ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್
ಬೆಂಗಳೂರು: ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ತಡರಾತ್ರಿ ಪುಲಕೇಶಿ ನಗರದಲ್ಲಿ ನಡೆದಿದೆ. ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಜೆ.ಸಿ.ನಗರದ ನಿವಾಸಿ ಅಬು ಸೂಫಿಯಾ ಗಂಭೀರವಾಗಿ ಗಾಯಗೊಂಡಿದ್ದು, ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಟೀ ಕುಡಿಯುವ ಸಲುವಾಗಿ ತಡರಾತ್ರಿ ಜೆ.ಸಿ.ನಗರದಿಂದ ಪುಲಕೇಶಿ ನಗರಕ್ಕೆ ಅಬು ಸೂಫಿಯಾ ಅಗಮಿಸಿದ್ದ. ರಾತ್ರಿ 11 ಗಂಟೆ ಸುಮಾರಿಗೆ ನಾಲ್ವರು ದುಷ್ಕರ್ಮಿಗಳು ಮಚ್ಚು, ಲಾಂಗುಗಳಿಂದ ನಡುರಸ್ತೆಯಲ್ಲೇ ಹಲ್ಲೆ ನಡೆಸಿದ್ದಾರೆ. ಪರಿಚಯಸ್ಥರೇ ಹಲ್ಲೆ ಮಾಡಿರುವ ಸಾಧ್ಯತೆಯಿದೆ. ಗಂಭೀರ ಗಾಯಗೊಂಡ ಅಬುಗೆ ನಿಮ್ಹಾನ್ಸ್ ಅಸ್ಪತ್ರೆಯ ಐಸಿಯುನಲ್ಲಿ […]
ಬೆಂಗಳೂರು: ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ತಡರಾತ್ರಿ ಪುಲಕೇಶಿ ನಗರದಲ್ಲಿ ನಡೆದಿದೆ. ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಜೆ.ಸಿ.ನಗರದ ನಿವಾಸಿ ಅಬು ಸೂಫಿಯಾ ಗಂಭೀರವಾಗಿ ಗಾಯಗೊಂಡಿದ್ದು, ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಟೀ ಕುಡಿಯುವ ಸಲುವಾಗಿ ತಡರಾತ್ರಿ ಜೆ.ಸಿ.ನಗರದಿಂದ ಪುಲಕೇಶಿ ನಗರಕ್ಕೆ ಅಬು ಸೂಫಿಯಾ ಅಗಮಿಸಿದ್ದ. ರಾತ್ರಿ 11 ಗಂಟೆ ಸುಮಾರಿಗೆ ನಾಲ್ವರು ದುಷ್ಕರ್ಮಿಗಳು ಮಚ್ಚು, ಲಾಂಗುಗಳಿಂದ ನಡುರಸ್ತೆಯಲ್ಲೇ ಹಲ್ಲೆ ನಡೆಸಿದ್ದಾರೆ. ಪರಿಚಯಸ್ಥರೇ ಹಲ್ಲೆ ಮಾಡಿರುವ ಸಾಧ್ಯತೆಯಿದೆ. ಗಂಭೀರ ಗಾಯಗೊಂಡ ಅಬುಗೆ ನಿಮ್ಹಾನ್ಸ್ ಅಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.