65,000 ಕೋಟಿ ರೂ ಮೌಲ್ಯದ ಕಂಪನಿಯ ಸಿಇಒಗೆ ಇನ್ಸ್​​ಟಾಗ್ರಾಮ್ ಬಳಸಲು ಕನ್​ಫ್ಯೂಷನ್

|

Updated on: Mar 10, 2025 | 5:48 PM

Zerodha CEO Nithin Kamath: ಭಾರತದ ಅತಿದೊಡ್ಡ ಸ್ಟಾಕ್ ಬ್ರೋಕಿಂಗ್ ಕಂಪನಿಯಾದ ಝೀರೋಧದ ಸಹ-ಸಂಸ್ಥಾಪಕ ನಿತಿನ್ ಕಾಮತ್ ತಮ್ಮ ಎಕ್ಸ್​​ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ತನಗೆ ಇನ್ಸ್​ಟಾಗ್ರಾಂ ಬಳಕೆ ಮಾಡುವುದು ಬಹಳ ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿರುವ ಅವರು, ಸ್ಕ್ರೀನ್​ಶಾಟ್ ಅನ್ನೂ ಲಗತ್ತಿಸಿದ್ದಾರೆ. ತಮ್ಮ ತಂಡದವರೊಂದಿಗೆ ಇನ್ಸ್​​ಟಾ ಬಳಕೆ ಬಗ್ಗೆ ಮಾಹಿತಿ ಪಡೆಯುತ್ತಿರುವ ಸಂವಾದವು ಈ ಸ್ಕ್ರೀನ್ ಶಾಟ್​​ನಲ್ಲಿ ಇದೆ.

65,000 ಕೋಟಿ ರೂ ಮೌಲ್ಯದ ಕಂಪನಿಯ ಸಿಇಒಗೆ ಇನ್ಸ್​​ಟಾಗ್ರಾಮ್ ಬಳಸಲು ಕನ್​ಫ್ಯೂಷನ್
ಇನ್ಸ್​​ಟಾಗ್ರಾಮ್
Follow us on

ಬೆಂಗಳೂರು, ಮಾರ್ಚ್ 10: ಷೇರು ಬಜಾರಿನಲ್ಲಿ ಸಾಕಷ್ಟು ಹೆಸರು ಮಾಡಿದ, ಭಾರತದ ಅಗ್ರಗಣ್ಯ ಸ್ಟಾಕ್ ಬ್ರೋಕರ್ ಎನಿಸಿರುವ ಝೀರೋಧ (Zerodha) ಸಂಸ್ಥೆಯನ್ನು ಹುಟ್ಟುಹಾಕಿದ ವ್ಯಕ್ತಿಗೆ ಭಾರತದ ಅತ್ಯಂತ ಜನಪ್ರಿಯವಾಗಿರುವ ಸೋಷಿಯಲ್ ಮೀಡಿಯಾ ಪ್ಲಾಟ್​​ಫಾರ್ಮ್ ಬಳಸಲು ಕಷ್ಟವಂತೆ, ಕನ್​ಫ್ಯೂಷನ್ ಅಂತೆ. ಬರೋಬ್ಬರಿ 65,000 ಕೋಟಿ ರೂ ಮೌಲ್ಯದ ಝೀರೋಧದ ವ್ಯವಹಾರವನ್ನು ನೀರು ಕುಡಿದಂತೆ ನಿಭಾಯಿಸುವ ನಿತಿನ್ ಕಾಮತ್ ಅವರಿಗೆ ಇನ್ಸ್​ಟಾಗ್ರಾಮ್ ಪೋಸ್ಟ್, ಇನ್ಸ್​​ಟಾ ಸ್ಟೋರಿಗಳು ಕಬ್ಬಿಣದ ಕಡಲೆಯಂತೆ ಭಾಸವಾಗುತ್ತಿವೆಯಂತೆ. ಹಾಗಂತ ನಿತಿನ್ ಕಾಮತ್ ಅವರೇ ಸ್ವತಃ ಇದನ್ನು ಹೇಳಿಕೊಂಡಿದ್ದಾರೆ. ತಮ್ಮ ತಂಡದವರ ಜೊತೆ ನಡೆಸಿದ ಸಂವಾದದ ಸ್ಕ್ರೀನ್​ಶಾಟ್ ಅನ್ನು ಎಕ್ಸ್ ಪ್ಲಾಟ್​​ಫಾರ್ಮ್​​ನಲ್ಲಿ ಹಂಚಿಕೊಂಡಿದ್ದಾರೆ.

50ರ ದಶಕಕ್ಕೆ ಪೂರ್ವದಲ್ಲಿ ಹುಟ್ಟಿದ ಹೆಚ್ಚಿನ ಜನರಿಗೆ ಈಗಿನ ಸ್ಮಾರ್ಟ್​​ಫೋನ್​​ಗಳನ್ನು ಬಳಸುವುದು ಕಷ್ಟ. ಹೆಚ್ಚಿನ ಜನರು ತಮ್ಮ ಮುಂದಿನ ತಲೆಮಾರಿನಲ್ಲಿ ಹುಟ್ಟಿದ ತಂತ್ರಜ್ಞಾನಗಳನ್ನು ಕಲಿಯವುದು ನಿಧಾನ. ಅದು ಮನುಷ್ಯನ ಸಹಜ ದೌರ್ಬಲ್ಯ ಅಥವಾ ಗುಣ ಎನ್ನುತ್ತಾರೆ ತಜ್ಞರು. ಅದೇನೇ ಇರಲಿ, ಇನ್ನೂ 45 ವರ್ಷದ ಆಸುಪಾಸಿನ ವಯಸ್ಸಿನ ನಿತಿನ್ ಕಾಮತ್ ಅವರಿಗೆ ಇನ್ಸ್​​ಟಾ ಬಹಳ ಕನ್​ಫ್ಯೂಷನ್ ಆಗಿರುವುದು ನೆಟ್ಟಿಗರಲ್ಲೂ ಕನ್​ಫ್ಯೂಷನ್ ಹುಟ್ಟುಹಾಕಿದೆ.

ಇದನ್ನೂ ಓದಿ
W ಆಕಾರದಲ್ಲಿ ಚಲಿಸುತ್ತಿದೆಯಾ ನಿಫ್ಟಿ? ಹಾಗಂದರೇನು?
ಚಿನ್ನದ ಹೊಳಪಿನ ಹಿಂದೆ ತಳಮಳ
ಡೊನಾಲ್ಡ್ ಟ್ರಂಪ್​ ವಿರುದ್ಧ ಕಿಡಿಕಾರಿದ ಬಾಬಾ ರಾಮದೇವ್
ಶಿಸ್ತುಬದ್ಧ ಹೂಡಿಕೆದಾರರಿಗೆ ಇದು ಅಮೃತಕಾಲ: ತಜ್ಞರು

‘ಇನ್ಸ್​ಟಾಗ್ರಾಮ್ ಬಳಕೆ ಮಾಡುವುದನ್ನು ಕಲಿಯಲು ಯತ್ನಿಸುತ್ತಿದ್ದೇನೆ. ಇದನ್ನು ಬಳಸಲು ನನಗೆ ವಯಸ್ಸು ಮೀರಿ ಹೋಯಿತಾ, ಅಥವಾ ಅದು ತೀರಾ ಸಂಕೀರ್ಣವಾಗಿದೆಯಾ’ ಎಂದು ನಿತಿನ್ ಕಾಮತ್ ತಮ್ಮ ಎಕ್ಸ್ ಪೋಸ್ಟ್​​ನಲ್ಲಿ ಕೇಳಿದ್ದಾರೆ. ತಮ್ಮ ತಂಡದವರು ತನಗೆ ಇನ್ಸ್​ಟಾ ಬಳಕೆ ಬಗ್ಗೆ ಕಲಿಸಲು ಯತ್ನಿಸುತ್ತಿರುವಾಗ, ಆ ಸಂವಾದದ ಸ್ಕ್ರೀನ್ ಶಾಟ್​​ಗಳನ್ನು ಕಾಮತ್ ತಮ್ಮ ಪೋಸ್ಟ್​​ಗೆ ಲಗತ್ತಿಸಿದ್ದಾರೆ.

ಇದನ್ನೂ ಓದಿ: ಭಾರತದ ಷೇರುಪೇಟೆ W ಆಕಾರದಲ್ಲಿ ಚೇತರಿಕೆ ಕಾಣಲಿದೆಯಂತೆ; ಏನಿದು ಡಬ್ಲ್ಯು ಶೇಪ್ ರಿಕವರಿ?

ನಿತಿನ್ ಕಾಮತ್ ಅವರ ಪ್ರಾಮಾಣಿಕತೆ, ನೈಜತೆ ಬಗ್ಗೆ ಸಾಕಷ್ಟು ಜನರು ಸಖೇದಾಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ಸ್​ಟಾ ಬಳಕೆ ಸಂಕೀರ್ಣವಾಗಿದೆ ಎಂದು ಕೆಲವರು ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ, ಇನ್ಸ್​ಟಾ ಬಳಕೆ ಮಾಡುತ್ತಾ ಹೋದಂತೆ ಸುಲಭ ಎನಿಸುತ್ತದೆ ಎಂದು ಇನ್ನೂ ಕೆಲವರು ಸಲಹೆ ನೀಡಿದ್ದಾರೆ.

ಇನ್ಸ್​​ಟಾಗ್ರಾಮ್ ಪೋಸ್ಟ್, ಸ್ಟೋರಿ ಮತ್ತು ರೀಲ್ಸ್

ಇನ್ಸ್​ಟಾಗ್ರಾಮ್​ನಲ್ಲಿ ನಿತಿನ್ ಕಾಮತ್ ಅವರಿಗೆ ಗೊಂದಲ ಮೂಡಿಸಿರುವುದು ಇನ್ಸ್​ಟಾದ ಪೋಸ್ಟ್ ಮತ್ತು ಸ್ಟೋರಿ ನಡುವಿನ ವ್ಯತ್ಯಾಸ ಮತ್ತು ಅವುಗಳನ್ನು ಶೇರ್ ಮಾಡುವಾಗಿನ ಗೊಂದಲ.

ಇನ್ಸ್​ಟಾಗ್ರಾಮ್​ನಲ್ಲಿ ಮೂರು ರೀತಿಯಲ್ಲಿ ನೀವು ಕಂಟೆಂಟ್ ಅಪ್​ಲೋಡ್ ಮಾಡಬಹುದು. ಇನ್ಸ್​​ಟಾ ಪೋಸ್ಟ್, ಇನ್ಸ್​ಟಾ ಸ್ಟೋರಿ ಮತ್ತು ಇನ್ಸ್​​ಟಾ ರೀಲ್ಸ್. ಪೋಸ್ಟ್​​ನಲ್ಲಿ 60 ನಿಮಿಷದವರೆಗೂ ವಿಡಿಯೋಗಳನ್ನು ಹಾಕಬಹುದು. 10 ಫೋಟೋಗಳನ್ನು ಪೋಸ್ಟ್ ಮಾಡಬಹುದು. ಇದು ಸ್ನೇಹಿತರು, ಫಾಲೋಯರ್​ಗಳ ಟೈಮ್​ಲೈನ್​ನಲ್ಲಿ ಕಾಣಿಸುತ್ತದೆ.

ಇದನ್ನೂ ಓದಿ: ಕಷ್ಟಕಾಲಕ್ಕೆ ಬೇಕು ಚಿನ್ನ; ಜಗತ್ತಿನ ಸೆಂಟ್ರಲ್ ಬ್ಯಾಂಕುಗಳಿಗೂ ನಮ್ಮಜ್ಜಿ ಬುದ್ದಿ..!

ಇನ್ಸ್​ಟಾಗ್ರಾಮ್ ಸ್ಟೋರಿ ಎಂಬುದು ಕೆಲವೇ ಸೆಕೆಂಡ್​​ಗಳ ಕ್ಲಿಪ್ ಮಾತ್ರ ಹಾಕಬಹುದು. ಇನ್ನು, ಇನ್ಸ್​ಟಾಗ್ರಾಮ್ ರೀಲ್ಸ್ ಬಹಳ ಜನಪ್ರಿಯವಾಗಿರುವ ಪೋಸ್ಟ್. ಇದು 30 ಸೆಕೆಂಡ್​​ಗಳವರೆಗಿನ ವಿಡಿಯೋವನ್ನು ಹಾಕಬಹುದು. ಸ್ನೇಹಿತು, ಫಾಲೋಯರ್ಸ್ ಅಲ್ಲದೇ ಹೆಚ್ಚಿನ ಜನರನ್ನು ಇವು ತಲುಪಬಲ್ಲುವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:40 pm, Mon, 10 March 25