AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಝೋಹೋ ಅರಟ್ಟೈ, ಗೌಪ್ಯತೆ, ಸೀಕ್ರೆಟ್ ಲವರ್ ಮತ್ತು ಸೀಕ್ರೆಟ್ ರೆಬೆಲ್ ಪ್ರಸಂಗ

Zoho's Sridhar Vembu explains privacy: ಝೋಹೋ ಸಹ-ಸಂಸ್ಥಾಪಕ ಶ್ರೀಧರ್ ವೆಂಬು ಅವರು ತಮ್ಮ ಕಂಪನಿಯ ಅರಟ್ಟೈ ಆ್ಯಪ್​ನಲ್ಲಿ ಗೌಪ್ಯತೆಗೆ ಒತ್ತು ಕೊಡಲಾಗುತ್ತದೆ ಎಂದಿದ್ದಾರೆ. ಗೌಪ್ಯತೆ ಎಂದರೆ ಏನು ಎಂದು ಅವರು ಮೂರು ಉದಾಹರಣೆಗಳಲ್ಲಿ ವ್ಯಾಖ್ಯಾನಿಸಿದ್ದಾರೆ. ಸೀಕ್ರೆಟ್ ಲವರ್, ಆ್ಯಡ್ ವಯೊಲೇಶನ್ ಮತ್ತು ಸೀಕ್ರೆಟ್ ರೆಬೆಲ್ ಪ್ರಕರಣಗಳೆಂದು ವರ್ಗೀಕರಿಸಿ ವಿವರಣೆ ಕೊಟ್ಟಿದ್ದಾರೆ.

ಝೋಹೋ ಅರಟ್ಟೈ, ಗೌಪ್ಯತೆ, ಸೀಕ್ರೆಟ್ ಲವರ್ ಮತ್ತು ಸೀಕ್ರೆಟ್ ರೆಬೆಲ್ ಪ್ರಸಂಗ
ಶ್ರೀಧರ್ ವೆಂಬು
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 08, 2025 | 6:09 PM

Share

ಚೆನ್ನೈ, ಅಕ್ಟೋಬರ್ 8: ವಾಟ್ಸಾಪ್​ಗೆ ಭಾರತದ ಪರ್ಯಾಯ ಮೆಸೆಂಜರ್ ಪ್ಲಾಟ್​ಫಾರ್ಮ್ ಎನಿಸಿದ ಅರಟ್ಟೈ (Zoho Arattai) ಆ್ಯಪ್ ಸಾಕಷ್ಟು ಡೌನ್​ಲೋಡ್ ಆಗುತ್ತಿದೆ. ಬಳಕೆದಾರರ ಗೌಪ್ಯತೆ ಮತ್ತು ಖಾಸಗಿತ್ವಕ್ಕೆ ಧಕ್ಕೆ ತರದಂತೆ ನೋಡಿಕೊಳ್ಳುತ್ತೇವೆ ಎಂದು ಝೋಹೋದ ಸಹ-ಸಂಸ್ಥಾಪಕ ಮತ್ತು ಸಿಇಒ ಶ್ರೀಧರ್ ವೆಂಬು (Sridhar Vembu) ಪದೇ ಪದೇ ಹೇಳುತ್ತಲೇ ಬಂದಿದ್ದಾರೆ. ಅರಟ್ಟೈ ಆ್ಯಪ್​ನಲ್ಲಿ ಇನ್ನೂ ಕೂಡ ಎಲ್ಲಾ ಫೀಚರ್​ಗಳು ಅಳವಡಿಕೆ ಆಗಿಲ್ಲ. ಒಂದು ಅಥವಾ ಎರಡು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅರಟ್ಟೈ ಸಿದ್ಧಗೊಳ್ಳುವ ನಿರೀಕ್ಷೆ ಇದೆ. ಇದೇ ವೇಳೆ, ಝೋಹೋದ ಮುಖ್ಯ ವಿಜ್ಞಾನಿಯೂ ಆಗಿರುವ ಶ್ರೀಧರ್ ಅವರು ಅರಟ್ಟೈ ಆ್ಯಪ್​ನಲ್ಲಿ ಗೌಪ್ಯತೆ ಹೇಗೆ ಕಾಯ್ದುಕೊಳ್ಳಲಾಗುತ್ತದೆ, ಎಷ್ಟು ರೀತಿಯ ಪ್ರೈವೆಸಿ ಇದೆ ಎಂಬಿತ್ಯಾದಿ ಅಂಶಗಳನ್ನು ವ್ಯಾಖ್ಯಾನಿಸುವ ಪ್ರಯತ್ನ ಮಾಡಿದ್ದಾರೆ.

ಪ್ರೈವೆಸಿಯನ್ನು ಅವರು ಮೂರು ರೀತಿಯಾಗಿ ವಿಂಗಡಿಸಿದ್ದಾರೆ. ಸೀಕ್ರೆಟ್ ಲವರ್ ಪ್ರಕರಣ, ಜಾಹೀರಾತು ಉಲ್ಲಂಘನೆ ಪ್ರಕರಣ ಮತ್ತು ಸೀಕ್ರೆಟ್ ರೆಬೆಲ್ ಪ್ರಕರಣ ಎಂದು ವರ್ಗೀಕರಿಸಿದ್ದಾರೆ. ಇದರಲ್ಲಿ ಮೊದಲೆರಡು ಪ್ರಕರಣಗಳಲ್ಲಿ ಪೂರ್ಣ ಗೌಪ್ಯತೆ ಒದಗಿಸಲಾಗುವುದು ಎನ್ನುವ ಭರವಸೆ ನೀಡಿದ್ಧಾರೆ.

ಇದನ್ನೂ ಓದಿ: ಮಾಸಿದ ನೋಟುಗಳನ್ನು ಎಷ್ಟು ವಿನಿಯಮ ಮಾಡಬಹುದು? ಎಂಥ ನೋಟುಗಳು ಅಮಾನ್ಯ? ಇಲ್ಲಿದೆ ಆರ್​ಬಿಐ ಮಾರ್ಗಸೂಚಿ

ಏನಿದು ಸೀಕ್ರೆಟ್ ಲವರ್ ಪ್ರಕರಣ?

ಶ್ರೀಧರ್ ವೆಂಬು ಪ್ರಕಾರ, ತೀರಾ ಗೌಪ್ಯ ಮತ್ತು ಖಾಸಗಿ ವಿಚಾರಗಳಿರುವ ಮೆಸೇಜ್​ಗಳ ರವಾನೆಯು ಈ ಸೀಕ್ರೆಟ್ ಲವರ್ ಪ್ರಕರಣಕ್ಕೆ ಸೇರುತ್ತದೆ. ತಮ್ಮ ಟೆಕ್ ಸ್ಟ್ಯಾಕ್ ಮತ್ತು ಉತ್ಪನ್ನವು ಈ ವಿಚಾರದಲ್ಲಿ ಮುತುವರ್ಜಿ ತೋರುತ್ತದೆ ಎಂದಿದ್ದಾರೆ ವೆಂಬು.

ಶ್ರೀಧರ್ ವೆಂಬು ಅವರ ಎಕ್ಸ್ ಪೋಸ್ಟ್

ಎರಡನೇ ಪ್ರಕರಣವು ಜಾಹೀರಾತಿನದ್ದು. ಬಹಳ ಜನರ ಬ್ರೌಸಿಂಗ್ ವರ್ತನೆ ಆಧಾರದ ಮೇಲೆ ಜಾಹೀರಾತುಗಳು ಬರುವುದುಂಟು. ತಮ್ಮ ಖಾಸಗಿ ಬಳಕೆಯ ದತ್ತಾಂಶವನ್ನು ಕಂಪನಿ ಕದ್ದು ಮಾರುತ್ತದೆ ಎಂಬುದು ಬಹಳ ಜನರಿಗಿರುವ ಭಯ. ಶ್ರೀಧರ್ ವೆಂಬು ಅವರು ತಮ್ಮ ಅರಟ್ಟೈ ಆ್ಯಪ್​ನಲ್ಲಿ ಬಳಕೆದಾರರ ದತ್ತಾಂಶವನ್ನು ಯಾವತ್ತಿಗೂ ಕದಿಯುವುದಿಲ್ಲ, ಅಥವಾ ನೋಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಿಎಸ್​ಟಿ ಆಯ್ತು, ದೀಪಾವಳಿಗೆ ಮುನ್ನ ನಿರೀಕ್ಷಿಸಿ ಮತ್ತೊಂದು ಸುಧಾರಣಾ ಹೆಜ್ಜೆ: ನೀತಿ ಆಯೋಗ್ ಸಿಇಒ

ಸೀಕ್ರೆಟ್ ರೆಬೆಲ್ ವಿಚಾರದಲ್ಲಿ ಅರಟ್ಟೈ ಸ್ಪಷ್ಟತೆ

ಝೋಹೋ ಶ್ರೀಧರ್ ಪ್ರಕಾರ ಸೀಕ್ರೆಟ್ ರೆಬೆಲ್ ಎಂದರೆ ಒಂದು ದೇಶದ ಅಥವಾ ನಾಡಿನ ಸರ್ಕಾರದ ವಿರುದ್ಧ ಸುಳ್ಳು ಭರವಸೆ ನೀಡಿ ರಹಸ್ಯವಾಗಿ ಏಳುವ ಬಂಡಾಯಕ್ಕೆ ರಕ್ಷಣೆ ನೀಡುವುದಾಗಿರುತ್ತದೆ. ಗೂಗಲ್ ಆಗಲೀ, ಆ್ಯಪಲ್ ಆಗಲೀ ಭಾರತದಲ್ಲಿ ಕಾರ್ಯ ನಿರ್ವಹಿಸುವಾಗ ಇಲ್ಲಿಯ ಕಾನೂನಿಗೆ ಬದ್ಧವಾಗಿರಬೇಕು. ಹಾಗೆಯೇ, ಝೋಹೋ ಅಮೆರಿಕದಲ್ಲಿ ಕಾರ್ಯನಿರ್ವಹಿಸುವಾಗ ಅಲ್ಲಿಯ ಕಾನೂನಿಗೆ ಬದ್ಧವಾಗಿರಬೇಕು. ಕಂಪನಿಗಳಿಗಿಂತ ಸರ್ಕಾರವೇ ಸಾರ್ವಭೌಮ ಎಂಬ ಸ್ಪಷ್ಟತೆ ತಮಗಿದೆ ಎಂದು ಶ್ರೀಧರ್ ವೆಂಬು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Wed, 8 October 25