AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು: ಪ್ರೀತಿ, ಪ್ರೇಮ, ಮದುವೆ ಹೆಸರಿನಲ್ಲಿ ಹಲವರಿಗೆ ವಂಚಿಸಿದ ಮಹಿಳೆ

ತುಮಕೂರಿನಲ್ಲಿ 29 ವರ್ಷದ ಫಾರ್ಹಖಾನಂ ಎಂಬ ಮಹಿಳೆ ವಿರದ್ಧ ಮದುವೆಯ ಹೆಸರಿನಲ್ಲಿ ಹಣ ಮತ್ತು ಆಭರಣಗಳನ್ನು ದೋಚಿರುವ ಆರೋಪ ಕೇಳಿಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಪುರುಷರನ್ನು ಸಂಪರ್ಕಿಸಿ, ಹನಿಟ್ರ್ಯಾಪ್ ಮೂಲಕ ವಂಚಿಸುತ್ತಿದ್ದಳು ಎನ್ನಲಾಗಿದೆ. ಇತ್ತೀಚಿಗೆ ತುಮಕೂರಿನ ಇದ್ರೀಸ್ ಎಂಬುವರಿಗೆ ವಂಚಿಸಿದ್ದಾಳೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು: ಪ್ರೀತಿ, ಪ್ರೇಮ, ಮದುವೆ ಹೆಸರಿನಲ್ಲಿ ಹಲವರಿಗೆ ವಂಚಿಸಿದ ಮಹಿಳೆ
ಸಾಂದರ್ಭಿಕ ಚಿತ್ರ
ಮಹೇಶ್ ಇ, ಭೂಮನಹಳ್ಳಿ
ಮಹೇಶ್ ಇ, ಭೂಮನಹಳ್ಳಿ | Edited By: ವಿವೇಕ ಬಿರಾದಾರ|

Updated on: Feb 08, 2025 | 10:05 AM

Share

ತುಮಕೂರು, ಫೆಬ್ರವರಿ 08: ಪ್ರೀತಿ, ಪ್ರೇಮ, ಮದುವೆ ಹೆಸರಿನಲ್ಲಿ ವಂಚಿಸುತ್ತಿದ್ದ ಮಹಿಳೆಯ ವಿರುದ್ಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫಾರ್ಹಖಾನಂ (29) ವಿರುದ್ಧ ಹಲವರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ಫಾರ್ಹಾಖಾನಂ ಸಾಮಾಜಿಕ ಜಾಲತಾಣದ ಮೂಲಕ ಪುರುಷರ ಸ್ನೇಹ ಸಂಪಾದಿಸುತ್ತಿದ್ದಳು. ಬಳಿಕ, ಅವರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ವಂಚಿಸುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.

ಫಾರ್ಹಖಾನಂಳನ್ನು ತುಮಕೂರಿನ ಇದ್ರೀಸ್ ಎಂಬುವರು 2014ರಲ್ಲಿ ಮದುವೆಯಾಗಿದ್ದರು. ಮನೆಯವರೆಲ್ಲ ಸೇರಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿದ್ದರು. ಇದ್ರೀಸ್​ಗೆ ಫಾರ್ಹಖಾನಂ ಎರಡನೇ ಪತ್ನಿಯಾಗಿದ್ದಳು. ಮೊದಲನೇ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಇದ್ರೀಸ್​ ಎರಡನೇ ಮದುವೆ ಮಾಡಿಕೊಂಡಿದ್ದನು. ಮದುವೆಯಲ್ಲ ಎಲ್ಲ ಖರ್ಚನ್ನು ಇದ್ರೀಸ್​ ನೋಡಿಕೊಂಡಿದ್ದನು. ಫಾರ್ಹನಾ ಖಾನಂಗೆ 1.42 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣ ನೀಡಿದ್ದರು.

27 ದಿನ ಸಂಸಾರ ಮಾಡಿದ್ದ ಫಾರ್ಹಖಾನಂ ಬಳಿಕ ವರಸೆ ಬದಲಿಸಿದ್ದಾಳು. ಇದ್ರೀಸ್​ಗಿಂತ ಮೊದಲು ಜಾಕೀರ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದ ಫಾರ್ಹಖಾನಂ ಮೊದಲನೇ ಪತಿ ಜೊತೆ ಕದ್ದು ಮುಚ್ಚಿ ಮಾತನಾಡುತ್ತಿದ್ದಳು.

ಇದನ್ನೂ ಓದಿ: ಪರ ಸ್ತ್ರೀಯೊಂದಿಗೆ ಸಲುಗೆ: ಸುಪಾರಿ ನೀಡಿ ಪತಿಯ ಎರಡು ಕಾಲು ಮುರಿಸಿದ ಪತ್ನಿ!

ಈ ವಿಚಾರ ಗೊತ್ತಾಗಿ ಇದ್ರೀಸ್ ಪ್ರಶ್ನೆ ಮಾಡಿದ್ದರು. ಈ ವೇಳೆ ಗಲಾಟೆ ಸಂಭವಿಸಿತ್ತು. ಫಾರ್ಹಾನ ಖಾನಂ ಗಲಾಟೆ ಮಾಡಿ ಇದ್ರೀಸ್​ನನ್ನೇ ಮನೆಯಿಂದ ಹೊರಗೆ ಓಡಿಸಿದ್ದಳು. ಫಾರ್ಹಖಾನಂ ವಿರುದ್ಧ ಇದ್ರೀಸ್ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮದುವೆ ಹಣ ಹಾಗೂ ಚಿನ್ನಾಭರಣ ವಾಪಸ್ ಕೊಡುವಂತೆ ಇದ್ರೀಸ್ ಕೇಳಿದ್ದರು.

ಫಾರ್ಹಖಾನಂ ಗುಂಡಾಗಳನ್ನು ಕಳುಹಿಸಿ ಇದ್ರೀಸ್​ ಮೇಲೆ ಹಲ್ಲೆ ಮಾಡಿಸಿದ್ದಳು. ಇನ್ನೊಂದೆಡೆ ಪೊಲೀಸರಿಂದಲ್ಲೂ ಇದ್ರೀಸ್​ಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸದೆ ಪೊಲೀಸರು ವ್ಯತಿರಿಕ್ತ ದೂಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ ಎಂದು ಇದ್ರೀಸ್​ ಐಜಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೇ ಇದ್ರೀಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸದ್ಯ ಪರ್ಹಾಖಾನಂ ಮೂರ್ನಾಲ್ಕು ಪುರುಷರೊಂದಿಗೆ ಲವ್ವಿಡವ್ವಿ ನಡೆಸುತ್ತಿದ್ದಾಳೆಂದು ಆರೋಪವಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Mahesha E
Mahesha E

ಮಹೇಶ್ ಇ ಎಂಬ ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದ ನಿವಾಸಿ. ನಮ್ಮ ಹೆಮ್ಮೆಯ ಟಿವಿ9 ತುಮಕೂರು ಜಿಲ್ಲಾ ವರದಿಗಾರನಾಗಿ ಸತತ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದಾಗ ಆ ಸುದ್ದಿ ಬಿತ್ತರ ಬಗ್ಗೆ ಹಾಗೂ ಕೊನೆ ಕ್ಷಣದಲ್ಲಿ ದೇವರ ಜೊತೆಯಿದ್ದ ಎಲ್ಲಾ ಕಾರ್ಯಕ್ರಮಗಳನ್ನ ನೋಡಿ ವರದಿ ಮಾಡಿದ್ದು ನನ್ನ ಭಾಗ್ಯ..ಬಡ ಕುಟುಂಬದಿಂದ ಬಂದಿರುವ ನನಗೆ ಟಿವಿ9 ಸಂಸ್ಥೆ ತುಮಕೂರು ಅಂತಾ ಅತಿದೊಡ್ಡ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ...