ಅಮೆರಿಕ: ತನ್ನ ತಂದೆ 70ಕ್ಕಿಂತ ಹೆಚ್ಚು ಮಹಿಳೆಯರನ್ನು ಕೊಂದಿದ್ದಾನೆ ಅಂತ ಒಬ್ಬ ಮಹಿಳೆ ಆರೋಪಿಸಿದರೆ ಅವಳ ಅಕ್ಕ ಅದು ಸುಳ್ಳು ಅನ್ನುತ್ತಾಳೆ!

ಅವರ ಒಡಹುಟ್ಟಿದ ಅಕ್ಕ ಸೂಸನ್ ತನ್ನ ತಂಗಿಯ ಆರೋಪಗಳನ್ನು ತಳ್ಳಿಹಾಕಿದ್ದಾರೆ. ನ್ಯೂಸ್ ವೀಕ್ ಪತ್ರಿಕೆಯೊಂದಿಗೆ ಮಾತಾಡಿರುವ ಅವರು ‘ನನ್ನ ಡ್ಯಾಡಿ ಕೊಲೆಗಡುಕನಾಗಿದ್ದರೆ ನನಗೆ ಗೊತ್ತಾಗುತ್ತಿರಲಿಲ್ಲವೇ?’ ಎಂದು ಹೇಳಿದ್ದಾರೆ.

ಅಮೆರಿಕ: ತನ್ನ ತಂದೆ 70ಕ್ಕಿಂತ ಹೆಚ್ಚು ಮಹಿಳೆಯರನ್ನು ಕೊಂದಿದ್ದಾನೆ ಅಂತ ಒಬ್ಬ ಮಹಿಳೆ ಆರೋಪಿಸಿದರೆ ಅವಳ ಅಕ್ಕ ಅದು ಸುಳ್ಳು ಅನ್ನುತ್ತಾಳೆ!
ಡೊನಾಲ್ಡ್ ಸ್ಟುಡಿ ಮತ್ತು ಆತನ ಸಮಾಧಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 10, 2022 | 7:57 AM

ತನ್ನ ಡ್ಯಾಡಿ 70ಕ್ಕೂ ಹೆಚ್ಚು ಮಹಿಳೆಯರನ್ನು ಕೊಂದಿದ್ದಾನೆಂದು ಒಬ್ಬ ಮಹಿಳೆ ಪೊಲೀಸರಿಗೆ ತಿಳಿಸಿದ ನಂತರ ಶವಗಳನ್ನು ಹೂತಿರಬಹುದಾದ ಸ್ಥಳಗಳನ್ನು ಅಗಿಯಲು (excavate) ಎಫ್ ಬಿ ಐ (FBI) ಅಧಿಕಾರಿಗಳು ಪುನಃ ಆರಂಭಿಸಿದ್ದಾರೆ. ಎಫ್ ಬಿ ಐ 15 ವಾಹನಗಳು, ಫರ್ಮೊಂಟ್ ಕೌಂಟಿ ಶರೀಫ್ ಕಚೇರಿ ಮತ್ತು ಲೋವಾ (Lowa) ಡಿವಿಜನ್ ಆಫ್ ಕ್ರಿಮಿನಲ್ ಇನ್ವೆಸ್ಟಿಗೇಶನ್ ಸಿಬ್ಬಂದಿ ಅಮೆರಿಕದ ಲೋವಾನಲ್ಲಿರುವ ಒಂದು ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಕಾಣಿಸಿಕೊಂಡಿದ್ದವು.

‘ಕೊನೆಗೊಂದು ದಿನ ನಾನು ಹೇಳಿದ್ದನ್ನು ಅವರು ನಂಬಲೇಬೇಕು,’ ಎಂದ 53-ವರ್ಷ-ವಯಸ್ಸಿನ ಲೂಸಿ ಸ್ಟುಡೀ ಮ್ಯಾಕಿಡ್ಡಿ ಹೇಳಿದ್ದಾರೆ. ಅವರು ದೂರು ಸಲ್ಲಿಸಿದ ನಂತರವೇ ಲೋವಾದಲ್ಲಿ ಪೊಲೀಸರು ಮಣ್ಣು ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ಸದಾ ಮದ್ಯದ ಅಮಲಿನಲ್ಲಿರುತ್ತಿದ್ದ ತನ್ನ ಡ್ಯಾಡಿ ಡೊನಾಲ್ಡ್ ಸ್ಟುಡಿ ತಾನು ಕೊಂದ ಮಹಿಳೆಯರ ಶವಗಳನ್ನು ಪ್ರಿಮೊಂಟ್ ಕೌಂಟಿಯ ಥುರ್ಮನಲ್ಲಿರುವ ಬಾವಿಯಲ್ಲಿ ಬಿಸಾಡುವಂತೆ ತನ್ನ ಪುತ್ರಿಯರಿಗೆ ಹೇಳುತ್ತಿದ್ದ ಎಂದು ಲೂಸಿ ಹೇಳಿದ್ದಾರೆ.

ನಾನು ಹೇಳಿರುವುದು ಸುಳ್ಳಾಗಲಾರದು!

ತನ್ನ ಆಹುತಿಗಳ (ಮಹಿಳೆಯರು) ತಲೆಯನ್ನು ಗೋಡೆಗೆ ಅಪ್ಪಳಿಸಿ ಕೊಲ್ಲುತ್ತಿದ್ದ ಎಂದು ಲೂಸಿ ಮಾಡಿರುವ ಆರೋಪ ನಿಜವೇ ಆಗಿದ್ದಲ್ಲಿ ಡೊನಾಲ್ಡ್ ಅಮೆರಿಕಾದ ಅತಿದೊಡ್ಡ ಸರಣಿ ಹಂತಕರಲ್ಲಿ ಒಬ್ಬನೆಸಿಕೊಳ್ಳುತ್ತಾನೆ.

‘ಮಣ್ಣಿನ ಪರೀಕ್ಷೆ ನಡೆಸುತ್ತಿರುವ ಬಗ್ಗೆ ನನಗೆ ಚಿಂತೆಯಿಲ್ಲ. ಭೂಮಿಯನ್ನು ಅಗಿಯಲು ಅವರು ಸಾಕಷ್ಟು ಹಣ ಖರ್ಚು ಮಾಡಿರುವ ಸಂಗತಿ ನನ್ನ ಗಮನಕ್ಕೆ ಬಂದಿದೆ. ನಾನು ಹೇಳಿರುವುದು ಸುಳ್ಳಾಗಲಾರದು,’ ಎಂದು ಲೂಸಿ ಹೇಳಿದ್ದಾರೆ.

ಡೊನಾಲ್ಡ್ ಸ್ಟುಡಿ 2011 ರಲ್ಲೇ ಸತ್ತಿದ್ದಾನೆ!

ಲೂಸಿ ತೋರಿಸಿರುವ ಜಾಗದ ಸ್ವಲ್ಪ ಭಾಗವನ್ನು ಡೊನಾಲ್ಡ್ ತನ್ನ 75ನೇ ವಯಸ್ಸಿನಲ್ಲಿ ಸಾಯವ 6 ವರ್ಷಗಳಷ್ಟು ಮೊದಲು ಅಂದರೆ 2006 ರಲ್ಲಿ ಅಗಿಯಲಾಗಿತ್ತು. ಆ ಕೆಲಸಕ್ಕೆ ಎಫ್ ಬಿ ಸುಮಾರು 300,000 ಡಾಲರ್ ಗಳನ್ನು ವ್ಯಯಿಸಿತ್ತು. ಆದರೆ ಅಲ್ಲಿ ದೇಹದ ಅವಶೇಷಗಳ್ಯಾವೂ ಪತ್ತೆಯಾಗಿರಲಿಲ್ಲ. ಆದರೆ ಶವಗಳನ್ನು ಪತ್ತೆಹಚ್ಚುವ ನಾಯಿಗಳು ಈ ವರ್ಷದ ಆರಂಭದಲ್ಲಿ ನಾಲ್ಕು ಸ್ಥಳಗಳನ್ನು ಗುರುತಿಸಿದ್ದವು. ಲೂಸಿ ಉಲ್ಲೇಖಿಸಿರುವ ಬಾವಿಯ ಬಳಿ ನಾಯಿಗಳು ಜಾಸ್ತಿ ಹೊತ್ತು ಓಡಾಡಿವೆ.

‘ನಾಯಿಗಳು ಅಲ್ಲಿ ಜಾಸ್ತಿ ಹೊತ್ತು ಓಡಾಡಿದ್ದು ನನಗೆ ಆಶ್ಚರ್ಯವಾಗಿಲ್ಲ. ಯಾಕೆಂದರೆ ಆ ಜಾಗದಲ್ಲಿ ಮುಷ್ರೂಮ್ ಗಳು ಹೇರಳವಾಗಿ ಮತ್ತು ಆಕಾರದಲ್ಲಿ ದೊಡ್ಡದಾಗಿ ಬೆಳೆಯುತ್ತಿರುವುದಕ್ಕೆ ಮಹಿಳೆಯರ ದೇಹಗಳೇ ಕಾರಣ ಅಂತ ಡ್ಯಾಡಿ ಹೇಳುತ್ತಿದ್ದ. ನಾವು ಮುಷ್ರೂಮ್ ಗಳ ಮೇಲೆ ಕಾಸ್ಟಿಕ್ ಸೋಡ ಸಿಂಪಡಿಸಿದ್ದೆವು,’ ಎಂದ ಲೂಸಿ ಹೇಳಿದ್ದಾರೆ.

Lucy Studey with FBI officials

ಎಫ್ ಬಿ ಐ ಅಧಿಕಾರಿಗಳೊಂದಿಗೆ ಲೂಸಿ ಸ್ಟುಡಿ

ಯಾಕೆ ವಿಳಂಬ ಮಾಡಿದ್ದು?

‘ಕಳೆದೊಂದು ದಶಕದ ಅವಧಿಯಲ್ಲಿ ನಾನು ಎಫ್ ಬಿ ಐ ಅಧಿಕಾರಿಗಳೊಂದಿಗೆ ಹಲವಾರು ಬಾರಿ ಮಾತಾಡಿದ್ದೇನೆ. ನನ್ನ ಡ್ಯಾಡಿ ಬದುಕಿದ್ದಾಗಲೇ ಅವರು ಯಾಕೆ ಯಾವುದೇ ಕ್ರಮ ಜರುಗಿಸಲಿಲ್ಲ,’ ಎಂದು ನ್ಯೂಸ್ ವೀಕ್ ಜೊತೆ ಮಾತಾಡುವಾಗ ಲೂಸಿ ಹೇಳಿದ್ದಾರೆ.

‘ಅಧಿಕಾರಿಗಳು ಭೂಮಿಯನ್ನು ಅಗೆದು, ಸತ್ತ ಮಹಿಳೆಯರ ಅವಶೇಷಗಳನ್ನು ಹೊರತೆಗೆದು ಅವುಗಳನ್ನು ಗುರುತಿಸಿ ಆಯಾ ಕುಟುಂಬಗಳ ಸದಸ್ಯರಿಗೆ ನೀಡಿದರೆ, ಕನಿಷ್ಟ ಅವರು ಗೌರವಯುತ ಅಂತ್ಯಸಂಸ್ಕಾರವನ್ನಾದರೂ ನಡೆಸುತ್ತಾರೆ,’ ಎಂದು ಲೂಸಿ ಹೇಳಿದ್ದಾರೆ.

ಡೊನಾಲ್ಡ್ ಟ್ರ್ಯಾಕ್ ರೆಕಾರ್ಡ್ ಸರಿಯಿಲ್ಲ

ಡೊನಾಲ್ಡ್ ಬದುಕಿದ್ದಾಗ ಹಲವಾರು ಬಾರಿ ಕಾನೂನು ವಿರೋಧಿ ಕೆಲಸಗಳಿಂದಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದ ಮತ್ತು ಅವನ ಇಬ್ಬರು ಪತ್ನಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು.

ತನ್ನ ಡ್ಯಾಡ್ ಗೆ ಸೇರಿದ ಜಮೀನಿನಲ್ಲಿ 15 ಬಿಳಿವರ್ಣದ ಮತ್ತು ಕಪ್ಪು ಕೂದಲಿನ ಮಹಿಳೆಯರನ್ನು ಹೂಣಲಾಗಿದೆ, ಅವರೆಲ್ಲ 20-30 ವರ್ಷ ವಯಸ್ಸಿನ ಮಹಿಳೆಯರಾಗಿದ್ದರೆ ಒಬ್ಬಳು ಮಾತ್ರ 15-ವರ್ಷ-ವಯಸ್ಸಿನ ಹುಡುಗಿಯಾಗಿದ್ದಳು ಎಂದು ಇದಕ್ಕೂ ಮೊದಲು ಲೂಸಿ ಹೇಳಿದ್ದರು,

ಲೂಸಿ ಅಕ್ಕ ಸೂಸನ್ ಹೇಳೋದೇ ಬೇರೆ!

ಖುದ್ದು ತನ್ನ ತಂದೆಯ ವಿರುದ್ಧ ಲೂಸಿ ಮಾಡುತ್ತಿರುವ ಆರೋಪಗಳ ಕುರಿತು ಅನೇಕ ಸಂದೇಹಗಳು ಸೃಷ್ಟಿಯಾಗಿವೆ. ಅವರ ಒಡಹುಟ್ಟಿದ ಅಕ್ಕ ಸೂಸನ್ ತನ್ನ ತಂಗಿಯ ಆರೋಪಗಳನ್ನು ತಳ್ಳಿಹಾಕಿದ್ದಾರೆ. ನ್ಯೂಸ್ ವೀಕ್ ಪತ್ರಿಕೆಯೊಂದಿಗೆ ಮಾತಾಡಿರುವ ಅವರು ‘ನನ್ನ ಡ್ಯಾಡಿ ಕೊಲೆಗಡುಕನಾಗಿದ್ದರೆ ನನಗೆ ಗೊತ್ತಾಗುತ್ತಿರಲಿಲ್ಲವೇ?’ ಎಂದು ಹೇಳಿದ್ದಾರೆ.

‘ನಾನು ಲೂಸಿಗಿಂತ ಎರಡು ವರ್ಷ ದೊಡ್ಡವಳು, ಹಾಗಾಗಿ ನನ್ನ ಡ್ಯಾಡಿ ಹತ್ಯೆಗಳನ್ನು ನಡೆಸಿದ್ದರೆ ನನಗದು ಗೊತ್ತಾಗುತಿತ್ತು. ನನ್ನ ಡ್ಯಾಡ್ ಸರಣಿ ಹಂತಕ ಅನ್ನೋದು ನನ್ನ ಗಮನಕ್ಕೆ ಬರುತ್ತಿರಲಿಲ್ಲವೇ? ಅದರೆ ಅವರು ಪಾತಕಿ ಆಗಿರಲಿಲ್ಲ, ಅವರ ಹೆಸರಿಗೆ ಕಳಂಕ ಮೆತ್ತಿಕೊಳ್ಳುವುದು ನನಗಿಷ್ಟವಿಲ್ಲ.

ಡ್ಯಾಡ್ ಶಿಸ್ತಿನ ಸಿಪಾಯಿ ಆಗಿದ್ದರು

ಅವರು ಶಿಸ್ತಿನ ವ್ಯಕ್ತಿಯಾಗಿದ್ದರು. ಮಕ್ಕಳ ಬಗ್ಗೆ ಅಪಾರ ಕಾಳಜಿಯಿಟ್ಟುಕೊಂಡಿದ್ದರು ಮತ್ತು ನಮ್ಮನ್ನು ಬಹಳ ಪ್ರೀತಿಸುತ್ತಿದ್ದರು. ಕಟ್ಟುನಿಟ್ಟಿನ ತಂದೆಯೆನಿಸಿಕೊಂಡವರು ಸರಣಿ ಹಂತಕರಾಗಿರುವುದಿಲ್ಲ,’ ಎಂದು ಸೂಸನ್ ಹೇಳಿದ್ದಾರೆ.

ಶವ ಪತ್ತೆ ಮಾಡುವ ನಾಯಿಗಳಿಗೆ ಶೂಬಾಕ್ಸ್ ನಲ್ಲಿಟ್ಟು ಹೂತಿದ್ದ ಹುಟ್ಟುವಾಗಲೇ ಸತ್ತ ಶಿಶುವಿನ ದೇಹದ ವಾಸನೆ ತಾಕಿರಬೇಕು. ಒಂದು ಗೋಲ್ಡನ್ ರಿಟ್ರೀವರ್ ನಾಯಿಯನ್ನೂ ಅದೇ ಸ್ಥಳದಲ್ಲಿ ಹೂತಿಡಲಾಗಿದೆ, ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಕ್ರೈಮ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ