
ನವದೆಹಲಿ, ಜನವರಿ 11: ಸ್ವಿಗ್ಗಿ, ಜೊಮಾಟೋ ಇತ್ಯಾದಿ ಫುಡ್ ಆ್ಯಪ್ಗಳು (food delivery platforms) ಜನರ ಮನೆ ಬಾಗಿಲಿಗೆ ಆಹಾರವನ್ನು ತಂದೊದಗಿಸುವ ಸೇವೆ ನೀಡುತ್ತವೆ. ಪ್ಲಾಟ್ಫಾರ್ಮ್ ಕಾರ್ಯನಿರ್ವಹಣೆ ಸೇರಿದಂತೆ ವಿವಿಧ ವೆಚ್ಚಗಳನ್ನು ಭರಿಸಲು ವಿವಿಧ ಶುಲ್ಕ ಸೇರಿ ಹೆಚ್ಚಿನ ಹಣವನ್ನು ಗ್ರಾಹಕರಿಗೆ ವಿಧಿಸಲಾಗುತ್ತದೆ. ಆದರೆ, ರೆಸ್ಟೋರೆಂಟ್ಗೆ ಹೋಗಿ ಊಟ ಮಾಡುವುದಕ್ಕೂ ಆನ್ಲೈನ್ನಲ್ಲಿ ಆರ್ಡರ್ ಮಾಡಿ ಊಟ ಮಾಡುವುದಕ್ಕೂ ಬೆಲೆಯಲ್ಲಿ ನೂರಾರು ರೂ ವ್ಯತ್ಯಾಸ ಆಗಿ ಹೋದರೆ? ಆನ್ಲೈನ್ನಲ್ಲಿ ಇಂಥದ್ದುಂದು ಡಿಬೇಟ್ ನಡೆದಿದೆ.
ನಳಿನಿ ಉನಾಗರ್ ಎಂಬಾಕೆ ಜೊಮಾಟೋ ಹೇಗೆ ವಿಪರೀತ ಬೆಲೆ ಹಾಕುತ್ತಿದೆ ಎಂದು ವಿವರಿಸಿ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾಳೆ. ರೆಸ್ಟೋರೆಂಟ್ನಲ್ಲಿ 320 ರೂ ಬೆಲೆಯ ಆಹಾರವು ಜೊಮಾಟೊದಲ್ಲಿ 655 ರೂ ಆಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗ್ರೋಕ್ ಅಶ್ಲೀಲ ಅವಾಂತರಗಳು; ತಪ್ಪೊಪ್ಪಿಕೊಂಡು ಭಾರತ ಸರ್ಕಾರದ ಆದೇಶ ಪಾಲಿಸಿದ ಎಕ್ಸ್
ಒಂದೇ ಆಹಾರವನ್ನು ರೆಸ್ಟೋರೆಂಟ್ ಹಾಗೂ ಜೊಮಾಟೊ ಎರಡರಲ್ಲೂ ಬೆಲೆ ಹೋಲಿಕೆ ಮಾಡಿದ್ದಾರೆ. ಚೈನೀಸ್ ಭೇಲ್ ಮತ್ತು ಮಂಚೂರಿಯನ್ ಅನ್ನು ರೆಸ್ಟೋರೆಂಟ್ನಿಂದ ಪಾರ್ಸಲ್ ಕಟ್ಟಿಸಿಕೊಂಡು, ಅದರ ಬಿಲ್ 320 ರೂ ಆಗಿದೆ. ಅದೇ ರೆಸ್ಟೋರೆಂಟ್ನಲ್ಲಿ ಅದೇ ಚೈನೀಸ್ ಭೇಲ್ ಮತ್ತು ಮಂಚೂರಿಯನ್ ಅನ್ನು ಬುಕ್ ಮಾಡಿದಾಗ ಅವುಗಳ ಬೆಲೆ 600 ರೂ ಸೇರಿ ಒಟ್ಟು ಬಿಲ್ 655 ರು ಆಗಿದೆ. ಇದರ ಫೋಟೋವನ್ನು ನಳಿನಿ ಅವರು ಶೇರ್ ಮಾಡಿದ್ದಾರೆ.
‘ಜೊಮಾಟೊದವರೆ, ನನ್ನ ಆರ್ಡರ್ನ ವಾಸ್ತವ ಬೆಲೆ 320 ರೂ. ಆದರೆ, ಜೊಮಾಟೊದಲ್ಲಿ 655 ರು ಆಗಿದೆ. ಎಲ್ಲಾ ಡಿಸ್ಕೌಂಟ್ಗಳನ್ನು ಹಾಕಿಯೂ ನಾನು 550 ರೂ ಪಾವತಿಸಬೇಕು. ಇಷ್ಟು ಬೆಲೆ ವ್ಯತ್ಯಾಸ ನಿಜಕ್ಕೂ ಅಸಹಜ. ಗ್ರಾಹಕರಿಂದ ಸಿಕ್ಕಾಪಟ್ಟೆ ವಸೂಲಿ ಮಾಡಲಾಗುತ್ತಿದೆ’ ಎಂದು ಈ ಮಹಿಳೆ ಟ್ವೀಟ್ ಮಾಡಿದ್ದಾರೆ.
ಇವರ ಟ್ವೀಟ್ಗೆ ಜೊಮಾಟೊ ಪ್ರತಿಕ್ರಿಯಿಸಿದೆ. ನಮ್ಮ ಪ್ಲಾಟ್ಫಾರ್ಮ್ನಲ್ಲಿ ಬೆಲೆಯನ್ನು ನಿರ್ಧರಿಸುವುದು ರೆಸ್ಟೋರೆಂಟ್ ಪಾರ್ಟ್ನರ್ಗಳೇ. ಗ್ರಾಹಕರು ಹಾಗು ರೆಸ್ಟೋರೆಂಟ್ಗಳಿಗೆ ಮಧ್ಯವರ್ತಿಯಾಗಷ್ಟೇ ಜೊಮಾಟೊ ಕೆಲಸ ಮಾಡುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಬಿಲ್ನಲ್ಲಿ ನಕಲಿ ಜಿಎಸ್ಟಿ ನಂಬರ್ ಕೊಟ್ಟು ಸರ್ಕಾರಕ್ಕೂ, ಗ್ರಾಹಕರಿಗೂ ಯಾಮಾರಿಸುತ್ತಾರೆ; ಅಸಲಿ ಪತ್ತೆ ಹಚ್ಚೋದು ಹೇಗೆ?
ಇದು ಆನ್ಲೈನ್ನಲ್ಲಿ ಚರ್ಚೆ ಹುಟ್ಟುಹಾಕಿದೆ. ರೆಸ್ಟೋರೆಂಟ್ ಪ್ಲಾಟ್ಫಾರ್ಮ್ಗಳಿಂದ ಜೊಮಾಟೊ ಶೇ. 35ರಷ್ಟು ಕಮಿಷನ್ ಪಡೆಯುತ್ತದೆ ಎಂದು ಹಲವರು ಎತ್ತಿತೋರಿಸಿದ್ದಾರೆ.
ನಳಿನಿ ಅವರ ಟ್ವೀಟ್
ಪ್ಲಾಟ್ಫಾರ್ಮ್ಗಳಲ್ಲಿ ಕಾಣುವ ಆಹಾರಗಳ ಬೆಲೆಯನ್ನು ನಿರ್ಧರಿಸುವುದು ರೆಸ್ಟೋರೆಂಟ್ಗಳೇ. ಆದರೆ, ಭಾರೀ ದೊಡ್ಡ ಮೊತ್ತದ ಕಮಿಷನ್ ಅನ್ನು ಸರಿದೂಗಿಸಲು ರೆಸ್ಟೋರೆಂಟ್ಗಳು ಬೆಲೆ ಏರಿಸುತ್ತವೆ. ರೆಸ್ಟೋರೆಂಟ್ ಬೆಲೆ ಏರಿಸಿದರೆ ಅದರಿಂದಲೂ ಫುಡ್ ಪ್ಲಾಟ್ಫಾರ್ಮ್ಗಳಿಗೆ ಲಾಭವಾಗುತ್ತದೆ. ಅಂತಿಮವಾಗಿ ಗ್ರಾಹಕರಿಗೆ ಹೊರೆ ಆಗುವುದು ಎಂದು ಹಲವು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ