Electoral Bonds: ಎಸ್​ಬಿಐ 29 ಶಾಖೆಗಳಲ್ಲಿ ಸಿಗಲಿದೆ ಚುನಾವಣಾ ಬಾಂಡ್; ಏನಿದು, ಯಾರು ಖರೀದಿಸಬಹುದು? ಇಲ್ಲಿದೆ ವಿವರ

ಚುನಾವಣಾ ಬಾಂಡ್​ಗಳನ್ನು ಯಾರು ಖರೀದಿಸಬಹುದು? ಹೇಗೆ ಖರೀದಿಸುವುದು? ಚುನಾವಣಾ ಬಾಂಡ್​ಗಳನ್ನು ಸ್ವೀಕರಿಸಲು ರಾಜಕೀಯ ಪಕ್ಷಗಳಿಗೆ ಇರಬೇಕಾದ ಅರ್ಹತೆ ಏನು? ವಿವರ ಇಲ್ಲಿದೆ.

Electoral Bonds: ಎಸ್​ಬಿಐ 29 ಶಾಖೆಗಳಲ್ಲಿ ಸಿಗಲಿದೆ ಚುನಾವಣಾ ಬಾಂಡ್; ಏನಿದು, ಯಾರು ಖರೀದಿಸಬಹುದು? ಇಲ್ಲಿದೆ ವಿವರ
ಭಾರತೀಯ ಸ್ಟೇಟ್ ಬ್ಯಾಂಕ್ (ಸಂಗ್ರಹ ಚಿತ್ರ)
Follow us
TV9 Web
| Updated By: Ganapathi Sharma

Updated on: Dec 05, 2022 | 2:40 PM

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಡಿಸೆಂಬರ್ 5ರಿಂದ 12ರ ವರೆಗೆ 24ನೇ ಹಂತದ ಚುನಾವಣಾ ಬಾಂಡ್​ಗಳ (Electoral Bonds) ಮಾರಾಟ ಮಾಡುತ್ತಿದೆ. ಬ್ಯಾಂಕ್​​ನ 29 ಶಾಖೆಗಳಲ್ಲಿ ಚುನಾವಣಾ ಬಾಂಡ್​​ಗಳು ದೊರೆಯಲಿವೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಉದ್ದೇಶಕ್ಕೆ ಈ ಬಾಂಡ್​ಗಳು ಬಳಕೆಯಾಗುತ್ತವೆ. ಸದ್ಯ ಗುಜರಾತ್​ನಲ್ಲಿ ವಿಧಾನಸಭಾ ಚುನಾವಣೆ (Gujrat Assembly Election) ನಡೆಯುತ್ತಿದೆ. ದೆಹಲಿ ಪುರಸಭೆ ಚುನಾವಣೆ ಇತ್ತೀಚೆಗಷ್ಟೇ ಮುಗಿದಿದೆ. ಹಿಮಾಚಲ ಪ್ರದೇಶದಲ್ಲಿ ಕಳೆದ ತಿಂಗಳು ಮತದಾನ ಮುಗಿದಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಚುನಾವಣಾ ಬಾಂಡ್​ಗಳನ್ನು ಯಾರು ಖರೀದಿಸಬಹುದು? ಹೇಗೆ ಖರೀದಿಸುವುದು? ಚುನಾವಣಾ ಬಾಂಡ್​ಗಳನ್ನು ಸ್ವೀಕರಿಸಲು ರಾಜಕೀಯ ಪಕ್ಷಗಳಿಗೆ ಇರಬೇಕಾದ ಅರ್ಹತೆ ಏನು? ವಿವರ ಇಲ್ಲಿದೆ.

ಏನಿದು ಚುನಾವಣಾ ಬಾಂಡ್​​?

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕಾಗಿ ವ್ಯಕ್ತಿಗಳು ಅಥವಾ ಸಂಸ್ಥೆ / ಕಂಪನಿಗಳು ಈ ಚುನಾವಣಾ ಬಾಂಡ್​​ಗಳನ್ನು ಉಪಯೋಗಿಸುತ್ತವೆ. ಎಸ್​ಬಿಐ ಬ್ಯಾಂಕ್ 1,000 ರೂ., 10,000 ರೂ., 1 ಲಕ್ಷ ರೂ., 1 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್​​ಗಳನ್ನು ನೀಡುತ್ತಿದೆ.

ದೇಣಿಗೆಯಾಗಿ ಸ್ವೀಕರಿಸಿದ ಬಾಂಡ್​ಗಳನ್ನು ರಾಜಕೀಯ ಪಕ್ಷಗಳು 15 ದಿನಗಳ ಒಳಗೆ ರಿಡೀಮ್ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ನಿರ್ದಿಷ್ಟ ಪಕ್ಷದ ಖಾತೆಗೆ ಹಣ ಜಮೆಯಾಗುವುದಿಲ್ಲ. ರಿಡೀಮ್ ಮಾಡಿಕೊಂಡ ಮೊತ್ತ ಅದೇ ದಿನ ರಾಜಕೀಯ ಪಕ್ಷದ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಚುನಾವಣಾ ಬಾಂಡ್‌ಗಳನ್ನು ಅರ್ಹ ರಾಜಕೀಯ ಪಕ್ಷವು ಅಧಿಕೃತ ಬ್ಯಾಂಕ್‌ನ ಖಾತೆಯ ಮೂಲಕ ಮಾತ್ರ ಎನ್‌ಕ್ಯಾಶ್ ಮಾಡಬಹುದಾಗಿದೆ.

ಯಾರು, ಹೇಗೆ ಖರೀದಿಸಬಹುದು?

ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಲು ಬಯಸುವ ವ್ಯಕ್ತಿ ಅಥವಾ ಸಂಸ್ಥೆ / ಕಂಪನಿಗಳು ಚುನಾವಣಾ ಬಾಂಡ್​ಗಳನ್ನು ಖರೀದಿಸಬಹುದು. ಎಸ್​ಬಿಐ ಬ್ಯಾಂಕ್​ನ ಅಧಿಕೃತ ಶಾಖೆಗಳಲ್ಲಿ ಚುನಾವಣಾ ಬಾಂಡ್​ಗಳು ದೊರೆಯುತ್ತವೆ. ಡಿಜಿಟಲ್ ಪಾವತಿ ಅಥವಾ ಚೆಕ್ ನೀಡಿ ಚುನಾವಣಾ ಬಾಂಡ್​ಗಳನ್ನು ಖರೀದಿಸಬೇಕು. ನಗದು ನೀಡಿ ಖರೀದಿಸಲು ಅವಕಾಶವಿಲ್ಲ. ಚುನಾವಣಾ ಬಾಂಡ್​ಗಳನ್ನು ಖರೀದಿಸಿದ ದೇಣಿಗೆದಾರು ಅದನ್ನು ತನ್ನಿಚ್ಛೆಯ ರಾಜಕೀಯ ಪಕ್ಷಕ್ಕೆ ನೀಡಬಹುದು. ಅದನ್ನು ರಾಜಕೀಯ ಪಕ್ಷ 15 ದಿನಗಳ ಒಳಗಾಗಿ ಎನ್​ಕ್ಯಾಶ್ ಮಾಡಿಕೊಳ್ಳಬೇಕು.

ಯಾವ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಸ್ವೀಕರಿಸಬಹುದು?

ಭಾರತದ ನಾಗರಿಕರು ಹಾಗೂ ಸಂಸ್ಥೆಗಳು ಚುನಾವಣಾ ಬಾಂಡ್​ಗಳ ಖರೀದಿಗೆ ಅರ್ಹರಾಗಿರುತ್ತಾರೆ. ಜಂಟಿಯಾಗಿಯೂ ಚುನಾವಣಾ ಬಾಂಡ್​ಗಳನ್ನು ಖರೀದಿಸಬಹುದಾಗಿದೆ. ಕೆವೈಸಿ ದೃಢೀಕರಿಸಿದ ಬಳಿಕವಷ್ಟೇ ಚುನಾವಣಾ ಬಾಂಡ್​ಗಳನ್ನು ವಿತರಿಸಲಾಗುತ್ತದೆ. ಈ ಬಾಂಡ್​​ಗಳು ಇದು ಪಾವತಿ ಮಾಡುವವರ ಹೆಸರನ್ನು ಹೊಂದಿರುವುದಿಲ್ಲ.

ಇದನ್ನೂ ಓದಿ: Upcoming IPO: ದೀರ್ಘಾವಧಿ ಹೂಡಿಕೆಗೆ ಯೋಚಿಸುತ್ತಿದ್ದೀರಾ? ಈ ತಿಂಗಳು ಐಪಿಒ ಬಿಡುಗಡೆ ಮಾಡುವ ಕಂಪನಿಗಳ ವಿವರ ಇಲ್ಲಿದೆ

1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 29ಎ ಅಡಿಯಲ್ಲಿ ನೋಂದಣಿಯಾಗಿರುವ ರಾಜಕೀಯ ಪಕ್ಷ ಮಾತ್ರ ಚುನಾವಣಾ ಬಾಂಡ್​ಗಳನ್ನು ಸ್ವೀಕರಿಸಲು ಅವಕಾಶವಿದೆ. ಅಲ್ಲದೆ, ಹಿಂದಿನ ಲೋಕಸಭೆ ಚುನಾವಣೆ ಹಾಗೂ ರಾಜ್ಯ ಚುನಾವಣೆಗಳಲ್ಲಿ ಶೇಕಡಾ 1ಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದರೆ ಅಂಥ ರಾಜಕೀಯ ಪಕ್ಷ ಚುನಾವಣಾ ಬಾಂಡ್​​ ಸ್ವೀಕರಿಸಲು ಅರ್ವಾಗಿರುವುದಿಲ್ಲ.

ಚುನಾವಣಾ ಬಾಂಡ್​ ಆರಂಭವಾಗಿದ್ದು ಯಾವಾಗ, ಯಾಕೆ?

ರಾಜಕೀಯ ಪಕ್ಷಗಳಿಗೆ ಹಣಕಾಸು ನೆರವು ನೀಡುವ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ 2017ರ ಹಣಕಾಸು ಕಾಯ್ದೆಯಲ್ಲಿ ಚುನಾವಣಾ ಬಾಂಡ್​​ ಪರಿಚಯಿಸಿತು. 2018ರಲ್ಲಿ ಚುನಾವಣಾ ಬಾಂಡ್ ಯೋಜನೆ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. 2017ರ ಬಜೆಟ್​​ನಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಚುನಾವಣಾ ಬಾಂಡ್​ಗಳನ್ನು ಬಿಡುಗಡೆ ಮಾಡುವ ಯೋಜನೆ ಬಗ್ಗೆ ಘೋಷಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ