ಆಶ್ರಯ ಕೊಟ್ಟವನನ್ನೇ ಕೊಂದ ದುರುಳ: ಸಲಿಂಗಕಾಮಕ್ಕೆ ವಿರೋಧಿಸಿದ್ದಕ್ಕೆ ಸ್ನೇಹಿತನ ಕತೆ ಮುಗಿಸಿದ!

ಈತನ ಹೆಸರು ಚೇತನ್.. 26 ವರ್ಷದ ಹುಡುಗ.. ಹಲವು ಕೇಸ್‌ಗಳಲ್ಲಿ ಜೈಲುವಾಸ ಅನುಭವಿಸಿದ್ದ. ಕಷ್ಟದಲ್ಲೇ ಜೀವನ ನಡೆಸುತ್ತಿದ್ದು, ತಿನ್ನಲು ಅನ್ನವಿಲ್ಲದ ಸ್ಥಿತಿ. ಇಂಥಾ ಚೇತನ್‌ಗೆ ಅಶ್ರಯವಾದವನು 41 ವರ್ಷದ ಪ್ರದೀಪ್. ಸ್ನೇಹಕ್ಕೆ ಬೆಲೆ ಕೊಟ್ಟಿದ್ದ ಪ್ರದೀಪ್, ಚೇತನ್ ಮೇಲಿನ ನಂಬಿಕೆಯಿಂದ ಮನೆಯಲ್ಲಿ ಆಶ್ರಯ ಕೊಟ್ಟು, ಅನ್ನ ಹಾಕಿದ್ದ. ಆದ್ರೆ, ದುರುಳ ಚೇತನ್ ಉಂಡ ಮನೆಗೆ ದ್ರೋಹ ಬಗೆದಿದ್ದಾನೆ. ಸ್ನೇಹಿತ ಪ್ರದೀಪನ ಕತೆಯನ್ನೇ ಮುಗಿಸಿಬಿಟ್ಟಿದ್ದಾನೆ.

ಆಶ್ರಯ ಕೊಟ್ಟವನನ್ನೇ ಕೊಂದ ದುರುಳ: ಸಲಿಂಗಕಾಮಕ್ಕೆ ವಿರೋಧಿಸಿದ್ದಕ್ಕೆ ಸ್ನೇಹಿತನ ಕತೆ ಮುಗಿಸಿದ!
ಚೇತನ್, ಬಂಧಿತ ಆರೋಪಿ
Follow us
ಬಿ ಮೂರ್ತಿ, ನೆಲಮಂಗಲ
| Updated By: ರಮೇಶ್ ಬಿ. ಜವಳಗೇರಾ

Updated on: Dec 22, 2024 | 2:32 PM

ಬೆಂಗಳೂರು, (ಡಿಸೆಂಬರ್ 22): ಪರಿಸ್ಥಿತಿ ನೋಡಿ ತನ್ನ ಮನೆಯಲ್ಲೇ ಆಶ್ರಯ ಕೊಟ್ಟ ಜೀವದ ಗೆಳೆಯ ಜೀವ ತೆಗೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಿಮ್ಮಭೋವಿಪಾಳ್ಯದಲ್ಲಿ ನಡೆದಿದೆ. ತಿಮ್ಮಭೋವಿಪಾಳ್ಯದಲ್ಲಿ ಸ್ವಂತ ಮನೆಯಲ್ಲಿ ಪ್ರದೀಪ್ ವಾಸವಿದ್ದ. ಕಳೆದ ಮೂರ್ನಾಲ್ಕು ತಿಂಗಳಿಂದ ಚೇತನ್‌ಗೆ ಆಶ್ರಯ ನೀಡಿದ್ದ. ಆದ್ರೆ, ಮೊನ್ನೆ ಶುಕ್ರವಾರ ಪಾಪಿ ಚೇತನ್‌ಗೆ ಅದೇನಾಯ್ತೋ ಏನೋ, ಆಶ್ರಯ ಕೊಟ್ಟಿದ್ದ ಪ್ರದೀಪ್‌ಗೆ ಚಿತ್ರಹಿಂಸೆ ನೀಡಿ ಕೊಂದಿದ್ದಾನೆ. ಪ್ರದೀಪ್ ಕಿರುಚಾಡುವ ಶಬ್ದ ಕೇಳಬಾರದು ಎಂದು ಜೋರಾಗಿ ಟಿವಿ ಸೌಂಡ್ ಇಟ್ಟು, ಕತೆ ಮುಗಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆದ್ರೆ, ಮಾದನಾಯಕನಹಳ್ಳಿ ಪೊಲೀಸರು ಟವರ್ ಲೋಕೇಷನ್ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಲಿಂಗಕಾಮಕ್ಕೆ ವಿರೋಧಿಸಿದ್ದಕ್ಕೆ ಚಟ್ಟ ಕಟ್ಟಿಬಿಟ್ಟ ಪಾಪಿ

ಪೊಲೀಸ್ ವಿಚಾರಣೆ ವೇಳೆ ಆರೋಪಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದು, ಪ್ರದೀಪ್‌ನನ್ನು ಸಲಿಂಗ ಕಾಮಕ್ಕೂ ಬಳಸಿಕೊಳ್ಳುತ್ತಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ಮನೆಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾನೆಂದು ಡ್ತಾನೆಂದು ಆರೋಪಿಸಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಜೋಡಿ ಬದುಕಿನಲ್ಲಿ ಹೊಕ್ಕಿದ ಅನುಮಾನದ ಭೂತ, ಪತ್ನಿ ದುರಂತ ಸಾವು

ಕೀಚಕ ಚೇತನ್, ಸಲಿಂಗಕಾಮಕ್ಕೆ ಕರಿತಿದ್ದನಂತೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಸಿಗರೇಟ್‌ನಿಂದ ಸುಟ್ಟು, ದೊಣ್ಣೆಯಿಂದ ಹೊಡೆದಿದ್ದಾನೆ. ಶುಕ್ರವಾರ ರಾತ್ರಿ ಸಿಗರೇಟ್​ನಿಂದ ಸುಟ್ಟು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಾಡಿಗೆ ಮನೆಯವರು ಬಂದು ನೋಡುವಷ್ಟಲ್ಲಿ ಪರಾರಿಯಾಗಿದ್ದ.

ಒಂದೇ ಒಂದು ಫೋನ್‌ ಕರೆಯಿಂದ ಆರೋಪಿ ಲಾಕ್

ಆರೋಪಿ ಚೇತನ್, ಪ್ರದೀಪ್‌ನನ್ನ ಹತ್ಯೆಗೈದ ಬಳಿಕ ಸೇಲಂನಲ್ಲಿದ್ದ ತನ್ನ ಸ್ನೇಹಿತರಿಗೆ ಕರೆ ಮಾಡಿದ್ದ. ಕಾರಿನಲ್ಲಿ ಸೇಲಂಗೆ ಬರುತ್ತಿದ್ದೇನೆ ಅಂತೇಳಿ ಮೊಬೈಲ್ ಸ್ವಿಚ್ಚ್ ಆಫ್ ಮಾಡಿಕೊಂಡಿದ್ದ, ಸೇಲಂಗೆ ತಲುಪಿದ ನಂತರ ಆರೋಪಿ ಮಾಡಿದ್ದ ಒಂದೇ ಒಂದು ಫೋನ್‌ ಕಾಲ್ ಬೆನ್ನತ್ತಿದ ಪೊಲೀಸರು ಚೇತನ್‌ನನ್ನ ಲಾಕ್ ಮಾಡಿದ್ದಾರೆ.

ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರೋ ಆರೋಪಿ, ಸಲಿಂಗಕಾಮಕ್ಕೆ ವಿರೋಧ ವ್ಯಕ್ತಪಡಿಸಿದಾಗ ಗಲಾಟೆ ಆಯ್ತು. ಕೊಲೆ ಮಾಡಲು ಮುನ್ನು ಟಿವಿ ಸೌಂಡ್ ಜೋರಾಗಿ ಇಟ್ಟು ಕೊಲೆಗೈದ ಬಗ್ಗೆ ಮಾಹಿತಿ‌ ನೀಡಿದ್ದಾನೆ. ಸದ್ಯಕ್ಕೆ ಕೊಲೆ‌ ಅರೋಪಿ ಚೇತನನ್ನ ಮಾದನಾಯಕನಹಳ್ಳಿ ಪೊಲೀಸ್‌‌ ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ಈ ಹಿಂದೆಯೂ ರಾಬರಿ, ಕೊಲೆ ಯತ್ನ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಆರೋಪಿ ಚೇತನ್ ಜೈಲಿನಿಂದ ಬಿಡುಗಡೆಯಾಗಿ ಕಾರು ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಆದ್ರೆ, ಇದೀಗ ಆಶ್ರಯ ಕೊಟ್ಟ ಗೆಳೆಯನ ಕತೆಯನ್ನೇ ಮುಗಿಸಿಬಿಟ್ಟಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ