯುಪಿಐಗೆ ಕ್ರೆಡಿಟ್ ಲೈನ್ ಸಿಕ್ಕರೆ ವಹಿವಾಟು ಪ್ರಮಾಣ ಇನ್ನಷ್ಟು ಏರುವುದರಲ್ಲಿ ಅನುಮಾನ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ