ಆಸ್ತಿಗೋಸ್ಕರ ಅಮ್ಮನನ್ನ ಕೊಲ್ಲಲು ಸುಪಾರಿ ಕೊಟ್ಟ ಪಾಪಿ ಮಗ.. ಪುತ್ರನಿಗೆ ತಂದೆ ಸಾಥ್

ಬೆಂಗಳೂರು: ಆಸ್ತಿ ವಿಚಾರಕ್ಕಾಗಿ ಹೆತ್ತ ತಾಯಿಯನ್ನೇ ಆಕೆಯ ಮಗ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ನಗರದಲ್ಲಿ ನಡೆದಿದೆ. ಇದೇ ತಿಂಗಳ 16 ರಂದು ಮಂಗಮ್ಮನಪಾಳ್ಯದಲ್ಲಿ ಈ ಘಟನೆ ಸಂಭವಿಸಿದೆ. ಗೀತಾ ಎಂಬ ಮಹಿಳೆ ಕೊಲೆಗೀಡಾದ ದುರ್ದೈವಿ. ವರುಣ್(26), ನವೀನ್(34), ನಾಗರಾಜ್(22), ಪ್ರದೀಪ್ (22), ನಾಗರಾಜ(21) ಹಾಗೂ ಆಂಜನಿ (55) ಬಂಧಿತ ಆರೋಪಿಗಳು.  ಆಸ್ತಿ ವಿಚಾರಕ್ಕಾಗಿ ಹೆತ್ತ ಮಗನಾದ ವರುಣ್​ ತನ್ನ ತಾಯಿಯನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಆಗಸ್ಟ್​ 16ರಂದು ಬೆಳಗಿನ ಜಾವ ಎರಡು ಗಂಟೆಯ […]

ಆಸ್ತಿಗೋಸ್ಕರ ಅಮ್ಮನನ್ನ ಕೊಲ್ಲಲು ಸುಪಾರಿ ಕೊಟ್ಟ ಪಾಪಿ ಮಗ.. ಪುತ್ರನಿಗೆ ತಂದೆ ಸಾಥ್
ಸಾಧು ಶ್ರೀನಾಥ್​

Updated on: Aug 22, 2020 | 7:10 PM

ಬೆಂಗಳೂರು: ಆಸ್ತಿ ವಿಚಾರಕ್ಕಾಗಿ ಹೆತ್ತ ತಾಯಿಯನ್ನೇ ಆಕೆಯ ಮಗ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ನಗರದಲ್ಲಿ ನಡೆದಿದೆ. ಇದೇ ತಿಂಗಳ 16 ರಂದು ಮಂಗಮ್ಮನಪಾಳ್ಯದಲ್ಲಿ ಈ ಘಟನೆ ಸಂಭವಿಸಿದೆ. ಗೀತಾ ಎಂಬ ಮಹಿಳೆ ಕೊಲೆಗೀಡಾದ ದುರ್ದೈವಿ.

ವರುಣ್(26), ನವೀನ್(34), ನಾಗರಾಜ್(22), ಪ್ರದೀಪ್ (22), ನಾಗರಾಜ(21) ಹಾಗೂ ಆಂಜನಿ (55) ಬಂಧಿತ ಆರೋಪಿಗಳು.  ಆಸ್ತಿ ವಿಚಾರಕ್ಕಾಗಿ ಹೆತ್ತ ಮಗನಾದ ವರುಣ್​ ತನ್ನ ತಾಯಿಯನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಆಗಸ್ಟ್​ 16ರಂದು ಬೆಳಗಿನ ಜಾವ ಎರಡು ಗಂಟೆಯ ಸಮಯದಲ್ಲಿ ಶೀಟ್ ಹೊಡೆದು ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ಹಂತಕರು, ಮಲಗಿದ್ದ ಗೀತಾಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು.

ಮೃತ ಗೀತಾಳ ಪಿತ್ರಾರ್ಜಿತ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಮಗ ವರುಣ್ ದಿನನಿತ್ಯ ತಾಯಿಯೊಂದಿಗೆ ಜಗಳ ತೆಗೆಯುತ್ತಿದ್ದನಂತೆ. ಈ ಹಿನ್ನೆಲೆಯಲ್ಲಿ ಮಗನಿಗೆ ಆಸ್ತಿ ನೀಡಲು ಒಪ್ಪದ ತಾಯಿಯನ್ನು, ಮಗನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ. ಸದ್ಯ ಮಗ ವರುಣ್​ಗೆ ಹತ್ಯೆ ಮಾಡಲು ಸಹಕಾರ ನೀಡಿದ್ದರಿಂದ ತಂದೆ ಆಂಜನಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us