AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಎಸ್‌ಡಿ, ಸಿಸಿಬಿ ಜಂಟಿ ಆಪರೇಷನ್: ಜಿಹಾದಿ ಗ್ಯಾಂಗ್‌ ಲೀಡರ್‌ ಅಂದರ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರನ್ನೇ ಅಡಗುತಾಣವನ್ನಾಗಿಸಿಕೊಂಡಿದ್ದ ನಟೋರಿಯಸ್ ಗ್ಯಾಂಗ್ ಅದು. ಇಡೀ ದೇಶವೇ ಬೆಚ್ಚಿಬೀಳಿಸುವಂಥಾ ಸಂಚು ರೂಪಿಸಿದ್ದ ಟೆರರ್ ಗ್ಯಾಂಗ್‌ ಲೀಡರ್. ಜಿಹಾದಿ ಟೆರರ್‌ ಗ್ಯಾಂಗ್‌ನ ಮೂರು ರಕ್ತಪಿಪಾಸುಗಳನ್ನ ಲಾಕ್ ಮಾಡಿದ್ದ ಸಿಸಿಬಿ ಇದೀಗ ಗ್ಯಾಂಗ್‌ ಲೀಡರ್‌ನನ್ನೇ ಅಂದರ್ ಮಾಡಿದೆ. ಐಎಸ್‌ಡಿ, ಸಿಸಿಬಿ ಜಂಟಿ ಆಪರೇಷನ್: ಸದ್ದುಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯ ಗುಪ್ಪನ ಪಾಳ್ಯದ ಮನೆಯಲ್ಲಿ ವಾಸವಿದ್ದ ಬೆಂಗಳೂರಿನ ನಟೋರಿಯಸ್‌ ಜಿಹಾದಿ ಗ್ಯಾಂಗ್‌ ಲೀಡರ್‌ ಮೆಹಬೂಬ್‌ ಪಾಷಾನನ್ನು ಐಎಸ್‌ಡಿ ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ […]

ಐಎಸ್‌ಡಿ, ಸಿಸಿಬಿ ಜಂಟಿ ಆಪರೇಷನ್: ಜಿಹಾದಿ ಗ್ಯಾಂಗ್‌ ಲೀಡರ್‌ ಅಂದರ್
Follow us
ಸಾಧು ಶ್ರೀನಾಥ್​
|

Updated on:Jan 17, 2020 | 10:17 AM

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರನ್ನೇ ಅಡಗುತಾಣವನ್ನಾಗಿಸಿಕೊಂಡಿದ್ದ ನಟೋರಿಯಸ್ ಗ್ಯಾಂಗ್ ಅದು. ಇಡೀ ದೇಶವೇ ಬೆಚ್ಚಿಬೀಳಿಸುವಂಥಾ ಸಂಚು ರೂಪಿಸಿದ್ದ ಟೆರರ್ ಗ್ಯಾಂಗ್‌ ಲೀಡರ್. ಜಿಹಾದಿ ಟೆರರ್‌ ಗ್ಯಾಂಗ್‌ನ ಮೂರು ರಕ್ತಪಿಪಾಸುಗಳನ್ನ ಲಾಕ್ ಮಾಡಿದ್ದ ಸಿಸಿಬಿ ಇದೀಗ ಗ್ಯಾಂಗ್‌ ಲೀಡರ್‌ನನ್ನೇ ಅಂದರ್ ಮಾಡಿದೆ.

ಐಎಸ್‌ಡಿ, ಸಿಸಿಬಿ ಜಂಟಿ ಆಪರೇಷನ್: ಸದ್ದುಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯ ಗುಪ್ಪನ ಪಾಳ್ಯದ ಮನೆಯಲ್ಲಿ ವಾಸವಿದ್ದ ಬೆಂಗಳೂರಿನ ನಟೋರಿಯಸ್‌ ಜಿಹಾದಿ ಗ್ಯಾಂಗ್‌ ಲೀಡರ್‌ ಮೆಹಬೂಬ್‌ ಪಾಷಾನನ್ನು ಐಎಸ್‌ಡಿ ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ರಹಸ್ಯ ಸ್ಥಳದಲ್ಲಿ ಟೆರರ್ ಗ್ಯಾಂಗ್‌ ಲೀಡರ್‌ ಮೆಹಬೂಬ್‌ ಪಾಷಾನನ್ನ ಡ್ರಿಲ್ ಮಾಡ್ತಿರೋ ಸಿಸಿಬಿ ಪೊಲೀಸರು ಮಹತ್ವದ ಮಾಹಿತಿಯನ್ನ ಕಲೆಹಾಕ್ತಿದ್ದಾರೆ.

ಜನವರಿ 7ರಂದು ಐಎಸ್‌ಡಿ, ತಮಿಳುಮಾಡಿನ ಕ್ಯೂ ಬ್ರಾಂಚ್‌ ಪೊಲೀಸರು, ಸಿಸಿಬಿ ಪೊಲೀಸರ ಜತೆ ಬೆಂಗಳೂರಿನ ಸದ್ದುಗುಂಟೆ ಠಾಣಾ ವ್ಯಾಪ್ತಿಯ ಮನೆಯೊಂದರ ಮೇಲೆ ದಾಳಿ ಮಾಡಿದ್ರು. ಈ ವೇಳೆ ಮೂವರು ಶಂಕಿತ ಉಗ್ರರಾದ ಮಹಮ್ಮದ್ ಹನೀಫ್ ಕಾನ್, ಇಮ್ರಾನ್ ಖಾನ್, ಮಹಮ್ಮದ್ ಜೈದ್‌ರನ್ನ ಬಂಧಿಸಿದ್ರು. ಈ ವೇಳೆ ಮೂರು ಪಿಸ್ತೂಲ್‌, ಜೀವಂತ ಗುಂಡುಗಳು, ಲ್ಯಾಪ್‌ ಟಾಪ್‌ ಜಪ್ತಿ ಮಾಡಿದ್ರು.

ಜಿಹಾದಿ ಗ್ಯಾಂಗ್‌ ಸೀಕ್ರೆಟ್! ಅಷ್ಟಕ್ಕೂ ಈ ಜಿಹಾದಿ ಗ್ಯಾಂಗ್‌ನ ಮುಖ್ಯಸ್ಥ ಮೆಹಬೂಬ್‌ ಹಿನ್ನೆಲೆ ಏನು? ಆತ ಬೆಂಗಳೂರಿನಲ್ಲಿ ಬೀಸಿದ ಜಾಲ ಎಂಥಾದ್ದು ಅನ್ನೋದನ್ನ ನೋಡಿದ್ರೆ.. ಉಗ್ರ ಸಂಘಟನೆ ಮುಖ್ಯಸ್ಥ ಮೆಹಬೂಬ್‌ ತನ್ನ ಸಂಘಟನೆ ವಿಸ್ತರಣೆಗೆ ಪಣತೊಟ್ಟಿದ್ದ. ದುಬೈನಲ್ಲಿರೋ ಐಸಿಸ್‌ ಮುಖಂಡರ ಜೊತೆ ಮೊಬೈಲ್ ಮೂಲಕ ಸಂಪರ್ಕಿಸಿ ಆರ್ಥಿಕ ನೆರವು ಕೊರಿದ್ದ. ಆರ್ಥಿಕ ನೆರವು ನೀಡಲು ಐಸಿಸ್‌ ಭರವಸೆ ಕೊಟ್ಟಿತ್ತು ಎನ್ನಲಾಗಿದೆ.

ಜಿಹಾದಿ ಹೆಸರಲ್ಲಿ ಯುವಕನ್ನ ಸೆಳೆಯಲು ಪ್ಲ್ಯಾನ್ ಮಾಡಿದ್ದ. ಸಮಾಜ ಸೇವೆ ನೆಪದಲ್ಲಿ ಯುವಕನ್ನ ಸೆಳೆಯಲು ಅಲ್‌ ಹಿಂದ್ ಟ್ರಸ್ಟ್ ಸ್ಥಾಪಿಸಿದ್ದ. ಜತೆಗೆ ಇಡೀ ದೇಶಾದ್ಯಂತ ಸಂಘಟನೆ ವಿಸ್ತರಿಸುವ ಪ್ಲ್ಯಾನ್‌ ಇತ್ತು. ಅಷ್ಟೇ ಅಲ್ಲ, ಗುಂಡ್ಲುಪೇಟೆಯಲ್ಲಿ ಜಮೀನು ಖರೀದಿಸಿ ಸಂಘಟನೆ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ಕೊಡಿಸಿ ವಿದ್ವಂಸಕ ಕೃತ್ಯಗಳಿಗೆ ಬಳಸುವ ಇರಾದೆ ಹೊಂದಿದ್ದ. ಮಾಸ್ಟರ್‌ ಮೈಂಡ್ ಖ್ವಾಜಾ ಮೊಯಿದ್ದೀನ್ ನಿರ್ದೇಶನದಂತೆ ಕೆಲಸ ಮಾಡ್ತಿದ್ರು ಎನ್ನಲಾಗ್ತಿದೆ.

Published On - 7:30 am, Fri, 17 January 20