ಪ್ರೀತಿ ಯಾರಿಗೂ ಮೋಸ ಮಾಡಲ್ಲ, ಪ್ರೀತಿ ಮಾಡೋರು ಮೋಸ ಮಾಡ್ತಾರೆ…ಯಾರೋ ಭಗ್ನಪೇಮಿ ಬರೆದ ಈ ಸಾಲುಗಳು ಈ ಯುವಕರಿಬ್ಬರಿಗೆ ಸರಿಯಾಗಿ ಅನ್ವಯಿಸುತ್ತದೆ. ಏಕೆಂದರೆ ಇವರಿಬ್ಬರೂ ಜೀವಕ್ಕಿಂತ ಹೆಚ್ಚಾಗಿ ಒಂದು ಹುಡುಗಿಯನ್ನು ಪ್ರೀತಿಸಿದ್ದರು. ಆದರೆ ಹುಡುಗಿ ಇಬ್ಬರನ್ನೂ ಪ್ರೀತಿಸಿದ್ದರು. ಹೌದು, ಇಂತಹದೊಂದು ತ್ರಿಕೋನ ಪ್ರೇಮಕಥೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಸಾಮಾನ್ಯವಾಗಿ ಇಂತಹ ಘಟನೆಗಳು ಎಲ್ಲಾ ಕಡೆ ನಡೆಯುತ್ತಿದ್ದರೂ ಇದು ಪೊಲೀಸ್ ಮೆಟ್ಟಿಲೇರುವ ಮೂಲಕ ಎಲ್ಲರ ಗಮನ ಸೆಳೆದಿದೆ. ಅಂದರೆ ಇಲ್ಲಿ ಇಬ್ಬರು ಯುವಕರು ಯುವತಿಯೊಬ್ಬಳನ್ನು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇಬ್ಬರಿಗೂ ಆಕೆಗೆ ಬೇರೊಬ್ಬ ಬಾಯ್ಫ್ರೆಂಡ್ ಇರುವ ವಿಚಾರ ಮಾತ್ರ ಗೊತ್ತಾಗಿರಲಿಲ್ಲ. ಅಚ್ಚರಿ ಎಂದರೆ ಯುವತಿಯು ಇಬ್ಬರೊಂದಿಗೂ ದೈಹಿಕ ಸಂಬಂಧವನ್ನೂ ಸಹ ಹೊಂದಿದ್ದಳು.
ಹೀಗೆ ಯುವತಿಯು ಇಬ್ಬರಿಗೂ ಮೋಸ ಮಾಡುತ್ತಾ ಕಳೆದ 2 ವರ್ಷಗಳಿಂದ ಇಬ್ಬರ ಪ್ರೇಯಸಿಯಾಗಿ ಮೋಜು ಮಸ್ತಿ ಮಾಡಿದ್ದಾಳೆ. ಆದರೆ ಈ ತ್ರಿಕೋನ ಪ್ರೇಮಕಥೆಯ ವಿಚಾರ ಶುಕ್ರವಾರ ಬೆಳಕಿಗೆ ಬಂದಿದೆ. ಅಂದರೆ ಪ್ರೇಯಸಿಯ ಜೊತೆ ಯುವಕನೊಬ್ಬನನ್ನು ನೋಡಿದ ವಿಚಾರವನ್ನು ಗೆಳೆಯನೊಬ್ಬ ತಿಳಿಸಿದ್ದ. ಆತನ ವಿಳಾಸ ಪತ್ತೆ ಹಚ್ಚಿ ಪ್ರಶ್ನಿಸಲು ಹೋದ ಯುವಕನಿಗೆ ಆಕೆಗೆ ನೀನು ಏನಾಗಬೇಕೆಂದು ಮರು ಪ್ರಶ್ನಿಸಿದ್ದಾನೆ.
ಇದೇ ವೇಳೆ ಆಕೆ ನನ್ನವಳು ಎಂಬ ಉತ್ತರ ನೀಡಿದ್ದ. ಇದರಿಂದ ಕೋಪ ಆತ ಪ್ರಶ್ನಿಸಲು ಹೋದ ಯುವಕನೊಂದಿಗೆ ಬೀದಿಯಲ್ಲೇ ಜಗಳಕ್ಕಿಳಿದಿದ್ದಾಳೆ. ಇಬ್ಬರ ನಡುವಿನ ಜಗಳದಲ್ಲಿ ಕೇಳಿ ಬಂದಿದ್ದು ಒಂದೇ ಡೈಲಾಗ್- ಅವಳು ನನ್ನವಳು…ಈ ಜಗಳವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ಠಾಣೆಗೆ ಎಳೆದುಕೊಂಡು ಹೋದರು.
ಅಲ್ಲದೆ ಇಬ್ಬರನ್ನು ವಿಚಾರಿಸಿದಾಗ ಇಬ್ಬರ ಡೈಲಾಗ್ ಒಂದೇ ‘ಅವಳು ನನ್ನ ಗರ್ಲ್ ಫ್ರೆಂಡ್’ ಎಂಬುದು. ಇನ್ನು ಫೋಟೋಗಳನ್ನು ಪರಿಶೀಲಿಸಿದಾಗ ಇಬ್ಬರಿಗೂ ಒಬ್ಬಳೇ ಗರ್ಲ್ ಫ್ರೆಂಡ್ ಇರುವುದು ಗೊತ್ತಾಗಿದೆ. ಇದೇ ವೇಳೆ ನಮ್ಮಿಬ್ಬರ ನಡುವೆ ಲಿವಿಂಗ್ ರಿಲೇಷನ್ಶಿಪ್ ಇರುವ ವಿಚಾರವನ್ನು ಯುವಕ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ. ಇದನ್ನು ಕೇಳಿದ ಮತ್ತೊರ್ವ ಪ್ರೇಮಿ ಕೂಡ ನನಗೂ ಸಂಬಂಧವಿದೆ ಎಂದಿದ್ದಾನೆ. ಈ ತ್ರಿಕೋನ ಪ್ರೇಮಕಥೆಯನ್ನು ಕೇಳಿ ಕಂಗಲಾದ ಪೊಲೀಸರು ಯುವತಿಯನ್ನು ಠಾಣೆಗೆ ಬರಲು ಹೇಳಿದ್ದಾರೆ. ಆದರೆ ಅದಾಗಲೇ ವಿಷಯ ಗೊತ್ತಾದ ಯುವತಿಯು ನಾಪತ್ತೆಯಾಗಿದ್ದಾಳೆ. ಅಂದರೆ ಇಬ್ಬರ ಪ್ರೇಮಿಗಳ ಮುದ್ದಿನ ಪ್ರೇಯಸಿ ಎಸ್ಕೇಪ್ ಆಗಿದ್ದಾಳೆ.
ಅಂದಹಾಗೆ ಈ ಯುವಕರಿಬ್ಬರೂ ಜೈಪುರದ ಜಗತ್ಪುರಕ್ಕೆ ಓದಲು ಬಂದಿದ್ದರು. ಇಬ್ಬರೂ ಕೂಡ ಬೇರೆ ಬೇರೆ ಕಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಇದೇ ವೇಳೆ ಅದೇ ನಗರದಲ್ಲಿ ಓದುತ್ತಿದ್ದ ಯುವತಿಯ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಲಿವಿಂಗ್ ರಿಲೇಷನ್ಶಿಪ್ ತನಕ ಹೋಗಿದೆ. ಆದರೆ ಈ ವಿಚಾರ ಗೊತ್ತಾಗದಂತೆ ಇಬ್ಬರಿಗೂ ಯಾಮಾರಿಸಿದ್ದಳು. ಅಚ್ಚರಿ ಎಂದರೆ ಇಬ್ಬರಿಗೂ ಈ ವಿಷಯ ಗೊತ್ತಾದಾಗ ಇಬ್ಬರ ನಡುವೆಯೂ ಒಂದೇ ರೀತಿಯ ಸಂಬಂಧವನ್ನು ಯುವತಿ ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ಜಗತ್ಪುರ ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರೀತಿ ಯಾರಿಗೂ ಮೋಸ ಮಾಡಲ್ಲ, ಆದರೆ ಪ್ರೀತಿಸೋರು ಮೋಸ ಮಾಡ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೇ.
Published On - 9:03 pm, Sat, 9 July 22