ಟ್ರಂಪ್ ಸುಂಕಕ್ಕೆ ಸೊಪ್ಪು ಹಾಕದ ಅಮೆರಿಕದ ಮಾರುಕಟ್ಟೆ; ಭಾರತದ ರಫ್ತಿಗೆ ಇಲ್ಲ ಭಂಗ

US continues to be biggest market for Indian exports: ಅಮೆರಿಕವು ಭಾರತದ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿ ಮುಂದುವರಿದಿದೆ. ವರದಿಗಳ ಪ್ರಕಾರ, ಕಳೆದ 12 ತಿಂಗಳ ಅವಧಿಯಲ್ಲಿ ಭಾರತದಿಂದ ಆದ ರಫ್ತಿನಲ್ಲಿ ಶೇ. 20 ಪಾಲು ಅಮೆರಿಕದ್ದಾಗಿದೆ. ಟ್ರಂಪ್ ಅವರ ಶೇ. 50 ಸುಂಕದ ಪ್ರತಿಕೂಲ ಪರಿಸ್ಥಿತಿಯಲ್ಲೂ ಭಾರತೀಯ ಉತ್ಪನ್ನಗಳು ಅಮೆರಿಕದ ಮಾರುಕಟ್ಟೆ ಮುಟ್ಟುತ್ತಿರುವುದು ಗಮನಾರ್ಹ.

ಟ್ರಂಪ್ ಸುಂಕಕ್ಕೆ ಸೊಪ್ಪು ಹಾಕದ ಅಮೆರಿಕದ ಮಾರುಕಟ್ಟೆ; ಭಾರತದ ರಫ್ತಿಗೆ ಇಲ್ಲ ಭಂಗ
ರಫ್ತು
Image Credit source: Getty Images

Updated on: Aug 19, 2026 | 6:48 PM

ನವದೆಹಲಿ, ಆಗಸ್ಟ್ 19: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕದ ನೀತಿಗಳ (Tariff Policies) ನಡುವೆಯೂ ಭಾರತದ ಅಮೆರಿಕಕ್ಕೆ ನಡೆಯುವ ರಫ್ತು ವಹಿವಾಟು ಸ್ಥಿರವಾಗಿದೆ. ಕಳೆದ ಒಂದು ವರ್ಷದಲ್ಲಿ (2025ರ ಆಗಸ್ಟ್​ನಿಂದ 2026ರ ಜುಲೈವರೆಗೆ 12 ತಿಂಗಳಲ್ಲಿ) ಭಾರತದ ಶೇ. 20ರಷ್ಟು ರಫ್ತು ಅಮೆರಿಕದ ಮಾರುಕಟ್ಟೆಗೆ ಹೋಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲೂ ಬಹುತೇಕ ಇಷ್ಟೇ ರಫ್ತು ಭಾರತದಿಂದ ಅಮೆರಿಕಕ್ಕೆ ಆಗಿತ್ತು. ಅಚ್ಚರಿ ಎಂದರೆ, ಅಮೆರಿಕಕ್ಕೆ ಭಾರತದ ರಫ್ತು ಉಚ್ಚವಿದ್ದ 2022-23ರಲ್ಲಿ ಈ ಪ್ರಮಾಣವು ಶೇ. 17.4 ಇತ್ತು. ಈಗ ಅದಕ್ಕಿಂತಲೂ ಹೆಚ್ಚಿನ ರಫ್ತನ್ನು ಭಾರತವು ಅಮೆರಿಕಕ್ಕೆ ಮಾಡಿದೆ.

ಅಮೆರಿಕದ ಟ್ರಂಪ್ ಸರ್ಕಾರ ವಿಧಿಸಿರುವ ಶೇ. 50ರಷ್ಟು ಸುಂಕದ ನಡುವೆಯೂ ಭಾರತ ಈ ರಫ್ತು ಸಾಧಿಸಿರುವುದು ಗಮನಾರ್ಹ ಸಂಗತಿ. ಈ ಸುಂಕವು ಭಾರತೀಯ ರಫ್ತು ಮಾರುಕಟ್ಟೆಯ ಮೇಲೆ ಇದು ದೊಡ್ಡ ಮಟ್ಟದ ಋಣಾತ್ಮಕ ಪರಿಣಾಮ ಬೀರಲಾಗಿಲ್ಲ.

ಇದನ್ನೂ ಓದಿ: ಮುಂದಿನ 5 ವರ್ಷ ಈಕ್ವಿಟಿ ಮಾರುಕಟ್ಟೆಯಿಂದ ಶೇ. 15 ವಾರ್ಷಿಕ ಆದಾಯ: ರಾಮದೇವ್ ಅಗರ್ವಾಲ್ ವಿಶ್ವಾಸ

  • ಅಮೆರಿಕ ಮಾರುಕಟ್ಟೆಗೆ ಹೆಚ್ಚು ರಫ್ತಾಗಿರುವ ಉತ್ಪನ್ನಗಳು: ಎಲೆಕ್ಟ್ರಾನಿಕ್ಸ್, ಇಂಜಿನಿಯರಿಂಗ್ ಸರಕುಗಳು, ಫಾರ್ಮಾಸ್ಯುಟಿಕಲ್ಸ್, ರತ್ನಗಳು ಮತ್ತು ಆಭರಣಗಳು ಹಾಗೂ ಜವಳಿ ವಲಯಗಳಿಗೆ ಅಮೆರಿಕವು ಅತ್ಯಂತ ಆಕರ್ಷಕ ಮತ್ತು ಪ್ರಮುಖ ಮಾರುಕಟ್ಟೆಯಾಗಿ ಮುಂದುವರಿದಿದೆ.
  • ಎಫ್​ಟಿಎಗಳು: ಅಮೆರಿಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಮಾರುಕಟ್ಟೆ ಅಪಾಯವನ್ನು ನಿರ್ವಹಿಸಲು ಭಾರತವು ಬ್ರಿಟನ್, ಯುರೋಪಿಯನ್ ಯೂನಿಯನ್, ಓಮನ್ ಮತ್ತು ನ್ಯೂಜಿಲ್ಯಾಂಡ್‌ನಂತಹ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು (FTAs) ಚುರುಕುಗೊಳಿಸಿದೆ.
  • ಇತರ ಮಾರುಕಟ್ಟೆಗಳ ಬೆಳವಣಿಗೆ: ಭಾರತದ ರಫ್ತುಗಳು ಚೀನಾ (42% ಹೆಚ್ಚಳ), ಟಾಂಜಾನಿಯಾ, ವಿಯೆಟ್ನಾಂ, ದಕ್ಷಿಣ ಕೊರಿಯಾ, ಶ್ರೀಲಂಕಾ ಮತ್ತು ಕೀನ್ಯಾದಂತಹ ದೇಶಗಳಲ್ಲಿಯೂ ಉತ್ತಮ ಬೆಳವಣಿಗೆ ಕಾಣುತ್ತಿವೆ.

ಇದನ್ನೂ ಓದಿ: ಪರಿಸರಸ್ನೇಹಿ ಇಂಧನದ ಕಮರ್ಷಿಯಲ್ ವಾಹನಗಳಿಗೆ ವಯೋಮಿತಿ 5 ವರ್ಷ ಹೆಚ್ಚಿಸಲು ಸರ್ಕಾರ ಪ್ರಸ್ತಾಪ

ರಫ್ತು ವಲಯದ ತಜ್ಞರ ಪ್ರಕಾರ, ಭಾರತದ ಮಾರುಕಟ್ಟೆ ವೈವಿಧ್ಯೀಕರಣದ ಪ್ರಯತ್ನಗಳು ಫಲ ನೀಡಲು ಇನ್ನೂ 2 ರಿಂದ 3 ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಅಮೆರಿಕವು ದೊಡ್ಡ ಮಾರುಕಟ್ಟೆಯಾಗಿರುವುದರಿಂದ, ಭಾರತಕ್ಕೆ ಸದ್ಯಕ್ಕೆ ಅಮೆರಿಕದೊಂದಿಗೆ ವ್ಯಾಪಾರವನ್ನು ಮುಂದುವರಿಸುವುದು ಅನಿವಾರ್ಯ ಮತ್ತು ಲಾಭದಾಯಕವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us