ಬೆಳಗಾವಿ: ಹಿಡಕಲ್ ಡ್ಯಾಂ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆ
ಬಿಜೆಪಿ ಕಾರ್ಯಕರ್ತನೋರ್ವ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ: ಬಿಜೆಪಿ (BJP) ಕಾರ್ಯಕರ್ತನೋರ್ವ ಕೊಲೆಯಾಗಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಹಿಡಕಲ್ ಡ್ಯಾಂ (Hidkal Dam) ಗ್ರಾಮದಲ್ಲಿ ನಡೆದಿದೆ. ಪರಶುರಾಮ್ ಹಲಕರ್ಣಿ (32) ಕೊಲೆಯಾದ ವ್ಯಕ್ತಿ. ಮೃತ ಪರಶುರಾಮ್ ಹಲಕರ್ಣಿ ಹಿಡಕಲ್ ಡ್ಯಾಂ ಗ್ರಾಮದಲ್ಲಿ ಕಿರಾಣಿ ಅಂಗಡಿ ವ್ಯಾಪಾರಿನಾಗಿದ್ದನು. ಈತನನ್ನು ಗ್ರಾಮದ ಆಂಜನೇಯನ ಮಂದಿರ ಹತ್ತಿರ ಮೂವರು ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಮೂವರಲ್ಲಿ ಮಂಜುನಾಥ ಪುಟಜನೆ (24), ಕೆಂಪಣ್ಣ ನೆಸರಗಿ (30 ) ಪೋಲಿಸರಿಗೆ ಶರಣಾಗಿದ್ದಾರೆ. ಇನ್ನೊಬ್ಬ ಆರೋಪಿ ಬಸವರಾಜ್ ಗಳಾತೆ (30) ಪರಾರಿಯಾಗಿದ್ದಾನೆ. ಕೊಲೆಯಾದ ಸ್ಥಳದಲ್ಲಿ ಒಂದು ಕಾರು ಹಾಗೂ ಒಂದು ಬೈಕ್ ಪತ್ತೆಯಾಗಿದೆ. ಕಾರಿನಲ್ಲಿ ಕೊಲೆಗೆ ಬಳಸಿದ ಲಾಂಗ್ , ಕಾರದ ಪುಡಿ ಮತ್ತು ಡ್ರಿಂಕ್ಸ್ ಸಿಕ್ಕಿದೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ಹಳೆಯ ವೈಷಮ್ಯ ಕಾರಣ ಎಂದು ತಿಳಿದು ಬಂದಿದೆ. ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 10:51 pm, Sat, 16 July 22




