Patna Blast ಪಾಟ್ನಾ ಸಿವಿಲ್ ಕೋರ್ಟ್‌ನಲ್ಲಿ ಬಾಂಬ್ ಸ್ಫೋಟ, ಒಬ್ಬ ಸಬ್​​​ ಇನ್ಸ್​​​ಪೆಕ್ಟರ್​​​ಗೆ ಗಾಯ

ಕೆಲವು ದಿನಗಳ  ಹಿಂದೆ  ಪಟನಾ ಯುನಿವರ್ಸಿಟಿಯ ಪಟೇಲ್ ಹಾಸ್ಟೆಲ್​​​ನಿಂದ  ಗನ್ ಪೌಡರ್ ಪತ್ತೆ ಹಚ್ಚಲಾಗಿತ್ತು. ಹೆಚ್ಚಿನ ತನಿಖೆಗಾಗಿ ನಾವು ಅದನ್ನು  ನ್ಯಾಯಾಲಯಕ್ಕೆ ತಂದಿದ್ದೆವು. ಅದನ್ನು ಆವರಣದಲ್ಲಿ ಇರಿಸಿದ ಕೆಲವೇ ಹೊತ್ತಲ್ಲಿ  ಸ್ಫೋಟವಾಗಿದೆ.

Patna Blast ಪಾಟ್ನಾ ಸಿವಿಲ್ ಕೋರ್ಟ್‌ನಲ್ಲಿ ಬಾಂಬ್ ಸ್ಫೋಟ, ಒಬ್ಬ ಸಬ್​​​ ಇನ್ಸ್​​​ಪೆಕ್ಟರ್​​​ಗೆ ಗಾಯ
ಪಾಟ್ನಾ ಸಿವಿಲ್ ಕೋರ್ಟ್
Updated By: ರಶ್ಮಿ ಕಲ್ಲಕಟ್ಟ

Updated on: Jul 01, 2022 | 4:32 PM

ಪಾಟ್ನಾ ಸಿವಿಲ್ ಕೋರ್ಟ್‌ನಲ್ಲಿ (Patna Civil Court) ಬಾಂಬ್ ಸ್ಫೋಟ (Bomb Blast) ಸಂಭವಿಸಿದೆ. ಕಡಿಮೆ  ತೀವ್ರತೆಯ ಸ್ಫೋಟ ಸಂಭವಿಸಿದ್ದು ಒಬ್ಬ ಸಬ್ ಇನ್ಸ್ ಪೆಕ್ಟರ್ ಗಾಯಗೊಂಡಿದ್ದಾರೆ. ಎಎನ್ಐ  ಸುದ್ದಿಸಂಸ್ಥೆ  ಪ್ರಕಾರ ಎಎಸ್ಐ  ಕದಂ ಕುವಾನ್  ಸಿಂಗ್ ಅವರ ಬಲ ಕೈಗೆ ಗಾಯವಾಗಿದೆ. ಆದಾಗ್ಯೂ ಬೇರೆ ಯಾರಿಗೂ ಗಾಯವಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಪಾಟ್ನಾ ಎಸ್ಎಸ್​​ಪಿ ಮಾನವ್​​ಜಿತ್  ಸಿಂಗ್ ಧಿಲ್ಲೋನ್ ಹೇಳಿದ್ದಾರೆ. ಕೆಲವು ದಿನಗಳ  ಹಿಂದೆ ಪಟನಾ ಯುನಿವರ್ಸಿಟಿಯ (Patna University) ಪಟೇಲ್ ಹಾಸ್ಟೆಲ್​​ನಿಂದ  ಗನ್ ಪೌಡರ್ ಪತ್ತೆ ಹಚ್ಚಲಾಗಿತ್ತು. ಹೆಚ್ಚಿನ ತನಿಖೆಗಾಗಿ  ನಾವು ಅದನ್ನು  ನ್ಯಾಯಾಲಯಕ್ಕೆ ತಂದಿದ್ದೆವು. ಅದನ್ನು ಆವರಣದಲ್ಲಿ ಇರಿಸಿದ ಕೆಲವೇ ಹೊತ್ತಲ್ಲಿ  ಸ್ಫೋಟವಾಗಿದೆ, ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು  ಪಿರ್ಬಹೋರ್  ಪೊಲೀಸ್ ಠಾಣೆಯ ಉಸ್ತುವಾಗಿ ಸಬಿ ಉಬ್ ಹಕ್ ಹೇಳಿದ್ದಾರೆ.

ಸ್ಫೋಟದ ತೀವ್ರತೆ ಕಡಿಮೆಯಿರುವುದರಿಂದ ಯಾವುದೇ ಹೆಚ್ಚಿನ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಕರಣದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Published On - 3:31 pm, Fri, 1 July 22