ದಂಪತಿ ಕಲಹ: ಬುದ್ಧಿ ಹೇಳಲು ಬಂದ ಮಾವನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಅಳಿಯ – ಒಬ್ಬ ಸಜೀವ ದಹನ, ಮೂವರು ಗಂಭೀರ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದ್ದು, ಬುದ್ಧಿ ಹೇಳಲು ಬಂದವರ ನಾಲ್ವರ ಮೇಲೆ ದುಷ್ಕರ್ಮಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ.

ದಂಪತಿ ಕಲಹ: ಬುದ್ಧಿ ಹೇಳಲು ಬಂದ ಮಾವನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಅಳಿಯ - ಒಬ್ಬ ಸಜೀವ ದಹನ, ಮೂವರು ಗಂಭೀರ
ಆರೋಪಿ ಶರಣಪ್ಪ
Follow us
TV9 Web
| Updated By: ವಿವೇಕ ಬಿರಾದಾರ

Updated on:Jun 29, 2022 | 6:41 PM

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದ್ದು, ಬುದ್ಧಿ ಹೇಳಲು ಬಂದವರ ನಾಲ್ವರ ಮೇಲೆ ದುಷ್ಕರ್ಮಿ ಪೆಟ್ರೋಲ್ (Petrol)​ ಸುರಿದು ಬೆಂಕಿ (Fire) ಹಚ್ಚಿದ್ದಾನೆ. ಪರಿಣಾಮ ಓರ್ವ ಸಜೀವ ದಹನವಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಶರಣಪ್ಪ ಬಿಸನಾಳ (68)  ಮೃತ ದುರ್ದೈವಿ. ನಾಗೇಶ ಹಗರಗೊಂಡ (40), ಮುರಾಳ (35) ಮತ್ತು ಸಿದ್ದರಾಮಪ್ಪ ಮುರಾಳ (65) ಸ್ಥಿತಿ ಚಿಂತಾಜನಕವಾಗಿದೆ. ಕೆಲ ದಿನಗಳಿಂದ ಪತಿ ಶರಣಪ್ಪ ಮತ್ತು ಪತ್ನಿ ಹುಲಿಗಮ್ಮ ನಡುವೆ ಜಗಳವಾಗಿತ್ತು. ಈ ಸಂಬಂಧ ಶರಣಪ್ಪನಿಗೆ ಬುದ್ಧಿ ಹೇಳಲು ಪತ್ನಿ ಹುಲಿಗೆಮ್ಮಳ ತಂದೆ ಹಾಗೂ ಮೂವರು ಸಂಬಂಧಿಕರು (Relatives) ಬಂದಿದ್ದರು. ಈ ವೇಳೆ ಶರಣಪ್ಪ ನಾಲ್ಕು ಜನರನ್ನು ಕೋಣೆಯಲ್ಲಿ  ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಇದನ್ನು ಓದಿ: ಕೊಟ್ಟ ಸಾಲ ವಾಪಸ್ ನೀಡದಿದ್ದಕ್ಕೆ ಬಟ್ಟೆ ಬಿಚ್ಚಿ ಹಲ್ಲೆ: ಮನೆಗೆ ನುಗ್ಗಿ ಅಕ್ಕ-ತಂಗಿಯನ್ನು ಥಳಿಸಿದ್ದ ಆರೋಪಿಗಳ ಬಂಧನ

ಪರಿಣಾಮ ನಾಗಪ್ಪ ಎಂಬಾತ ಸಾವನ್ನಪ್ಪಿದ್ದು, ಸಿದ್ರಾಮಪ್ಪ, ಮುತ್ತಪ್ಪ, ಶರಣಪ್ಪಗೆ ಗಂಭೀರ ಗಾಯಗಳಾಗಿವೆ.  ಪತ್ನಿಯ ತವರು ಮನೆಯವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಇಬ್ಬರು ಹಾಗೂ ಸರೂರು ಗ್ರಾಮದ  ಇಬ್ಬರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನು ಓದಿ: ಇದು ಇಂಡಿಯನ್ ಬ್ಯಾಂಕ್ ಮ್ಯಾನೇಜರ್​ನ ಪ್ರೇಮಚರಿತ್ರೆ: ಡೇಟಿಂಗ್ ಆ್ಯಪ್​ನ ಆರೇಳು ಬೆಡಗಿಯರಿಗೆ ಹಣ ಸಂದಾಯ ಮಾಡಿದ ಭೂಪ

ಹುಲಿಗಮ್ಮ ರಾಯಚೂರು ಜಿಲ್ಲೆಯ ಲಿಂಗಸೂರಿನ ಕೆಎಸ್ಆರ್ಟಿಸಿ ಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಳು. ಹುಲಿಗೆಮ್ಮ ಕಳೆದ 14 ತಿಂಗಳಿನಿಂದ ಬೇರೆ ಕಡೆ ಮನೆ ಮಾಡಿಕೊಂಡಿದ್ದಳು. ಶರಣಪ್ಪ ಹೆಂಡತಿ ಹುಲಿಗೆಮ್ಮಗೆ ವಿಚ್ಚೇದನ ಕೇಳಿದ್ದನು. ಆದರೆ ಹುಲಿಗೆಮ್ಮ ವಿಚ್ಚೇದನ ನೀಡಲು ನಿರಾಕರಿಸಿದ್ದಳು. ಹುಲಿಗೆಮ್ಮ ಪತಿಯೊಂದಿಗೆ ಮಾತನಾಡಲು ಹುಲಿಗಮ್ಮ ತಂದೆ ಹಾಗೂ ಸಂಬಂಧಿಕರು ಇಂದು (ಜೂನ್​ 29) ಬೆಳಗ್ಗೆ ಶರಣಪ್ಪನ ಮನೆ ನಾರಾಯಣಪುರಕ್ಕೆ ಬಂದಿದ್ದರು. ಆದರೆ ಹುಲಿಗೆಮ್ಮ ನಾರಾಯಣಪುರಕ್ಕೆ ನಾನು ಬರಲ್ಲ ನೀವೆ ಮಾತಾಡಿ ಎಂದು, ಕೆಲಸಕ್ಕೆ ಹೋಗಿದ್ದಳು. ಹುಲಿಗೆಮ್ಮ ನಾರಾಯಣಪುರಕ್ಕೆ ಕಾಲಿಡಲ್ಲ ಎಂದು ಪೋಷಕರ ಮುಂದೆ ಹೇಳಿದ್ದಳು. ಜೊತೆಗೆ ಪೋಷಕರಿಗೂ ಸಹ ಮಾತಾಡಲು ಹೋಗಬೇಡಿ ಎಂದಿದ್ದಳು.

ಆದರೆ ಗಂಡ ಹೆಂಡತಿ ಜಗಳ ಬಗೆ ಹರಿಸಲು ಹಿರಿಯರು ಹೋಗಿದ್ದರು. ಈ ವೇಳೆ ಪತ್ನಿ ಮೇಲಿನ ಸಿಟ್ಟಿಗೆ ಶರಣಪ್ಪ ಮಾವ ಹಾಗೂ ಸಂಬಂಧಿಕರಿಗೆ ಬುದ್ದಿ ಮಾತು ಯಾಕೆ ಹೇಳಲು ಬಂದಿರಾ ಎಂದು ಆಕ್ರೋಶದಿಂದ ಬೆಂಕಿ ಹಚ್ಚಿದ್ದಾನೆ. ಶರಣಪ್ಪ ಲಿಂಗಸೂರನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶರಣಪ್ಪನನ್ನ ನಾರಾಯಣಪುರ ಪೊಲೀಸರು ಬಂಧಿಸಿದ್ದಾರೆ.

ಸಿದ್ದರಾಮಪ್ಪ ಮುರಾಳ‌ ಸಂಬಂಧಿ ಶರಣಪ್ಪಗೆ ಮಗಳನ್ನು ಕೊಟ್ಟು  2005 ರಲ್ಲಿ  ವಿವಾಹ ಮಾಡಿದ್ದರು.  ದಂಪತಿಗೆ ಒಂದು ಹೆಣ್ಣು ಮಗು ಹಾಗೂ ಒಂದು ಗಂಡು ಮಗುವಿದೆ. ಕಳೇದ ಮೂರ್ನಾಲ್ಕು ವರ್ಷಗಳಿಂದ ಶರಣಪ್ಪ ಹಾಗೂ ಹುಲಿಗೆಮ್ಮಾ ಜಗಳವಾಡುತ್ತಿದ್ದರು. ಶರಣಪ್ಪ ಹುಲಿಗೆಮ್ಮನ‌ ಮೇಲೆ ಸದಾ ಸಂಶಯ ಮಾಡುತ್ತಿದ್ದನು. ಹುಲಿಗೆಮ್ಮಾ ಕಿರಿಯ ಸಹೋದರಿ ಅನ್ಯ ಧರ್ಮೀಯನ ಜೊತೆಗೆ ವಿವಾಹವಾಗಿದ್ದಕ್ಕೆ ಶರಣಪ್ಪ ತಗಾದೆ ತೆಗೆದಿದ್ದನು. ಜಾತಿ ಬಿಟ್ಟು ಜಾತಿಯವನ ಜೊತೆಗೆ ಮದುವೆ ಆಗುವಾಗ ಅದನ್ನು ನಿನ್ನ ತವರು ಮನೆಯವರು ತಡೆಯಲಿಲ್ಲಾ ಎಂದು ಜಗಳ ಮಾಡುತ್ತಿದ್ದನಂತೆ. ಇದರಿಂದ ಬೇಸತ್ತು ಹುಲಿಗೆಮ್ಮಾ ರಾಯಚೂರಿನ ಲಿಂಗಸಗೂರಿನಲ್ಲಿದ್ದಳು.

ಶರಣಪ್ಪ ನಾನು ಇನ್ನೊಂದು ಮದುವೆಯಾಗುತ್ತೇನೆ ನನಗೆ ವಿಚ್ಚೇದನ ಬೇಕೆಂದು ಒತ್ತಾಯಿಸಿದ್ದನು. ಅದಕ್ಕಾಗಿ ನ್ಯಾಯ ಪಂಚಾಯತಿ ಮಾಡಲು ಪತ್ನಿ ಮನೆಯವರನ್ನು ಶರಣಪ್ಪ  ಇಂದು ಕರೆಸಿಕೊಂಡಿದ್ದನು. ನಾರಾಯಣಪೂರಕ್ಕೆ ಹುಲಿಗೆಮ್ಮಾ ತಂದೆ ಸಿದ್ದರಾಮಪ್ಪ, ಅಣ್ಣನ ಮಗಾ ಮುತ್ತು ಮುರಾಳ, ಸೋದರಳಿಯ ನಾಗೇಶ ಹಗರಗೊಂಡ, ಸಂಬಂಧಿಕ ಶರಣಪ್ಪ ಬಿಸನಾಳ ಜೊತೆಗೆ ಹೋಗಿದ್ದರು. ಈ ವೇಳೆ ಹುಲಿಗೆಮ್ಮಾ ಲಿಂಗಸಗೂರಿನಲ್ಲಿದ್ದಳು. ಶರಣಪ್ಪ ಪತಿ ಮನೆಯವರ‌ನ್ನು ಮಹಡಿ ರೂಂನಲ್ಲಿ ಕೂಡಿಸಿ ಮಾತನಾಡಿಸಿದ್ದನು.

ನಂತರ ನಮ್ಮ‌ಕಡೆಯ‌ ಹಿರಿಯರನ್ನು ಕರೆದುಕೊಂಡು ಬರುವೆ ಎಂದು ಶರಣಪ್ಪ ಹೊರ ಬಂದಿದ್ದನು. ಹೊರ ಬಂದು ರೂಂ ಬಾಗಿಲು ಲಾಕ್ ಮಾಡಿದ್ದನು. ನಂತರ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು. ಪುಟ್ಟ ರೂಂ ಆದ ಕಾರಣ ನಾಲ್ವರಿಗೂ ಬೆಂಕಿ ವ್ಯಾಪ್ತಿಸಿದೆ. ರೂಂನಿಂದ ಹೊರ ಬರಲಾರದೇ ನಾಲ್ವರು ಬೆಂಕಿಯಲ್ಲಿ ಬೆಂದಿದ್ದಾರೆ. ಇದರಿಂದ ಮುದ್ದೇಬಿಹಾಳದ ಮನೆಯಲ್ಲಿ ನೀರವ ಮೌನ ಆವರಿಸಿದೆ.

Published On - 3:01 pm, Wed, 29 June 22