ಕ್ಯಾಸಿನೋದಲ್ಲಿ ಹೂಡಿಕೆ‌ ಮಾಡುವುದಾಗಿ ನಂಬಿಸಿ ಕೋಟ್ಯಂತರ ರೂ ನಾಮ: ಸ್ಯಾಂಡಲ್​ವುಡ್ ಡ್ರಗ್ ಕೇಸ್ ಆರೋಪಿಯಿಂದ ವಂಚನೆ

ಬೆಂಗಳೂರಿನ ಉದ್ಯಮಿಗೆ ರಾಹುಲ್ ತೋನ್ಸೆ ಮತ್ತು ಅವರ ಕುಟುಂಬದವರು ಕ್ಯಾಸಿನೋ ಹೂಡಿಕೆಯ ನೆಪದಲ್ಲಿ 25.5 ಕೋಟಿ ರೂಪಾಯಿ ವಂಚಿಸಿದ್ದಾರೆ. ಶ್ರೀಲಂಕಾದ ಕ್ಯಾಸಿನೋದಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ. ರಾಹುಲ್ ತೋನ್ಸೆಯ ತಂದೆ ರಾಮಕೃಷ್ಣ ರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ತನಿಖೆ ನಡೆಯುತ್ತಿದೆ.

ಕ್ಯಾಸಿನೋದಲ್ಲಿ ಹೂಡಿಕೆ‌ ಮಾಡುವುದಾಗಿ ನಂಬಿಸಿ ಕೋಟ್ಯಂತರ ರೂ ನಾಮ: ಸ್ಯಾಂಡಲ್​ವುಡ್ ಡ್ರಗ್ ಕೇಸ್ ಆರೋಪಿಯಿಂದ ವಂಚನೆ
ಕ್ಯಾಸಿನೋದಲ್ಲಿ ಹೂಡಿಕೆ‌ ಮಾಡುವುದಾಗಿ ನಂಬಿಸಿ ಕೋಟ್ಯಂತರ ರೂ ನಾಮ: ಸ್ಯಾಂಡಲ್​ವುಡ್ ಡ್ರಗ್ ಕೇಸ್ ಆರೋಪಿಯಿಂದ ವಂಚನೆ
Edited By:

Updated on: Feb 08, 2025 | 3:47 PM

ಬೆಂಗಳೂರು, ಫೆಬ್ರವರಿ 08: ಸ್ಯಾಂಡಲ್​ವುಡ್ ಡ್ರಗ್ ಕೇಸ್​ ದೇಶಾದ್ಯಂತ ಸಾಕಷ್ಟು ಚರ್ಚೆ ಮಾಡಿತ್ತು. ಪರಕರಣದಲ್ಲಿ ಆರೋಪಿ ರಾಹುಲ್ ತೋನ್ಸೆ ಹೆಸರು ಸಹ ಕೇಳಿಬಂದಿತ್ತು. ಸದ್ಯ ಇದೇ ಆರೋಪಿ ಇದೀಗ ಬೆಂಗಳೂರಿನ ಉದ್ಯಮಿ ಓರ್ವರಿಗೆ ಕೊಟ್ಯಂತರ ರೂ. ವಂಚನೆ (Fraud) ಮಾಡಿರುವಂತಹ ಘಟನೆ ನಡೆದಿದ್ದು, ಐವರ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

25.5 ಕೋಟಿ ರೂ. ವಂಚನೆ

ಕ್ಯಾಸಿನೋದಲ್ಲಿ ಹೂಡಿಕೆ ಮಾಡಿಸಿ ಲಾಭದ ಆಸೆ ತೋರಿಸಿ ಉದ್ಯಮಿ ವಿವೇಕ್ ಹೆಗ್ಡೆ ಎನ್ನುವವರಿಗೆ 25.5 ಕೋಟಿ ರೂ. ವಂಚನೆ ಮಾಡಲಾಗಿದೆ. ಆರೋಪಿ ರಾಹುಲ್ ತೋನ್ಸೆ, ಆತನ ಅಪ್ಪ ರಾಮಕೃಷ್ಣ ರಾವ್​,
ತಾಯಿ ರಾಜೇಶ್ವರಿ ಸೇರಿ ಐವರ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಎ1 ರಾಮಕೃಷ್ಣ ರಾವ್ ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪೊಲೀಸ್ ಬಲೆಗೆ ಬಿದ್ದ ಲಕ್ಕಿ ಭಾಸ್ಕರ್ ಮಾದರಿ ಗ್ಯಾಂಗ್: ಎಟಿಎಂ ಹಣ ಎಗರಿಸುತ್ತಿದ್ದವರು ಅರೆಸ್ಟ್

ಹೂಡಿಕೆ‌ ನೆಪದಲ್ಲಿ ವಂಚನೆ ಮಾಡಿದ್ದಾನೆಂದು ಈ ಹಿಂದೆ ಇಂದಿರಾನಗರದಲ್ಲಿ ತೋನ್ಸೆ ವಿರುದ್ಧ ನಟಿ ಸಂಜನಾ ಗಲ್ರಾನಿ ದೂರು ನೀಡಿದ್ದರು. ಇದೀಗ ಕ್ಯಾಸಿನೋದಲ್ಲಿ ಹೂಡಿಕೆ‌ ಮಾಡುವುದಾಗಿ ನಂಬಿಸಿ ವಿವೇಕ್ ಹೆಗ್ಡೆ ಮತ್ತು ಅವರ ಸ್ನೇಹಿತರಿಗೆ 25.5 ಕೋಟಿ ರೂ. ವಂಚನೆ ಮಾಡಿದ್ದಾರೆ.

2023ರ ಫೆ.7ರಂದು ವಿವೇಕ್​ಗೆ ಸ್ನೇಹಿತರ ಮೂಲಕ‌ ರಾಮಕೃಷ್ಣ ಪರಿಚಯವಾಗಿದೆ. ಉದ್ಯಮಿ ಕಚೇರಿಯಲ್ಲಿ ಸಾಲ ನೀಡುವ ಬಗ್ಗೆ ಸಭೆ ಆಗಿತ್ತು. ಶ್ರೀಲಂಕಾ, ದುಬೈನಲ್ಲಿ ಕೆಲ ವ್ಯಾಪಾರಗಳಲ್ಲಿ ಲಾಭವಿದೆ ಅಂದು ನಂಬಿಸಿದ್ದರು. ಮಗಳು ರಕ್ಷಾ, ಅಳಿಯ ಚೇತನ್, ಮಗ ರಾಹುಲ್ ಎಲ್ಲಾ ವ್ಯಾಪಾರ ಮಾಡುತ್ತಾರೆ. ಮೊಬೈಲ್​ ಮೂಲಕ ಮಗಳು, ಅಳಿಯ ಜೊತೆ ಮಾತನಾಡಿಸಿದ್ದ ರಾಮಕೃಷ್ಣ, ಸಾಲದ ರೂಪದಲ್ಲಿ ನೀಡುವ ಹಣಕ್ಕೆ 4% ಬಡ್ಡಿ ನೀಡುವುದಾಗಿ ತಿಳಿಸಿದ್ದರು.

ಅಳಿಯ, ಮಗಳು ಶ್ರೀಲಂಕಾದ ಕ್ಯಾಸಿನೋದಲ್ಲಿ ಟೇಬಲ್‌ ಹೊಂದಿದ್ದಾರೆ. ರಾಹುಲ್ ವ್ಯವಹಾರ ನಿರ್ವಹಿಸ್ತಿದ್ದಾನೆ ಎಂದು ನಂಬಿಸಿದ್ದ ರಾಮಕೃಷ್ಣರಾವ್, ಹಲವು ಬಾರಿ ಫೋನ್​ನಲ್ಲಿ ಮಾತುಕತೆ ನಡೆಸಿ, ಹೆಚ್ಚಿನ ಬಡ್ಡಿಯ ಭರವಸೆ ನೀಡಿದ್ದಾರೆ. ಮೊದಲು ರಾಹುಲ್ ಬ್ಯಾಂಕ್​ ಖಾತೆಗೆ 30 ಲಕ್ಷ ರೂಪಾಯಿ ಜಮೆ ಮಾಡಲಾಗಿದೆ. ಜೊತೆಗೆ ದೂರುದಾರರಿಗೆ ಶ್ರೀಲಂಕಾಗೆ ಟಿಕೆಟ್, ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ವಿವೇಕ್ ಮತ್ತು ನವೀನ್ ಚಂದ್ರ ಕೊಠಾರಿ ಶ್ರೀಲಂಕಾಗೂ ಹೋಗಿದ್ದರು. ಈ ವೇಳೆ ಬೆಲ್ಲಾ, ಜಿಯೋ ಕ್ಯಾಸಿನೋಗೆ ಕರೆದೊಯ್ದು ನಂಬಿಸಿದ್ದರು.

ಇದನ್ನೂ ಓದಿ: ಬೆಂಗಳೂರು ಚೋಳೂರುಪಾಳ್ಯದಲ್ಲಿ ನಾಲ್ಕು ಅಂಗಡಿಗಳ ಸರಣಿ ಕಳ್ಳತನ, ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಹೀಗೆ ನಾಟಕವಾಡಿ 3.5 ಕೋಟಿ ರೂ. ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದು, ಜೊತೆಗೆ ಹೂಡಿಕೆ ನೆಪದಲ್ಲಿ ವಿವೇಕ್ ಸ್ನೇಹಿತರ ಮೂಲಕ 22 ಕೋಟಿ ರೂ. ನೀಡಲಾಗಿತ್ತು. ಹಣ ವಾಪಸ್ ಕೇಳಿದಾಗ ಆರೋಪಿ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಾರೆ. ಬಳಿಕ ಉದ್ಯಮಿ ವಿವೇಕ್ ಹೆಗ್ಡೆ ಬಸವೇಶ್ವರ ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಸಿಕೊಂಡು ಪ್ರಮುಖ ಆರೋಪಿ ರಾಮಕೃಷ್ಣರಾವ್​ ಬಂಧಿಸಿದ್ದು, 10 ದಿನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.