ಅಮೆರಿಕ-ಚೀನಾ ಟ್ಯಾರಿಫ್ ಯುದ್ಧಕ್ಕೆ 90 ದಿನ ವಿರಾಮ; ಆಮದು ಸುಂಕ ಶೇ. 115ರಷ್ಟು ಇಳಿಕೆ; ರಾಜಿ ಮಾಡಿಕೊಂಡ ಬಲಾಢ್ಯ ದೇಶಗಳು

US China come to truce on tariffs: ಚೀನಾ ಮತ್ತು ಅಮೆರಿಕದ ಭೀಕರ ಟ್ರೇಡ್​​ವಾರ್​​ಗೆ ತಾತ್ಕಾಲಿಕ ವಿರಾಮ ಸಿಕ್ಕಿದೆ. 90 ದಿನಗಳ ಕಾಲ ಯಾವುದೇ ಟ್ಯಾರಿಫ್ ಏರಿಕೆ ಮಾಡದಿರುವ ನಿರ್ಣಯಕ್ಕೆ ಎರಡು ದೇಶಗಳು ಬಂದಿವೆ. ಅಷ್ಟೇ ಅಲ್ಲ, ಪರಸ್ಪರ ಆಮದು ಸುಂಕವನ್ನು ಎರಡೂ ದೇಶಗಳು ಶೇ 115ರಷ್ಟು ಇಳಿಸುತ್ತಿವೆ. ಇದರೊಂದಿಗೆ, ಚೀನಾ ಸರಕುಗಳಿಗೆ ಅಮೆರಿಕ ವಿಧಿಸುವ ಟ್ಯಾರಿಫ್ ಶೇ. 30ಕ್ಕೆ ಇಳಿಯಲಿದೆ. ಚೀನಾದ ಸುಂಕವು ಶೇ. 10ಕ್ಕೆ ಇಳಿಯಲಿದೆ.

ಅಮೆರಿಕ-ಚೀನಾ ಟ್ಯಾರಿಫ್ ಯುದ್ಧಕ್ಕೆ 90 ದಿನ ವಿರಾಮ; ಆಮದು ಸುಂಕ ಶೇ. 115ರಷ್ಟು ಇಳಿಕೆ; ರಾಜಿ ಮಾಡಿಕೊಂಡ ಬಲಾಢ್ಯ ದೇಶಗಳು
ಅಮೆರಿಕ

Updated on: May 12, 2025 | 3:37 PM

ನವದೆಹಲಿ, ಮೇ 12: ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಜಾರಿಗೆ ಬಂದಂತೆ, ಈಗ ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಯುದ್ಧಕ್ಕೂ (US China trade war) ಅಲ್ಪ ವಿರಾಮ ಸಿಕ್ಕಿದೆ. ಎರಡೂ ದೇಶಗಳು ಆಮದು ಸುಂಕವನ್ನು ಶೇ. 115ರಷ್ಟು ಇಳಿಕೆ ಮಾಡಲು ನಿರ್ಧರಿಸಿವೆ. 90 ದಿನಗಳವರೆಗೆ ದರ ಏರಿಕೆ ಮಾಡದಂತೆ ಒಪ್ಪಂದಕ್ಕೂ (China US truce) ಬರಲಾಗಿದೆ. ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ (US treasury secretary Scott Besent) ಇಂದು ಸೋಮವಾರ ಹೇಳಿದ್ದಾರೆ.

ಚೀನಾದ ಹೆಚ್ಚಿನ ಸರಕುಗಳಿಗೆ ಅಮೆರಿಕ ಶೇ. 145ರಷ್ಟು ಸುಂಕವನ್ನು ಅಮೆರಿಕ ವಿಧಿಸುತ್ತದೆ. ಇನ್ನೊಂದೆಡೆ, ಅಮೆರಿಕದ ಸರಕುಗಳಿಗೆ ಚೀನಾ ಶೇ. 125ರಷ್ಟು ಟ್ಯಾರಿಫ್ ವಿಧಿಸುತ್ತದೆ. ಈಗ ಎರಡೂ ದೇಶಗಳು ಶೇ. 115ರಷ್ಟು ಸುಂಕ ಇಳಿಕೆ ಮಾಡಲು ನಿರ್ಧರಿಸಿವೆ. ಸ್ವಿಟ್ಜರ್​​ಲ್ಯಾಂಡ್​​ನ ಜಿನಿವಾದಲ್ಲಿ ಚೀನಾ ಮತ್ತು ಅಮೆರಿಕದಿಂದ ಬಿಡುಗಡೆ ಮಾಡಲಾದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ, ಚೀನಾದ ಸರಕುಗಳಿಗೆ ಅಮೆರಿಕ ವಿಧಿಸುವ ಸುಂಕವು ಶೇ. 30ರಷ್ಟಾಗಬಹುದು. ಚೀನಾ ವಿಧಿಸುವ ಆಮದು ಸುಂಕವು ಶೇ. 10ಕ್ಕೆ ಇಳಿಯಬಹುದು.

ಇದನ್ನೂ ಓದಿ: ಪಾಕಿಸ್ತಾನದ ಚೀನೀ ಅಸ್ತ್ರಗಳು ಮೇಡ್ ಇನ್ ಇಂಡಿಯಾ ವೆಪನ್ಸ್​​ಗೆ ಸಾಟಿಯಾ? ಜಾನ್ ಸ್ಪೆನ್ಸರ್ ಬಿಚ್ಚಿಟ್ಟ ಸತ್ಯ

ಇದನ್ನೂ ಓದಿ
ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ 32 ಏರ್​​ಪೋರ್ಟ್​​ಗಳು ಈಗ ಪುನಾರಂಭ
ಭಾರತದ ಸೇನೆಗೆ ಸೇರಲು ಸಿದ್ಧವಾಗಿವೆ ಹೈಡ್ರೋಜನ್ ಡ್ರೋನ್​​ಗಳು
ಭಾರತದ ಮಾರುಕಟ್ಟೆಗೆ ಧಾವಿಸಿ ಬರುತ್ತಿರುವ ಎಫ್​​ಪಿಐಗಳು
ಎಮರ್ಜೆನ್ಸಿ ವೇಳೆ ತೈಲಕ್ಕೆ ಮೊದಲ ಅಧಿಕಾರ ಸರ್ಕಾರದ್ದು: ಕರಡು ನಿಯಮ

ಈ 90 ದಿನಗಳ ಅವಧಿಯಲ್ಲಿ ಎರಡೂ ದೇಶಗಳು ಆಮದು ಸುಂಕ ಹಾಗೂ ದ್ವಿಪಕ್ಷೀಯ ವ್ಯಾಪಾರ ವಿಚಾರದಲ್ಲಿ ಸಂಧಾನಗಳನ್ನು ನಡೆಸಲಿವೆ. ಈ ಬೆಳವಣಿಗೆಯು ವಿಶ್ವದ ಎರಡು ಅತಿ ಬಲಾಢ್ಯ ದೇಶಗಳ ನಡುವೆ ಒಳಗೊಳಗೆ ಹೆಚ್ಚಿಸುತ್ತಿದ್ದ ವೈರತ್ವವನ್ನು ತಾತ್ಕಾಲಿಕವಾಗಿ ತಗ್ಗಿಸುವ ನಿರೀಕ್ಷೆ ಇದೆ. ಹಾಗೆಯೇ, ಜಾಗತಿಕ ಮಾರುಕಟ್ಟೆ ಮತ್ತು ಆರ್ಥಿಕತೆಯೂ ಕೂಡ ತಾತ್ಕಾಲಿಕವಾಗಿ ಆತಂಕದಿಂದ ದೂರವಾಗಬಹುದು.‘

ಏಪ್ರಿಲ್ 2ರಂದು ಡೊನಾಲ್ಡ್ ಟ್ರಂಪ್ ಬಹುತೇಕ ಎಲ್ಲಾ ದೇಶಗಳ ಮೇಲೂ ವಿವಿಧ ಟ್ಯಾರಿಫ್ ದರಗಳನ್ನು ಘೋಷಿಸಿದರು. ಬಳಿಕ ಎಲ್ಲಾ ಏರಿಕೆಯನ್ನು ತಾತ್ಕಾಲಿಕವಾಗಿ ಹಿಂಪಡೆದು ಈಗ ಕೇವಲ ಬೇಸ್​​ಲೈನ್ ಟ್ಯಾಕ್ಸ್ ಮಾತ್ರ ಉಳಿಸಿಕೊಂಡಿದ್ದಾರೆ. ಅಂದರೆ, ಹೆಚ್ಚಿನ ಆಮದುಗಳಿಗೆ ಶೇ. 10ರಷ್ಟು ಮಾತ್ರವೇ ಅಮೆರಿಕವು ಆಮದು ಸುಂಕ ವಿಧಿಸುತ್ತಿದೆ. ಅಮೆರಿಕದ ಕ್ರಮಕ್ಕೆ ಪ್ರತಿಯಾಗಿ ಚೀನಾವೂ ಪ್ರತಿಸುಂಕ ವಿಧಿಸಿತ್ತು.

ಇದನ್ನೂ ಓದಿ: ನಾಗರಿಕ ವಿಮಾನ ಸೇವೆಗೆ ನಿಲ್ಲಿಸಲಾಗಿದ್ದ 32 ಏರ್​​ಪೋರ್ಟ್​​ಗಳು ಈಗ ಪುನಾರಂಭ: ಎಎಐ ಘೋಷಣೆ

ಈ ಸಮರ ಮುಂದುವರಿದು, ಆಮದು ಸುಂಕವು ಶೇ. 100ಕ್ಕಿಂತಲೂ ಹೆಚ್ಚಾಗಿ ಹೋಗಿತ್ತು. ಈಗ ಚೀನಾ ಸರಕುಗಳಿಗೆ ಅಮೆರಿಕ ವಿಧಿಸುವ ಸುಂಕ ಶೇ. 30ಕ್ಕೆ ಇಳಿದಿದೆ. ಅಮೆರಿಕದ ಸರಕುಗಳಿಗೆ ಚೀನಾದ ಸುಂಕ ಶೇ. 10ಕ್ಕೆ ಇಳಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Mon, 12 May 25