AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಂದರಿ ಮನೆಗೆ ಕರೆದಳೆಂದು ಹೋಗಿ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಬೆಂಗಳೂರಿನ ಉದ್ಯಮಿ

ಸಿನಿಮಾ‌ ಮಾಡೋಣ, ನಾನು ಅದೇ ಫೀಲ್ಡ್‌ನಲ್ಲಿದ್ದೇನೆ ಎಂದು ಸುಳ್ಳು ಹೇಳಿ ಮಹಿಳೆಯೋರ್ವಳು ಬೆಂಗಳೂರಿನ ಉದ್ಯಮಿ ಸ್ನೇಹ ಬೆಳೆಸಿದ್ದಾಳೆ. ಬಳಿಕ ಉದ್ಯಮಿಗೆ ಸಿನಿಮಾ ಹುಚ್ಚಿಡಿಸಿ ಮೊದಲಿಗೆ ನಾಲ್ಕು ಲಕ್ಷ ರೂಪಾಯಿ ಪೀಕಿದ್ದಾಳೆ. ಬಳಿಕ ಉದ್ಯಮಿ ಕೊಟ್ಟ ನಾಲ್ಕು ಲಕ್ಷ ರೂ. ಹಣ ವಾಪಸ್ ಕೇಳಿದ್ದಕ್ಕೆ ಮನೆಗೆ ಕರೆದಿದ್ದಾಳೆ. ಮುಂದೇನಾಯ್ತು ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಸುಂದರಿ ಮನೆಗೆ ಕರೆದಳೆಂದು ಹೋಗಿ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಬೆಂಗಳೂರಿನ ಉದ್ಯಮಿ
ರಮೇಶ್ ಬಿ. ಜವಳಗೇರಾ
|

Updated on: Sep 19, 2024 | 7:51 PM

Share

ಬೆಂಗಳೂರು, (ಸೆಪ್ಟೆಂಬರ್ 19): ಉದ್ಯಮಿಯೊಬ್ಬರು ಹನಿಟ್ರ್ಯಾಪ್‌ ಗ್ಯಾಂಗ್‌ನ (Honeytrap Gang) ಖೆಡ್ಡಗೆ ಬಿದ್ದು 40 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಸಿನಿಮಾ ಮಾಡುವ ಹೆಸರಿನಲ್ಲಿ ಉದ್ಯಮಿಯಿಂದ ಹಣ ಪಡೆದು ವಂಚನೆ ಮಾಡಿರೋ ಆರೋಪ ಕೇಳಿ ಬಂದಿದೆ. ಗಣೇಶ್​ ಅವರಿಗೆ ಕುಟುಂಬ ಎಂಬ ಸೋಷಿಯಲ್ ಮೀಡಿಯಾ ಆ್ಯಪ್​ನಲ್ಲಿ ಕಾವ್ಯ ಎಂಬಾಕೆ ಪರಿಚಿತಳಾಗಿದ್ದಾಳೆ. ಈ ಕಾವ್ಯ ನಾಲ್ಕು ವರ್ಷಗಳ ಹಿಂದೆ ಸಿನಿಮಾ ಮಾಡುತ್ತಿರೋದಾಗಿ ಪರಿಚಿತಳಾಗಿದ್ದಳಂತೆ. ನಿರ್ದೇಶಕ ಎಸ್.ಆರ್.ಪಾಟೀಲ್ ಎಂಬುವವರಿಗೆ 4.25 ಲಕ್ಷ ಹಣ ವರ್ಗಾಯಿಸಿಕೊಂಡಿದ್ದಳಂತೆ. ಕೊಟ್ಟ ಹಣ ವಾಪಸ್ಸು ಕೇಳಿದಾಗ ಕಾವ್ಯ ಗೊಟ್ಟಿಗೆರೆ ಬಳಿ ಗಣೇಶ್​ರನ್ನು ಕರೆಸಿಕೊಂಡು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಅದನ್ನ ವೀಡಿಯೋ ಮಾಡಿ ಬಳಿಕ ಹನಿಟ್ರ್ಯಾಪ್ ಮಾಡಿದ್ದಾಳೆ ಎಂದು ತಿಳಿದುಬಂದಿದೆ.

ಆರೋಪಿ ಮಹಿಳೆ ಸಿನಿಮಾ‌ ಮಾಡೋಣ, ನಾನು ಅದೇ ಫೀಲ್ಡ್‌ನಲ್ಲಿದ್ದೇನೆ ಎಂದು ಸುಳ್ಳು ಹೇಳಿ ಉದ್ಯಮಿ ಸ್ನೇಹ ಮಾಡಿದ್ದಳು. ಇದಾದ ಕೆಲ ದಿನಗಳ‌ ನಂತರ ನಮ್ಮ ಡೈರೆಕ್ಟರ್‌ಗೆ ಹಣದ ಕಷ್ಟ ಇದೆ ಎಂದು ಹೇಳಿ ಉದ್ಯಮಿಯಿಂದ ನಾಲ್ಕು ಲಕ್ಷ ರೂ, ಹಣ ಪಡೆದಿದ್ದಾಳೆ. ನಂತರ ಹಣ ವಾಪಸ್ ಕೇಳಿದಾಗ ತನ್ನ ರೂಮಿಗೆ ಕರೆಸಿಕೊಂಡು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಅದನ್ನ ವೀಡಿಯೋ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: ಬುದ್ಧಿವಂತ ಸಿನಿಮಾ ಮಾದರಿಯಲ್ಲಿ ಮಹಿಳೆಯರ ಸ್ನೇಹ ಬೆಳಸಿ, ಚಿನ್ನಾಭರಣ ದೋಚುತ್ತಿದ್ದ ಆರೋಪಿ ಅರೆಸ್ಟ್​

ಆ ಬಳಿಕ ಇದೇ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಉದ್ಯಮಿಯಿಂದ ಬ್ರಾಸ್‌ಲೈಟ್, ಚೈನ್ ಅಂತೆಲ್ಲಾ ಸುಮಾರು 40 ಲಕ್ಷ ರೂಪಾಯಿ ಹಣ ಪೀಕಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದೇ ಕಾರು ಕೊಡಿಸು ಎಂದು ದುಂಬಾಲು ಬಿದ್ದಿದ್ದಾಳೆ. ಇದಕ್ಕೆ ಒಪ್ಪದಿದ್ದಾಗ ಆರೋಪಿ ಮಹಿಳೆ ತನ್ನ ಸ್ನೇಹಿತರಾದ ರವಿ ಮತ್ತು ದಿಲೀಪ್ ಎಂಬವರಿಂದ ಕರೆ ಮಾಡಿಸಿ ಹಣಕ್ಕೆ ಧಮ್ಕಿ ಹಾಕಿಸಿದ್ದಾಳೆ. ಹಣ ಕೊಡದಿದ್ದರೆ ವೀಡಿಯೋಗಳನ್ನ ಟಿವಿಗೆ ಕೊಡೋದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಹಣ ನೀಡದಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ದೂರುದಾರನ ಫೋಟೋ ಹಾಕಿ ಮಾನಹರಣ ಮಾಡಿರುವುದಾಗಿ ಉದ್ಯಮಿ ದೂರು ನೀಡಿದ್ದಾರೆ.

ಸದ್ಯ ಉದ್ಯಮಿ ಗಣೇಶ್ ನೀಡಿದ ದೂರಿನ ಆಧಾರದ ಮೇಲೆ ಕಾವ್ಯ, ದಿಲೀಪ್, ರವಿಕುಮಾರ್ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಹನಿಟ್ರ್ಯಾಪ್ ಸುಂದರಿ ಮತ್ತು ಗ್ಯಾಂಗ್‌ ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ