AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wholesale Price Inflation: ಸಗಟು ದರ ಹಣದುಬ್ಬರ ಜುಲೈ ತಿಂಗಳಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ

ಸಗಟು ದರ ಆಧಾರಿತ ಹಣದುಬ್ಬರ ದರವು ಜುಲೈ ತಿಂಗಳಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಆಗಿ 11.6% ತಲುಪಿದೆ.

Wholesale Price Inflation: ಸಗಟು ದರ ಹಣದುಬ್ಬರ ಜುಲೈ ತಿಂಗಳಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Aug 16, 2021 | 2:12 PM

ಭಾರತದ ಸಗಟು ದರ ಹಣದುಬ್ಬರವು (wholesale price inflation) ಜುಲೈ ತಿಂಗಳಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದ್ದು, ಸತತ ನಾಲ್ಕನೇ ತಿಂಗಳು ಎರಡಂಕಿಯಲ್ಲಿ ಇದೆ. ಉತ್ಪಾದನಾ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿದ್ದರೂ ಇಂಧನ ಮತ್ತು ಆಹಾರ ಅಗ್ಗವಾಗಿದೆ. ಸರ್ಕಾರವು ಬಿಡುಗಡೆ ಮಾಡಿದ ಸಗಟು ದರ ಸೂಚ್ಯಂಕ (WPI) ಆಧಾರಿತ ಹಣದುಬ್ಬರವು ಒಂದು ತಿಂಗಳ ಹಿಂದೆ ಶೇ 12.07ರಷ್ಟು ಇದ್ದದ್ದು ಜುಲೈನಲ್ಲಿ ಶೇ 11.6ಕ್ಕೆ ಕುಸಿದಿದೆ. ಸತತವಾಗಿ ಮೂರನೇ ತಿಂಗಳು ಆಹಾರ ಹಣದುಬ್ಬರ ದರವು ಕಡಿಮೆ ಆಗಿ, ಜುಲೈನಲ್ಲಿ ಶೇ 0 ತಲುಪಿದೆ. ಇಂಧನ ಹಣದುಬ್ಬರವು ಶೇ 26ಕ್ಕೆ ಇಳಿದಿದೆ. ಆದರೂ ಉತ್ಪಾದನಾ ವಸ್ತುಗಳ ಹಣದುಬ್ಬರ ದರವು ಕಳೆದ ತಿಂಗಳು ಶೇ 10.88ರಷ್ಟು ಇದ್ದದ್ದು ಜುಲೈನಲ್ಲಿ ಶೇ 11.2ಕ್ಕೆ ಹೆಚ್ಚಳವಾಗಿದೆ. ಆರ್ಥಿಕ ಚೇತರಿಕೆಯಲ್ಲಿ ಚಲನೆ ಕಂಡುಬಂದ ಮೇಲೆ ಉತ್ಪಾದಕರಿಗೆ ದರ ಹೆಚ್ಚಳ ಆಗುತ್ತಿರುವುದರ ಸೂಚನೆ ಇದಾಗಿದೆ.

ಜೂನ್​ ತಿಂಗಳಲ್ಲಿ ಶೇ 6.26ರಷ್ಟು ಇದ್ದ ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ ಶೇ 5.59ಕ್ಕೆ ಬಂದಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಮತ್ತು ಕೇಂದ್ರ ಬ್ಯಾಂಕ್ ಎರಡಕ್ಕೂ ನಿರಾಳವಾದಂತಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (ಆರ್​ಬಿಐ) ಈ ತಿಂಗಳ ಆರಂಭದಲ್ಲಿ ಘೋಷಿಸಿದ ಹಣಕಾಸು ನೀತಿ ದರದ ವೇಳೆ ಸತತ ಏಳನೇ ತಿಂಗಳು ಬಡ್ಡಿ ದರವನ್ನು ಯಥಾ ಸ್ಥಿತಿ ಉಳಿಸಿದೆ. ಹಣಕಾಸು ನೀತಿ ಸಮಿತಿಯ ಸದಸ್ಯರ ಮಧ್ಯೆ ಬಡ್ಡಿಯನ್ನು ಯಥಾ ಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಅಭಿಪ್ರಾಯ ಭೇದ ಇದ್ದ ಹೊರತಾಗಿಯೂ ಯಥಾ ಸ್ಥಿತಿ ಕಾಯ್ದುಕೊಳ್ಳಲಾಯಿತು.

ಹಣಕಾಸು ನೀತಿ ಸಮಿತಿಯು (MPC) ರೆಪೋ ದರ (ಆರ್​ಬಿಐನಿಂದ ವಾಣಿಜ್ಯ ಬ್ಯಾಂಕ್​ಗಳು ಪಡೆಯುವ ಸಾಲಕ್ಕೆ ವಿಧಿಸುವ ಬಡ್ಡಿ ದರ) ಶೇ 4ರ ದರದಲ್ಲಿ ಹಾಗೇ ಉಳಿಸಿಕೊಳ್ಳಲಾಗಿದೆ. 5-1ರ ಮತದಲ್ಲಿ ಸಮಿತಿಯ ಸದಸ್ಯರು ಈ ನಿರ್ಧಾರಕ್ಕೆ ಒಪ್ಪಿಕೊಂಡಿದ್ದರು. ಹಣದುಬ್ಬರ ದರದ ಏರಿಕೆಯ ಹೊರತಾಗಿಯೂ ಬೆಳವಣಿಗೆಯು ಕೇಂದ್ರ ಬ್ಯಾಂಕ್​ನ ಪಾಲಿಗೆ ಆದ್ಯತೆಯಾಗಿದೆ. ಕೊರೊನಾ ಮೂರನೇ ಅಲೆಯ ಹಿನ್ನೆಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್​ಬಿಐನಿಂದ ಭಾರತದ ಬೆಳವಣಿಗೆ ದರದ ಅಂದಾಜು ಶೇ 9.5 ಎನ್ನಲಾಗಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿರುವಂತೆ, ಕೊರೊನಾ ಎರಡನೇ ಅಲೆ ತಹಬದಿಗೆ ಬರುತ್ತಾ ಮತ್ತೆ ಆರ್ಥಿಕತೆ ಆರಂಭವಾಗುತ್ತಿದ್ದಂತೆ ದೇಶೀಯ ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಬರುತ್ತಿವೆ. ಆದರೆ ಈ ಚೇತರಿಕೆಗೆ ನೀತಿ ನಿರೂಪಕರ ಬೆಂಬಲವೂ ಬೇಕು ಎಂದಿದ್ದಾರೆ.

ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು? ಒಂದು ಉತ್ಪನ್ನ ಅಥವಾ ವಸ್ತು ಅಂತಿಮವಾಗಿ ಗ್ರಾಹಕರನ್ನು ತಲುಪುವುದಕ್ಕೆ ಮುಂಚೆ ವಿವಿಧ ಹಂತಗಳನ್ನು ದಾಟಿ ಬರುತ್ತದೆ. ಮೊದಲಿಗೆ ಉತ್ಪಾದಕರು, ಅಂದರೆ ಆ ವಸ್ತುವಿನ ತಯಾರಕರು. ಆ ನಂತರದಲ್ಲಿ ಹೋಲ್​ಸೇಲರ್ (ಸಗಟು ಮಾರಾಟಗಾರರು). ಅದಾದ ಮೇಲೆ ಚಿಲ್ಲರೆ ಮಾರಾಟಗಾರರು (ರೀಟೇಲರ್). ಕೊನೆಗೆ ಗ್ರಾಹಕರನ್ನು ತಲುಪುತ್ತದೆ. ಇದಕ್ಕೆ ಇನ್ನೂ ಒಂದೆರಡು ಪದರ ಸೇರ್ಪಡೆ ಕೂಡ ಆಗಬಹುದು. ಹೀಗೆ ವಿವಿಧ ಹಂತವನ್ನು ದಾಟುವಾಗ ವಿಧಿಸುವ ಶುಲ್ಕ ಅಥವಾ ದರ ಕೂಡ ಬದಲಾಗುತ್ತಾ ಹೋಗುತ್ತದೆ. ಇದನ್ನು ಸೂಚಿಸುವುದಕ್ಕೆ ಒಂದು ಮಾನದಂಡ ಬೇಕಲ್ಲಾ, ಅದನ್ನು ಸಗಟು ದರ ಸೂಚ್ಯಂಕ ಎನ್ನಲಾಗುತ್ತದೆ.

ಇನ್ನು ಉತ್ಪನ್ನಗಳು, ವಸ್ತು, ಸೇವೆಗಳ ದರ ಎಷ್ಟು ಏರಿಕೆ ಆಗಿದೆ ಎಂಬುದನ್ನು ಸೂಚಿಸುವುದಕ್ಕೆ ಹಣದುಬ್ಬರ ಎನ್ನಲಾಗುತ್ತದೆ. ಅಲ್ಲಿಗೆ ಈ ಎರಡು ವ್ಯಾಖ್ಯಾನವನ್ನು ಒಗ್ಗೂಡಿಸಿದರೆ ನಿಮಗೆ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು ಅಂತ ಗೊತ್ತಾಗುತ್ತದೆ. ಸರಿ, ಇದರಿಂದ ನಮ್ಮ ಮೇಲೆ ಏನು ಪರಿಣಾಮ ಅಂದರೆ, ದಿನ ಬಳಕೆಯ ವಸ್ತು, ಸೇವೆ, ಉತ್ಪನ್ನಗಳು ಸಿಕ್ಕಾಪಟ್ಟೆ ಜಾಸ್ತಿ ಆಗಿವೆ ಅಂತ ಅಂದುಕೊಳ್ಳುತ್ತಿರುತ್ತೇವಲ್ಲಾ ಅಥವಾ ಪರವಾಗಿಲ್ಲ ಮುಂಚೆಗಿಂತ ಈಗ ಸ್ವಲ್ಪ ಬೆಲೆ ಇಳಿದಿದೆ ಅಂತ ನಿರಾಳ ಆಗುತ್ತೇವಲ್ಲಾ ಅದಕ್ಕೆ ಕಾರಣ ತಿಳಿಯುವುದು ಈ ಅಂಕಿ- ಅಂಶದ ಮೂಲಕವಾಗಿ.

ಇದನ್ನೂ ಓದಿ: Retail Inflation: ಜುಲೈ ತಿಂಗಳ ಚಿಲ್ಲರೆ ಹಣದುಬ್ಬರ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಶೇ 5.59ಕ್ಕೆ

(Wholesale Price Index Inflation Eased In July Month Stands At 11.6 Percent)

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!