AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೊಮಾಟೋದಿಂದ ಮತ್ತೆ ಹೊಸ ಪ್ರಯೋಗ; ಹೆಲ್ತಿ ಮೋಡ್ ಅನಾವರಣ; ಸಿಇಒ ದೀಪಿಂದರ್ ಭಾವನಾತ್ಮಕ ಪೋಸ್ಟ್

Zomato launches Healthy Mode in Gurgaon: ಭಾರತದ ನಂಬರ್ ಒನ್ ಫೂಡ್ ಡೆಲಿವರಿ ಪ್ಲಾಟ್​ಫಾರ್ಮ್ ಜೊಮಾಟೊ ಈಗ ಹೆಲ್ತಿ ಮೋಡ್ ಎನ್ನುವ ಹೊಸ ಫೀಚರ್ ಬಿಡುಗಡೆ ಮಾಡಿದೆ. ಸದ್ಯಕ್ಕೆ ಇದು ಹರ್ಯಾಣದ ಗುರುಗ್ರಾಮ್​​ನಲ್ಲಿ ಲೈವ್ ಆಗಿದೆ. ಶೀಘ್ರದಲ್ಲಿ ಬೇರೆಡೆ ವಿಸ್ತರಣೆ ಆಗಬಹುದು. ದೇಹದ ಆರೋಗ್ಯಕ್ಕೆ ಬೇಕಾದ ಪ್ರೋಟೀನ್, ಫೈಬರ್, ನ್ಯೂಟ್ರಿಯೆಂಟ್​ಗಳು ಎಷ್ಟಿವೆ ಎನ್ನುವುದರ ಮೇಲೆ ಆಹಾರಕ್ಕೆ ಸ್ಕೋರ್ ನೀಡಲಾಗುತ್ತದೆ.

ಜೊಮಾಟೋದಿಂದ ಮತ್ತೆ ಹೊಸ ಪ್ರಯೋಗ; ಹೆಲ್ತಿ ಮೋಡ್ ಅನಾವರಣ; ಸಿಇಒ ದೀಪಿಂದರ್ ಭಾವನಾತ್ಮಕ ಪೋಸ್ಟ್
ಜೊಮಾಟೋದಿಂದ ಹೆಲ್ತಿ ಮೋಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 29, 2025 | 3:18 PM

Share

ನವದೆಹಲಿ, ಸೆಪ್ಟೆಂಬರ್ 29: ಫೂಡ್ ಡೆಲಿವರಿ ಸಂಸ್ಥೆಯಾದ ಜೊಮಾಟೊ (Zomato) ಸದಾ ಹೊಸ ಪ್ರಯೋಗಗಳನ್ನು ನಡೆಸುತ್ತಲೇ ಇರುತ್ತದೆ. ಅವುಗಳಲ್ಲಿ ಕೆಲವು ವಿಫಲವಾಗಿವೆ, ಮತ್ತೆ ಕೆಲವು ಗೆದ್ದಿವೆ. ಆದರೂ ಪ್ರಯೋಗದ ಪ್ರಯತ್ನ ನಿಂತಿಲ್ಲ. ಇದೀಗ ಹೆಲ್ತಿ ಮೋಡ್ ಎನ್ನುವ ಹೊಸ ಪ್ರಯೋಗ ಆರಂಭಿಸಿದೆ. ಆರೋಗ್ಯಯುತವಾದ ಆಹಾರವನ್ನು ಜನರಿಗೆ ತಲುಪಿಸುವುದು ಹೆಲ್ತಿ ಮೋಡ್ ಫೀಚರ್​ನ ಉದ್ದೇಶ. ಗ್ರಾಹಕರಿಗೆ ಮಾಮೂಲಿಯ ಆಹಾರಗಳನ್ನು ಬುಕ್ ಮಾಡುವ ಅವಕಾಶದ ಜೊತೆಗೆ, ಸತ್ವಯುತವಾದ ಆಹಾರಗಳ ಪ್ರತ್ಯೇಕ ಪಟ್ಟಿಯಿಂದಲೂ ಆಯ್ಕೆ ಮಾಡುವ ಅವಕಾಶ ಇರುತ್ತದೆ. ಸದ್ಯಕ್ಕೆ ಈ ಪ್ರಯೋಗ ದೆಹಲಿ ಸಮೀಪದ ಗುರುಗ್ರಾಮ್ ನಗರದಲ್ಲಿ ಶುರುವಾಗಿದೆ. ನಂತರದ ದಿನಗಳಲ್ಲಿ ದೇಶಾದ್ಯಂತ ವಿಸ್ತರಣೆ ಆಗಬಹುದು. ಇದೇ ವೇಳೆ, ಜೊಮಾಟೋದ ಮಾತೃಸಂಸ್ಥೆ ಎಟರ್ನಲ್​ನ ಸಿಇಒ ದೀಪಿಂದರ್ ಗೋಯಲ್ (Deepinder Goyal) ಈ ಹೊಸ ಫೀಚರ್ ಕುರಿತು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಭಾವನಾತ್ಮಕವಾಗಿ ಬರೆದಿದ್ದಾರೆ. ಹೆಲ್ತಿ ಮೋಡ್ ತರಲು ಏನು ಕಾರಣ ಎಂಬುದನ್ನೂ ವಿವರಿಸಿದ್ದಾರೆ.

‘ಜೊಮಾಟೋದಲ್ಲಿ ಏನೋ ಒಂದು ಕೊರತೆ ನನಗೆ ವರ್ಷಗಳಿಂದಲೂ ಕಾಡುತ್ತಾ ಬಂದಿತ್ತು. ಊಟ ಬುಕಿಂಗ್ ಮಾಡುವುದನ್ನು ಬಹಳ ಸುಲಭವೇನೋ ಮಾಡಿದ್ದೆವು. ಆದರೆ, ಉತ್ತಮವಾಗಿರುವ ಆಹಾರ ಸಿಗಲು ಗ್ರಾಹಕರಿಗೆ ನೆರವಾಗಲಿಲ್ಲವೇನೋ… ಹೆಚ್ಚು ಜನರಿಗೆ ಉತ್ತಮ ಆಹಾರ ಎನ್ನುವ ನಮ್ಮ ಮಿಷನ್​ನಲ್ಲಿ ಉತ್ತಮ ಎನ್ನುವುದರ ಅರ್ಥ ಹೆಚ್ಚು ಗಾಢವಾಗಬೇಕು. ಈ ಕೊರತೆಯನ್ನು ನೀಗಿಸಲು ಈಗ ಜೊಮಾಟೋದಲ್ಲಿ ಹೆಲ್ತಿ ಮೋಡ್ ಅನ್ನು ಆರಂಭಿಸುತ್ತಿದ್ದೇವೆ’ ಎಂದು ದೀಪಿಂದರ್ ಗೋಯಲ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: 11,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಿದ ಅಕ್ಸೆಂಚರ್; ಸಿಇಒ ಜೂಲೀ ಸ್ವೀಟ್ ಬಿಚ್ಚಿಟ್ಟ ಕಾರಣ ಇದು

ಜೊಮಾಟೊದ ಹೆಲ್ತಿ ಮೋಡ್​ನಲ್ಲಿ ಪ್ರತಿಯೊಂದು ಆಹಾರಕ್ಕೂ ಹೆಲ್ತಿ ಸ್ಕೋರ್ ನೀಡಲಾಗಿರುತ್ತದೆ. ಆರೋಗ್ಯಕ್ಕೆ ಬಹಳ ಉಪಯುಕ್ತವಾದ ಪ್ರೋಟೀನ್, ಫೈಬರ್, ಮೈಕ್ರೋನ್ಯೂಟ್ರಿಯೆಂಟ್ಸ್ ಇತ್ಯಾದಿ ಅಂಶಗಳು ಎಷ್ಟಿವೆ ಎನ್ನುವ ಆಧಾರವಾಗಿ ಆಹಾರಕ್ಕೆ ಹೆಲ್ತಿ ಸ್ಕೋರ್ ನೀಡಲಾಗಿರುತ್ತದೆ. ಎಐ ಮತ್ತು ರೆಸ್ಟೋರೆಂಟ್ ದತ್ತಾಂಶದ ನೆರವಿನಿಂದ ಸ್ಕೋರ್ ನೀಡಲಾಗಬಹುದು.

‘ಇದು ಮಾಮೂಲಿಯ ಹೆಲ್ತಿ ಮೋಡ್ ಅಲ್ಲ. ನಾವು ಗುಣಮಟ್ಟದ ಮಾನದಂಡವನ್ನು ಬಹಳ ಎತ್ತರಕ್ಕಿಟ್ಟಿದ್ದೇವೆ. ವೃತ್ತಿಪರ ಅಥ್ಲೀಟ್​ಗಳೂ ಕೂಡ ತಮಗೆ ಬೇಕಾದ ಆಹಾರವನ್ನು ಹೆಲ್ತಿ ಮೋಡ್​ನಲ್ಲಿ ಪಡೆಯಬಹುದು’ ಎಂದಿದ್ದಾರೆ ಜೊಮಾಟೊ ಸಿಇಒ.

ದೀಪಿಂದರ್ ಗೋಯಲ್ ಅವರ ಎಕ್ಸ್ ಪೋಸ್ಟ್

‘ನನಗೆ ಇದು ಬಹಳ ವೈಯಕ್ತಿಕ ಎನಿಸುತ್ತದೆ. ನೀವು ಏನೇ ಇಷ್ಟಪಟ್ಟರೂ ಅದನ್ನು ಸುಲಭವಾಗಿ ಸಿಗುವಂತೆ ಜೊಮಾಟೊ ಮಾಡಿದೆ. ಆದರೆ, ನಿಮ್ಮ ದೇಹಕ್ಕೆ ಏನು ಅಗತ್ಯವೋ ಅದು ಸಿಗುವುದು ಕಷ್ಟವಾಗಿಸಿದೆ ಎನ್ನುವ ಒಂದು ಪಾಪ ಪ್ರಜ್ಞೆ ನನ್ನನ್ನು ಕಾಡುತ್ತಿತ್ತು’ ಎಂದು ದೀಪಿಂದರ್ ಗೋಯಲ್ ತಮ್ಮ ಮನದ ಮಾತನ್ನು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ: ಜಾಗತಿಕ ಸಾಲ 21 ಟ್ರಿಲಿಯನ್ ಡಾಲರ್ ಏರಿಕೆ; ಎಲ್ಲಾ ದೇಶಗಳ ಸಾಲ ಸೇರಿಸಿದರೆ ಎಷ್ಟಾಗುತ್ತೆ ಗೊತ್ತಾ?

‘ಗುರುಗ್ರಾಮ್​ನಲ್ಲಿ ಇದು ಚಾಲನೆಗೊಂಡಿದೆ. ಬೇರೆಡೆ ಶೀಘ್ರದಲ್ಲೇ ವಿಸ್ತರಿಸುತ್ತೇವೆ. ಇದನ್ನು ಬಳಸಿ, ಚೆನ್ನಾಗಿ ವಿಮರ್ಶಿಸಿ. ಇದರ ಕೊರತೆಗಳನ್ನು ಎತ್ತಿ ತೋರಿಸಿ’ ಎಂದು ಗೋಯಲ್ ಕರೆನೀಡಿದ್ದಾರೆ.

ಗೋಯಲ್ ಪೋಸ್ಟ್​ಗೆ ಜನರ ಪ್ರತಿಕ್ರಿಯೆ

ದೀಪಿಂದರ್ ಗೋಯಲ್ ಅವರ ಈ ಪೋಸ್ಟ್​ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ. ಆಹಾರಕ್ಕೆ ಯಾವ ಮಾನದಂಡಗಳ ಮೇಲೆ ಅಂಕಗಳನ್ನು ನೀಡುತ್ತೀರಿ? ಒಂದು ರೆಸ್ಟೋರೆಂಟ್​ನಲ್ಲಿ ಎಂತಹ ಗುಣಮಟ್ಟದ ಪದಾರ್ಥಗಳನ್ನು ಬಳಸುತ್ತಾರೆ ಎಂಬುದನ್ನು ಹೇಗೆ ಕಂಡು ಹಿಡಿಯುತ್ತೀರಿ? ಇದೆಲ್ಲವೂ ಕಾರ್ಪೊರೇಟ್ ಗಿಮಿಕ್ ಎಂಬಿತ್ಯಾದಿ ಟೀಕೆಗಳು ಮತ್ತು ಪ್ರಶ್ನೆಗಳು ಕೆಲವರಿಂದ ಬಂದಿವೆ. ಹಾಗೆಯೇ, ಈ ಪ್ರಯೋಗವನ್ನು ಅನೇಕರು ಸ್ವಾಗತ ಕೂಡ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​