UPA vs NDA: ಯುಪಿಎ 10 ವರ್ಷದ ಆಡಳಿತ ಮತ್ತು ಎನ್​ಡಿಎ 10 ವರ್ಷದ ಆಡಳಿತ; ಹಣಕಾಸು ಆದ್ಯತೆಗಳಲ್ಲಿ ಏನು ವ್ಯತ್ಯಾಸ?

Priorities of 2 governments: 2004ರಿಂದ 2014ರವರೆಗಿನ 10 ವರ್ಷದ ಯುಪಿಎ ಆಡಳಿತ ಮತ್ತು 2004ರಿಂದ 2024ರವರೆಗೆ 10 ವರ್ಷದ ಎನ್​ಡಿಎ ಆಡಳಿತದ ಬಗ್ಗೆ ಒಂದು ತುಲನೆ ಇಲ್ಲಿದೆ. ಯುಪಿಎ ಅವಧಿಯಲ್ಲಿ ಸರ್ಕಾರದ ಬಂಡವಾಳ ವೆಚ್ಚ ಕಡಿಮೆ ಆಗಿದ್ದರೆ ಸಬ್ಸಿಡಿಗಳಿಗೆ ಹೆಚ್ಚು ಆದ್ಯತೆ ಕೊಡಲಾಗಿತ್ತು. ಎನ್​ಡಿಎ ಅವಧಿಯಲ್ಲಿ ಸರ್ಕಾರದಿಂದ ಬಂಡವಾಳ ವೆಚ್ಚ ಹೆಚ್ಚಾಗಿದೆ. ಸಬ್ಸಿಡಿಗಳನ್ನು ಕ್ರಮೇಣವಾಗಿ ಕಡಿಮೆ ಮಾಡಿದೆ.

UPA vs NDA: ಯುಪಿಎ 10 ವರ್ಷದ ಆಡಳಿತ ಮತ್ತು ಎನ್​ಡಿಎ 10 ವರ್ಷದ ಆಡಳಿತ; ಹಣಕಾಸು ಆದ್ಯತೆಗಳಲ್ಲಿ ಏನು ವ್ಯತ್ಯಾಸ?
ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 01, 2024 | 11:48 AM

ನವದೆಹಲಿ, ಜನವರಿ 1: ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ (NDA government) ಎರಡು ಅವಧಿ ಪೂರ್ಣಗೊಳಿಸುತ್ತಿದೆ. ಹಿಂದಿನ ಯುಪಿಎ ಮೈತ್ರಿಕೂಟ ಕೂಡ 2004ರಿಂದ 2014ರವರೆಗೂ ಎರಡು ಅವಧಿ ಆಡಳಿತ ನಡೆಸಿತ್ತು. ಯುಪಿಎ 10 ವರ್ಷ, ಎನ್​ಡಿಎ 10 ವರ್ಷ ಆಡಳಿತದ ಬಗ್ಗೆ ತುಲನೆ ಮಾಡುವುದು ಕುತೂಹಲ ಮೂಡಿಸುತ್ತದೆ. ಇವೆರಡು ಮೈತ್ರಿಕೂಟಗಳ ಆಡಳಿತದಲ್ಲಿ ಒಂದು ಪ್ರಮುಖ ವ್ಯತ್ಯಾಸ ಕಂಡು ಬಂದಿರುವುದು ಹಣಕಾಸು ನಿರ್ವಹಣೆ ವಿಚಾರದಲ್ಲಿ. ದಿ ಪ್ರಿಂಟ್ ಜಾಲತಾಣದಲ್ಲಿ ಈ ಬಗ್ಗೆ ಒಂದು ತುಲನಾತ್ಮಕವಾಗಿ ಮಾಹಿತಿ ನೀಡಿರುವ ಪುಟ್ಟ ಲೇಖನ ಇತ್ತೀಚೆಗೆ ಪ್ರಕಟವಾಗಿದೆ. ಅದರ ಪ್ರಕಾರ, ಬಂಡವಾಳ ವೆಚ್ಚ (Capex- capital expenditure) ಮತ್ತು ಸಬ್ಸಿಡಿ ವಿಚಾರದಲ್ಲಿ ಎರಡೂ ಸರ್ಕಾರಗಳ ವಿಭಿನ್ನ ದೃಷ್ಟಿಕೋನ ವ್ಯಕ್ತವಾಗುತ್ತದೆ. 20 ವರ್ಷಗಳ ಅವಧಿಯ ಬಜೆಟ್​ಗಳನ್ನು ಅವಲೋಕಿಸಿ ಒಂದಷ್ಟು ಕುತೂಹಲಕಾರಿ ಮಾಹಿತಿಯನ್ನು ಹೆಕ್ಕಲಾಗಿದೆ.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಸರ್ಕಾರದ ಬಂಡವಾಳ ವೆಚ್ಚ ಕಡಿಮೆ ಆದರೆ, ಸಬ್ಸಿಡಿಗಳ ಪ್ರಮಾಣ ಹೆಚ್ಚಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಅವಧಿಯಲ್ಲಿ ಬಂಡವಾಳ ವೆಚ್ಚ ಹೆಚ್ಚಳವಾದರೆ, ಸಬ್ಸಿಡಿ ಪ್ರಮಾಣ ಗಣನೀಯವಾಗಿ ಇಳಿದಿದೆ.

ಇದನ್ನೂ ಓದಿ: FPI Investments: 2023ರಲ್ಲಿ ಭಾರತದ ಬಂಡವಾಳ ಮಾರುಕಟ್ಟೆಗೆ ಹರಿದುಬಂದಿದೆ ಭರಪೂರ ಎಫ್​ಪಿಐ ಹಣ; 2.4 ಲಕ್ಷ ಕೋಟಿ ರೂ ಹೂಡಿಕೆ

2023-24ರ ಹಣಕಾಸು ವರ್ಷದ ಅವಧಿಯಲ್ಲಿ ಸರ್ಕಾರದ ಬಂಡವಾಳ ವೆಚ್ಚವು ಅದರ ಒಟ್ಟಾರೆ ವೆಚ್ಚದ ಶೇ. 18.6ರಷ್ಟು ಇರಲಿದೆ. ಇದು ಕಳೆದ ಎರಡು ದಶಕದಲ್ಲೇ ಅತಿ ಹೆಚ್ಚಿನ ಕ್ಯಾಪಿಟಲ್ ಎಕ್ಸ್​ಪೆಂಡಿಚರ್ ಎನ್ನಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗ ಶುರುವಾದ 2020-21ರಿಂದಲೂ ಸರ್ಕಾರದಿಂದ ಬಂಡವಾಳ ವೆಚ್ಚ ಸತತವಾಗಿ ಏರುತ್ತಾ ಬಂದಿದೆ.

ಹಾಗೆಯೇ, ಸಾಂಕ್ರಾಮಿಕ ವರ್ಷ ಹೊರತುಪಡಿಸಿದರೆ ಸರ್ಕಾರದಿಂದ ಸಬ್ಸಿಡಿಗಳಿಗೆ ಆಗುತ್ತಿರುವ ವೆಚ್ಚ ಇಳಿಕೆ ಆಗುತ್ತಿದೆ. 2014-15ರಿಂದಲೂ ಈ ಟ್ರೆಂಡ್ ಇದೆ. ಗ್ಯಾಸ್ ಸಬ್ಸಿಡಿ ಇರಬಹುದು ಒಟ್ಟಾರೆ ಸಬ್ಸಿಡಿಗಳನ್ನು ಸರ್ಕಾರ ಕಡಿಮೆಗೊಳಿಸುತ್ತಿದೆ. ಆದರೆ, ಸಬ್ಸಿಡಿ ನೀಡುವಿಕೆಯಲ್ಲೂ ಕೆಲ ಆದ್ಯತೆಗಳನ್ನು ಅನುಸರಿಸುತ್ತಿದೆ. ಉದಾಹರಣೆಗೆ, ಎಲ್​ಪಿಜಿ ಸಬ್ಸಿಡಿ ವಿಚಾರ. ಸರ್ಕಾರ ಗೃಹಬಳಕೆಯ ಅನಿಲಕ್ಕೆ ನೀಡುವ ಸಬ್ಸಿಡಿ ಮೊತ್ತವನ್ನು 823 ಕೋಟಿ ರೂಗೆ ಇಳಿಸಿದೆ. ಆದರೆ, ಬಡವರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುವ ಉಜ್ವಲ ಗ್ಯಾಸ್ ಯೋಜನೆಗೆ ಸರ್ಕಾರ ಕೊಡುವ ಧನಸಹಾಯ ಅಥವಾ ಸಬ್ಸಿಡಿ 6,110 ಕೋಟಿ ರೂಗೆ ಏರಿಸಿದೆ.

ಇದನ್ನೂ ಓದಿ: Financial Changes: ಬ್ಯಾಂಕ್ ಲಾಕರ್​ನಿಂದ ಸಿಮ್ ಕಾರ್ಡ್​ವರೆಗೆ, ಜ. 1ರಿಂದ ಆಗುವ ಈ ಹಣಕಾಸು ಬದಲಾವಣೆಗಳು ತಿಳಿದಿರಲಿ

ಜಾಗತಿಕ ಆರ್ಥಿಕ ಹಿನ್ನಡೆಯ ನಡುವೆಯೂ ಭಾರತ ಉತ್ತಮ ಸಾಧನೆ ಮಾಡಲು ನೆರವಾದ ಹಲವು ಅಂಶಗಳಲ್ಲಿ ಬಂಡವಾಳ ವೆಚ್ಚವೂ ಒಂದು. ಸರ್ಕಾರದಿಂದ ಬಂಡವಾಳ ವೆಚ್ಚ ಹೆಚ್ಚಾಗಿದ್ದು ಆರ್ಥಿಕತೆಗೆ ಪುಷ್ಟಿ ಕೊಟ್ಟಿದೆ. ಅದೇ ವೇಳೆ ಸಬ್ಸಿಡಿ ಹೊರೆ ಸರ್ಕಾರದ ಹೆಗಲಿಂದ ಕೆಳಗೆ ಇಳಿದಿದ್ದು ಇನ್ನಷ್ಟು ಅನುಕೂಲ ಮಾಡಿಕೊಟ್ಟಿತು ಎಂಬುದು ಆರ್ಥಿಕ ತಜ್ಞರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್