ಬೆಳಗಾವಿ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಪ್ರಕರಣದ ಎ3 ಪೊಲೀಸಪ್ಪನ ಮಗ ಪರಾರಿ

ಬೆಳಗಾವಿಯಲ್ಲಿ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಪುತ್ರ ಸೇರಿದಂತೆ ಮೂವರು ಆರೋಪಿಗಳಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ, ಆದರೆ ಪೊಲೀಸ್ ಅಧಿಕಾರಿಯ ಮಗ ಪರಾರಿಯಾಗಿದ್ದಾನೆ. ಈ ಘಟನೆ ಟಿಳಕವಾಡಿ ಪೊಲೀಸ್ ಠಾಣೆಯಿಂದ ಮಾರ್ಕೆಟ್ ಠಾಣೆಗೆ ವರ್ಗಾವಣೆಯಾಗಿದೆ. ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬೆಳಗಾವಿ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಪ್ರಕರಣದ ಎ3 ಪೊಲೀಸಪ್ಪನ ಮಗ ಪರಾರಿ
ಪೋಕ್ಸೋ ಕಾಯ್ದೆ
Updated By: ವಿವೇಕ ಬಿರಾದಾರ

Updated on: May 20, 2025 | 4:11 PM

ಬೆಳಗಾವಿ, ಮೇ 20: ಬಾಲಕಿ (Girl) ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಪುತ್ರ (Police Son) ಸಹಿತ ಭಾಗಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪೋಕ್ಸೋ (Pocso) ಕಾಯ್ದೆಯಡಿ ಪೊಲೀಸ್ ಅಧಿಕಾರಿ ಮಗ ಎ3 ಆಗಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸ್​ ಅಧಿಕಾರಿಯ ಪುತ್ರ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಆರೋಪಿಗಳು ಬಾಲಕಿಯನ್ನು ಮಾರ್ಕೆಟ್ ಠಾಣಾ ವ್ಯಾಪ್ತಿಯಿಂದ ಕರೆದುಕೊಂಡು ಹೋದ ಹಿನ್ನೆಲೆಯಲ್ಲಿ ಪ್ರಕರಣವನ್ನು ಬೆಳಗಾವಿ ಪೊಲೀಸ್​ ಆಯುಕ್ತ ಯಡಾ ಮಾರ್ಟಿನ್ ಅವರು ಟಿಳಕವಾಡಿ ಪೊಲೀಸ್ ಠಾಣೆಯಿಂದ ಮಾರ್ಕೆಟ್ ಠಾಣೆಗೆ ವರ್ಗಾಯಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ ಕೇಸ್​ನಲ್ಲಿ ಇಬ್ಬರು ಅಪ್ರಾಪ್ತರು ಭಾಗಿ

ಆರೋಪಿಗಳು ಬಾಲಕಿಯ ಮೇಲೆ ಬೆಳಗಾವಿಯ ಹೊರವಲಯದ ರೆಸಾರ್ಟ್​​ನಲ್ಲಿ ಅತ್ಯಾಚಾರವೆಸಗಿದ್ದಾರೆ. ಇಬ್ಬರು ಅಪ್ರಾಪ್ತರು ಸೇರಿ ಮೂವರಿಂದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಪ್ರಕರಣದ ಆರೋಪಿ ಸಾಕೀಬ್​ ರೆಸಾರ್ಟ್​​ನಲ್ಲಿ ರೂಮ್​ ಬುಕ್​ ಮಾಡಿದ್ದನು. ಬಾಲಕಿ ಸ್ನೇಹಿತ ಆಕೆಯನ್ನು ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಿಂದ ರೆಸಾರ್ಟ್​ಗೆ ಕರೆದುಕೊಂಡು ಹೋಗಿದ್ದಾನೆ.

ಇದನ್ನೂ ಓದಿ
ಪತಿಯನ್ನೇ ಕೊಂದು ಪಕ್ಕದ ಮನೆಯವನ ಮೇಲೆ ಆರೋಪ ಹಾಕಿದ್ದ ಮಹಿಳೆ ಅರೆಸ್ಟ್
ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಕೋಟಿ ಕೋಟಿ ವಂಚನೆ
ಅನಾಥವಾಗಿ ಬಿದ್ದಿದ್ದ ಮಗುವನ್ನು ಸಾಕಿದ ಮಹಿಳೆ ಆ ಮಗಳಿಂದಲೇ ಕೊಲೆಯಾದ ಕತೆ!
ಯುವಕನ ಹಿಂದೆ ಬಿದ್ದು ಹೆಣವಾದ ಮಹಿಳೆ: ಲವ್ವಿಡವ್ವಿ ಕೊಲೆಯಲ್ಲಿ ಅಂತ್ಯ!

ಇದನ್ನೂ ಓದಿ: ಮಹಿಳೆಯ ಪ್ರೇಮಿಯಿಂದಲೇ ಆಕೆಯ 2 ವರ್ಷದ ಮಗು ಮೇಲೆ ಅತ್ಯಾಚಾರ, ಕೊಲೆ

ಬಳಿಕ, ರೂಮ್​​ನಲ್ಲಿ ಮೂವರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಾಲಕಿ ಮನೆಗೆ ವಾಪಸಾದಾಗ ಹೊಟ್ಟೆ ನೋವು ಎಂದು ಪೋಷಕರಿಗೆ ಹೇಳಿದ್ದಾಳೆ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಟಿಳಕವಾಡಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಸಾಕೀಬ್ ಮತ್ತು ಓರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ, ಪೊಲೀಸ್​ ಅಧಿಕಾರಿ ಪುತ್ರನಿಗಾಗಿ ಬಲೆ ಬೀಸಲಾಗಿದೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ