ಎಲ್ಐಸಿ
Image Credit source: PTI
ಭಾರತೀಯ ಜೀವ ವಿಮಾ ನಿಗಮವು (LIC) ಇದೀಗ ವಾಟ್ಸ್ಆ್ಯಪ್ (WhatsApp) ಮೂಲಕವೂ ಪಾಲಿಸಿದಾರರಿಗೆ ಸೇವೆ ಒದಗಿಸಲು ಆರಂಭಿಸಿದೆ. ಎಲ್ಐಸಿಯ ಆನ್ಲೈನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡಿರುವ ಪಾಲಿಸಿದಾರರು ವಾಟ್ಸ್ಆ್ಯಪ್ ಚಾಟ್ ಮೂಲಕ ಪಾಲಿಸಿ ಸ್ಥಿತಿ, ಪ್ರೀಮಿಯಂ ಪಾವತಿಗೆ ಸಂಬಂಧಿಸಿದ ವಿವರ, ಸ್ಟೇಟ್ಮೆಂಟ್ ಇತ್ಯಾದಿಗಳನ್ನು ತಿಳಿಯಬಹುದಾಗಿದೆ. ಆನ್ಲೈನ್ ಪೋರ್ಟಲ್ನಲ್ಲಿ ಈಗಾಗಲೇ (www.licindia.in) ನೋಂದಣಿ ಮಾಡಿರದ ಪಾಲಿಸಿದಾರರು ನೋಂದಣಿ ಮಾಡಿಕೊಂಡು ವಾಟ್ಸ್ಆ್ಯಪ್ ಮೂಲಕ ದೊರೆಯುವ ಸೇವೆಗಳನ್ನು ಪಡೆಯುವಂತೆ ಎಲ್ಐಸಿ ಸೂಚಿಸಿದೆ.
ಎಲ್ಐಸಿ ವಾಟ್ಸ್ಆ್ಯಪ್ ಸೇವೆ ಪಡೆಯುವುದು ಹೀಗೆ…
- ಎಲ್ಐಸಿಯ ಅಧಿಕೃತ ವಾಟ್ಸ್ಆ್ಯಪ್ ಸಂಖ್ಯೆಯನ್ನು (8976862090) ನಿಮ್ಮ ಮೊಬೈಲ್ಫೋನ್ನ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಸೇವ್ ಮಾಡಿಕೊಳ್ಳಿ.
- ವಾಟ್ಸ್ಆ್ಯಪ್ ಓಪನ್ ಮಾಡಿ ಎಲ್ಐಸಿ ಇಂಡಿಯಾ ಚಾಟ್ಬಾಕ್ಸ್ ಓಪನ್ ಮಾಡಿ.
- ಚಾಟ್ ಬಾಕ್ಸ್ನಲ್ಲಿ ‘Hi’ ಸಂದೇಶ ಕಳುಹಿಸಿ.
- 11 ಆಯ್ಕೆಗಳುಳ್ಳ ಸಂದೇಶವನ್ನು ಎಲ್ಐಸಿ ಕಳುಹಿಸುತ್ತದೆ.
- ಆಯ್ಕೆ ಸಂಖ್ಯೆಯನ್ನು ಟೈಪ್ ಮಾಡಿ ರಿಪ್ಲೈ ಮಾಡಿ. ಉದಾಹರಣೆಗೆ; 1 ಪ್ರೀಮಿಯಂ ದಿನಾಂಕ.
- ಸಂಬಂಧಪಟ್ಟ ವಿವರವನ್ನು ಎಲ್ಐಸಿ ವಾಟ್ಸ್ಆ್ಯಪ್ ಚಾಟ್ನಲ್ಲಿ ಕಳುಹಿಸಿಕೊಡುತ್ತದೆ.
- ಎಲ್ಐಸಿ ಗ್ರಾಹಕರ ಪೋರ್ಟಲ್ನಲ್ಲಿ ನೋಂದಣಿ ಮಾಡಿದ ಮೊಬೈಲ್ ಸಂಖ್ಯೆಯಿಂದಲೇ ಸಂದೇಶ ಕಳುಹಿಸಿ. ನೀವು ನೋಂದಣಿ ಮಾಡಿದ ಸಂಖ್ಯೆ ಬೇರೆ, ವಾಟ್ಸ್ಆ್ಯಪ್ ಸಂಖ್ಯೆ ಬೇರೆಯಾಗಿದ್ದಲ್ಲಿ ಪೋರ್ಟಲ್ನಲ್ಲಿ ಅಪ್ಡೇಟ್ ಮಾಡಿಕೊಳ್ಳಿ.
ವಾಟ್ಸ್ಆ್ಯಪ್ನಲ್ಲಿ ದೊರೆಯುವ ಸೇವೆಗಳ ಪಟ್ಟಿ
- ಪ್ರೀಮಿಯಂ ಡ್ಯೂ
- ಬೋನಸ್ ಮಾಹಿತಿ
- ಪಾಲಿಸಿ ಸ್ಥಿತಿಗತಿ
- ಸಾಲದ ಅರ್ಹತೆ ಕೊಟೇಶನ್
- ಸಾಲದ ಮರುಪಾವತಿ ಕೊಟೇಶನ್
- ಸಾಲದ ಬಡ್ಡಿ ಬಾಕಿ
- ಪ್ರೀಮಿಯಂ ಪೇಯ್ಡ್ ಸರ್ಟಿಫಿಕೇಟ್
- ಯುಎಲ್ಐಪಿ – ಸ್ಟೇಟ್ಮೆಂಟ್ ಆಫ್ ಯೂನಿಟ್ಸ್
- ಎಲ್ಐಸಿ ಸೇವೆಗಳ ಲಿಂಕ್ಗಳು
- ಆಪ್ಟ್ ಇನ್/ಆಪ್ಟ್ ಔಟ್ ಸೇವೆಗಳು
- ಎಂಡ್ ದಿ ಕಾನ್ವರ್ಸೇಷನ್
ಎಲ್ಐಸಿ ಆನ್ಲೈನ್ ಪೋರ್ಟಲ್ನಲ್ಲಿ ನೋಂದಣಿ ಮಾಡುವುದು ಹೇಗೆ?
- www.licindia.in ತಾಣಕ್ಕೆ ಭೇಟಿ ನೀಡಿ
- ‘ಕಸ್ಟಮರ್ ಪೋರ್ಟಲ್’ ಆಯ್ಕೆ ಕ್ಲಿಕ್ ಮಾಡಿ.
- ಹೊಸ ಬಳಕೆದಾರರಾಗಿದ್ದಲ್ಲಿ ‘ನ್ಯೂ ಯೂಸರ್’ ಕ್ಲಿಕ್ ಮಾಡಿ. ಸಂಬಂಧಪಟ್ಟ ಎಲ್ಲ ವಿವರಗಳನ್ನು ನಮೂದಿಸಿ.
- ಯೂಸರ್ ಐಡಿ ಹಾಗೂ ಪಾಸ್ವರ್ಡ್ ಆಯ್ಕೆ ಮಾಡಿ ವಿವರಗಳನ್ನು ಸಬ್ಮಿಟ್ ಮಾಡಿ.
- ಸರ್ ಐಡಿ ಬಳಸಿ ಪೋರ್ಟಲ್ಗೆ ಲಾಗಿನ್ ಆಗಿ.
- ‘ಬೇಸಿಕ್ ಸರ್ವೀಸಸ್’ ಅಡಿಯಲ್ಲಿ ಕಾಣಿಸುವ ‘Add Policy’ ಆಯ್ಕೆಯನ್ನು ಕ್ಲಿಕ್ ಮಾಡಿ.
- ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ನಿಮ್ಮ ಎಲ್ಲ ಪಾಲಿಸಿಗಳ ವಿವರವನ್ನು ನಮೂದಿಸಿ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ