Gautam adani: ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮಿಟ್: ಮುಂದಿನ 3 ವರ್ಷದಲ್ಲಿ ಗುಜರಾತ್​ನಲ್ಲಿ 2 ಲಕ್ಷ ಕೋಟಿ ರೂ ಹೂಡಿಕೆ: ಗೌತಮ್ ಅದಾನಿ

Vibrant Gujarat Global Summit: 10ನೇ ಆವೃತ್ತಿಯ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್ 2024 ಕಾರ್ಯಕ್ರಮ ಜನವರಿ 10ರಂದು ಚಾಲನೆಗೊಂಡಿದೆ. ದೇಶ ವಿದೇಶಗಳ ಗಣ್ಯರು, ಉದ್ಯಮಿಗಳು ಭಾಗಿಯಾಗಿದ್ದಾರೆ. ಗೌತಮ್ ಅದಾನಿ ಮಾತನಾಡಿ, ಮುಂದಿನ 5 ವರ್ಷದಲ್ಲಿ ಗುಜರಾತ್​ನಲ್ಲಿ ತಮ್ಮ ಸಂಸ್ಥೆಗಳು 2 ಲಕ್ಷ ಕೋಟಿ ರೂ ಹೂಡಿಕೆ ಮಾಡುತ್ತದೆ ಎಂದಿದ್ದಾರೆ. ಮುಕೇಶ್ ಅಂಬಾನಿ ಮಾತನಾಡಿ, ತಮ್ಮ ರಿಲಾಯನ್ಸ್ ಯಾವತ್ತಿದ್ದರೂ ಗುಜರಾತಿ ಕಂಪನಿಯೇ ಆಗಿ ಉಳಿದಿರುತ್ತದೆ ಎಂದು ಹೇಳಿದ್ದಾರೆ.

Gautam adani: ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮಿಟ್: ಮುಂದಿನ 3 ವರ್ಷದಲ್ಲಿ ಗುಜರಾತ್​ನಲ್ಲಿ 2 ಲಕ್ಷ ಕೋಟಿ ರೂ ಹೂಡಿಕೆ: ಗೌತಮ್ ಅದಾನಿ
ಗೌತಮ್ ಅದಾನಿ
Follow us
|

Updated on: Jan 10, 2024 | 11:37 AM

ಗಾಂಧಿನಗರ್, ಜನವರಿ 10: ಹತ್ತನೇ ಆವೃತ್ತಿಯ ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮಿಟ್ 2024 (Vibrant Gujarat Global Summit) ಕಾರ್ಯಕ್ರಮ ಇಲ್ಲಿಯ ಮಹಾತ್ಮ ಮಂದಿರ್​ನಲ್ಲಿ ಚಾಲನೆಗೊಂಡಿದೆ. ‘ಭವಿಷ್ಯಕ್ಕೆ ದಾರಿ’ (Gateway to the Future) ಎಂಬುದು ಈ ಬಾರಿಯ ಸಮಿಟ್​​ನ ಥೀಮ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಉದ್ಘಾಟನೆ ನೆರವೇರಿಸಲಿದ್ದಾರೆ. ಹಲವು ವಿಶ್ವನಾಯಕರು, 34 ಪಾರ್ಟ್ನರ್ ದೇಶಗಳು ಹಾಗೂ 16 ಪಾರ್ಟ್ನರ್ ಸಂಘಟನೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಅದಾನಿ ಗ್ರೂಪ್​ನಿಂದ ಗುಜರಾತ್​ನಲ್ಲಿ 2 ಲಕ್ಷ ಕೋಟಿ ರೂ ಹೂಡಿಕೆ

ವೈಬ್ರಂಟ್ ಗುಜರಾತ್ ಸಮಿಟ್​ನಲ್ಲಿ ಭಾಷಣ ಮಾಡಿದ ಉದ್ಯಮಿ ಗೌತಮ್ ಅದಾನಿ ತಮ್ಮ ಮಾತೃ ನಾಡಾದ ಗುಜರಾತ್​ನಲ್ಲಿ ಮುಂದಿನ ಐದು ವರ್ಷದಲ್ಲಿ 2 ಲಕ್ಷ ಕೋಟಿ ರೂಗೂ ಹೆಚ್ಚು ಮೊತ್ತದ ಹೂಡಿಕೆ ಮಾಡುವುದಾಗಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

‘ಸ್ವಾವಲಂಬನೆ ಭಾರತಕ್ಕೆ ಹಸಿರು ಸರಬರಾಜು ಸರಪಳಿ ಬಲಪಡಿಸುತ್ತಿದ್ದೇವೆ. ಹಾಗೆಯೇ, ಅತಿದೊಡ್ಡ ಸಮಗ್ರ ಮರುಬಳಕೆ ಇಂಧನ ವ್ಯವಸ್ಥೆ ರೂಪಿಸಲಿದ್ದೇವೆ’ ಎಂದು ಅದಾನಿ ಘೋಷಿಸಿದ್ದಾರೆ.

ಇದನ್ನೂ ಓದಿ: Ayodhya: ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ಅಯೋಧ್ಯೆ ನಗರಿ ಮಾರ್ಪಾಡು; ಇದರ ಹಿಂದಿದ್ದಾರೆ ಮಾಸ್ಟರ್ ಪ್ಲಾನರ್ ದೀಕ್ಷು ಕುಕ್ರೇಜಾ

ಗೌತಮ್ ಅದಾನಿ ಮೊನ್ನೆಯಷ್ಟೇ ತಮಿಳುನಾಡಿನಲ್ಲಿ ಸಾವಿರಾರು ಕೋಟಿ ರೂ ಹೂಡಿಕೆ ಮಾಡುವುದಾಗಿ ಹೇಳಿದ್ದರು. ವರ್ಷದ ಹಿಂದೆ ಹಿಂಡನ್ಬರ್ಗ್ ವರದಿ ಬಳಿಕ ಸಾಕಷ್ಟು ಹಿನ್ನಡೆ ಕಂಡಿದ್ದ ಗೌತಮ್ ಅದಾನಿ ಇದೀಗ ತಿರುಗಿ ನಿಂತಿದ್ದಾರೆ. ವಿಶ್ವದ ಅಗ್ರ ಶ್ರೀಮಂತರ ಸಾಲಿನಲ್ಲಿ ಅವರು ನಿಂತಿದ್ದಾರೆ.

ರಿಲಾಯನ್ಸ್ ಯಾವತ್ತಿದ್ದರೂ ಗುಜರಾತೀ ಕಂಪನಿಯೇ ಎಂದ ಅಂಬಾನಿ

ಮುಂಬೈನಲ್ಲಿ ಕೇಂದ್ರವಾಗಿಟ್ಟುಕೊಂಡು ಉದ್ಯಮ ಸಾಮ್ರಾಜ್ಯ ಸ್ಥಾಪಿಸಿರುವ ಮುಕೇಶ್ ಅಂಬಾನಿ ಅವರು ತಮ್ಮ ರಿಲಾಯನ್ಸ್ ಕಂಪನಿ ಯಾವತ್ತಿದ್ದರೂ ಗುಜರಾತೀ ಕಂಪನಿಯೇ ಆಗಿ ಉಳಿದಿರುತ್ತದೆ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿದ್ದಾರೆ.

ಇದನ್ನೂ ಓದಿ: BR Shetty: ಸಾವಿರ ಕೋಟಿ ರೂ ಬಜೆಟ್​ನಲ್ಲಿ ಮಹಾಭಾರತ ಸಿನಿಮಾ ನಿರ್ಮಿಸಲು ಹೊರಟಿದ್ದ ಈ ಕನ್ನಡಿಗನಿಗೆ ಈಗ ದಿಕ್ಕುತೋಚದ ಸ್ಥಿತಿ

ರಿಲಾಯನ್ಸ್ ಸಂಸ್ಥೆ ಭಾರತದಲ್ಲಿ ಕಳೆದ 10 ವರ್ಷದಲ್ಲಿ 12ಲಕ್ಷ ಕೋಟಿ ರೂಗಿಂತ ಹೆಚ್ಚು ಹಣದ ಹೂಡಿಕೆ ಮಾಡಿದೆ. ಇದರಲ್ಲಿ ಮೂರನೇ ಒಂದರಷ್ಟು ಹೂಡಿಕೆ ಗುಜರಾತ್​ನಲ್ಲೇ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಮುಕೇಶ್ ಅಂಬಾನಿ ಕುಟುಂಬ ಮೂಲತಃ ಗುಜರಾತ್ ರಾಜ್ಯದವರು. ಮುಂಬೈನಲ್ಲಿ ವ್ಯಾಪಾರ ನಡೆಸುವ ಗುಜರಾತಿ ಕುಟುಂಬ ಅವರದ್ದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ