ಬೆಂಗಳೂರಲ್ಲಿ ನಿಲ್ಲದ ಪುಡಿರೌಡಿಗಳ ಅಟ್ಟಹಾಸ: ಸಿಗರೇಟ್ ದುಡ್ಡು ಕೇಳಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್
ಪುಡಿರೌಡಿಗಳು ಸಿಗರೇಟ್ ಸೇದಲು ಹೋಗಿ ಅಂಗಡಿಯವರಿಗೆ ದುಡ್ಡು ಕೊಡದೆ ಗಲಾಟೆ ಮಾಡಿರುವ ಘಟನೆ ಬೆಂಗಳೂರಿನ ಕುಂದಲಹಳ್ಳಿ ಗೇಟ್ ಬಳಿ ನಡೆದಿದೆ.
ಬೆಂಗಳೂರು: ನಗರದಲ್ಲಿ ಪುಡಿರೌಡಿಗಳ (Rowdies) ಹಾವಳಿ ಹೆಚ್ಚಾಗಿದೆ. ರೌಡಿಗಳ ಅಟ್ಟಹಾಸಕ್ಕೆ ಎಲ್ಲೆಯೇ ಇಲ್ಲದಂತಾಗಿದೆ. ನಿನ್ನೆ (ಡಿ.8) ರಾತ್ರಿ ನಾಲ್ಕು ಜನರ ರೌಡಿಗಳ ಗುಂಪು ಕುಂದಲಹಳ್ಳಿ ಗೇಟ್ ಬಳಿಯಿರುವ ಬ್ರಹ್ಮಲಿಂಗೇಶ್ವರ ಬೇಕರಿಗೆ ಸಿಗರೇಟ್ ಸೇದಲು ಹೋಗಿದ್ದಾರೆ. ಬೇಕರಿಯವರು ಸಿಗರೇಟ್ ನೀಡಿ ಹಣ ಕೇಳಿದ್ದಾರೆ. ಹಣ ಕೇಳಿದ್ದಕ್ಕೆ ಬೇಕರಿ ಹುಡುಗರಿಗೆ ರೌಡಿಗಳು ಅವ್ಯಾಚ್ಯ ಶಬ್ಧಗಳಿಂದ ನಿಂದಿಸುತ್ತಾ, ಮನಸೋ ಇಚ್ಚೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಹಲ್ಲೆಗೊಳಗಾದವರು ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಹಿಂತ ಪುಡಿ ರೌಡಿಗಳ ಹೆಡೆಮುರಿ ಕಟ್ಟಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಚೀಟಿಯ 80 ಸಾವಿರ ಹಣ, ಸರ, ಮೊಬೈಲ್ ತೆಗೆದುಕೊಂಡು ಹೊಗಿದ್ದಾರೆ
ಉದ್ದೇಶ ಇದ್ದುಕೊಂಡು ಹೊಡೆದಿದ್ದಾರೆ. ನಾನು ಅವರನ್ನು ದುಡ್ಡು ಕೇಳಿರಲಿಲ್ಲ. ಬಂದು ಸಿಗರೇಟು ಅಂಟಿಸಿಕೊಂಡವರು ಓನರ್ ಎಲ್ಲಿ ಅಂತ ಕೇಳಿದರು. ಒಳಗಿದ್ದಾರೆ ಅಂತ ಹೇಳಿದಾಗ ಹತ್ತಿರ ಯಾಕೆ ಬರ್ತಿಯಾ ಅಂತ ಹಲ್ಲೆ ಮಾಡಿದರು. ಅಂಗಡಿಯಲ್ಲಿನ ಸಿಗರೇಟ್, ಗ್ಲಾಸ್ ಎಲ್ಲಾ ಹೊಡೆದಾಕಿದ್ದಾರೆ. ಇಬ್ಬರು ಲೋಕಲ್ ಇದ್ದಾರೆ, ಆಗಾಗ ಅಂಗಡಿ ಮುಂದೆ ಜಗಳ ಆಡ್ತಾಯಿರುತಿದ್ದರು. ಈಗ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇನೆ ಎಂದು ಹಲ್ಲೆಗೊಳಗಾದ ನಿತಿನ್ ಹೇಳಿದ್ದಾರೆ.
#Bangalore: An incident where a group of men were seen vandalising a bakery and also attacking the bakery owners over a trivial argument at Kundanahalli Gate near HAL last night. pic.twitter.com/cgbY6SBUXs
— Mohammed Irshad (@Shaad_Bajpe) December 9, 2022
ನಾವು ಇಲ್ಲಿ ಒಂದು ವರ್ಷದಿಂದ ಅಂಗಡಿ ನಡೆಸುತಿದ್ದೇವೆ. ಈ ಹಿಂದೆ ಬೇಕರಿ ವಿಚಾರಕ್ಕೆ ಪಕ್ಕದ ಅಂಗಡಿಯವರು ಗಲಾಟೆ ಮಾಡಿದ್ದರು. ಈಗಲೂ ಅವರ ಅಂಗಡಿ ಅಲ್ಲೇ ಇದೆ. ಅವರೇ ಮಾಡಿರೋ ಅನುಮಾನ ಇದೆ. ಹಲ್ಲೆ ಮಾಡಿದವರು ಚೀಟಿಯ 80 ಸಾವಿರ ಹಣ, ಸರ, ಮೊಬೈಲ್ ತೆಗೆದುಕೊಂಡು ಹೊಗಿದ್ದಾರೆ ಎಂದು ಆರೋಪಿಸಿದ್ದಾರೆ. ಇವತ್ತು ಮಧ್ಯಾಹ್ನ ನನಗೆ ವಿಡಿಯೋ ಬಂತು ನೋಡಿದೆ. ಬೆಂಗಳೂರಿನಲ್ಲಿ ಹೊಟ್ಟೆ ಪಾಡಿಗೆ ಕೆಲಸ ಮಾಡೊ ಹುಡುಗರ ಮೇಲೆ ಹಲ್ಲೆ ಆಗಿದೆ. ದುಡ್ಡಿಗಾಗಿ ಹುಡುಗರ ಮೇಲೆ ಹಲ್ಲೆ ಮಾಡುತಿದ್ದಾರೆ. ಬೈಂದೂರು ಶಾಸಕ ಸುಕುಮಾರ್ ಸಹ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಕರವೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ರಾಯಚೂರು: ಆಟಿಕೆ ಸಾಮಾನು ಹಿಂದಿರುಗಿಸುವ ವಿಚಾರದಲ್ಲಿ ಮಾರಾಮಾರಿ
ನಾವು ಉದ್ಯಮಿ ಬಾಂದವರು ಖಂಡಿಸುತ್ತೆವೆ. ಯಾವ ಕಾರಣಕ್ಕಾಗಿ ಹಲ್ಲೆ ನಡೆದಿದೆ ಅನ್ನೊದು ಗೊತ್ತಿಲ್ಲ. ಹಲ್ಲೆಗೊಳಗಾದ ಯುವಕರು ನಡುಗುತಿದ್ದಾರೆ. ಅಂಗಡಿಯವರು ಬೈಂದೂರು ಮೂಲದ ಹುಡುಗರು. ಹಲ್ಲೆ ಮಾಡಿದವರು ತಮಿಳು ಮಿಶ್ರಿತ ಭಾಷೆ ಮಾತನಾಡುತಿದ್ದರು. ಚೀಟಿ ಹಣ ಸೇರಿದಂತೆ ಒಂದಿಷ್ಟು ಹಣ ಕದ್ದಿದ್ದಾರೆ. ಒಳ್ಳೆ ಪ್ರಮಾಣಿಕ ಉದ್ಯಮಿಗಳಿಗೆ ಅನ್ಯಾಯವಾಗಬಾರದು. ಯುವಕರು ಕಷ್ಟ ಪಟ್ಟು ದುಡಿಯುತಿದ್ದಾರೆ. ಅಕ್ಕಪಕ್ಕದಲ್ಲಿದ್ದ ಓರ್ವರು ಗೂಂಡ ಕಳಿಸಿದ್ದಾರೆ ಎನ್ನಲಾಗುತ್ತಿದೆ. ಉದ್ಯಮಿಗಳು ಸೇರಿ ಪ್ರತಿಭಟನೆ ಮಾಡುತ್ತೇವೆ. ೨೪ ಗಂಟೆಗೊಳಗಾಗಿ ಆರೋಪಿಗಳ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೂ ಹಲ್ಲೆ ಖಂಡಿಸಿ ಹೆಚ್‌ಎಎಲ್ ಪೊಲೀಸ್ ಠಾಣೆ ಎದುರು ಬೇಕರಿ ಹಾಗೂ ಉದ್ಯಮಿದಾರರ ಸಂಘದ ಪ್ರತಿಭಟನೆ ಹಿನ್ನೆಲೆ ಹೆಚ್‌ಎಎಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಪರಿಚಿತ ಏಳೆಂಟು ಮಂದಿಯಿಂದ ಹಲ್ಲೆ ಮಾಡಿದ ಆರೋಪದಲ್ಲಿ ಐಪಿಸಿ ಸೆಕ್ಷನ್ 506, 504, 427, 395, 448 ಅಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳಿಗಾಗಿ ಹೆಚ್ ಎ.ಎಲ್ ಪೊಲೀಸರು ಬಲೆ ಬೀಸಿದ್ದರು.
ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಹಲ್ಲೆಗೈದಿದ್ದ ಮೂವರು ಪುಡಿ ರೌಡಿಗಳ ಸೆರೆ ಹಡಿದಿದ್ದಾರೆ. ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಕಾರ್ತಿಕ್(20), ಕೆಂಗೇರಿಯ ತಾಜ್‌ವೆಸ್ಟ್ ಹೋಟೆಲ್‌ನ ಮ್ಯಾನೇಜರ್ ಕಾರ್ತಿಕ್(23), ಅಲ್ಯೂಮಿನಿಯಂ ಕೆಲಸ ಮಾಡ್ತಿದ್ದ 20 ವರ್ಷದ ಸಲ್ಮಾನ್ ಬಂಧಿತ ಆರೋಪಿಗಳು.
ಇದನ್ನೂ ಓದಿ: ರೌಡಿಶೀಟರ್ ಶಿವಶಂಕರ್ ರೆಡ್ಡಿ ಮೇಲೆ ಗುಂಡಿನ ದಾಳಿ ಪ್ರಕರಣ: ಆರೋಪಿಗಳ ಬಂಧನಕ್ಕೆ ಮೂರು ತನಿಖಾ ತಂಡ ರಚನೆ
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:58 pm, Fri, 9 December 22