AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day: ವಾಲೆಂಟೈನ್ಸ್​ ಡೇಗೆ ಈ ಸ್ಮಾರ್ಟ್​ಫೋನ್ ಗಿಫ್ಟ್ ಕೊಡಿ: ನಥಿಂಗ್ ಫೋನ್ 1 ಮೇಲೆ ಬಂಪರ್ ಡಿಸ್ಕೌಂಟ್

Nothing Phone 1 Offer: ತನ್ನ ಡಿಸೈನ್‌ ಮೂಲಕವೇ ಸ್ಮಾರ್ಟ್​ಫೋನ್ ಪ್ರಿಯರನ್ನು ದಂಗಾಗಿಸಿರುವ ನಥಿಂಗ್ ಫೋನ್ (1) ಮೊಬೈಲ್ ಈಗ ಕೇವಲ 26,999 ರೂ. ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯವಿದೆ. ಇದು 128GB ಸ್ಟೋರೇಜ್ ಸಾಮರ್ಥ್ಯದ್ದಾಗಿದೆ. ತನ್ನ ಡಿಸೈನ್‌ ಮೂಲಕವೇ ಸ್ಮಾರ್ಟ್​ಫೋನ್ ಪ್ರಿಯರನ್ನು ದಂಗಾಗಿಸಿರುವ ಈ ಮೊಬೈಲ್ ಈಗ ಕೇವಲ 26,999 ರೂ. ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯವಿದೆ.

Valentine's Day: ವಾಲೆಂಟೈನ್ಸ್​ ಡೇಗೆ ಈ ಸ್ಮಾರ್ಟ್​ಫೋನ್ ಗಿಫ್ಟ್ ಕೊಡಿ: ನಥಿಂಗ್ ಫೋನ್ 1 ಮೇಲೆ ಬಂಪರ್ ಡಿಸ್ಕೌಂಟ್
Nothing Phone 1
TV9 Web
| Edited By: |

Updated on:Oct 07, 2026 | 7:07 PM

Share

ವಾಲೆಂಟೈನ್ಸ್​ ಡೇ (Valentines Day) ಪ್ರೇಮಿಗಳ ದಿನಕ್ಕೆ ಇನ್ನೇನು ಎರಡು ದಿನಗಳಷ್ಟೇ ಬಾಕಿಯಿದೆ. ಈ ಸಂದರ್ಭ ನೀವು ಪ್ರೀತಿಯನ್ನು ವ್ಯಕ್ತಪಡಿಸುವ ಜೊತೆಗೆ ವಿಶೇಷ ಉಡುಗೊರೆಯನ್ನೂ ನೀಡಿದರೆ ನಿಮ್ಮನ್ನು ಪ್ರೀತಿಸುವವರು ಮತ್ತಷ್ಟು ಖುಷಿ ಪಡಬಹುದು. ಇದಕ್ಕಾಗಿಯೇ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್​ಕಾರ್ಟ್​ನಲ್ಲಿ ‘ಫ್ಲಿಪ್ ಹಾರ್ಟ್ ಡೇಸ್’ (Flip Heart Days) ಎಂಬ ವಿಶೇಷ ನಡೆಯುತ್ತಿದೆ. ಇದರಲ್ಲಿ ಸ್ಮಾರ್ಟ್​ಫೋನ್​ಗಳು, ಇಯರ್ ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಒನ್​ಪ್ಲಸ್, ಶವೋಮಿ, ರಿಯಲ್ ಮಿ, ನಥಿಂಗ್ ಫೋನ್, ಸ್ಯಾಮ್​ಸಂಗ್ (Samsung) ಕಂಪನಿಯ ಫೋನುಗಳು ಕಡಿಮೆ ದರಕ್ಕೆ ಖರೀದಿಸಬಹುದು. ಮುಖ್ಯವಾಗಿ ಕಳೆದ ವರ್ಷ ಬಿಡುಗಡೆ ಆದ ನಥಿಂಗ್‌ ಫೋನ್‌ (1) ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟ ಆಗುತ್ತಿದೆ.

ತನ್ನ ಡಿಸೈನ್‌ ಮೂಲಕವೇ ಸ್ಮಾರ್ಟ್​ಫೋನ್ ಪ್ರಿಯರನ್ನು ದಂಗಾಗಿಸಿರುವ ಈ ಮೊಬೈಲ್ ಈಗ ಕೇವಲ 26,999 ರೂ. ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯವಿದೆ. ಇದು 128GB ಸ್ಟೋರೇಜ್ ಸಾಮರ್ಥ್ಯದ್ದಾಗಿದೆ. ಈ ಫೋನಿನ ಮೂಲಬೆಲೆ 37,999 ರೂ. ಆಗಿದ್ದು ಶೇ. 28 ರಷ್ಟು ಡಿಸ್ಕೌಂಟ್ ಪಡೆದುಕೊಂಡಿದೆ. ಅದೇ ರೀತಿ ಗ್ರಾಹಕರು IDFC ಫಸ್ಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಅಮೇರಿಕನ್ ಎಕ್ಸ್‌ಪ್ರೆಸ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ ಮತ್ತಷ್ಟು ರಿಯಾಯಿತಿ ದೊರೆಯುತ್ತದೆ.

Lava Blaze 5G: ವಿದೇಶಿ ಮೊಬೈಲ್ ಕಂಪನಿಗಳ ಹುಟ್ಟಡಗಿಸಿದ ಭಾರತದ ಲಾವಾ ಬ್ಲೇಜ್ ಹೊಸ ಸ್ಟೋರೇಜ್​ನಲ್ಲಿ ಬಿಡುಗಡೆ

ಏನು ಫೀಚರ್ಸ್:

ಈ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 6.55 ಇಂಚಿನ ಫುಲ್‌ ಹೆಚ್‌ ಡಿ ಪ್ಲಸ್‌ ಡಿಸ್‌ ಪ್ಲೇ ಹೊಂದಿದೆ. ಈ ಡಿಸ್‌ ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದ್ದು, 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ನೀಡಲಾಗಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 778G+ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ.

ನಥಿಂಗ್ ಫೋನ್ (1) ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇದು OIS ಜೊತೆಗೆ EIS ಇಮೇಜ್ ಸ್ಟೆಬಿಲೈಸೇಶನ್‌ ನೊಂದಿಗೆ ಬರುತ್ತದೆ. ಈ ಫೋನ್ ​ನಲ್ಲಿರುವ ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸ್ಯಾಮ್‌ ಸಂಗ್‌ JN1 ಸೆನ್ಸಾರ್‌ ಹೊಂದಿದೆ. ಇದು EIS ಇಮೇಜ್ ಸ್ಟೆಬಿಲೈಸೇಶನ್, 114-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು ಮ್ಯಾಕ್ರೋ ಮೋಡ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೋನಿ IMX471 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್‌ ಬೆಂಬಲಿಸಲಿದೆ. ಆದರೆ, ನಥಿಂಗ್‌ ಫೋನ್‌ (1) ನೊಂದಿಗೆ ಚಾರ್ಜರ್‌ ನೀಡಲಾಗಿಲ್ಲ ಕೇವಲ ಟೈಪ್‌ ಸಿ ಚಾರ್ಜಿಂಗ್ ಕೇಬಲ್‌ ಲಭ್ಯ ಮಾಡಿದೆ.

Published On - 1:50 pm, Sun, 12 February 23

Follow Us
TV9 Web
TV9 Web

TV9 Kannada

Read More