
ನವದೆಹಲಿ, ಆಗಸ್ಟ್ 9: ಮೆಟಾ (Meta) ಒಡೆತನದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ (WhatsApp), ಭಾರತದಲ್ಲಿ ತನ್ನ ಬಳಕೆದಾರರಿಗೆ ಜನ್ಮ ದಿನಾಂಕವನ್ನು (Date of Birth) ಸೇರಿಸಲು ಅವಕಾಶ ನೀಡುವ ಹೊಸ ಫೀಚರ್ ಅನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಭಾರತ ಸರ್ಕಾರ ಜಾರಿಗೆ ತರಲಿರುವ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ (DPDP) ಕಾಯ್ದೆಗೆ ಬದ್ಧವಾಗಿರಲು ಈ ಕ್ರಮ ಕೈಗೊಳ್ಳಲಾಗಿದೆ.
ಹುಟ್ಟಿದ ದಿನಾಂಕದ ಮಾಹಿತಿ: ಪ್ರಸ್ತುತ ಕೆಲ ಬಳಕೆದಾರರಿಗೆ ‘Add your date of birth’ ಎಂಬ ಪ್ರಾಂಪ್ಟ್ (Prompt) ಕಾಣಿಸಿಕೊಳ್ಳುತ್ತಿದ್ದು, ಬಳಕೆದಾರರು ತಮ್ಮ ವಯಸ್ಸನ್ನು ದೃಢೀಕರಿಸಲು ಇದು ಅವಕಾಶ ನೀಡುತ್ತದೆ. ಪರೀಕ್ಷೆಯ ಹಂತದಲ್ಲಿ ಈ ಮಾಹಿತಿಯನ್ನು ನೀಡುವುದು ಕಡ್ಡಾಯವಲ್ಲ. ಬಳಕೆದಾರರು ತಮ್ಮ ಹುಟ್ಟಿದ ದಿನಾಂಕವನ್ನು ನೀಡದೆಯೂ ವಾಟ್ಸಾಪ್ ಬಳಸುವುದನ್ನು ಮುಂದುವರಿಸಬಹುದು.
ಇದನ್ನೂ ಓದಿ: ಮಹೀಂದ್ರಾ ಗ್ರೂಪ್ನಿಂದ ಹೊಸ ವಿಮಾನ ಸಂಸ್ಥೆ; ನೋವಾವಾಯು ಏರೋಸ್ಪೇಸ್ ಕಂಪನಿ ನೊಂದಣಿ
ಬಳಕೆದಾರರ ವಯಸ್ಸಿನ ವಿವರಗಳು ಖಾಸಗಿಯಾಗಿದ್ದು, ಇದನ್ನು ಇತರ ಯಾವುದೇ ವಾಟ್ಸಾಪ್ ಬಳಕೆದಾರರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ ಎಂದು ಸಂಸ್ಥೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
DPDP ಕಾಯ್ದೆಯ ನಿಯಮ: ಭಾರತದ ಡಿಪಿಡಿಪಿ (DPDP) ಕಾಯ್ದೆಯ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವೈಯಕ್ತಿಕ ದತ್ತಾಂಶವನ್ನು ಬಳಸುವ ಡಿಜಿಟಲ್ ಪ್ಲಾಟ್ಫಾರ್ಮ್ಗಳು ಸೂಕ್ತ ವಯಸ್ಸು ದೃಢೀಕರಣ (Age-verification) ವ್ಯವಸ್ಥೆಯನ್ನು ಹೊಂದಿರಬೇಕಾಗುತ್ತದೆ.
ಇದನ್ನೂ ಓದಿ: ಎಂಡಿಆರ್ ಶುಲ್ಕ ಕೇವಲ ಶೇ. 0.04? ದೊಡ್ಡ ವ್ಯಾಪಾರಿಗಳಿಗೆ ಮಾತ್ರವಾ ಈ ಶುಲ್ಕ? ಯಾರು ದೊಡ್ಡ ವ್ಯಾಪಾರಿಗಳು?
ಪ್ರಸ್ತುತ ಈ ಫೀಚರ್ ಪರೀಕ್ಷಾ ಹಂತದಲ್ಲಿದ್ದು, ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:37 am, Sun, 9 August 26