Aarogya Setu: ಲಸಿಕೆ ಪಡೆದಿದ್ದೀರೋ ಇಲ್ಲವೋ ಆರೋಗ್ಯ ಸೇತುವಿನಲ್ಲಿ ಅಪ್ಡೇಟ್ ಮಾಡಿ, ಪ್ರಯಾಣ ಸಲೀಸು ಮಾಡಿಕೊಳ್ಳಿ
ಕೊರೊನಾ ಲಸಿಕೆ ಎರಡೂ ಡೋಸ್ ಮುಗಿದಿದ್ದರೆ ಮಾತ್ರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ಆದ್ದರಿಂದ ಆರೋಗ್ಯ ಸೇತು ಆ್ಯಪ್ನಲ್ಲಿ ಈ ಮಾಹಿತಿ ಅಪ್ಡೇಟ್ ಹೇಗೆ ಎಂಬುದರ ವಿವರ ಇಲ್ಲಿದೆ.
ಆರೋಗ್ಯ ಸೇತು ಮೊಬೈಲ್ ಆ್ಯಪ್ನಲ್ಲಿ ವೈಯಕ್ತಿಕವಾಗಿ ಲಸಿಕೆ ಸ್ಥಿತಿ (ಪಡೆದುಕೊಂಡಿದ್ದಾರಾ ಅಥವಾ ಇಲ್ಲವಾ) ಬಗ್ಗೆ ಸ್ವ ಮೌಲ್ಯಮಾಪನ ಪ್ರಕ್ರಿಯೆ ಮೂಲಕ ಈಗ ಅಪ್ಡೇಟ್ ಮಾಡಬಹುದು. ಈ ವ್ಯವಸ್ಥೆಯಿಂದ ಪ್ರಯಾಣದ ಕಾರಣಕ್ಕೆ ಬಹಳ ಅನುಕೂಲ ಆಗುತ್ತದೆ. ಆ ವ್ಯಕ್ತಿ ಲಸಿಕೆ ಪಡೆದಿದ್ದಾರೆಯೇ ಅಥವಾ ಇಲ್ಲವೆ ಎಂಬುದು ತಿಳಿಯುವುದಕ್ಕೆ ಸಲೀಸಾಗುತ್ತದೆ ಎಂದು ಸರ್ಕಾರದಿಂದ ತಿಳಿಸಲಾಗಿದೆ. ಇನ್ಫರ್ಮೇಷನ್ ಟೆಕ್ನಾಲಜಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯವು ಮಂಗಳವಾರ ಈ ಬಗ್ಗೆ ತಿಳಿಸಿದ್ದು, ಒಂದು ವೇಳೆ ಆ್ಯಪ್ನಲ್ಲಿ ಪರಿಷ್ಕೃತ ಸ್ವ ಮೌಲ್ಯಮಾಪನ ಅಪ್ಡೇಟೆಡ್ ವರ್ಷನ್ ತೆಗೆದುಕೊಳ್ಳದಿದ್ದಲ್ಲಿ ಆರೋಗ್ಯ ಸೇತು ಬಳಸುವ ಎಲ್ಲ ಬಳಕೆದಾರರಿಗೂ “Update the Vaccination Status” ಎಂಬ ಆಯ್ಕೆ ದೊರೆಯುತ್ತದೆ. “ಆರೋಗ್ಯ ಸೇತುವಿನಿಂದ ಅಪ್ಡೇಟ್ ವ್ಯಾಕ್ಸಿನೇಷನ್ ಸ್ಟೇಟಸ್ ಎಂಬ ಫೀಚರ್ ಅನ್ನು ಆರೋಗ್ಯ ಸೇತು ಆ್ಯಪ್ನಲ್ಲಿ ಪರಿಚಯಿಸಲಾಗಿದೆ,” ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಯಾರು ಒಂಡು ಡೋಸ್ ಲಸಿಕೆ ಪಡೆದಿರುತ್ತಾರೋ ಅಂಥವರಿಗೆ ಒಂದು ನೀಲಿ ಅಂಚಿನ ಲಸಿಕೆ ಸ್ಥಿತಿಯ ಮಾಹಿತಿ ಅವರ ಹೋಮ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ ಮತ್ತು ಇದರ ಜತೆಗೆ ಆರೋಗ್ಯ ಸೇತು ಲೋಗೋ ಮತ್ತು ನೀಲಿ ಬಣ್ಣದ ಟಿಕ್ ಬರುತ್ತದೆ. ಯಾರಿಗೆ ಎರಡೂ ಡೋಸ್ ಲಸಿಕೆ ಆಗಿದೆಯೋ ಅಂಥವರಿಗೆ ‘ನೀಲಿ ಬಣ್ಣದ ಶೀಲ್ಡ್’ ಹಾಗೂ ಜತೆಗೆ ಎರಡು ಟಿಕ್ ಆ್ಯಪ್ನಲ್ಲಿ ಕಾಣಿಸುತ್ತದೆ. ಹೀಗೆ ಕಾಣಿಸುವುದಕ್ಕೆ ಎರಡನೇ ಡೋಸ್ ಪಡೆದ 14 ದಿನ ಪೂರ್ತಿ ಆಗಬೇಕಾಗುತ್ತದೆ. CoWIN ಪೋರ್ಟಲ್ನಿಂದ ಲಸಿಕೆ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದ ನಂತರವೇ ಎರಡು ನೀಲಿ ಟಿಕ್ ಕಾಣಿಸಿಕೊಳ್ಳುತ್ತದೆ.
CoWIN ನೋಂದಣಿಗೆ ಬಳಸಿರುವ ಮೊಬೈಲ್ ನಂಬರ್ ಸಹಾಯದಿಂದ ಲಸಿಕೆ ಸ್ಥಿತಿಯ ಬಗ್ಗೆ ಅಪ್ಡೇಟ್ ಮಾಡಬಹುದು. ಆರೋಗ್ಯ ಸೇತು ಆ್ಯಪ್ನಲ್ಲಿ ಸ್ವ-ಮೌಲ್ಯಮಾಪನ ತೆಗೆದುಕೊಂಡು, ಯಾವ ಬಳಕೆದಾರರು ಕನಿಷ್ಠ ಒಂದು ಡೋಸ್ ಕೋವಿಡ್- 19 ಲಸಿಕೆ ತೆಗೆದುಕೊಂಡಿರುತ್ತಾರೋ ಅವರಿಗೆ ಪಾರ್ಷಿಯಲಿ ವ್ಯಾಕ್ಸಿನೇಷನ್/ವ್ಯಾಕ್ಸಿನೇಟೆಡ್ (ಅನ್ವೆರಿಫೈಡ್) ಎಂದು ಆರೋಗ್ಯ ಸೇತು ಆ್ಯಪ್ನ ಹೋಮ್ ಸ್ಕ್ರೀನ್ನಲ್ಲಿ ಬರುತ್ತದೆ. ಬಳಕೆದಾರರು ಸ್ವ ಮೌಲ್ಯಮಾಪನ ಸಂದರ್ಭದಲ್ಲಿ ಸ್ಥಿತಿ ಬಗ್ಗೆ ಏನು ಹೇಳಿರುತ್ತಾರೋ ಆ ಘೋಷಣೆಗೆ ಇದು ಆಧಾರ ಪಟ್ಟಿರುತ್ತದೆ. CoWINನಿಂದ ಒಟಿಪಿ ಮೂಲಕ ಖಾತ್ರಿ ಪಡಿಸಿಕೊಂಡ ಮೇಲೆ ಅನ್ವೆರಿಫೈಡ್ ಎಂದು ಇದ್ದದ್ದು ವೆರಿಫೈಡ್ ಆಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಲಸಿಕೆ ಪಡೆದುಕೊಂಡ 14 ದಿನಗಳ ನಂತರ ಆರೋಗ್ಯ ಸೇತು ಹೋಮ್ ಸ್ಕ್ರೀನ್ನಲ್ಲಿ “ನೀವು ಲಸಿಕೆ ಪಡೆದಿದ್ದೀರಿ” ಎಂದು ತೋರಿಸುತ್ತದೆ. ಈ ಮೂಲಕವಾಗಿ ಲಸಿಕೆ ಸ್ಥಿತಿ ತಿಳಿಯುವುದು ಸುಲಭವಾಗಿ, ಪ್ರಯಾಣವಾಗಿ ಮತ್ತು ವಿವಿಧ ಸ್ಥಳಗಳಿಗೆ ತೆರಳುವುದಕ್ಕೆ ಸಲೀಸಾಗುತ್ತದೆ ಎಂದು ತಿಳೀಸಲಾಗಿದೆ. ಅಂದಹಾಗೆ ಭಾರತದಲ್ಲಿ 19 ಕೋಟಿಗೂ ಹೆಚ್ಚು ಮಂದಿ ಆರೋಗ್ಯ ಸೇತು ಬಳಸುತ್ತಿದ್ದಾರೆ.
ಇದನ್ನೂ ಓದಿ: Covid Vaccine Fake Apps: ಕೋವಿಡ್- 19 ಲಸಿಕೆ ನೋಂದಣಿ ಹೆಸರಲ್ಲಿ ಮಾಹಿತಿಗೆ ಕನ್ನ ಹಾಕುವ ಈ ಆ್ಯಪ್ಗಳ ಬಗ್ಗೆ ಹುಷಾರಾಗಿರಿ
(Vaccination status update in Aarogya Setu by an individual through self declaration know how. And it will help to travel)
Published On - 11:42 am, Wed, 2 June 21